DAKSHINA KANNADA
ಕರ್ನಾಟಕದ 7 ಅದ್ಭುತಗಳನ್ನು ಗುರುತಿಸಲು ನಿಮಗಿದೆ ಅವಕಾಶ-ದ.ಕದ ಈ 4 ಸ್ಥಳಗಳಿಗೆ ವೋಟ್ ಮಾಡಿ..!
Published
2 years agoon
By
Adminಮಂಗಳೂರು: ವಿಶ್ವದ ಏಳು ಅದ್ಭುತಗಳ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಈಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದೆ. ಈ ವಿಶೇಷ ಅಭಿಯಾನದಲ್ಲಿ ಪಾಲ್ಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಅದ್ಭುತಗಳನ್ನು ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಿಸುವ ಸುವರ್ಣಾವಕಾಶವಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಸ್ಥಳಗಳು ಈಗಾಗಲೇ ಕರ್ನಾಟಕದ ನೂರು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ನಾಲ್ಕು ಸ್ಥಳಗಳಿಗೆ ವೋಟ್ ಮಾಡುವ ಮೂಲಕ ನೀವು ಇವುಗಳನ್ನು ರಾಜ್ಯದ ಅದ್ಭುತವನ್ನಾಗಿ ಮಾಡಬಹುದು.
ದಕ್ಷಿಣ ಕನ್ನಡ ಜಿಲ್ಲೆಯ ನಾಮ ನಿರ್ದೇಶನಗಳು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 800 ಅಡಿ ಎತ್ತರದ ಏಕಶಿಲೆಯ ಶಿಲಾ ಬೆಟ್ಟದ ಮೇಲಿರುವ ಕಾರಿಂಜೇಶ್ವರ ದೇವಾಲಯ, ಮೂಡುಬಿದಿರೆಯಲ್ಲಿರುವ 1000 ಕಂಬದ ಬಸದಿ, ಕುದುರೆಮುಖ ಅರಣ್ಯ ಮೀಸಲು ಪ್ರದೇಶದಲ್ಲಿ ನಿಂತಿರುವ 1788 ಅಡಿ ಎತ್ತರದ ಏಕಶಿಲಾ ಪರ್ವತ ಗಡಾಯಿಕಲ್ಲು, ಅದ್ಭುತ ಸುಂದರ ದೃಶ್ಯಕಾವ್ಯ ಕೊಂಕಣ ರೈಲ್ವೆ ಸ್ಥಳಗಳು ಈಗಾಗಲೇ ರಾಜ್ಯದ ನೂರು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಈಗಾಗಲೇ https://www.7wondersofkarnataka.comನಲ್ಲಿ ನಾಮನಿರ್ದೇಶನಗೊಂಡಿರುವ ನೂರು ಅದ್ಭುತಗಳ ಸಾಲಿನಲ್ಲಿ ನಿಂತಿರುವ ದಕ್ಷಿಣ ಕನ್ನಡ ಜಿಲ್ಲೆಯ ಈ ನಾಲ್ಕು ಸ್ಥಳಗಳ ಪೈಕಿ ನಿಮ್ಮ ಆಯ್ಕೆಯ ಸ್ಥಳಕ್ಕೆ ತಲಾ 10 ವೋಟ್ ಮಾಡಿ ಇವನ್ನು ರಾಜ್ಯದ ಏಳು ಅದ್ಭುತಗಳನ್ನಾಗಿಸಬಹುದು.
