ಪ್ರೀತಿಗೆ ಮನೆಯವರ ವಿರೋಧ :ಯುವ ಜೋಡಿ ಸುಳ್ಯದಲ್ಲಿ ನೇಣಿಗೆ ಶರಣು..!
ಸುಳ್ಯ : ಮನೆಯವರ ವಿರೋಧಕ್ಕೆ ಯುವಕ ಮತ್ತು ಯುವತಿ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಸುಳ್ಯ ನಗರದ ವಸತಿಗೃಹವೊಂದರಲ್ಲಿ ಈ ಜೋಡಿಗೆ ನೇಣಿಗೆ ಶರಣಾಗಿದೆ.
ಯುವಕ ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಪುತ್ರ ದರ್ಶನ್ ಎಂದು ತಿಳಿದುಬಂದಿದ್ದು, ಯುವತಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ನಾರ್ಯ ಕಲ್ಕಜೆಯ ಶೇಷಪ್ಪ ಎಂಬವರ ಪುತ್ರಿ ಇಂದಿರಾ ಎಂದು ತಿಳಿದು ಬಂದಿದೆ.
ಇವರ ಪ್ರೀತಿಗೆ ಮನೆಯವರ ವಿರೋಧ ಇತ್ತೆಂದು ಹೇಳಲಾಗಿದ್ದು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸುಳ್ಯ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ.