Home ಪ್ರಮುಖ ಸುದ್ದಿ ವ್ಯಾಲೆಂಟೈನ್ಸ್ ಡೇ ಗಿಫ್ಟ್ ‘ಎನ್ನ’ ಸಿನಿಮಾ: ಫೆ.14ಕ್ಕೆ ಕರಾವಳಿ ಜಿಲ್ಲೆಯಾದ್ಯಂತ ‘ಎನ್ನ’ ರಿಲೀಸ್

ವ್ಯಾಲೆಂಟೈನ್ಸ್ ಡೇ ಗಿಫ್ಟ್ ‘ಎನ್ನ’ ಸಿನಿಮಾ: ಫೆ.14ಕ್ಕೆ ಕರಾವಳಿ ಜಿಲ್ಲೆಯಾದ್ಯಂತ ‘ಎನ್ನ’ ರಿಲೀಸ್

ವ್ಯಾಲೆಂಟೈನ್ಸ್ ಡೇ ಗಿಫ್ಟ್ ‘ಎನ್ನ’  ಫೆ.14ಕ್ಕೆ ಕರಾವಳಿಯಾದ್ಯಂತ ರಿಲೀಸ್

ಮಂಗಳೂರು: ಇನ್ನೇನು ಫೆಬ್ರವರಿ 14 ಕ್ಕೆ ಕೆಲವೇ ದಿನಗಳು ಬಾಕಿ ಇದೆ. ಯುವಕ-ಯುವತಿಯರೆಲ್ಲಾ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್ ಮೂಡ್‍ನಲಿದ್ದಾರೆ. ಕೋಸ್ಟಲ್ ವುಡ್‍ನಲ್ಲಿ ಪ್ರೇಮಿಗಳ ದಿನದ ಗಿಫ್ಟ್ ಆಗಿ ಸಿನಿಮಾವೊಂದು ತೆರೆಕಾಣಲಿದೆ.

ಗ್ಲೋರಿಯಸ್ ಆಂಜೆಲೋರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ , ಕ್ಯಾನೆಟ್ ಮಾತಾಯಸ್ ಪಿಲಾರ್ ನಿರ್ಮಾಣದ ಹಾಗೂ ಕೋಡಿಕಲ್ ವಿಶ್ವನಾಥ್ ನಿರ್ದೇಶನದ ‘ಎನ್ನ’ ಸಿನಿಮಾ ಇದೇ ಫೆಬ್ರವರಿ 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.

ಈ ಕುರಿತು ಚಿತ್ರತಂಡ ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದು, ಈ ಸಂದರ್ಭ ಮಾತನಾಡಿದ ನಿರ್ದೇಶಕ ಕೋಡಿಕಲ್ ವಿಶ್ವನಾಥ್, ಎನ್ನ ಚಿತ್ರದ ಕುರಿತು ವಿವರಣೆ ನೀಡಿದ್ದು, ಈಗಾಗಲೇ ಹಾಡು, ಟೀಸರ್, ಟ್ರೈಲರ್ ಗಳಿಂದ ಎನ್ನ ಸಿನಿಮಾ ಜನಮೆಚ್ಚುಗೆ ಪಡೆದಿದ್ದು, ಯಾವುದೇ ಕಟ್ಸ್ ಇಲ್ಲದೆ ಸೆನ್ಸರ್ ಮಂಡಳಿಯಿಂದ ಯು ಎ ಸರ್ಟಿಫಿಕೇಟ್ ಪಡೆದಿದೆ ಎಂದರು.

ಇನ್ನು ನಾಯಕ ನಟ ವಿನಿತ್ ಮಾತನಾಡಿ, ಇದೊಂದು ಲವ್ ಸ್ಟೋರಿ ಹೊಂದಿರುವ ಸಿನಿಮಾವಾಗಿದ್ದು, ಟೈಟಲ್‍ನಂತೆ ಸಿನಿಮಾ ಕೂಡ ಹಲವಾರು ವಿಶೇಷತೆಗಳನ್ನು ಹೊಂದಿದೆ ಎಂದರು.

