Connect with us

LATEST NEWS

ಯಕ್ಷಧ್ರುವ ಪಟ್ಲ ದಶಮಾನೋತ್ಸವ ಸಮಾಲೋಚನಾ ಸಭೆಯಲ್ಲಿ ರೂ 1 ಕೋಟಿ ದೇಣಿಗೆ ಘೋಷಿಸಿದ ಶಶಿಧರ ಶೆಟ್ಟಿ ಬರೋಡ

Published

on

ಮಂಗಳೂರು: ಕರಾವಳಿಯ ಯಕ್ಷಗಾನ ಕಲೆಯನ್ನು ಪ್ರಸ್ತುತ ಕಾಲಘಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಪಸರಿಸುತ್ತಿರುವ ಹಾಗೂ ತನ್ಮೂಲಕ ಯಕ್ಷಗಾನದ ಕಲಾವಿದರಿಗಲ್ಲದೆ ಇತರೇ ವಿವಿಧ ಪ್ರಕಾರದ ಅಶಕ್ತರ ಬಾಳಿಗೆ ಬೆಳಕಾಗಿ ಮೂಡಿಬಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ 10ನೇ ವರ್ಷದ ಪಟ್ಲ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಜರಗಿಸುವ ಕುರಿತಾಗಿ ಫೌಂಡೇಶನಿನ ಮಹಾದಾನಿಗಳ, ಮಹಾಪೋಷಕರ , ಟ್ರಸ್ಟಿಗಳ, ವಿವಿಧ ಪ್ರಾದೇಶಿಕ ಘಟಕಗಳ ಪದಾಧಿಕಾರಿಗಳ ಹಾಗೂ ಪಟ್ಲ ಅಭಿಮಾನಿಗಳ ಸಮಾಲೋಚನಾ ಸಭೆಯು ನಗರದ ಪ್ರತಿಷ್ಠಿತ ಗೋಲ್ಡ್ ಪಿಂಚ್ ಹೋಟೆಲ್ ಸಭಾಂಗಣದಲ್ಲಿ ಜರಗಿತು.

ಸಭೆಯ ವೇದಿಕೆಯಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರು /ಮಹಾದಾನಿಗಳಾದ ಶ್ರೀ ಕನ್ಯಾನ ಸದಾಶಿವ ಶೆಟ್ಟಿ, ಡಾ. ಕೆ ಪ್ರಕಾಶ್ ಶೆಟ್ಟಿ(MRG Group), ಟ್ರಸ್ಟಿನ ಸಂಚಾಲಕರಾದ ಶ್ರೀ ಐಕಳ ಹರೀಶ್ ಶೆಟ್ಟಿ ,ಮಹಾ ಪೋಷಕರಾದ ಶ್ರೀ ಕೆ. ಎಂ. ಶೆಟ್ಟಿ, ಶ್ರೀ ತೋನ್ಸೆ ಆನಂದ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ ಬೆಳ್ಳಾಡಿ, ಶ್ರೀ ಸಂತೋಷ್ ಶೆಟ್ಟಿ ಪೂನಾ, ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಶ್ರೀ ಸವಣೂರು ಸೀತಾರಾಮ ರೈಯವರು ಉಪಸ್ಥಿತರಿದ್ದು ದಶಮಾನೋತ್ಸವ ಸಂಭ್ರಮವು ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮವಾಗಲಿ, ಕಾರ್ಯಕ್ರಮದ ಯಶಸ್ಸಿಗೆ ಗರಿಷ್ಠ ಮೊತ್ತದ ದೇಣಿಯನ್ನು ನೀಡಿ ಸಹಕರಿಸಲಾಗುವುದೆಂದು ತಿಳಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನಿನ ಮಹಾದಾನಿಗಳಾದ ಶಶಿಧರ ಶೆಟ್ಟಿ ಬರೋಡ ದಶಮಾನೋತ್ಸವ ಕಾರ್ಯಕ್ರಮದ ಮೂಲಕ ನಮ್ಮ ಪಟ್ಲ ಫೌಂಡೇಶನ್ನು ಸುಭಧ್ರಗೊಳಿಸುವ ಮತ್ತು ಅದರ ಮುಂದಿನ ಯೋಜನಾ ಕಾರ್ಯಕ್ರಮಗಳನ್ನು ನಿರಂತರವಾಗಿ ವ್ಯವಸ್ಥಿತ ರೀತಿಯಲ್ಲಿ ಮುಂದುವರಿಸುವ ನಿಟ್ಟಿನಲ್ಲಿ ಸುಮಾರು 10-00 ಕೋಟಿ ಮೊತ್ತದ ದೇಣಿಗೆಯನ್ನು ಮುಂಗಡವಾಗಿ ಸಂಗ್ರಹಿಸುವುದು ಉತ್ತಮವೆಂದು ತಿಳಿಸಿ ಪ್ರಥಮ ಹೆಜ್ಜೆಯಾಗಿ ತಾನು ರೂ 1-00 ಕೋಟಿ ಮೊತ್ತವನ್ನು ದೇಣಿಗೆಯ ರೂಪದಲ್ಲಿ ನೀಡುವುದಾಗಿ ಎಂದು ಘೋಷಣೆ ಮಾಡಿದರು.

ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಇವತ್ತಿನ ವರೆಗೂ ಫೌಂಡೇಶನಿಗೆ ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸುವುದರೊಂದಿಗೆ, ಈಗಾಗಲೇ ಟ್ರಸ್ಟಿಗೆ 1-00 ಕೋಟಿ ಮೊತ್ತವನ್ನು ನೀಡಿ ಮಹಾದಾನಿಯಾಗಿರುವ ಶಶಿಧರ ಶೆಟ್ಟಿಯವರು ದಶಮಾನೋತ್ಸವ ಕಾರ್ಯಕ್ರಮಕ್ಕೂ 1-00 ಕೋಟಿ ದೇಣಿಗೆಯ ಘೋಷಣೆಗೆ ಶಿರಬಾಗಿ ಕೃತಜ್ಞತೆಯನ್ನು ಸಲ್ಲಿಸಿದರು.
ಯಕ್ಷಧ್ರುವ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವು 2025ರ ಜೂನ್ 1ರಂದು ಅಡ್ಯಾರ್ ಗಾರ್ಡನ್ ಇಲ್ಲಿ ಜರಗಲಿದ್ದು, ದಶಮಾನೋತ್ಸವ ಸಂಭ್ರಮಕ್ಕೆ ರಚಿಸಲಾಗುವ ಸಮಿತಿಗೆ ಗೌರವಾಧ್ಯಕ್ಷರಾಗಿ ಕೊಡುಗೈದಾನಿ, ಫೌಂಡೇಶನಿನ ಮಹಾದಾನಿ ಡಾ. ಕೆ ಪ್ರಕಾಶ್ ಶೆಟ್ಟಿ (MRG Group) ಹಾಗೂ ಅಧ್ಯಕ್ಷರಾಗಿ ಶಶಿಧರ ಶೆಟ್ಟಿ ಬರೋಡ ಇವರುಗಳ ಹೆಸರನ್ನು ಘೋಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ಪೂರ್ಣಿಮ ಶಾಸ್ತ್ರಿ, ಶ್ರೀ ಲೋಕನಾಥ ಶೆಟ್ಟಿ, ಶ್ರೀ ವಿನಿತ್ ಕುಮಾರ್ ಶೆಟ್ಟಿ ಫೌಂಡೇಶನಿನ ಟ್ರಸ್ಟಿಗಳಾಗಿ ಸೇರ್ಪಡೆಗೊಂಡರು.

ಗೃಹ ನಿರ್ಮಾಣಕ್ಕಾಗಿ ರೂ15 ಲಕ್ಷ ರೂಪಾಯಿ ಮೊತ್ತವನ್ನು 9 ಮಂದಿ ಕಲಾವಿದರಿಗೆ ವಿತರಿಸಲಾಯಿತು.

2025ರ ಜನವರಿ 8ರಂದು ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ರವರ ಒಡೆತನದ ಒಡ್ಡೂರು ಫಾರ್ಮಿನಲ್ಲಿ ನಡೆಯಲಿರುವ ಯಕ್ಷ ಶಿಕ್ಷಣ ವಿದ್ಯಾರ್ಥಿ ಸಮ್ಮಿಲನದ ಬಗ್ಗೆ ಬಂಟ್ವಾಳ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿಯವರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಫೌಂಡೇಶನಿನ ಕೋಶಾಧಿಕಾರಿಯವರಾದ ಸಿಎ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಅಡ್ಯಾರ್ ಪುರುಷೋತ್ತಮ ಕೆ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

