ಮಂಗಳೂರು/ಬೆಂಗಳೂರು: ಐಪಿಎಲ್ ಹರಾಜು ಪ್ರಕ್ರಿಯೆ ಈಗಗಾಲೇ ಮುಗಿದಿದ್ದು, ಈಗ ಮಹಿಳಾ ಪ್ರೀಮಿಯರ್ ಲೀಗ್ ಗಾಗಿ ಮಹಿಳಾ ಕ್ರಿಕೆಟಿಗರ ಮಿನಿ ಹರಾಜು ನಡೆಯಲಿದೆ.
ಮಹಿಳೆಯರ ಪ್ರೀಮಿಯರ್ ಲೀಗ್ ನ ಮುಂದಿನ ಸೀಸನ್ ಗಾಗಿ ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಮಿನಿ ಹರಾಜು ನಡೆಯಲಿದೆ. ಡಬ್ಲ್ಯುಪಿಎಲ್ ನಲ್ಲಿ ಒಟ್ಟು 5 ತಂಡಗಳು ಪಾಲ್ಗೋಳ್ಳುತ್ತಿವೆ. ಅದರಲ್ಲಿ ಪ್ರತಿ ತಂಡವು ಆರು ವಿದೇಶಿ ಆಟಗಾರ್ತಿಯರನ್ನು ಒಳಗೊಂಡಂತೆ ಒಟ್ಟು 18 ಆಟಗಾರ್ತಿಯರನ್ನು ತಂಡದಲ್ಲಿ ಹೊಂದಿರಬೇಕು. ಭಾಗಶಃ ತಂಡಗಳು ತಮ್ಮ ಹಳೆಯ ತಂಡವನ್ನು ಉಳಿಸಿಕೊಂಡಿದ್ದು, ಕೆಲವೇ ಕೆಲವು ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿವೆ.
ಈ ಬಾರಿಯ ಹರಾಜಿನಲ್ಲಿ ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ನ್ಯೂಜಿಲೆಂಡ್ ವೇಗದ ಬೌಲರ್ ಲೀ ತಾಹುಹು, ವೆಸ್ಟ್ ಇಂಡೀಸ್ ಅಲ್ ರೌಂಡರ್ ಡೇಂಡ್ರಾ ಡಾಟಿನ್, ಭಾರತದ ಅಲ್ ರೌಂಡರ್ ಸ್ನೇಹ ರಾಣಾ, ಲೆಗ್ ಸ್ಪಿನ್ನರ್ ಪೂನಂ ಯಾದವ್ ಮತ್ತು ಕನ್ನಡತಿ ವೇದಾ ಕೃಷ್ಣ ಮೂರ್ತಿ ಕೂಡ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ ಇನ್ನೂ ಹಲವು ಯುವ ಆಟಗಾರ್ತಿಯರನ್ನು ಖರೀದಿಸಲು ತಂಡಗಳು ಕಾಯುತ್ತಿವೆ.
ಮಂಗಳೂರು: ಇತ್ತಿಚೇಗೆ ಮೊಬೈಲ್ ಬಳಕೆ ಎನ್ನುವುದು ಸಾಮಾನ್ಯವಾಗಿದ್ದು, ಈಗ ಮಕ್ಕಳು ಕೂಡ ಮೊಬೈಲ್ ನ ದಾಸರಾಗುತ್ತಿದ್ದಾರೆ. ಆದರೆ ಇದಕ್ಕೆ ಕಡಿವಾಣ ಹಾಕಲು ಇಲ್ಲಿನ ಸರ್ಕಾರ ಮುಂದಾಗಿದೆ.
ಫೋನ್ ಎಂಬುದು ಸಮಾಜಕ್ಕೆ ವರವಾಗಿ ಅಥವಾ ಶಾಪವಾಗಿ ಮಾರ್ಪಟ್ಟಿವೆ. ಅದರಲ್ಲೂ ಮಕ್ಕಳಿಗೆ ಮೊಬೈಲ್ ಎಂಬುದು ಗೀಳಾಗಿ ಪರಿಣಮಿಸಿದೆ. ಅದಕ್ಕೆ ಕಡಿವಾಣ ಹಾಕಲು 16 ವರ್ಷ ಒಳಗಿನ ಮಕ್ಕಳು ಸಾಮಾಜಿಕ ಜಾಲಾತಾಣಗಳನ್ನು ಬಳಕೆ ಮಾಡುವುದನ್ನು ನಿಷೇಧ ಮಾಡಲಾಗುವುದು ಎಂದು ಆಸ್ಟ್ರೇಲಿಯಾ ಸರ್ಕಾರ ಮೊದಲೇ ಹೇಳಿತ್ತು. ಅದರಂತೆ ಇದೀಗ ಸಂಸತ್ತಿನ ಎರಡು ಸದನಗಳಲ್ಲಿಯು ಮಸೂದೆಯನ್ನು ಅಂಗೀಕರಿಸಲಾಗಿದೆ.