ಇನ್ನು ತುಳು ಸಿನಿಮಾದಲ್ಲಿ ಪ್ರಥಮ ಬಾರಿಗೆ ಎನ್ನುವಂತೆ ಮಹಿಳೆಯೊಬ್ಬರು ಛಾಯಾಗ್ರಹಣ ಮಾಡಿದ್ದು, ವೈಶಾಲಿ ಎಸ್ ಉಡುಪಿ ಕ್ಯಾಮಾರಾ ಕೈಚಳಕವಿದೆ.

ಸಿನಿಮಾದಲ್ಲಿ ನಾಯಕ ವಿನೀತ್ ಗೆ ಜೋಡಿಯಾಗಿ ಶ್ರುತಿ ಪೂಜಾರಿ ಅಭಿನಯಿಸಿದ್ರೆ, ತುಳುವ ರತ್ನ ಪೃಥ್ವಿ ಅಂಬರ್ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಜೊತೆಗೆ ರಮೇಶ್ ರೈ ಕುಕ್ಕುವಳ್ಳಿ, ಅಶ್ಮಿತ್ ರಾಜ್, ಧೀರಜ್ ಮಾರ್ಗ ಸೇರಿದಂತೆ ಹಲವಾರು ಹೊಸ ಹಾಗೂ ಹಿರಿಯ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ವಿಡಿಯೋಗಾಗಿ..

- Advertisment -

RECENT NEWS

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!!

ಮಂಗಳೂರು- ಉಡುಪಿಗೆ ಕೊರೋನಾ ಭಯದಿಂದ ಕೊಂಚ ನೆಮ್ಮದಿ- ಕಾಸರಗೋಡಿಗೆ ಭಾರಿ ಭೀತಿ..!! ಮಂಗಳೂರು /ಉಡುಪಿ/ಕಾಸರಗೋಡು : ಇಂದು ಕೂಡ ಕರಾವಳಿಯ ಜನತೆಗೆ ನಮ್ಮದಿಯ ಉಸಿರು ಬಿಟ್ಟಿದ್ದಾರೆ. ಕೋರೊನದ ವಿರುದ್ದದ ಜಿಲ್ಲಾಡಳಿತಗಳು, ಸರ್ಕಾರ, ಜನಪ್ರತಿನಿಧಿಗಳು ನಡೆಸುತ್ತಿರುವ ಸಮರಕ್ಕೆ...

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..! 

ಗಡಿ ದಾಟಲು ಬಲವಂತದ ಯತ್ನ : ತಡೆದ ಕರ್ನಾಟಕ ಪೊಲೀಸರ ಮೇಲೆ ಕಲ್ಲು ತೂರಾಟ..!  ಸುಳ್ಯ: ಕೇರಳ ಗಡಿ ದಾಟಲು ಯತ್ನಿಸಿ ವಿಫಲನಾದ ಯುವಕ ಕರ್ನಾಟಕ ಪೊಲೀಸರು ಮತ್ತು ವಾಹನದ ಮೇಲೆ ಕಲ್ಲು ತೂರಿದ...

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರೆಸ್ಟ್..!

ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳು ಎರಸ್ಟ್..! ಬಂಟ್ವಾಳ : ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ. ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ...

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ

ಮಂಗಳೂರು ರೈಲುಗಳಲ್ಲಿ ಕೂಡ ಭರದಿಂದ ಸಾಗಿದೆ ಕೊರೊನಾ ಐಸೋಲೇಷನ್ ವಾರ್ಡ್ ಕಾರ್ಯ ಮಂಗಳೂರು: ಕೊರೋನ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರೈಲು ಬೋಗಿಗಳಲ್ಲಿ ಐಸೋಲೇಶನ್ ವಾರ್ಡ್ ತೆರೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕೊಂಕಣ...