Monday, January 24, 2022

ಕಾರ್ಕಳ: ವಾಟ್ಸಪ್‌ ಸ್ಟೇಟಸ್‌ ಹಾಕಿದ ವಿಚಾರಕ್ಕೆ ಯುವಕನಿಗೆ ತಂಡದಿಂದ ಹಲ್ಲೆ

ಉಡುಪಿ: ವಾಟ್ಸಪ್‌ ಸ್ಟೇಟಸ್‌ ಹಾಕಿದ ವಿಚಾರಕ್ಕೆ ಯುವಕನೋರ್ವನಿಗೆ 13 ಜನರ ತಂಡವೊಂದು ಹಲ್ಲೆ ನಡೆದ ಘಟನೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದಲ್ಲಿ ನಿನ್ನೆ ನಡೆದಿದೆ.


ಸುದರ್ಶನ ಎಂಬಾತನು ನಿನ್ನೆ ಸಂಜೆ 7 ಗಂಟೆಗೆ ಬೈಲೂರು ಪೇಟೆಯಲ್ಲಿ ವೈನ್ ಶಾಪ್ ಬಳಿ ನಿಂತುಕೊಂಡಿರುವಾಗ ಅಟೋರಿಕ್ಷಾ ಮತ್ತು 3 ಬೈಕ್ ಗಳಲ್ಲಿ ಬಂದ ಆರೋಪಿಗಳಾದ ಸಂತೋಷ್, ಸಂದೇಶ್, ಸುದೀಪ್, ಸುರೇಂದ್ರ,

ಶಿವಪ್ರಸಾದ್, ವಿಕಾಸ್, ದಿವಾಕರ, ಪ್ರಭಾಕರ, ಗೌತಮ್, ಶಶಿಕಾಂತ್, ಪ್ರಸನ್ನ, ಸಂಜಯ್, ವಿಜಯಾ ಎಂಬುವವರು ಸೇರಿ ಮಾರಕಾಯುಧವನ್ನು ಹಿಡಿದುಕೊಂಡು ನೀನು ಯಾರಿಗೆ ವಾಟ್ಸಾಪ್ ಸ್ಟೇಟಸ್ ಹಾಕಿದ್ದೀಯ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿಯುತ್ತಾರೆ.

ಈ ಹಲ್ಲೆಯನ್ನು ಸುಧಾರಿಸಿಕೊಂಡು ಮೇಲೆದ್ದಾಗ ಮತ್ತೆ ಸಂತೋಷ್‌ ಎಂಬಾತ ಸುದರ್ಶನನಿಗೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಸೋಂಟೆಯಿಂದ ಹೊಡೆಯಲು ಬರುತ್ತಾರೆ.

ಈ ವೇಳೆ ಸುದರ್ಶನ ಹೊಡೆತ ತಪ್ಪಿಸಿದಾಗ ಸೋಂಟೆಯಿಂದ ಪೆಟ್ಟು ಮುಂದಲೆಗೆ ಬಿದ್ದಿದೆ.

ಇವನ ಜೊತೆಗೆ ಸಂದೇಶನು ಸಹಾ ಸೋಂಟೆಯಿಂದ ಮುಖಕ್ಕೆ ಹೊಡೆದಿದ್ದಾನೆ.

ಈ ವೇಳೆ ಸ್ಥಳದಲ್ಲಿ ಇದ್ದ ಸ್ನೇಹಿತ ರಾಜೇಶ ಎಂಬುವವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hot Topics

ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು: ಸ್ವಾತಂತ್ರ ಸೇನಾನಿ ನೇತಾಜಿ ಸುಭಾಸ್ ಚಂದ್ರ ಬೋಸ್ 125 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಿರುವೆರ್ ಕುಡ್ಲ(ರಿ) ನೇತೃತ್ವದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ...

‘ಸುಳ್ಳುಗಳ ಮೂಲಕ ನಾರಾಯಣಗುರುವಿಗೆ ಮಾಡಿದ ಅಪಚಾರವನ್ನು ಮುಚ್ಚಿಟ್ಟುಕೊಳ್ಳಲಾಗದು’

ಮಂಗಳೂರು: ಸುಳ್ಳುಗಳ ಮೂಲಕ ಸಾಮಾಜಿಕ ಸುಧಾರಣೆಯ ಹರಿಕಾರ  ನಾರಾಯಣ ಗುರು ಅವರಿಗೆ ಮಾಡಿದ ಅಪಚಾರವನ್ನು ಬಿಜೆಪಿ ಮುಚ್ಚಿಟ್ಟುಕೊಳ್ಳಲಾಗದು ಎಂದು ಸಿಪಿಐಎಂ ಹೇಳಿದೆ.ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ...

ಮಂಗಳೂರು: ಮಾಲೀಕನ ಎದುರೇ ಸ್ಕೂಟರ್‌ ಕದ್ದೊಯ್ದ ಕಳ್ಳ

ಮಂಗಳೂರು: ಮಾಲೀಕನ ಎದುರಿನಲ್ಲಿಯೇ ಕಳ್ಳನೊಬ್ಬ ಸ್ಕೂಟರ್‌ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.ರಿನ್ಸ್‌ ಮೋನ್‌ ಕ್ಸೇವಿಯರ್‌ ಅವರು ಜ.7ರಂದು ಬೆಳಗ್ಗೆ 11.30ರ ವೇಳೆಗೆ ಪಾರ್ಸಲ್‌ ಬಸ್‌ಗೆ ನೀಡಲು ಜ್ಯೋತಿ ವೃತ್ತದ ಬಳಿ ಸ್ಕೂಟರ್‌...