Sunday, May 16, 2021

ಯಕ್ಷಗಾನ ತುಳುನಾಡಿನ ಕೊಡುಗೆ: ಮಧ್ವ ಯಕ್ಷಕೂಟ ವಾರ್ಷಿಕೋತ್ಸವ ಕೆ.ಎಲ್. ಆಚಾರ್ಯ

ಯಕ್ಷಗಾನ ತುಳುನಾಡಿನ ಕೊಡುಗೆ: ಮಧ್ವ ಯಕ್ಷಕೂಟ ವಾರ್ಷಿಕೋತ್ಸವ ಕೆ.ಎಲ್. ಆಚಾರ್ಯ

ಬಂಟ್ವಾಳ: ಯಕ್ಷಗಾನ ಕಲೆ ತುಳುನಾಡಿನ ಕೊಡುಗೆಯಾಗಿದೆ ಎಂದು ನಿವೃತ್ತ ಶಿಕ್ಷಕ ವಿದ್ವಾನ್ ಕೆ.ಲಕ್ಷ್ಮೀ ನಾರಾಯಣ ಆಚಾರ್ಯ ಅವರು ಹೇಳಿದ್ದಾರೆ.

ಅವರು ರವಿವಾರ ಬಂಟ್ವಾಳ ತಾ. ಕಾವಳಪಡೂರು ಗ್ರಾಮದ ಮಧ್ವ ಯಕ್ಷ ಕೂಟದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.ಮಧ್ವಾಚಾರ್ಯರು ಯಕ್ಷಗಾನ ಕಲೆಯ ಬೀಜವನ್ನು ಬಿತ್ತಿದವರು. ಬಳಿಕ ಪಾರ್ತಿ ಸುಬ್ಬನಿಂದ ಪೋಷಿಸಲ್ಪಟ್ಟಿದ್ದರಿಂದ ಯಕ್ಷಗಾನ ಕಲೆ ತುಳುನಾಡಿನ ಹೆಮ್ಮೆಯ ಕೊಡುಗೆಯಾಗಿದ್ದು, ಇದನ್ನು ಬೆಳೆಸಿ, ಉಳಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದೆ ಎಂದರು.
ಮಧ್ವಾಚಾರ್ಯರು ನಡೆದಾಡಿದ, ವಿಶ್ರಮಿಸಿದ ಮಧ್ವದಲ್ಲಿ ಯಕ್ಷಗಾನ ನಿರಂತರವಾಗಿ ಸಾಗಲಿ, ಯಕ್ಷ ಕೂಟದ ಕಾರ್ಯ ಅಭಿನಂದನೀಯ ಎಂದರು.

ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ.ಜಿನರಾಜ ಆರಿಗ ಅವರು ಶುಭಹಾರೈಸಿದರು. ಕಾವಳಪಡೂರು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಹಿರಿಯ ಯಕ್ಷಗಾನ ಅರ್ಥದಾರಿ ಡಿ.ತಿಮ್ಮಪ್ಪ ಶೆಟ್ಟಿ ಪಾತಿಲ, ಶಿರಡಿ ಉದ್ಯಮಿ ಲೋಕನಾಥ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಿತಿ ಪದಾಧಿಕಾರಿಗಳಾದ ಸಂಜೀವ ಶೆಟ್ಟಿ ಪಂಜಿಕಲ್ಲು, ರಾಜ್ ಪ್ರಸಾದ್ ಆರಿಗ, ಭಾನುಮತಿ ಶೆಟ್ಟಿ, ಗೋಪಾಲಕೃಷ್ಣ ಬಂಗೇರ, ಜಯಶಂಕರ ಉಪಾಧ್ಯಾಯ, ಭವಾನಿ ಶ್ರೀ ಧರ ಪೂಜಾರಿ, ನಾರಾಯಣ ಶೆಟ್ಟಿ, ಶಿವಪ್ಪ ಗೌಡ ನಿನ್ನಿಕಲ್ಲು, ನಾರಾಯಣ ಶೆಟ್ಟಿ, ಬೇಬಿ ಕುಂದರ್ ಮಧ್ವ, ನೂರುಲ್ಲಾ ಸಾಹೇಬ್, ರಮೇಶ್ ನಾಯ್ಕ್, ಸುಜಾತಾ ಶೆಟ್ಟಿ ಅವರು ಉಪಸ್ಥಿತರಿದ್ದರು.

ಶಿಕ್ಷಕ ಉದಯ ಕುಮಾರ್ ಜೈನ್ ಸ್ವಾಗತಿಸಿದರು. ಅಧ್ಯಕ್ಷ ಭಾಸ್ಕರ ಶೆಟ್ಟಿ ಪ್ರಸ್ತಾವಿಸಿದರು.ರತ್ನದೇವ್ ಪುಂಜಾಲಕಟ್ಟೆ ಕಾರ್ಯ ಕ್ರಮ ನಿರೂಪಿಸಿದರು. ಬಳಿಕ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಿತು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...