Tuesday, May 30, 2023

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದ ಕುಮಟಾದ ಯುವತಿ ಡಿಡೀರ್ ನಾಪತ್ತೆ..! 

ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು ಸಂದರ್ಶಿಸಲು ಬಂದಿದ್ದ ಹದಿ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆ.

ಬೆಳ್ತಂಗಡಿ : ಕುಟುಂಬಸ್ಥರ ಜೊತೆ ಉತ್ತರ ಕನ್ನಡದಿಂದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರಗಳನ್ನು ಸಂದರ್ಶಿಸಲು ಬಂದಿದ್ದ ಹದಿ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆ.

ಉತ್ತರ ಕ‌ನ್ನಡ ಜಿಲ್ಲೆಯ ಮಿರ್ಜಾನ್ ,ದೇವಸ್ಥಾನ ಕೇರಿಯ ಹರಿಹರ ಕೃಪಾ ನಿವಾಸಿ ರೇಷ್ಮಾ.ಆರ್.ನಾಯ್ಕ್ (23) ಎಂಬಾಕ್ಕೆ ನಾಪತ್ತೆಯಾದ ಯುವತಿಯಾಗಿದ್ದಾಳೆ.

ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇವರ ದರ್ಶನ ಬಳಿಕ ಎಲ್ಲರೂ ರೂಂ ಹೋಗಿದ್ದ ನಂತರ ರಾತ್ರಿ ಏಕಾಏಕಿ ಯುವತಿ ರೇಶ್ಮಾ ನಾಪತ್ತೆಯಾಗಿದ್ದಾಳೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡದ ಕುಮಟಾದಿಂದ ರೈಲಿನ ಮೂಲಕ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಮಾ.20 ರಂದು ಕುಟುಂಬ ಸಮೇತ ಬಂದಿದ್ದು ಮಾ.21 ರಂದು ದೇವರ ದರ್ಶನ ಬಳಿಕ ಧರ್ಮಸ್ಥಳಕ್ಕೆ ಬಸ್ ಮೂಲಕ ಬಂದು ದೇವರ ದರ್ಶನ ಪಡೆದ ಬಳಿಕ ರಾತ್ರಿ 8:45 ಕ್ಕೆ ವಸತಿ ಗೃಹದಲ್ಲಿ ರೂಂ ಮಾಡಿದ್ದರು.

ಈ ವೇಳೆ ಯುವತಿ ರೂಂ ನ  ಹೊರಾಂಗಣದಲ್ಲಿ ಸುತ್ತಾಡುತ್ತಿದ್ದಳು, ಬಳಿಕ ಏಕಾಏಕಿ ರೇಶ್ಮಾ (23) ನಾಪತ್ತೆಯಾಗಿದ್ದಾಳೆ.

ರಾತ್ರಿ ಕುಟುಂಬದವರು ರೂಂ ನಲ್ಲಿ ಉಳಿದು ಮಾ.22 ರಂದು ರೇಷ್ಮಾ ಮನೆಯವರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಮನೆಗೂ ಬಂದಿಲ್ಲ ಎಂದು ತಿಳಿಸಿದ ಬಳಿಕ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.

ಯುವತಿ ನಾಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುವತಿಯ ಅಜ್ಜಿ ಸುಮಿತ್ರಾ ಎಂಬವರು ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics