Connect with us

    DAKSHINA KANNADA

    ಅಪಘಾ*ತದಲ್ಲಿ ಗಾಯಗೊಂಡಿದ್ದ ಯಕ್ಷಗಾನ ಕಲಾವಿದ ನಿ*ಧನ

    Published

    on

    ಮಂಗಳೂರು : ಅಪಘಾ*ತದಲ್ಲಿ ಗಾ*ಯಗೊಂಡಿದ್ದ ಕಟೀಲು ಯಕ್ಷಗಾನ ಮೇಳದ ಕಲಾವಿದ ಆನಂದ ಕಟೀಲು  ಚಿಕಿತ್ಸೆ ಫಲಕಾರಿಯಾಗದೆ ಶನಿವಾರ(ಜ.25) ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.

    ಜನವರಿ 1ರಂದು ಕಿನ್ನಿಗೋಳಿಯಲ್ಲಿ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಆಟೋ ಪಲ್ಟಿಯಾಗಿದೆ.  ಪರಿಣಾಮ ಆಟೋ ಚಲಾಯಿಸುತ್ತಿದ್ದ ಆನಂದ ತೀವ್ರ ಗಾ*ಯಗೊಂಡಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುತ್ತಿಗೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಶಸ್ತ್ರ ಚಿಕಿತ್ಸೆಗೆ 8 ಲಕ್ಷ ರೂ. ಖರ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಇದನ್ನೂ ಓದಿ : ಗೂಗಲ್ ಮ್ಯಾಪ್ ಅವಾಂತರ: ನೇಪಾಳಕ್ಕೆ ಹೋಗಬೇಕಿದ್ದ ಫ್ರಾನ್ಸ್ ಪ್ರವಾಸಿಗರಿಬ್ಬರು ತಲುಪಿದ್ದು ಎಲ್ಲಿಗೆ ?

    ಎದ್ದು ಕುಳಿತುಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದ ಆನಂದ ಚಿಕಿತ್ಸೆ ಫಲಕಾರಿಯಾಗದೆ  ನಿನ್ನೆ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

    DAKSHINA KANNADA

    ಮಂಗಳೂರು ಉದ್ಯಮಿಗೆ ಭೂ*ಗತ ಪಾ*ತಕಿಯಿಂದ ಬೆ*ದರಿಕೆ ಕರೆ!

    Published

    on

    ಮಂಗಳೂರು : ಹಲವು ವರ್ಷಗಳ ಸದ್ದಡಗಿದ್ದ ಭೂಗತ ಲೋಕದ ಸದ್ದು ಮಂಗಳೂರಿನಲ್ಲಿ ಮತ್ತೆ ಕೇಳಿಸಿದೆ. ವಿದೇಶದಲ್ಲಿ ಕುಳಿತು ಮಂಗಳೂರಿನ ಉದ್ಯಮಿಗೆ ಹಫ್ತಾ ನೀಡುವಂತೆ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಈ ಹಿಂದೆ ಮಂಗಳೂರು ಕಾಸರಗೋಡು ಜಿಲ್ಲೆಯಲ್ಲಿ ಹಲವಾರು ಅಪರಾಧ ಪ್ರಕರಣಗಳ ಹಿಂದೆ ಇದ್ದ ಕಲಿ ಯೋಗೀಶ ಮತ್ತೆ ಫೀಲ್ಡ್‌ಗೆ ಇಳಿದಿದ್ದಾನೆ ಎಂಬ ಅನುಮಾನ ಮೂಡಿದೆ.

    ರವಿ ಪೂಜಾರಿ, ಬನ್ನಂಜೆ ರಾಜ ಮೊದಲಾದ ಪಾ*ತಕಿಗಳ ಬಂಧನದ ಬಳಿಕ ಬಹುತೇಕ ಎಲ್ಲಾ ಭೂ*ಗತ ಪಾ*ತಕಿಗಳ ಸದ್ದು ಅಡಗಿ ಹೋಗಿತ್ತು. ಹೀಗಾಗಿ ಒಂದಷ್ಟು ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟು ತಮ್ಮ ವ್ಯವಹಾರ ನಡೆಸ್ತಾ ಇದ್ರು. ಆದ್ರೆ ಈಗ ಬಜಪೆಯ ಉದ್ಯಮಿ ರೊನಾಲ್ಡ್ ಎಂಬವರಿಗೆ ಕಲಿ ಯೋಗೀಶನ ಹೆಸರಿನಲ್ಲಿ  ಫೋನ್ ಮಾಡಿ ಬೆ*ದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

    ಇದನ್ನೂ ಓದಿ : ಗೀಸರ್ ರಿಪೇರಿಗಂತ ಬಂದ ರಹಸ್ಯ ಕ್ಯಾಮರಾ ಇಟ್ಟ…ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತ ಸಿಕ್ಕಿ ಬಿದ್ದಿದ್ಹೇಗೆ?

