Connect with us

    LATEST NEWS

    ಮೊಟ್ಟೆ ಇಡದೇ ಜನ್ಮ ನೀಡುವ ಜೀವಿ ಯಾವುದು ? 2ನೇ ತರಗತಿ ವಿದ್ಯಾರ್ಥಿ ಬರೆದ ಉತ್ತರ ನೋಡಿ ಶಿಕ್ಷಕಿ ಶಾಕ್..!

    Published

    on

    ಮೊಟ್ಟೆಯನ್ನು ಇಟ್ಟು ಮತ್ತು ನೇರವಾಗಿ ಮರಿಗೆ ಜನ್ಮ ನೀಡುವ ಪ್ರಾಣಿಗಳನ್ನು ಪಟ್ಟಿ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಉದಾಹರಣೆಯಾಗಿ ಕೋಳಿ ಮತ್ತು ಬೆಕ್ಕು ಎರಡು ಪ್ರಾಣಿಗಳ ಹೆಸರನ್ನು ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಅದನ್ನು ನೋಡಿಕೊಂಡು ವಿದ್ಯಾರ್ಥಿಗಳು ಸೂಕ್ತ ಉತ್ತರಗಳನ್ನು ಬರೆಯಬೇಕಾಗಿತ್ತು.

    ಎರಡನೇ ತರಗತಿಯ ವಿದ್ಯಾರ್ಥಿನಿಯರು ತನ್ನ ಸುಂದರವಾದ ಕೈಬರಹದಲ್ಲಿ ಆಕರ್ಷಕ ಉತ್ತರಗಳನ್ನು ಬರೆದಿದ್ದಾರೆ. ಮೊಟ್ಟೆ ಇಟ್ಟು ಜನ್ಮ ನೀಡುವ ಪ್ರಾಣಿಗಳಲ್ಲಿ ಬಾತುಕೋಳಿ, ಹಾವು, ಮೀನು ಮತ್ತು ಕಾಗೆ ಹೆಸರುಗಳನ್ನು ಬರೆದರೆ, ಮೊಟ್ಟೆ ಇಡದೇ ನೇರವಾಗಿ ಜನ್ಮ ನೀಡುವ ಪ್ರಾಣಿಗಳಾಗಿ ಆನೆ, ನಾಯಿ, ಹಸು ಮತ್ತು ಸುನಿತಾ ಎಂದು ಬರೆದಿದ್ದಾರೆ. ಈ ಉತ್ತರ ಪತ್ರಿಕೆಯನ್ನು ನೋಡಿದ ಶಿಕ್ಷಕಿ, ಸುನಿತಾ ಎಂಬ ಹೆಸರನ್ನು ನೋಡಿ ಒಂದು ಕ್ಷಣ ಶಾಕ್ ಆಗುತ್ತಾರೆ. ಏಕೆಂದರೆ, ಉತ್ತರ ಪತ್ರಿಕೆಯನ್ನು ಪರಿಶೀಲಿಸಿದ ಶಿಕ್ಷಕಿಯ ಹೆಸರು ಕೂಡ ಸುನಿತಾ.

    ಸುನಿತಾ ಅವರು 2ನೇ ತರಗತಿಯ ಕ್ಲಾಸ್ ಟೀಚರ್. ನೇರವಾಗಿ ಜನ್ಮ ನೀಡುವವರ ಹೆಸರನ್ನು ಬರೆಯುವುದು ಪ್ರಶ್ನೆಯಾಗಿತ್ತು. ಮನುಷ್ಯರು ಕೂಡ ನೇರವಾಗಿ ಜನ್ಮ ನೀಡುತ್ತಾರೆ ಎಂಬುದನ್ನು ಅರಿತ ವಿದ್ಯಾರ್ಥಿನಿಯರು ಶಿಕ್ಷಕಿಯ ಹೆಸರನ್ನು ಸಹ ಬರೆದಿದ್ದಾರೆ. ಇಲ್ಲಿ ಉತ್ತರ ತಪ್ಪು ಅಂತಾ ಹೇಳಲು ಸಾಧ್ಯವೇ ಇಲ್ಲ. ಹೀಗಾಗಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಪೂರ್ಣ ಅಂಕ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಶಿಕ್ಷಕಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ವೈರಲ್ ಆಗಿದೆ.

