ಕೇರಳ: ತಲೆಕೂದಲು ಉದುರುವ ಕಾರಣಕ್ಕೆ ಮಾನಸಿಕವಾಗಿ ನೊಂದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ.
ಕೋಝಿಕ್ಕೋಡ್ ಅಥೋಲಿ ಗ್ರಾಮದ ನಿವಾಸಿ ಪ್ರಶಾಂತ್ (29) ಆತ್ಮಹತ್ಯೆಗೊಳಗಾದ ಯುವಕ.
ಈತ 2014ರಿಂದ ಕೂದಲುದುರುವಿಕೆ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿರಲಿಲ್ಲ.
ಅನೇಕ ಚಿಕಿತ್ಸೆಗಳ ಮೊರೆ ಹೋಗಿದ್ದ ಇವರು ಈ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಅಷ್ಟೇ ಅಲ್ಲದೆ ಕೂದಲು ಇಲ್ಲ ಎಂಬ ಕಾರಣಕ್ಕೆ ಅನೇಕ ಹುಡುಗಿಯರು ಮದುವೆಯಾಗಲು ತಿರಸ್ಕರಿಸಿದರು.
ಈ ಹಿನ್ನೆಲೆಯಲ್ಲಿ ಮನನೊಂದ ಪ್ರಶಾಂತ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.