ಪ್ರಸ್ತುತ 100 ಅದ್ಭುತಗಳ ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಅತಿ ಹೆಚ್ಚು ವೋಟ್ ಪಡೆದ ಸ್ಥಳಗಳು ಮುಂದಿನ ಹಂತದಲ್ಲಿ ಅಂತಿಮ 49ರ ಪಟ್ಟಿಗೆ ಬರಲಿವೆ. ತದನಂತರ ಅಂತಿಮ 21ರ ಪಟ್ಟಿಯಲ್ಲಿ ಉಳಿದು ಬಳಿಕ ಪ್ರವಾಸೋದ್ಯಮ ಇಲಾಖೆ ತಜ್ಞರ ಸಮಿತಿಯ ಆಯ್ಕೆಯಂತೆ ಕರ್ನಾಟಕದ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಬಹುದು. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಪಾಲಿನ ಹತ್ತು ವೋಟ್‌ಗಳನ್ನು ತಮ್ಮ ನೆಚ್ಚಿನ ಸ್ಥಳಕ್ಕೆ ನೀಡಬಹುದು. ಜತೆಗೆ ಸ್ನೇಹಿತರು, ಕುಟುಂಬ ಸದಸ್ಯರೂ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬಹುದು.
ಏನಿದು ಅಭಿಯಾನ?:
ಪ್ರಪಂಚದ ಏಳು ಅದ್ಭುತಗಳನ್ನು ಎಂದೋ ಹುಡುಕಿಯಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ‘ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್’ ಸಂಸ್ಥೆಯು ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಈ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ.
‘ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು’ ಎಂದೇ ಪ್ರಸಿದ್ಧಿ. ಇಂತಹ ಕರ್ನಾಟಕದ ಸುಂದರ ಕರಾವಳಿತೀರ, ದುರ್ಗಮ ಕಾನನಗಳು, ರಮಣೀಯ ಜಲಪಾತಗಳು, ಸಮುದ್ರ ತೀರಗಳು, ಐತಿಹಾಸಿಕ ಸ್ಥಳಗಳನ್ನು ಇಂತಹ ಹಲವು ಜಗತ್ತುಗಳನ್ನು ಒಳಗೊಂಡಿದೆ. ಈ ಪೈಕಿ ಏಳು ಅದ್ಭುತಗಳನ್ನು ಸಾರ್ವಜನಿಕರೇ ಗುರುತಿಸಲು ರೂಪಿಸಿರುವ ವೇದಿಕೆಯೇ ‘ಬನ್ನಿ ಹುಡುಕೋಣ ಕರ್ನಾಟಕದ ಏಳು ಅದ್ಭುತಗಳನ್ನು’ ಎಂಬ ಈ ಅಭಿಯಾನ.
ಯಾವ ಹಂತದಲ್ಲಿದೆ ಅಭಿಯಾನ?:
ಮೇ ತಿಂಗಳಲ್ಲಿ ಚಾಲನೆ ದೊರೆತಿರುವ ಆರು ಹಂತದ ಈ ಅಭಿಯಾನ ಎರಡನೇ ಹಂತಕ್ಕೆ ತಲುಪಿದೆ.
ಮೊದಲ ಹಂತದಲ್ಲಿ ಸಾರ್ವಜನಿಕರು ವೆಬ್ಸೈಟ್ ಮೂಲಕ ತಮ್ಮ ನೆಚ್ಚಿನ ಊರು, ಜಿಲ್ಲೆ, ತಾಲೂಕು ಸೇರಿ ರಾಜ್ಯದ ಯಾವುದೇ ಜಾಗದಲ್ಲಿ ತಾವು ನೋಡಿದ ಅದ್ಭುತ ಪ್ರವಾಸೀ ಸ್ಥಳ, ಪಾರಂಪರಿಕ ತಾಣ, ಅತ್ಯಾಧುನಿಕ ಕಟ್ಟಡ, ರಸ್ತೆ ಹೀಗೆ ಅದ್ಭುತ ಎನಿಸುವ ಸ್ಥಳದ ಫೋಟೊ ಅಪ್ಲೋಡ್ ಮಾಡಿ ಆ ಸ್ಥಳದ ವೈಶಿಷ್ಟ್ಯವನ್ನು ದಾಖಲು ಮಾಡಿ ನಾಮನಿರ್ದೇಶನ ಮಾಡಿದ್ದಾರೆ.