    ಸುತ್ತಮುತ್ತಲಿನ ವಾತಾವರಣವನ್ನು ಗಮನಿಸಿ ಉತ್ತರ ಬರೆಯಲು ಹೇಳಿದ್ದೆ. ಆದರೆ, ನಾನಿದ್ದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಶಿಕ್ಷಕಿ ಸುನಿತಾ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಜಿ.ಎಸ್.ಸುನಿತಾ ಅವರು ತಿರುವನಂತಪುರಂನ ಥೈಕಾಡ್ ಮಾಡೆಲ್ ಎಚ್‌ಎಸ್‌ಎಲ್‌ಪಿಎಸ್‌ನಲ್ಲಿ ಶಿಕ್ಷಕಿಯಾಗಿದ್ದಾರೆ. ಎರಡನೇ ತರಗತಿಯ ಮಕ್ಕಳಾದ ಸಮೀರ ಮತ್ತು ಅನಘಾ ಶಿಕ್ಷಕಿಯ ಹೆಸರನ್ನು ಉತ್ತರವಾಗಿ ಬರದಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಗುಜರಾತ್ ನಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ

    Published

    on

    ಭಾರತೀಯ ಕೋಸ್ಟ್ ಗಾರ್ಡ್‌ಗೆ ಸೇರಿದ ಅಡ್ವಾನ್ಸ್ಡ್‌ ಲೈಟ್ ಹೆಲಿಕಾಪ್ಟರ್ (ALH) ಧ್ರುವ್ ಭಾನುವಾರ ಅಪಘಾತಕ್ಕೀಡಾಗಿದೆ. ಗುಜರಾತ್‌ನ ಪೋರಬಂದರ್‌ನಲ್ಲಿ ತರಬೇತಿ ಸಮಯದಲ್ಲಿ ಈ ಹೆಲಿಕಾಪ್ಟರ್ ಪತನಗೊಂಡಿದ್ದು, ಹಲಿಕಾಪ್ಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಮೂವರು ಯೋಧರ ಸಹಿತ ಐವರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

    ಹೆಲಿಕಾಪ್ಟರ್ ಪತನದ ಬಗ್ಗೆ ANI ವರದಿ ಮಾಡಿದ್ದು, ಪೋರಬಂದರ್‌ನ ಕೋಸ್ಟ್ ಗಾರ್ಡ್‌ ಏರ್ ಎನ್‌ಕ್ಲೇವ್‌ನಲ್ಲಿ ಈ ಘಟನೆ ನಡೆದಿ ಎಂದು ಹೇಳಿದೆ. ಅಧಿಕಾರಿಗಳ ಪ್ರಕಾರ ಹೆಲಿಕಾಪ್ಟರ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನವಾಗಿದೆ.

    ಭಾರತೀಯ ಕೋಸ್ಟ್ ಗಾರ್ಡ್‌ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಈ ಹಿಂದೆ ಕೂಡ ಸೆಪ್ಟೆಂಬರ್‌ನಲ್ಲಿ ಇದೇ ಮಾದರಿಯ ಹೆಲಿಕಾಫ್ಟರ್‌ ಒಂದು ಕೋರಬಂದರ್‌ನ ಸಮುದ್ರಕ್ಕೆ ಬಿದ್ದಿತ್ತು. ಇದು ಬೆಂಗಳೂರಿನ ಹೆಚ್‌ಎಲ್‌ಎ ಅಲ್ಲಿ ವಿನ್ಯಾಸಗೊಳಿಸಿದ ಹೆಲಿಕಾಫ್ಟರ್‌ ಆಗಿದೆ.

    Continue Reading

    BIG BOSS

    BBK 11: ಬಿಗ್ ಬಾಸ್ ಫಿನಾಲೆಗೆ ಇನ್ನೆಷ್ಟು ದಿನಗಳಿವೆ?- ಅನೌನ್ಸ್ ಮಾಡಿದ ಕಿಚ್ಚ

    Published

    on

    ಕನ್ನಡ ‘ಬಿಗ್ ಬಾಸ್’ ಸೀಸನ್ 11ರ ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. 97 ದಿನಗಳು ಪೂರೈಸಿರುವ ಬಿಗ್ ಬಾಸ್ ಆಟ ಇನ್ನೆಷ್ಟು ದಿನಗಳು ಇರಲಿದೆ ಎಂಬುದನ್ನು ಸುದೀಪ್ ದೊಡ್ಮನೆ ವೇದಿಕೆಯಲ್ಲಿ ತಿಳಿಸಿದ್ದಾರೆ. ಫಿನಾಲೆ ಬಗ್ಗೆ ಸುದೀಪ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.