Click to comment

Leave a Reply

Your email address will not be published. Required fields are marked *

LATEST NEWS

ಮನಮೋಹನ್ ಸಿಂಗ್ ಸ್ಮಾರಕ ಜಟಾಪಟಿ; ಕಾಂಗ್ರೇಸ್ ವಿರುದ್ದ ಪಣಬ್ ಮುಖರ್ಜಿ ಪುತ್ರಿ ವಾಗ್ದಾಳಿ

Published

on

ಮಂಗಳೂರು/ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದು, ಇದರ ನಡುವೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪ್ರತ್ಯೇಕ ಸ್ಮಾರಕ ಕೋರಿ ಪ್ರಧಾನಿ ಮೋದಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ ಬಗ್ಗೆ, ಪ್ರಣಬ್ ಮುಖರ್ಜಿಯವರ ಪುತ್ರಿ ವಾಗ್ದಾಳಿ ನಡೆಸಿದ್ದಾರೆ.

‘ನನ್ನ ತಂದೆ (ಪ್ರಣಬ್ ಮುಖರ್ಜಿ) ನಿಧನರಾದಾಗ ಕಾಂಗ್ರೆಸ್ ಪಕ್ಷವು ಕಾರ್ಯಾಕಾರಿ ಸಮಿತಿ ಹಾಗೂ ಸಂತಾಪ ಸೂಚಕ ಸಭೆಯನ್ನು ಕರೆಯಲಿಲ್ಲ. ಈ ಬಗ್ಗೆ ಕೇಳಿದಾಗ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, ರಾಷ್ಟ್ರಪತಿಯಾಗಿದ್ದವರಿಗೆ ನಾವು ಸಭೆ ನಡೆಸುವುದಿಲ್ಲ ಎಂದು ಹೇಳಿದ್ದರು. ನನ್ನ ತಂದೆಯವರು ಕಾಂಗ್ರೆಸ್ ನಲ್ಲಿದ್ದಾಗ ಕೆ.ಆರ್. ನಾರಾಯಣ್ ಅವರು ನಿಧನರಾಗಿದ್ದರು. ಸಂತಾಪ ಸಭೆಯನ್ನು ಖುದ್ದು ನನ್ನ ತಂದೆಯವರೇ ಆಯೋಜನೆ ಮಾಡಿದ್ದರು. ಈ ಎಲ್ಲಾ ಅಂಶಗಳನ್ನು ತಂದೆಯವರು ಬರೆದ ಡೈರಿಗಳಿಂದ ತಿಳಿದುಕೊಂಡಿದ್ದೇನೆ’ ಎಂದು ಶರ್ಮಿಷ್ಠಾ ಮುಖರ್ಜಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:  ಮಾಜಿ ಪ್ರಧಾನಿಗೆ ಪಾಕ್‌ನಲ್ಲಿ ಕಂಬನಿ..! ಶಾಲೆಗೆ ಮನಮೋಹನ್ ಸಿಂಗ್ ಹೆಸರು..!

ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನವದೆಹಲಿಯ ನಿಗಮಬೋಧ್ ಘಾಟ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸ್ಮಾರಕ ನಿರ್ಮಿಸುವ ಜಾಗದಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂದು ಪ್ರಧಾನಿ ಮೋದಿಗೆ ಪತ್ರದ ಮೂಲಕ ತಿಳಿಸಿದ್ದರು.

‘ಸ್ಮಾರಕ ನಿರ್ಮಿಸುವ ಜಾಗದಲ್ಲಿಯೇ ಅಂತ್ಯಕ್ರಿಯೆ ನಡೆಸದೇ ದೇಶದ ಮೊದಲ ಸಿಖ್ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿತ್ತು.

Continue Reading

LATEST NEWS

ಕಿಸಾನ್ ಸಮ್ಮಾನ್ ನಿಧಿಯ 19ನೇ ಕಂತು ಸಿಗುವುದಿಲ್ಲ..! ನಿಮ್ಮ ಹೆಸರಿದೆಯಾ ನೋಡಿ..!