ಇದೀಗ, ಎರಡನೇ ಹಂತದಲ್ಲಿ ಸಾರ್ವಜನಿಕರಿಂದ ನಾಮನಿರ್ದೇಶನಗೊಂಡ ಅದ್ಭುತಗಳಲ್ಲಿ 100 ಸ್ಥಳಗಳನ್ನು ಆಯ್ಕೆ ಮಾಡಿ, ಅತ್ಯದ್ಭುತ ತಾಣಗಳು ಯಾವುವು ಎಂಬ ಬಗ್ಗೆ ವೋಟಿಂಗ್ ನಡೆಯುತ್ತಿದೆ.
ವೋಟಿಂಗ್ ನಿಯಮ:
– ಆಯ್ಕೆಯಾಗಿರುವ ನೂರು ಅದ್ಭುತಗಳಿಗೂ ವೋಟ್ ಹಾಕಬಹುದು.
– ಪ್ರತಿಯೊಂದು ಅದ್ಭುತಕ್ಕೂ ಹತ್ತು ವೋಟ್ ಮಾಡಲು ಅವಕಾಶವಿರುತ್ತದೆ.
– ಈ ಮೆಗಾ ಅಭಿಯಾನದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ತಿಳಿಸಿ.
-ತನ್ಮೂಲಕ ನಿಮ್ಮ ಜಿಲ್ಲೆಯ ಸ್ಥಳವನ್ನು ಅದ್ಭುತವನ್ನಾಗಿಸಿ.
BIG BOSS
ಉಪಚುನಾವಣೆಯಲ್ಲಿ ಗೆಲುವು; ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ
Published
20 minutes agoon
23/11/2024ಮಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಮಲ್ಲಿಕಟ್ಟೆಯಲ್ಲಿರುವ ಕಚೇರಿಯೆದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಪರ ಘೋಷಣೆ ಕೂ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿ, ‘ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಫಲಿತಾಂಶ ತಲೆಕೆಳಗಾಗಿದೆ’ ಎಂದರು.
‘ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣೆಯಲ್ಲಿ ಸೋತಿದ್ದಾರೆ. ಇದು ರಾಜ್ಯದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿರುವ ಅಪನಂಬಿಕೆಗೆ ಸಾಕ್ಷಿಯಾಗಿದೆ. ಇನ್ನಾದರೂ ಬಿಜೆಪಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ’ ಎಂದು ಹೇಳಿದರು
DAKSHINA KANNADA
ಪಿಲಿಕುಳ ಕಂಬಳಕ್ಕೆ ಪ್ರಾಣಿಪ್ರಿಯರ ವಿರೋಧ !
Published
2 hours agoon
23/11/2024By
NEWS DESK3ಮಂಗಳೂರು: ಕಂಬಳ ಕರಾವಳಿ ಕರ್ನಾಟಕದ ಜನಪದ ಕ್ರೀಡೆ. ಈ ಹಿಂದೆ ನಿಷೇಧಕ್ಕೆ ಒಳಪಟ್ಟರೂ ನಂತರ ಕಂಬಳ ನಡೆಸುವುದಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಈಗ ಸರ್ಕಾರಿ ಪ್ರಾಯೋಜಿತ ಮೊದಲ ಕಂಬಳಕ್ಕೆ ಪ್ರಾಣಿ ಪ್ರಿಯರ ವಿರೋಧ ವ್ಯಕ್ತವಾಗಿದೆ. ಇದರ ನಡುವೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕಳೆದ ಹತ್ತು ವರ್ಷಗಳಿಂದ ನಿಂತು ಹೋಗಿದ್ದ ಪಿಲಿಕುಳದ ಸರ್ಕಾರಿ ಕಂಬಳ ಈ ಬಾರಿ ಮತ್ತೆ ಆಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಪಿಲಿಕುಳದ ಗುತ್ತಿನ ಮನೆಯ ಮುಂದೆ ಕಂಬಳ ಕರೆ ನಿರ್ಮಾಣ ಮಾಡಿ ಕಂಬಳದ ದಿನಾಂಕ ಕೂಡಾ ಘೋಷಣೆ ಮಾಡಿತ್ತು. ನವೆಂಬರ್ 9 ರಂದು ನಿಗದಿಯಾಗಿದ್ದ ಈ ಕಂಬಳ, ಪಂಚಾಯತ್ ಉಪಚುನಾವಣೆಯ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿತ್ತು.