    2024ರಲ್ಲಿ ಸೆ.29ರಂದು ‘ಬಿಗ್ ಬಾಸ್ ಕನ್ನಡ 11’ಕ್ಕೆ ಅದ್ಧೂರಿ ಚಾಲನೆ ನೀಡಲಾಗಿತ್ತು. 17 ಸ್ಪರ್ಧಿಗಳು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಪ್ರಸ್ತುತ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 97 ದಿನಗಳು ಪೂರೈಸಿರುವ ಈ ಆಟಕ್ಕೆ ಅಂತ್ಯ ಯಾವಾಗ? ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.

    ಸುದೀಪ್ ವೇದಿಕೆಯಲ್ಲಿ ಹೇಳಿರುವಂತೆ ಇನ್ನೂ ಫಿನಾಲೆಗೆ ಇನ್ನು ಮೂರು ವಾರ ಇದೆ. ಅಂದರೆ ಇನ್ನು 21 ದಿನದಲ್ಲಿ ಫಿನಾಲೆ ನಡೆದು ಈ ಬಾರಿ ವಿನ್ನರ್ ಯಾರು ಎಂಬುದು ಖಾತ್ರಿ ಆಗಲಿದೆ. ಶೋ ಅಂತ್ಯವಾಗಲಿದೆ. ಈ ಸೀಸನ್ ಮೂಲಕ ಬಿಗ್ ಬಾಸ್ ಜೊತೆ ಸುದೀಪ್ ಅವರ ಪಯಣವೂ ಅಂತ್ಯವಾಗಲಿದೆ.

    ಅಂದಹಾಗೆ, ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯಲ್ಲ. ಫ್ಯಾಮಿಲಿ ರೌಂಡ್ ಆಗಿದ್ದ ಹಿನ್ನೆಲೆ ವೋಟಿಂಗ್ ಲೈನ್ ಕ್ಲೋಸ್ ಇತ್ತು. ಹಾಗಾಗಿ ಮುಂದಿನ ವಾರ ಡಬಲ್ ಎಲಿಮಿನೇಷನ್ ಅಥವಾ ಮಿಡ್ ವೀಕ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. 9 ಸ್ಪರ್ಧಿಗಳಿರುವ ಮನೆಯಲ್ಲಿ ಫಿನಾಲೆಗೆ 5 ಮಂದಿಯಷ್ಟೇ ಆಯ್ಕೆಯಾಗಲಿದ್ದಾರೆ. ಉಗ್ರಂ ಮಂಜು, ಗೌತಮಿ, ಭವ್ಯಾ, ತ್ರಿವಿಕ್ರಮ್, ಚೈತ್ರಾ, ಮೋಕ್ಷಿತಾ, ರಜತ್, ಧನರಾಜ್, ಹನುಮಂತ ಸ್ಪರ್ಧಿಗಳಿದ್ದಾರೆ. ಇವರಲ್ಲಿ ಯಾವ 5 ಸ್ಪರ್ಧಿಗಳಿಗೆ ಫಿನಾಲೆ ಟಿಕೆಟ್ ಸಿಗಲಿದೆ. ಯಾರು ಬಿಗ್ ಬಾಸ್ ವಿನ್ನರ್ ಪಟ್ಟ ಗೆಲ್ತಾರೆ? ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

    Continue Reading

    BIG BOSS

    BBK11; ಹನುಮಂತು, ಧನರಾಜ್ ಫುಲ್ ಟ್ರೋಲ್​.. ಇಣುಕಿ ನೋಡಿದ್ದಕ್ಕೆ ಕಿಚ್ಚನ ಕಚಗುಳಿ ಮಾತುಗಳು

    Published

    on

    ಶನಿವಾರದ ಎಪಿಸೋಡ್​ನಲ್ಲಿ ಕೋಪಗೊಂಡು ಮನೆಯಿಂದ ಹೊರ ಹೋಗಿದ್ದ ಕಿಚ್ಚ ಸುದೀಪ್ ಅವರು ಭಾನುವಾರದ ಸಂಚಿಕೆಯಲ್ಲಿ ಸಖತ್ ಖುಷಿ ಖುಷಿಯಾಗಿದ್ದಾರೆ. ಬಿಗ್​ಬಾಸ್​ ಸ್ಪರ್ಧಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಗೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ ಎನ್ನುವುದನ್ನು ಎಲ್ಲರಿಗೂ ಮನವರಿಕೆ ಮಾಡಿದ್ದಾರೆ. ಅಲ್ಲದೇ ಬಿಗ್​ಬಾಸ್​ ಫ್ರೆಂಡ್ಸ್​ ಧನರಾಜ್ ಹಾಗೂ ಹನುಮಂತು ಇಣುಕಿ ನೋಡಿದ್ದರ ಬಗ್ಗೆ ಕಿಚ್ಚ ಫುಲ್ ತಮಾಷೆ ಮಾಡಿದ್ದಾರೆ.

