Connect with us

    ಚೆಂಡೆ ಸದ್ದು ನಿಲ್ಲಿಸಿದ ಬಡಗುತಿಟ್ಟು ಯಕ್ಷಗಾನದ ಮೇರು ಚೆಂಡೆ ವಾದಕ ಇಡಗುಂಜಿ ಕೃಷ್ಣಯಾಜಿ

    Published

    on

    ಚೆಂಡೆ ಸದ್ದು ನಿಲ್ಲಿಸಿದ ಬಡಗುತಿಟ್ಟು ಯಕ್ಷಗಾನದ ಮೇರು ಚೆಂಡೆ ವಾದಕ ಇಡಗುಂಜಿ ಕೃಷ್ಣಯಾಜಿ

    ಕಾರವಾರ: ಯಕ್ಷಲೋಕದಲ್ಲಿ ಚೆಂಡೆ ವಾದಕರಾಗಿ ಪ್ರಸಿದ್ಧಿ ಪಡೆದ ಇಡಗುಂಜಿ ಕೃಷ್ಣಯಾಜಿ (74) ಹೃದಯಾಘಾತದಿಂದ ಶುಕ್ರವಾರ (ಎಪ್ರಿಲ್ 24) ಸಂಜೆ ಇಹಲೋಕ ತ್ಯಜಿಸಿದ್ದಾರೆ.

    ಇವರು ಪತ್ನಿ ರತ್ನಾವತಿ ಯಾಜಿ ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

    ಕೋಡಂಗಿ, ಬಾಲಗೋಪಾಲ ವೇಷಗಳ ಮೂಲಕ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಚಂದ್ರಹಾಸ, ಅರ್ಜುನ, ಸ್ತ್ರೀ ವೇಷಗಳ ಮೂಲಕ ಮತ್ತಷ್ಟು ಜನಪ್ರಿಯರಾದರು‌.

    ಬಳಿಕ ಖ್ಯಾತ ಮದ್ದಳೆ ವಾದಕ ಕಿನ್ನೀರು ನಾರಾಯಣ ಹೆಗಡೆ ಅವರಲ್ಲಿ ಮದ್ದಳೆ ಅಭ್ಯಾಸ ನಡೆಸಿದರು.

    ಹಿರಿಯ ಭಾಗವತ ಗುಂಡ್ಮಿ ರಾಮಚಂದ್ರ ನಾವಡರಿಂದ ಮದ್ದಳೆ ಹಾಗೂ ಚೆಂಡೆಯ ಕುರಿತು ಸೂಕ್ತ ಮಾರ್ಗದರ್ಶನ ಪಡೆದಿದ್ದರು.

    ಐದು ದಶಕಗಳ ಕಾಲ ಚೆಂಡೆ ವಾದಕರಾಗಿ ಇಡಗುಂಜಿ, ಗುಂಡಿಬೈಲ್, ಕರ್ಕಿ ಹಾಸ್ಯಗಾರ, ಕಮಲಶಿಲೆ, ಅಮೃತೇಶ್ವರಿ, ಗುಂಡಬಾಳ ಹೀಗೆ ವಿವಿಧ ಯಕ್ಷಗಾನ ಮೇಳಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದರು.

    ಅಲ್ಲದೇ ಗುಣವಂತೆಯ ಶ್ರೀಮಯ ಕಲಾಕೇಂದ್ರ ಮತ್ತು ಮೂರೂರಿನ ದೇವರು ಹೆಗಡೆ ಯಕ್ಷಗಾನ ಶಾಲೆಯಲ್ಲಿ 10-12 ವರ್ಷಗಳ ಕಾಲ ಗುರುವಾಗಿ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ತರಬೇತಿ ನೀಡಿದ್ದರು‌.

    ದೇಶ-ವಿದೇಶಗಳಲ್ಲೂ ಚೆಂಡೆ ಮತ್ತು ಮದ್ದಳೆಯ ನಾದ ಹೊರಡಿಸಿದ್ದ ಇವರಿಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿದ್ದವು.

    ಇವರು ಮೊದಲಿಗೆ ಕಿನ್ನೀರು ನಾರಾಯಣ ಹೆಗಡೆ ಪ್ರತಿಷ್ಠಾನ ಪ್ರಶಸ್ತಿ ಪಡೆದಿದ್ದರು‌.

    ಬಳಿಕ ಭಾಗವತ ನಾರಾಯಣ ಉಪ್ಪೂರು ಕಲಾರಂಗ ಪ್ರಶಸ್ತಿ, ಕರ್ನಾಟಕ ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ವಾದನ ರತ್ನಾಕರ ಹೀಗೆ ನೂರಾರು ಪ್ರಶಸ್ತಿ ಮತ್ತು ಸನ್ಮಾನಗಳು ಇವರ ಮುಡಿಗೇರಿದೆ.

