Connect with us

DAKSHINA KANNADA

‘ಊರವರ ವಿರೋಧ ಕಟ್ಟಿಕೊಂಡು ತೆರೆದ ಮದ್ಯದಂಗಡಿಗೆ ನೀವೆ ಬೀಗ ಹಾಕಿ ಗೌರವ ಹೆಚ್ಚಿಸಿ’

Published

on

ಸುಳ್ಯ : ಮದ್ಯ ಮುಕ್ತ ಗ್ರಾಮ ಹೋರಾಟ ಸಮಿತಿ ಕೊಲ್ಲಮೊಗ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ, ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸುಳ್ಯ ತಾಲೂಕು, ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಅಕ್ರಮ ಮದ್ಯದಂಗಡಿ ತೆರೆದಿರುವ ಬಗ್ಗೆ ಪ್ರತಿಭಟನಾ ಸಭೆಯು ಮಯೂರ ಕಲಾ ಮಂದಿರ ಕೊಲ್ಲಮೊಗ್ರದಲ್ಲಿಂದು ನಡೆಯಿತು.

ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷ ಮಹೇಶ್ ರೈ ಮೇನಾಲ ಮಾತನಾಡಿ ಮದ್ಯದಂಗಡಿಗೆ ಸಂಬಂಧಪಟ್ಟವರು ನಮ್ಮ ಭಾವನೆಗಳನ್ನು ಒಡೆದು, ನಮ್ಮಲ್ಲಿ ಬಿರುಕು ಉಂಟು ಮಾಡುವಂತೆ ಮಾಡಿ ಹೋರಾಟಕ್ಕೆ ಇಳಿದಂತೆ ಮಾಡಬಹುದು.

ಅದಕ್ಕೆ ನಾವ್ಯಾರು ಕಿವಿಗೊಡಬಾರದು. ಇಂದು ಮತ್ತು ಈ ಹಿಂದೆ ಹೋರಾಟ ದಲ್ಲಿ ಭಾಗವಹಿಸಿದವರೆಲ್ಲರೂ ಒಟ್ಟಾಗಿ ನಿಂತು ಹೋರಾಟದ ನೇತೃತ್ವ ಪಡೆದುಕೊಂಡವರನ್ನು ಬಿಡದೆ ಮುಂದೆಯೂ ಪಾಲ್ಗೊಳ್ಳಬೇಕು ಎಂದರಲ್ಲದೇ ಅಜ್ಜಾವರದಲ್ಲಿ ಓಪನ್ ಆದ ಮದ್ಯದಂಗಡಿ ಬಂದ್ ಮಾಡುವ ಬಗ್ಗೆ ನಡೆಯುತ್ತಿರುವ ಹೋರಾಟದ ಬಗ್ಗೆಯೂ ವಿವರಿಸಿದರು.

ಹೋರಾಟದ ಸಂದರ್ಭ ಅನೇಕ ಟೀಕೆಗಳನ್ನು ಎದುರಿಸಿಕೊಂಡು ನಾವು ಯಶಸ್ವಿಯಾಗಬೇಕು. ಅಬಕಾರಿಯವರು ಗ್ರಾಮ ಪಂಚಾಯತ್ ಗೆ ತಿಳಿಸದೆ ಓಪನ್ ಆದ ಮದ್ಯದಂಗಡಿಯನ್ನು ಅವರಿಗೆ ತಿಳಿಯದಂತೆ ಬಂದ್ ಮಾಡಿಸುತ್ತೇವೆ ಎಂದರು.

ವೇದಿಕೆಯಲ್ಲಿದ್ದ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಹಿಮ್ಮತ್ ಕೆ.ಸಿ. ಮಾತನಾಡಿ ಗ್ರಾಮಗಳಲ್ಲಿ ಮದ್ಯದಂಗಡಿ ತೆರೆಯಬೇಕಾದರೆ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆಯುವಂತೆ ಸರಕಾರಕ್ಕೆ ಬೇಡಿಕೆ ಸಲ್ಲಿಸುವ ಕಾರ್ಯ ನಡೆಯಬೇಕು. ಇಲ್ಲದಿದ್ದರೆ ಗ್ರಾಮದ ಆರೋಗ್ಯ, ನೆಮ್ಮದಿ ಎಲ್ಲವೂ ಹಾಳಾಗುತ್ತದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಹೋರಾಟ ಸಮಿತಿ ಅಧ್ಯಕ್ಷ ಮಾಧವ ಚಾಂತಾಳ ವಹಿಸಿದ್ದರು. ಪ್ರಸ್ತಾವಿಕವಾಗಿ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಪಿ. ಗಿರಿಧರ ಮಾತನಾಡಿದರು.

ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ, ಅನೇಕರನ್ನು ಮದ್ಯಮುಕ್ತರನ್ನಾಗಿಸಿ ಊರನ್ನು ಸುಭೀಕ್ಷೆ ಮಾಡಬೇಕೆಂದು ಹೊರಟಿದ್ದರು.