ಇದನ್ನೂ ಓದಿ: 30 ವರ್ಷಕ್ಕೆ ಮದುವೆಯಾಗುವ ಯೋಚನೆ ಮಾಡಿದ್ರೆ ಇದನ್ನು ಓದಲೇ ಬೇಕು !!
ಈ ನಡುವೆ ಪೆಟಾದವರು ಬೆಂಗಳೂರು ಕಂಬಳ ಹಾಗೂ ಪಿಲಿಕುಳ ಕಂಬಳದ ಆಯೋಜನೆಯ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಬೆಂಗಳೂರು ಕಂಬಳ ಇನ್ನೂ ದಿನ ನಿಗದಿಯಾಗದೇ ಇದ್ದರೂ ಕಂಬಳ ನಡೆಸಲು ಅನುಮತಿ ನೀಡಬಾರದೆಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪೆಟಾ ಸಲ್ಲಿಸಿದ ಈ ಅರ್ಜಿಗೆ ಬೆಂಗಳೂರು ಕಂಬಳ ಆಯೋಜಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಕೀಲರ ಮೂಲಕ ವಾದ ಮಂಡಿಸಿದ್ದಾರೆ. ಆದ್ರೇ ಪಿಲಿಕುಳದ ಸರ್ಕಾರಿ ಕಂಬಳದ ವಿಚಾರವಾಗಿ ಯಾವುದೇ ಅರ್ಜಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿಲ್ಲ.
ಹೀಗಾಗಿ ಪಿಲಿಕುಳ ಕಂಬಳ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡಿದೆ. ಮಂಗಳೂರು ನಗರದಲ್ಲಿ ಕಂಬಳ ನಡೆಯದೇ ಇದ್ದ ಸಂದರ್ಭದಲ್ಲಿ ಪಿಲಿಕುಳದಲ್ಲಿ ಸರ್ಕಾರದ ವತಿಯಿಂದ ಕಂಬಳ ಆರಂಭಿಸಲಾಗಿತ್ತು. ಕಾರಣಾಂತರಗಳಿಂದ ನಿಂತು ಹೋಗಿದ್ದ ಕಂಬಳ ಮತ್ತೆ ಆರಂಭವಾದ ಕಾರಣ ಕಂಬಳ ಪ್ರೇಮಿಗಳು ಸಂತಸಗೊಂಡಿದ್ದರು. ಆದ್ರೆ ಇದೀಗ ಪೆಟಾ ಪಿಲಿಕುಳ ಕಂಬಳಕ್ಕೆ ಅಪಸ್ವರ ಎತ್ತಿದ್ದು, ಇಲ್ಲಿ ನಡೆಯುವ ಗದ್ದಲದಿಂದ ಪಿಲಿಕುಳದ ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಪ್ರಾಣಿಗಳಿಗೆ ತೊಂದರೆ ಆಗಲಿದೆ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಇಟ್ಟಿದೆ.
