ಮಂಗಳೂರು/ತಿರುವನಂತಪುರ : ಮಾಲಿವುಡ್ ನಿರ್ಮಾಪಕ, ನಿರ್ದೇಶಕ ರಂಜಿತ್ ಗೆ ಸಂಕಷ್ಟ ತಪ್ಪಿಲ್ಲ. ಅವರ ವಿರುದ್ಧ ಇದೀಗ ನಟರೊಬ್ಬರು ಆರೋಪ ಮಾಡಿದ್ದಾರೆ. ತನ್ನನ್ನು ವಿವಸ್ತ್ರಗೊಳಿಸಿ ಲೈಂ*ಗಿಕ ದೌರ್ಜ*ನ್ಯ ಎಸಗಿದ್ದಾರೆ ಎಂದು ಯುವ ನಟ ದೂರಿದ್ದಾರೆ. ಡಿಜಿಪಿಗೆ ಈ ಬಗ್ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
oll
ನಟನ ದೂರಿನಲ್ಲೇನಿದೆ?
2012 ರಲ್ಲಿ ಸಿನಿಮಾವೊಂದರ ಆಡಿಷನ್ ವಿಚಾರವಾಗಿ ರಂಜಿತ್ ನನ್ನನ್ನು ಬೆಂಗಳೂರಿನ ಹೋಟೆಲ್ ಗೆ ಕರೆಸಿಕೊಂಡಿದ್ದರು. ಈ ವೇಳೆ ಲೈಂ*ಗಿಕ ದೌರ್ಜ*ನ್ಯ ಎಸಗಿದ್ದರು. ಇದು ಆಡಿಷನ್ ನ ಭಾಗವೆಂದು ನಾನು ಭಾವಿಸಿದ್ದೆ ಎಂದು ನಟ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ನನ್ನನ್ನು ಬೆತ್ತಲಾಗಿ ನಿಲ್ಲುವಂತೆ ರಂಜಿತ್ ಹೇಳಿದ್ದರು. ನಾನು ಹಾಗೆಯೇ ಮಾಡಿದೆ. ಈ ವೇಳೆ ರಂಜಿತ್, ನಟಿ ರೇವತಿ ಅವರೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದರು. ರಂಜಿತ್ ಮತ್ತು ರೇವತಿ ನಡುವೆ ಯಾವ ರೀತಿಯ ಸಂಬಂಧವಿದೆ ಎಂದು ನನಗೆ ಗೊತ್ತಿಲ್ಲ. ಆದರೆ, ರಂಜಿತ್ ನನ್ನ ಬೆತ್ತಲೆ ಫೋಟೋಗಳನ್ನು ರೇವತಿಗೆ ಕಳುಹಿಸಿದ್ದರು. ಅ ಫೋಟೋಗಳನ್ನು ನೋಡಿ ರೇವತಿ ಇಷ್ಟ ಪಟ್ಟಿದ್ದಾಳೆ ಎಂದು ರಂಜಿತ್ ಹೇಳಿದ್ದರು ಎಂದು ನಟ ಹೇಳಿದ್ದಾರೆ.
‘ಬಾವುಟ್ಟಿಯುಡೆ ನಾಮತ್ತಿಲ್’ ಚಿತ್ರದ ಆಡಿಯೋ ಬಿಡುಗಡೆ ಸಂದರ್ಭ ಈ ಘಟನೆ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬಾಳ ಸಂಗಾತಿಯನ್ನು ಪರಿಚಯಿಸಿದ ‘ಕನ್ನಡತಿ’ ರಂಜನಿ ರಾಘವನ್; ಹುಡುಗ ಯಾರು ಗೊತ್ತಾ!?
ಬಂಗಾಳಿ ನಟಿಯಿಂದ ಗಂಭೀರ ಆರೋಪ :
ರಂಜಿತ್ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ. ಮಲಯಾಳಂ ಚಿತ್ರರಂಗದಲ್ಲಿ ಕಳೆದ 37 ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಮೂರು ಬಾರಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಮಲಯಾಳಂ ಚಿತ್ರರಂಗದಲ್ಲಿ ಸಿನಿಮಾ ಅವಕಾಶ ಬೇಕೆಂದರೆ, ನಟಿಯರು ಲೈಂ*ಗಿಕವಾಗಿ ಸಹಕರಿಸಬೇಕು ಎಂಬ ಪರಿಸ್ಥಿತಿ ಇದೆ ಎಂದು ನ್ಯಾ. ಹೇಮಾ ಸಮಿತಿ ವರದಿ ಶಾಕ್ ಕೊಟ್ಟಿತ್ತು. ಇದರ ಬೆನ್ನಲ್ಲೇ 60 ವರ್ಷದ ರಂಜಿತ್ ವಿರುದ್ಧ ಇತ್ತೀಚೆಗೆ ಗಂಭೀರ ಆರೋಪ ಕೇಳಿಬಂದಿತ್ತು. ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ರಂಜಿತ್ ವಿರುದ್ಧ ಲೈಂ*ಗಿಕ ಕಿರುಕುಳ ಆರೋಪ ಮಾಡಿದ್ದು, ಭಾರಿ ಸುದ್ದಿಯಾಗಿತ್ತು. ಇದೀಗ ಯುವ ನಟನೊಬ್ಬ ಮಾಡಿರುವ ಆರೋಪ ಚರ್ಚೆಗೆ ಗ್ರಾಸವಾಗಿದೆ.