ಅದರಂತೆ ಇಲ್ಲಿಯೂ 2 ಸಲ ಮದ್ಯವರ್ಜನ ಶಿಬಿರಗಳಾಗಿದೆ. ಈ ಮೂಲಕ ಅನೇಕ ಕುಟುಂಬಗಳು ಹೊಸ ಜೀವನ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿದೆ.

ಆದರೆ ಈಗ ಇಲ್ಲಿ ಮದ್ಯದಂಗಡಿ ತೆರೆದ ಕಾರಣ ಮತ್ತೆ ಅನೇಕ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುಂತಾಗಬಹುದೆಂಬ ಆತಂಕ ಎಲ್ಲರಲ್ಲೂ ಇದೆ.

ಊರವರ ವಿರೋಧ ಕಟ್ಟಿಕೊಂಡು ಮದ್ಯದಂಗಡಿ ತೆರೆದಿರುವುದು ಸರಿಯಲ್ಲ ಎಂಬುದನ್ನು ಅವರು ಯೋಚನೆ ಮಾಡಬೇಕಿತ್ತು.

ನೀವಾಗಿಯೇ ತೆರೆದ ಮದ್ಯದಂಗಡಿಯನ್ನು ಪರ್ಮನೆಂಟ್ ಗಿ ನೀವಾಗಿಯೇ ಮುಚ್ಚಿಸಿದರೆ ನಿಮಗೆ ಊರವರ ಮತ್ತು ಎಲ್ಲರ ಗೌರವ ಹೆಚ್ಚಾಗುತ್ತದೆ. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಆಗದಿದ್ದರೆ ಈ ಭಾಗದವರಿಗೆ ತೊಂದರೆ ಎಂದು ಹೇಳಿದರು.

ಸಭೆಯ ಬಳಿಕ ಮೇರವಣಿಗೆಯಲ್ಲಿ ಸಾಗಿ ಪಂಚಾಯತ್ ನಲ್ಲಿ ಮದ್ಯದಂಗಡಿ ನಿಲ್ಲಿಸುವಂತೆ ಮನವಿ ನೀಡಲಾಯಿತು. ಅದಕ್ಕೂ ಮೊದಲು ಕೊಲ್ಲಮೊಗ್ರ ಮುಖ್ಯ ಪೇಟೆಯಲ್ಲಿ  ಪ್ರತಿಕೃತಿಯೊಂದನ್ನು ಸುಡಲಾಯಿತು.

ಮೆರವಣಿಗೆ ಸಾಗುವ ಸಂದರ್ಭ ಮದ್ಯದಂಗಡಿ ಮುಚ್ಚಲಾಗಿತ್ತು.

Click to comment

Leave a Reply

Your email address will not be published. Required fields are marked *

DAKSHINA KANNADA

‘ನಾಟು ನಾಟು’ ರೀತಿಯ ಸಾಂಗ್‌..! ಕುತೂಹಲ ಮೂಡಿಸಿದ ‘ವಾರ್ 2’

Published

on

2019 ರಲ್ಲಿ ಸೂಪರ್ ಹಿಟ್ ಆಗಿದ್ದ ‘ವಾರ್’ ಸಿನೆಮಾದ ಸೆಕಂಡ್ ವರ್ಷನ್‌ ‘ವಾರ್ 2’ ತೆರೆ ಮೇಲೆ ಬರಲು ಭರದ ಸಿದ್ಧತೆ ನಡೆಸಿದೆ. ‘ವಾರ್’ ಸಿನೆಮಾದಲ್ಲಿ ‘ ಜೈ ಜೈ ಶಿವಶಂಕರ್’ ಹಾಡು ಸುಪರ್ ಹಿಟ್ ಆಗಿದ್ದು ಫ್ಯಾನ್ಸ್‌ಗಳು ಹಾಡಿಗೆ ಫಿದಾ ಆಗಿದ್ರು. ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್’ ಸಿನೆಮಾ ಬಳಿಕ ಈಗ ‘ವಾರ್‌ 2’ ರೆಡಿ ಆಗ್ತಾ ಇದೆ. ಇದರಲ್ಲಿ ಹೃತಿಕ್ ರೋಷನ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ಜೊತೆಯಾಗಿದ್ದಾರೆ.

ಅದ್ಧೂರಿಯಾಗಿ ನಿರ್ಮಾಣ ಆಗ್ತಾ ಇರೋ ‘ವಾರ್ 2’ ಸಿನೆಮಾಗೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲಾಗ್ತಾ ಇದೆ. ಯಶ್‌ ರಾಜ್ ಫಿಲಂಸ್‌ ಸಂಸ್ಥೆ ಈ ‘ವಾರ್ 2’ ಸಿನೆಮಾಗೆ ಬಂಡವಾಳ ಹಾಕುತ್ತಿದೆ. ‘ವಾರ್’ ಸಿನೆಮಾದಂತೆ ಈ ಸಿನೆಮಾದಲ್ಲೂ ವಿಶೇಷ ಹಾಡನ್ನ ಸಿನೆಮಾ ತಂಡ ಪ್ಲ್ಯಾನ್ ಮಾಡಿದೆ. ಜೂನಿಯರ್ ಎನ್‌ಟಿಆರ್ ಅವರ ಆಸ್ಕರ್ ಅವಾರ್ಡ್‌ ವಿನ್ ಆಗಿದ್ದ ‘ನಾಟು ನಾಟು” ಹಾಡಿನಂತೆ ಇರೋ ಹಾಡಿಗೆ ಹೃತಿಕ್ ಹಾಗೂ ಜ್ಯೂನಿಯರ್ ಎನ್‌ಟಿಆರ್‌ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ‘ನಾಟು ನಾಟು’ ರೀತಿಯ ಹಾಡು ಹಾಗೂ ಡ್ಯಾನ್ಸ್‌ ‘ವಾರ್ 2’ ಸಿಎನಮಾದ ಹೈಲೈಟ್ ಆಗಲಿದೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.