Published

on

ಮಂಗಳೂರು : ರೈತರಿಗೆ ಆರ್ಥಿಕ ಪ್ರಯೋಜನ ನೀಡಲು ಕೇಂದ್ರ ಸರ್ಕಾರ 2019 ರಲ್ಲಿ ಕಿಸಾನ್ ಸಮ್ಮಾನ್ ನಿಧಿ ಆರಂಭಿಸಿ ರೈತರ ಖಾತೆಗೆ ಹಣ ಜಮೆ ಮಾಡುತ್ತಿದೆ. ವಾರ್ಷಿಕವಾಗಿ 6 ಸಾವಿರ ನೀಡುವ ಈ ಯೋಜನೆಯಲ್ಲಿ ತಲಾ 2 ಸಾವಿರದಂತೆ ಮೂರು ಕಂತುಗಳಲ್ಲಿ ಈ ಹಣ ರೈತರ ಖಾತೆಗೆ ಬೀಳುತ್ತಿದೆ. ಆದ್ರೆ, ಈ ಯೋಜನೆಯ ಫಲಾನುಭವಿಗಳ ಲಿಸ್ಟ್‌ನಲ್ಲಿ ಇರುವ ಕೆಲವರು 19 ಕಂತಿನ ಹಣ ಪಾವತಿಯ ವೇಳೆ ಲಿಸ್ಟ್‌ನಿಂದ ಹೊರಬೀಳಲಿದ್ದಾರೆ. ಇದರಿಂದ ಅನೇಕ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನದಿಂದ ವಂಚಿತರಾಗಲಿದ್ದಾರೆ.

2019 ರಲ್ಲಿ ಆರಂಭವಾಗಿರುವ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ಸಣ್ಣ ಪ್ರಮಾಣದ ಆರ್ಥಿಕ ಸಹಕಾರ ನೀಡುತ್ತಿದೆ. ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಆಗುತ್ತಿದ್ದು, ಇದರಿಂದ ಬಡ ರೈತರಿಗೆ ಸಾಕಷ್ಟು ಅನುಕೂಲ ಆಗಿದೆ. 2019 ರಿಂದ ಇಲ್ಲಿವರೆಗೆ 18 ಕಂತುಗಳಲ್ಲಿ ರೈತರು ತಮ್ಮ ಪಾಲಿನ ಹಣವನ್ನು ಪಡೆದುಕೊಂಡಿದ್ದಾರೆ. ಆದ್ರೆ 19 ನೇ ಕಂತಿನ ಹಣ ಎಲ್ಲಾ ರೈತರಿಗೆ ಸಿಗುವುದು ಅನುಮಾನವಾಗಿದೆ.

ಇದನ್ನೂ ಓದಿ : ಶಿವಣ್ಣ ಆಸ್ಪತ್ರೆಯಲ್ಲಿರುವಾಗಲೇ ಬಂತು ನೋವಿನ ಸುದ್ದಿ; ಗೀತಕ್ಕಾ ಭಾವನಾತ್ಮಕ ಪತ್ರ !

ಯಾಕಂದ್ರೆ ಅನೇಕ ರೈತರು ತಮ್ಮ e-KYC ಪೂರ್ಣಗೊಳಿಸಿಲ್ಲ ಹಾಗೂ ತಮ್ಮ ಜಮೀನು ಪರಿಶೀಲನೆಯ ವರದಿ ಕೂಡ ಸಲ್ಲಿಸಿಲ್ಲ. ಇದರಿಂದಾಗಿ ಫಲಾನುಭವಿಗಳ ಪಟ್ಟಿಯಿಂದ ರೈತರ ಹೆಸರನ್ನು ತೆಗೆದು ಹಾಕಲು ಸರ್ಕಾರ ಮುಂದಾಗಿದೆ. ಇಂತಹ ರೈತರನ್ನು ಅನರ್ಹರು ಎಂದು ಪರಿಗಣಿಸಿ ಅವರಿಗೆ ನೀಡಲಾಗುವ ಕಿಸಾನ್ ಸಮ್ಮಾನ್ ನಿಧಿಯನ್ನು ತಡೆ ಹಿಡಿಯಲಾಗುತ್ತದೆ. ಈ ಪಟ್ಟಿಯಲ್ಲಿ ನೀವು ಇದ್ದೀರಾ ಎಂದು ಪರಿಶೀಲಿಸಿಕೊಂಡು ತಕ್ಷಣ  e-KYC ಹಾಗೂ ಜಮೀನು ಪರಿಶೀಲನೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ.

Continue Reading

FILM

ಶಿವಣ್ಣ ಆಸ್ಪತ್ರೆಯಲ್ಲಿರುವಾಗಲೇ ಬಂತು ನೋವಿನ ಸುದ್ದಿ; ಗೀತಾಕ್ಕ ಭಾವನಾತ್ಮಕ ಪತ್ರ !