    ಜನವರಿ 17 ರಂದು ಈ ಕರೆ ಬಂದಿದ್ದು 3 ಕೋಟಿ ನೀಡಬೇಕು, ಇಲ್ಲವಾದಲ್ಲಿ ಮನೆಯವರೆಲ್ಲರನ್ನೂ ಕೊ*ಲ್ಲುವುದಾಗಿ ಬೆ*ದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

     

     

    Continue Reading

    DAKSHINA KANNADA

    ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ

    Published

    on

    ಮಂಗಳೂರು : ಹಿರಿಯ ಪತ್ರಕರ್ತ  ಗುರುವಪ್ಪ ಬಾಳೆಪುಣಿ  (62)  ಅಲ್ಪಕಾಲದ ಅಸೌಖ್ಯದಿಂದ ಇಂದು(ಜ.26) ಬಾಳೆಪುಣಿಯ ಸ್ವಗೃಹದಲ್ಲಿ ನಿ*ಧನರಾಗಿದ್ದಾರೆ. ಅವರು ಪತ್ನಿ ಹಾಗೂ ಪುತ್ರನನ್ನು ಅ*ಗಲಿದ್ದಾರೆ.

    ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ  26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ   ಕರ್ತವ್ಯ ನಿರ್ವಹಿಸಿದ್ದಾರೆ. ಸರಳ, ಸಜ್ಜನಿಕೆಯ ಬಾಳೆಪುಣಿ ಅವರು ಜನಾನುರಾಗಿಯಾಗಿದ್ದರು.

    ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಸೆಹ್ವಾಗ್-ಆರತಿ ದಾಂಪತ್ಯದಲ್ಲಿ ಬಿರುಕು ?

    ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ನಾಡಿಗೆ  ಪರಿಚಯಿಸಿದ ಕೀರ್ತಿ  ಗುರುವಪ್ಪ ಬಾಳೆಪುಣಿ ಅವರದು. ಪತ್ರಿಕೋದ್ಯಮದ ಅವರ ಮೇರು ಸಾಧನೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಅವರ ಮುಡಿಗೇರಿದೆ.

    Continue Reading

    DAKSHINA KANNADA

    ಮಂಗಳೂರಿನಲ್ಲಿ ಜಿಲ್ಲೆಯ ಮೊದಲ ಮಕ್ಕಳ ಮಾದರಿ ಸಂಸತ್ ಅಧಿವೇಶನ

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಮಕ್ಕಳ ಮಾದರಿ ಸಂಸತ್ತು ಮಂಗಳೂರಿನಲ್ಲಿ ಶನಿವಾರ ನಡೆಯಿತು.

    ಎಸ್ ಡಿಎಂ ಶಾಲೆ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಆಯೋಜಿಸಿದ್ದ ಈ ಅಧಿವೇಶನದಲ್ಲಿ ಪ್ರಮಾಣ ವಚನ, ಭಾಷಣ, ಪ್ರಶ್ನೋತ್ತರ ಅವಧಿ, ಗಮನ ಸೆಳೆಯುವ ನಿರ್ಣಯಗಳು ಮತ್ತು ಶೂನ್ಯ ವೇಳೆ ಸೇರಿದಂತೆ ಸಂಸದೀಯ ಕಾರ್ಯವಿಧಾನಗಳನ್ನು ಪುನರಾವರ್ತಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಸಂಸದೀಯ ಕಾರ್ಯವಿಧಾನಗಳನ್ನು ಮಕ್ಕಳಿಗೆ ಪರಿಚಯಿಸಲು ಮಾದರಿ ಸಂಸತ್ತಿನಂತಹ ಉಪಕ್ರಮಗಳ ಮಹತ್ವವನ್ನು ಒತ್ತಿ ಹೇಳಿದರು.

    Continue Reading

    LATEST NEWS

    Trending