    ಅಲ್ಲದೇ ಈ ಬಾರಿಯ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ -2020 ರಲ್ಲಿ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು‌.

    ಇತ್ತ ಚೆಂಡೆ ವಾದಕ ಇಡಗುಂಜಿ ಕೃಷ್ಣ ಯಾಜಿಯವರ ನಿಧನಕ್ಕೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ದಂಟ್ಕಲ್,

    ಯಕ್ಷಗಾನ ಕಲಾವಿದರಾದ ಬಳಕೂರು ಕೃಷ್ಣ ಯಾಜಿ, ನೀಲ್ಕೋಡು ಶಂಕರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಸಾಲಿಗ್ರಾಮ ಮೇಳದ ಕಿಶನ್ ಹೆಗ್ಡೆ, ಶಾಸಕ ಸುನೀಲ್ ನಾಯ್ಕ, ಮಾಜಿ ಶಾಸಕ ಮಂಕಾಳು ವೈದ್ಯ ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ‌.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಬಂಟ್ವಾಳ :ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾ*ತ; ಪತ್ನಿ ಸಾ*ವು; ಪತಿ ಗಂಭೀ*ರ

    Published

    on

    ಬಂಟ್ವಾಳ : ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಸಂಭವಿಸಿ ಪತ್ನಿ ಸಾ*ವನ್ನಪ್ಪಿದ್ದು, ಪತಿ ಗಂ*ಭೀರವಾಗಿ ಗಾ*ಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಸಾ*ವನ್ನಪ್ಪಿದ ನವವಿವಾಹಿತೆ. ಘಟನೆಯಿಂದ ಅನಿಶ್ ಕೃಷ್ಣ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ.

    ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿರೋಡಿನ ಕಡೆಯಿಂದ ‌ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ನವದಂಪತಿಯ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಡಿವೈಡರ್ ಮೇಲಿನಿಂದ ಇನ್ನೊಂದು ಬದಿಗೆ ಹಾರಿದೆ. ಬಳಿಕ ಮಂಗಳೂರು ಕಡೆಯಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್‌ಟಿ.ಸಿ ಬಸ್ ಗೆ ಡಿ*ಕ್ಕಿ ಹೊಡೆದಿದೆ.

    ಡಿ*ಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು.

    ಎರಡು ದಿನದ ಹಿಂದಷ್ಟೇ ಮದುವೆ : 

    ಸೆ.5 ರಂದು ದೇಂತಡ್ಕ ದೇವಸ್ಥಾನದಲ್ಲಿ ಮಾನಸ ಹಾಗೂ ಅನಿಶ್ ಕೃಷ್ಣ  ಮದುವೆ ನಡೆದಿತ್ತು. ಮದುವೆ ಕಾರ್ಯಕ್ರಮದ ವಿಚಾರವಾಗಿ ಇಂದು ಅಲ್ಲಿನ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ಬಂದು ವಾಪಸ್ ಮಾವನ ಮನೆಗೆ ಹೋಗುವ ವೇಳೆ ಈ ‌ಘ‌ಟನೆ ನಡೆದಿದೆ ಎನ್ನಲಾಗಿದೆ. ಇಬ್ಬರು ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ‌ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು,  ಪ್ರಕರಣ ದಾಖಲಿಸಿಕೊಂಡಿದ್ದಾರೆ

    Continue Reading

    LATEST NEWS

    ಲಿಫ್ಟ್ ಕೊಡುವ ಮುನ್ನ ಎಚ್ಚರ: ಡ್ರಾಪ್ ಕೇಳಿ ಚಾಕು ಇರಿದ ದು*ಷ್ಕರ್ಮಿ

    Published

    on

    ಮಂಗಳೂರು/ಬೆಂಗಳೂರು : ಇತ್ತೀಚಿಗೆ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಕೊ*ಲೆ ಮಾಡೋದಕ್ಕಂತೂ ಕಾರಣವೇ ಬೇಡ. ಕ್ಷುಲ್ಲಕ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಹ*ತ್ಯೆ ಮಾಡಲು ಹೇಸುವುದಿಲ್ಲ. ಅಂತಹುದೇ ಕೃ*ತ್ಯ ಬೆಂಗಳೂರಿನಲ್ಲಿ ನಡೆದಿದೆ. ಬೈಕ್ ನಲ್ಲಿ ಲಿಫ್ಟ್ ಕೊಟ್ಟಾತನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.

    ಖಾಸಗಿ ಬ್ಯಾಂಕ್ ಉದ್ಯೋಗಿ ಪಿ.ಈಶ್ವರಗೌಡ(38) ಚೂ*ರಿ ಇರಿತಕ್ಕೊಳಗಾದವರು. ರೋಹಿತ್ ಗೌಡ (24) ಚೂ*ರಿ ಇರಿದಾತ. ಈಶ್ವರಗೌಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರೋಹಿತ್ ಗೌಡನನ್ನು ಬಂಧಿಸಲಾಗಿದೆ.