BIG BOSS
ಮಂಗಳೂರು: ಪತಿಯ ಅ*ನೈತಿಕ ಸಂಬಂಧ; ತ್ರಿವಳಿ ತಲಾಕ್ ಮೂಲಕ ಪತ್ನಿಗೆ ವಿಚ್ಚೇದನ
Published
4 hours agoon
23/11/2024ಮಂಗಳೂರು: ತಂದೆಯನ್ನು ಮನೆಗೆ ಕರೆದು ತಂದೆಯ ಎದುರಿನಲ್ಲಿ ಪತಿ ನನಗೆ ತ್ರಿವಳಿ ತಲಾಕ್ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಉಳ್ಳಾಲದ ಸಮ್ಮರ್ ಸ್ಯಾಂಡ್ ಬಳಿಯ ನಿವಾಸಿಯಾಗಿರುವ ಮಹಮ್ಮದ್ ದಿಲ್ಫಾಜ್ ಎಂಬವರ ವಿರುದ್ಧ ಈ ದೂರು ದಾಖಲಾಗಿದೆ. 2019 ರಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಕೆಲ ಕಾಲ ಚೆನ್ನಾಗಿ ಸಂಸಾರ ಕೂಡಾ ನಡೆಸಿ ಬಳಿಕ ಪತಿ ಪರ ಸ್ತ್ರೀಯ ಜೊತೆ ಸಂಬಂಧ ಬೆಳೆಸಿದ್ದಾಗಿ ಆರೋಪಿಸಲಾಗಿದೆ.
ಈ ವಿಚಾರವನ್ನು ಪ್ರಶ್ನೆ ಮಾಡಿದ ಪತ್ನಿಗೆ ದೈಹಿಕ ಹಿಂ*ಸೆ ನೀಡಲಾಗಿದ್ದು, ನಿರಂತರ ಕಿ*ರುಕುಳ ನೀಡಲಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಎರಡೂ ಮನೆಯವರೂ ರಾಜಿ ಪಂಚಾಯತಿ ನಡೆಸಿದ್ದರೂ ಸಂಸಾರ ಸರಿ ಹೋಗಿರಲಿಲ್ಲ. ಇದೀಗ ಹಣಕ್ಕಾಗಿ ಬೇಡಿಕೆ ಇಟ್ಟು ತಂದೆಯನ್ನು ಮನೆಗೆ ಕರೆಸಿ ಅವರ ಸಮ್ಮುಖದಲ್ಲಿ ಮೂರ ಬಾರಿ ತಲಾಕ್ ಹೇಳಿ ತವರು ಮನೆಗೆ ಕಳುಹಿಸಲಾಗಿದೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತ್ರಿವಳಿ ತಲಾಕ್ ಕಾನೂನನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರಿಂದ ಈ ದೂರಿಗೆ ಪೊಲೀಸರು ಹೆಚ್ಚಿನ ಮಾನ್ಯತೆ ನೀಡಿ ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
LATEST NEWS
ಪಿಲಿಕುಳ ಕಂಬಳಕ್ಕೆ ಪ್ರಾಣಿಪ್ರಿಯರ ವಿರೋಧ !
Viral Video: ಮಿಂಚಿನ ವೇಗದಲ್ಲಿ ಊಟ ಬಡಿಸಿದ ನಾಲ್ವರು ಯುವಕರು
ವಿದ್ಯಾಸಿರಿ ವಿದ್ಯಾರ್ಥಿ ವೇತನ 2 ಸಾವಿರಕ್ಕೆ ಏರಿಕೆ: ಸಿಎಂ ಸಿದ್ದರಾಮಯ್ಯ
ಜಾರ್ಖಂಡ್ನಲ್ಲಿ ಬಿಗ್ ಟ್ವಿಸ್ಟ್; ಜೆಎಂಎಂ ಮುನ್ನಡೆ – ಎನ್ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ
ಕರ್ನಾಟಕ ಉಪಚುನಾವಣೆ : ‘ಕೈ’ ಹಿಡಿದ ಮತದಾರ…ಕಮಲಕ್ಕೆ ಶಾಕ್
ಮಹಾರಾಷ್ಟ್ರದಲ್ಲಿ ಮಹಾಯುತಿಗೆ 200+ ಕ್ಷೇತ್ರಗಳಲ್ಲಿ ಮುನ್ನಡೆ
Trending
- LATEST NEWS3 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS5 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- Baindooru1 day ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION2 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