Published

on

ಮಂಗಳೂರು/ಬೆಂಗಳೂರು: ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಶಿವಣ್ಣನ ಆರೋಗ್ಯದಲ್ಲಿ ಏರುಪೇರಾಗಿರುವುದು ಗೀತಾ ಶಿವರಾಜ್ ಕುಮಾರ್ ಗೆ ತಡೆಯಲಾಗದ ಸಂಕಟವನ್ನು ತಂದಿಟ್ಟಿತ್ತು. ಇದರ ನಡುವೆ ಗೀತಾ ಶಿವರಾಜ್ ಕುಮಾರ್ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಶಿವರಾಜ್ ಕುಮಾರ್ ಅವರು ಕ್ಯನ್ಸಾರ್ ಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅವರು ಸರ್ಜರಿಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿರುವುದು ಖುಷಿಯ ಸುದ್ದಿ ಆದರೆ, ಮತ್ತೊಂದು ದುಃಖದ ಸುದ್ದಿಯೂ ಸಿಕ್ಕಿದೆ. ಈ ಬಗ್ಗೆ ಗೀತಾ ಅವರು ತಮ್ಮ ದುಃಖದ ವಿಚಾರ ಒಂದನ್ನು ಹಂಚಿಕೊಂಡಿದ್ದಾರೆ. ಅದೇನಂದರೆ ಅವರು ಸಾಕಿದ ಪ್ರೀತಿಯ ಶ್ವಾನ ನಿಧನ ಹೊಂದಿದೆ. ಈ ಬಗ್ಗೆ ಗೀತಾ ಅವರು ಪೋಸ್ಟ್ ಹಾಕಿದ್ದಾರೆ.

ಇದನ್ನೂ ಓದಿ: ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ವಿಧಿವಶ

ನಮ್ಮ ಮನೆಯಲ್ಲಿ ಐದು ಜನರಿಲ್ಲ, ಆರು ಜನರಿದ್ದೇವೆ. ಪ್ರೀತಿಯ ನೀಮೋವನ್ನು ನಾವು ಮನೆಯ ಸದಸ್ಯನನ್ನಾಗಿ ಪರಿಗಣಿಸಿದ್ದೆವು. ಶಿವಣ್ಣ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುವಾಗ ನೀಮೋ ದೇವರ ಹತ್ತಿರ ಹೋಗಿದ್ದಾನೆ. ಅವನ ನಿಸ್ವಾರ್ಥ ಪ್ರೀತಿಯನ್ನು ಯಾರಿಂದಲೂ ಕೂಡ ತುಂಬಲು ಸಾಧ್ಯವಿಲ್ಲ. ನಾವು ಅಮೆರಿಕಾಗೆ ಬಂದ ಮೇಲೆ ಅವನು ಹೊರಡಬೇಕು ಎಂದು ನಿರ್ಧರಿಸಿದ್ದ ಎನಿಸುತ್ತೆ ಎಂದು ದು:ಖ ವ್ಯಕ್ತಪಡಿಸಿದ್ದಾರೆ.

ಅವನು ಹೋಗಿರುವುದನ್ನು ನಾನು ಕಣ್ಣಿಂದ ನೋಡಲಿಲ್ಲ. ನೋಡಿದ್ದರೂ ಕೂಡ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗುವಾಗ ನಮ್ಮ ನೋವನ್ನು ಕೂಡ ಅವು ಜೊತೆಗೆ ತೆಗೆದುಕೊಂಡು ಹೋಗುತ್ತವೆಯಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತೆಗೆದುಕೊಂಡು ಹೋಗಿದ್ದಾನೆ ಎಂದಿದ್ದಾರೆ ಅವರು. ಈ ಮೂಲಕ ಶಿವರಾಜ್ ಕುಮಾರ್ ಚೇತರಿಕೆ ಕಂಡಿದ್ದಾರೆ ಎಂದಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಬರೆದಿರುವ ಸುದೀರ್ಘ ಪತ್ರದಲ್ಲಿ ನಿಮೋ ಅವರೊಂದಿಗೆ ಹೇಗಿದ್ದ. ಎಷ್ಟು ಹಚ್ಚಿಕೊಂಡಿದ್ದ ಎಂಬುದರ ನೆನಪುಗಳೊಂದಿಗೆ ಸಂಪೂರ್ಣವಾಗಿ ಅಕ್ಷರರೂಪ ಕೊಟ್ಟಿದ್ದಾರೆ.

Continue Reading

LATEST NEWS

Trending

Exit mobile version