    ಅವಮಾನಕ್ಕೆ ಪ್ರತೀಕಾರ :

    ಸಾಲ ವಸೂಲಾತಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಈಶ್ವರಗೌಡ ಕ್ರಿಕೆಟ್ ಟೂರ್ನಮೆಂಟ್ ವೇಳೆ ರೋಹಿತ್ ಗೌಡನನ್ನು ಸಾರ್ವಜನಿಕವಾಗಿ ಅವಮಾನಿಸಿದ್ದ ಎನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಆರೋಪಿ ಆತನನ್ನು ಕೊ*ಲ್ಲಲು ಸಂಚು ರೂಪಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಈಶ್ವರಗೌಡ ತನ್ನ ಸ್ನೇಹಿತನೊಂದಿಗೆ ಢಾಬಾವೊಂದಕ್ಕೆ ಊಟಕ್ಕೆ ಹೋಗಿದ್ದರು. ಅವರು ಢಾಬಾದಿಂದ ಹೊರಬಂದ ನಂತರ, ಗೇಟ್‌ನಲ್ಲಿದ್ದ ಆರೋಪಿ ಡ್ರಾಪ್ ನೀಡುವಂತೆ ವಿನಂತಿಸಿದ್ದ. ಈಶ್ವರ್ ಕೂಡ ಅದೇ ದಾರಿಯಲ್ಲಿ ಹೋಗುತ್ತಿದ್ದರಿಂದ ಅವನು ಡ್ರಾಪ್ ನೀಡಲು ಒಪ್ಪಿದರು. ಸ್ವಲ್ಪ ಹೊತ್ತು ಬೈಕ್ ಹಿಂದೆ ಕುಳಿತು ಸವಾರಿ ಮಾಡಿದ ರೋಹಿತ್, ಸ್ಮಶಾನದ ಬಳಿ ನಿರ್ಜನ ಪ್ರದೇಶದಲ್ಲಿ ತಾನು ತಂದಿದ್ದ ಚಾಕುವಿನಿಂದ ಈಶ್ವರ್ ಗೆ ಇ*ರಿದಿದ್ದಾನೆ.

    ಈ ವೇಳೆ ಬೈಕ್ ಚಲಾಯಿಸುತ್ತಿದ್ದ ಈಶ್ವರ್ ರ ನಿಯಂತ್ರಣ ತಪ್ಪಿದ್ದು,  ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಚಾಕು ಇ*ರಿತದಿಂದ ಈಶ್ವರ್ ಗೆ ಗಾ*ಯವಾಗಿದೆ. ಆದರೂ ರೋಹಿತ್‌ನಿಂದ ಹರಸಾಹಸ ಮಾಡಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆದರೂ ಬಿಡದ ರೋಹಿತ್ ಬೆನ್ನತ್ತಿ ಇ*ರಿದಿದ್ದಾನೆ.

    ಇದನ್ನೂ ಓದಿ : ಗಣೇಶ ವಿಗ್ರಹ ತರಲು ತೆರಳುತ್ತಿದ್ದ ಟಾಟಾ ಏಸ್ ಪಲ್ಟಿ, ಇಬ್ಬರು ಸಾ*ವು

    ಈ ವೇಳೆ ಈಶ್ವರ್ ತಪ್ಪಿಸಿಕೊಂಡು ಮುಖ್ಯರಸ್ತೆಗೆ ಬಂದು ಸಹಾಯಕ್ಕಾಗಿ ತನ್ನ ಸಹೋದರನನ್ನು ಕರೆದಿದ್ದು, ಆತನ ಸಹೋದರ ಆತನನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಸೇರಿಸಿದರು. ಅಷ್ಟು ಹೊತ್ತಿಗಾಗಲೇ ಆರೋಪಿ ರೋಹಿತ್ ಬೈಕ್ ನಲ್ಲಿ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಉಡುಪಿ : ಲಲಿತಾ ಕಲ್ಕೂರ ವಿಧಿವಶ

    Published

    on

    ಉಡುಪಿ : ದಿವಂಗತ ಪ್ರೊ. ಮಂಜುನಾಥ ಕಲ್ಕೂರ ಅವರ ಪತ್ನಿ ಲಲಿತಾ ಕಲ್ಕೂರ (83) ವಿ*ಧಿವಶರಾಗಿದ್ದಾರೆ.  ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ(ಸೆ.7) ಉಡುಪಿಯ ಸ್ವಗೃಹದಲ್ಲಿ ನಿಧ*ನ ಹೊಂದಿದರು.

    ಮೃತರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸಹಿತ 3ಮಂದಿ ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

    Continue Reading

    LATEST NEWS

    Trending