ಈಗಾಗಲೇ ‘ವಾರ್ 2’ ಚಿತ್ರದ ಶೂಟಿಂಗ್ ಆರಂಭವಾಗಿದೆ. ಚಿತ್ರದ ಸೆಟ್​ ಫೋಟೋಗಳು ಕೂಡಾ ಲೀಕ್ ಆಗಿವೆ. ಅಯಾನ್ ಮುಖರ್ಜಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದಿತ್ಯ ಚೋಪ್ರಾ ಅವರು ದೊಡ್ಡ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ವಾರ್ 2’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಸಿನಿಮಾ 2025ರಲ್ಲಿ ಆಗಸ್ಟ್ 14ರಂದು ರಿಲೀಸ್ ಆಗಲಿದೆ.

Continue Reading

DAKSHINA KANNADA

ಕಡಬ: ಬಿಳಿನೆಲೆ ಕಾಡಿನಲ್ಲಿ ಅಸ್ಥಿಪಂಜರ ಪತ್ತೆ ..!

Published

on

ಕಡಬ: ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿಯಿರುವ ಕಾಡಿನಲ್ಲಿ ಅಸ್ಥಿಪಂಜರ ಪತ್ತೆಯಾಗಿರುವ ಬಗ್ಗೆ ಎ.19ರಂದು ವರದಿಯಾಗಿದೆ. ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದ ಪಕ್ಕದಲ್ಲಿ ಅಸ್ಥಿಪಂಜರ ದೊರಕಿದೆ.

ಅಸ್ಥಿಪಂಜರ

ಬಿಳಿನೆಲೆಯ ಚಂದ್ರಶೇಖರ್ ಎಂವರು ಕಾಡಿಗೆ ಸೌದೆ ತರಲು ಹೋಗಿದ್ದಾಗ ಕೊಳೆತ ವಾಸನೆ ಬಂದಿದೆ. ಈ ಬಗ್ಗೆ ಹುಡುಕಾಡಿದಾಗ ಮೃತ ವ್ಯಕ್ತಿಯ ಅಸ್ಥಿಪಂಜರ ಕಂಡುಬಂದಿದೆ. ದೂರದದಲ್ಲಿದ್ದ ಮರದ ಕೊಂಬೆಯಲ್ಲಿ ಬಟ್ಟೆಯೊಂದು ನೇತಾಡುವುದು ಕಂಡು ಬಂದಿದೆ.

Read More..;ಸೈಕಲ್ ರಿಪೇರಿ ವಿಚಾರಕ್ಕೆ ಜೀ*ವಾಂತ್ಯಗೊಳಿಸಿದ ಬಾಲಕ..!

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿ ಆರ್‌:12/2024 ಕಲಂ:174(3),(iv) CrPC ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್

Published

on

ಬಂಟ್ವಾಳ : ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಪೋರೇಟರ್‌ ಆಗಿ ಮೇಯರ್ ಆಗಿದ್ದ ಕವಿತಾ ಸನಿಲ್ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯಲ್ಲಿದ್ದ ಕವಿತಾ ಸನಿಲ್‌ ವಿಧಾನ ಸಭಾ ಚುನಾವಣೆಯಲ್ಲೂ ಸಾಕಷ್ಟು ಪ್ರಚಾರ ಮಾಡಿದ್ರು. ಸಿಎಂ ಸಿದ್ದರಾಮಯ್ಯ ಅವರಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಕವಿತಾ ಸನಿಲ್ ಸದ್ಯ ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೂ ತನಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಪಕ್ಷ ಚಟುವಟಿಕೆಯಿಂದ ದೂರ ಉಳಿದಿದ್ದರು. ಯಾವುದಾದರು ಒಂದು ನಿಗಮ ಸಿಗಬಹುದು ಎಂಬ ಅವರ ನಿರೀಕ್ಷೆ ಹುಸಿಯಾದ ಹಿನ್ನಲೆಯಲ್ಲಿ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಂಟ್ವಾಳಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಂದ ಬಿಜೆಪಿ ಬಾವುಟ ಪಡೆದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ : ಸೂಪರ್ ಹಿಟ್ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಡೇಟ್ ಫಿಕ್ಸ್!

Continue Reading

LATEST NEWS

Trending