    ಬಾದ್​ಷಾ ಸುದೀಪ್ ಜೊತೆ ಸೂಪರ್ ಸಂಡೇ ಸ್ಪೆಶಲ್ ಟಾಕ್​ನ ಪ್ರೋಮೋ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಿಚ್ಚನ ಮಾತುಗಳಿಗೆ ಮನೆ ಸದಸ್ಯರೆಲ್ಲಾ ನಕ್ಕು ನಕ್ಕು ಸುಸ್ತಾಗಿದ್ದಾರೆ. ಹೊರಗಡೆ ಟ್ರೋಲ್ ಅಂತ ನಡೆಯುತ್ತಿರುತ್ತೆ. ನಿಮಗೆ ಯಾವ ಥರ ಇಮೇಜ್ ಇರಬಹುದು ಎಂದು ಸುದೀಪ್ ಪ್ರಶ್ನಿಸಿದ್ದಾರೆ. ವಿಡಿಯೋಗಳನ್ನು ಕೂಡ ಪ್ಲೇ ಮಾಡಿಸಿದ್ದಾರೆ.

    ಗೌತಮಿ ಜಾಧವ್​ರನ್ನ ಮಾತನಾಡಿಸಲು ಗಂಡ ಅಭಿಷೇಕ್ ಅವರು ಬಂದಾಗ ಇಬ್ಬರು ಬೇರೆ ರೂಮ್​ಗೆ ಹೋಗಿ ಒಬ್ಬರಿಗೊಬ್ಬರು ಕೇಕ್ ತಿನ್ನಿಸುತ್ತಿದ್ದರು. ಈ ವೇಳೆ ರೂಮ್ ಹೊರಗಡೆಯಿಂದ ಹನುಮಂತು, ಧನರಾಜ್ ಇಣುಕಿ ನೋಡುತ್ತಿದ್ದರು. ಇದು ಸದ್ಯ ಎಲ್ಲ ಕಡೆ ವೈರಲ್ ಆಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿರುವ ಸುದೀಪ್ ಅವರು, ನಿಮಗೆ ಏನ್ ನೋಡುವ ಕ್ಯೂರಾಸಿಟಿ ಇತ್ತು ಎಂದಿದ್ದಾರೆ. ಇದಕ್ಕೆ ಹನುಮಂತು ಕೇಕ್ ತಿನ್ನಿಸುತ್ತಿದ್ದರಲ್ಲ, ಅದನ್ನ ನೋಡುತ್ತಿದ್ದೇವು ಸರ್ ಎಂದಿದ್ದಾರೆ.

    ಮತ್ತೆ ಪ್ರಶ್ನೆ ಮಾಡಿದ ಸುದೀಪ್ ಅವರು, ಏನ್ ಎಕ್ಸ್​ಪರ್ಟ್ ಮಾಡುತ್ತಿದ್ದೀರಿ ಧನರಾಜ್ ಎಂದು ಕೇಳಿದಾಗ, 3 ತಿಂಗಳು ಆಯಿತಲ್ಲ ಸರ್.. ಎನ್ನುತ್ತಿದ್ದಂತೆ ಎಲ್ಲರು ನಕ್ಕಿದ್ದಾರೆ. ಒಂದು ವೇಳೆ ನೀವಿಬ್ಬರು ನೋಡುವಾಗ ಏನಾದರೂ ಕಂಟೇಂಟ್ ಸಿಕ್ಕಿದ್ದರೇ ಏನ್ ಮಾಡುತ್ತಿದ್ದೀರಿ ಎಂದು ಕಿಚ್ಚ ಪ್ರಶ್ನೆ ಮಾಡುತ್ತಿದ್ದಂತೆ, ಅದನ್ನೇ ರಿವೆಂಡ್ ಮಾಡಿ.. ರಿವೆಂಡ್ ಮಾಡಿ ಮನಸಲ್ಲೇ ಯೋಚನೆ ಮಾಡುತ್ತಿದ್ದೆ ಎಂದು ಹೇಳಿ ಎಲ್ಲರನ್ನೂ ಧನರಾಜ್ ನಗಿಸಿದ್ದಾರೆ.

    Continue Reading

    LATEST NEWS

    Trending