ಈ ಮಸೂದೆಗೆ ಕೆಳಮನೆ ಮತ್ತು ಮೇಲ್ಮನೆ ಎರಡೂ ಒಪ್ಪಿಗೆ ಸೂಚಿಸಿವೆ. ಕಾನೂನು ಆಗುವುದು ಖಚಿತವಾಗಿದ್ದು ಶೀಘ್ರದಲ್ಲೇ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಒಂದು ವೇಳೆ ಸರ್ಕಾರದ ನಿಯಮ ಮೀರಿ ಖಾತೆ ಹೊಂದಿದರೆ ಅಂತವರಿಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ :Watch video: ಜೈಲಿನಿಂದ ಬಿಡುಗಡೆಯಾದ ಸಂಭ್ರಮದಲ್ಲಿ ಜೈಲಾಧಿಕಾರಿಗಳ ಎದುರೇ ಯುವಕನ ಭರ್ಜರಿ ಡ್ಯಾನ್ಸ್ !
ಮೊಬೈಲ್ ನಿಂದಾಗಿ ಮಕ್ಕಳ ಉತ್ತಮ ಭವಿಷ್ಯ ಮಧ್ಯದಲ್ಲೇ ಹಾಳಾಗುತ್ತಿದೆ. ಸಾಮಾಜಿಕ ಜಾಲಾತಾಣಗಳು ಮಕ್ಕಳ ಮೀಲೆ ನೇರ ಪರಿಣಾಮ ಬೀರುತ್ತಿವೆ. ಹೀಗಾಗಿಯೇ ಫೇಸ್ ಬುಕ್, ಟ್ವೀಟರ್, ಇನ್ ಸ್ಟಾ ಗ್ರಾಮ್ ಸೇರಿದಂತೆ ಇತರೆ ಮೀಡಿಯಾ ಖಾತೆಗಳನ್ನು 16 ವರ್ಷದ ಒಳಗಿನ ಮಕ್ಕಳು ಹೊಂದುವಂತಿಲ್ಲ. ಇದ್ದಕ್ಕಾಗಿ ಆಸ್ಟ್ರೇಲಿಯಾದ ಸರ್ಕಾರ ಹೊಸ ಬಿಲ್ ನ್ನು ಪಾರ್ಲಿಮೆಂಟ್ ನಲ್ಲಿ ಮಂಡಿಸಿತ್ತು.
ಈ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್, ಪೋಷಕರು ಮಕ್ಕಳಿಗೆ ಫೋನ್ ಕೊಡುವುದು ಒಳ್ಳೆಯದಲ್ಲ. ಇದರ ಬದಲಿಗೆ ಅವರನ್ನು ಹೊರಗಡೆ ಕರೆದುಕೊಂಡು ಹೋಗಬೇಕು. ಸ್ವಿಮ್ಮಿಂಗ್ ಪೂಲ್, ಕ್ರಿಕೆಟ್ ಆಡಿಸುವುದು, ಫುಟ್ ಬಾಲ್, ನೆಟ್ ಬಾಲ್, ಥ್ರೋ ಬಾಲ್ ಇತರೆ ಆಟಗಳನ್ನು ಆಡಿಸಬೇಕು. ಅವರನ್ನು ಮೈದಾನದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಂತೆ ನೀವು ಮಾಡಬೇಕು ಎಂದು ಹೇಳಿದ್ದಾರೆ.
ಮಂಗಳೂರು : ಭಾರತದಲ್ಲಿ ಕ್ರಿಕೆಟ್ ಗೆ ಎಷ್ಟು ಕ್ರೇಜ್ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಾಲ್ಯದಲ್ಲಿ ಕ್ರಿಕೆಟ್ ಆಡುವ ಪ್ರತಿಯೊಬ್ಬರು ಕೂಡ ಭಾರತದ ಪರ ಆಡುವ ಕನಸನ್ನು ಕಾಣುತ್ತಾರೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮ ಕನಸು ಈಡೇರದಿದ್ದರೂ ನೀವು ಅಂಪೈರ್ ಆಗುವ ಮೂಲಕ ನಿಮ್ಮ ಕನಸನ್ನು ಸಾಕಾರಗೊಳಿಸಬಹುದು.
ಕೆಲವೇ ಕೆಲವು ಜನರಿಗೆ ಮಾತ್ರ ಅಂಪೈರ್ ಆಗುವುದು ಹೇಗೆಂದು ಗೊತ್ತಿದೆ. ಕ್ರಿಕೆಟ್ ಅಂಪೈರ್ ಆಗಲು ಕೆಲವೊಂದು ಪ್ರಕ್ರಿಯೆಗಳಿವೆ. ಕ್ರಿಕೆಟ್ ಕೌಶಲ್ಯವನ್ನು ಮಾತ್ರವಲ್ಲದೇ ದೈಹಿಕ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕೂಡ ಮುಖ್ಯವಾಗಿರುತ್ತದೆ.
ಅಂಪೈರ್ ಆಗಲು ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ?
ಸ್ಥಳೀಯ ಮಟ್ಟದಲ್ಲಿ ನಡೆಯುವ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಬೇಕು. ಆ ಮೂಲಕ ಅಂಪೈರಿಂಗ್ ಮಾಡುವ ಅನುಭವವನ್ನು ಪಡೆದುಕೊಳ್ಳಬೇಕು. ಇಲ್ಲಿ ಸಿಗುವ ಅನುಭವ ಅಂಪೈರ್ ವಿಭಾಗದಲ್ಲಿ ನಿಮ್ಮನ್ನು ಎತ್ತರ ಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ನಂತರ ಕ್ರಿಕೆಟ್ ಅಂಪೈರ್ ಆಗಲು ಬಯಸಿದ ಅಭ್ಯರ್ಥಿಗಳು ತಮಗೆ ಸಂಬಂಧಿತ ‘ರಾಜ್ಯ ಕ್ರಿಕೆಟ್ ಸಂಸ್ಥೆ’ಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಸ್ಥಳೀಯ ಪಂದ್ಯಗಳಲ್ಲಿ ಅನುಭವ ಪಡೆಯುವುದು ಮುಖ್ಯವಾಗಿದೆ.
ಇದನ್ನೂ ಓದಿ: ತಂದೆ-ತಾಯಿಯನ್ನು ಕೂಡಿ ಹಾಕಿ ಮಗಳು ಪ್ರಿಯಕರನೊಂದಿಗೆ ಪರಾರಿ !!
ನೀವು ರಾಜ್ಯ ಕ್ರಿಕೆಟ್ ಸಂಸ್ಥೆಯೊಂದಿಗೆ ನೀವು ಸಾಕಷ್ಟು ಅನುಭವ ಪಡೆದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಡೆಸುವ ಹಂತ-1 ಪರೀಕ್ಷೆಗೆ ಹೆಸರನ್ನು ಕಳುಹಿಸಲಾಗುತ್ತದೆ. ನಂತರ ಮೂರು ದಿನಗಳ ಕಾಲ ಬಿಸಿಸಿಐ ತರಬೇತಿ ನೀಡುತ್ತದೆ. ನಾಲ್ಕನೇ ದಿನ ಲಿಖಿತ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡುತ್ತದೆ.
ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವಿಶೇಷ ತರಬೇತಿಗೆ ಕರೆಯುತ್ತದೆ. ಅಲ್ಲಿ ಆಟದ ನಿಯಮಗಳು ಮತ್ತು ಇತರೆ ಪ್ರಮುಖ ವಿಷಯಗಳ ಬಗ್ಗೆ ತರಬೇತಿ ನೀಡುತ್ತದೆ. ನಂತರ ಅಭ್ಯರ್ಥಿಗಳು ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲಾ ಹಂತದ ಪರೀಕ್ಷೆಗಳಲ್ಲಿ ಯಶಸ್ವಿಯಾದರೆ ಮಾತ್ರ ಹಂತ-2 ಪರೀಕ್ಷೆಗೆ ಅರ್ಹರಾಗುತ್ತೀರಿ.
ಎರಡನೇ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ವೈದ್ಯಕೀಯ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ದೈಹಿಕ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ. ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರ ಬಿಸಿಸಿಐ ನಿಮ್ಮನ್ನು ಅಂಪೈರ್ ಎಂದು ಪ್ರಕಟಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನೀವು ಅರ್ಹ ಕ್ರಿಕೆಟ್ ಅಂಪೈರ್ ಆಗಬಹುದು. ವಿವಿಧ ಹಂತಗಳಲ್ಲಿ ಪಂದ್ಯಗಳನ್ನು ನಿರ್ವಹಿಸಬಹುದು.
ಅಂಪೈರ್ ಗೆ ಸಿಗುವ ಸಂಬಳ ಎಷ್ಟು :
ಅಂಪೈರ್ ಗಳ ವೇತನವು ಅವರ ದರ್ಜೆ, ಅನುಭವ ಮತ್ತು ಹಿರಿತನದ ಮೇಲೆ ಅವಲಂಬಿತವಾಗಿರುತ್ತದೆ. ಬಿಸಿಸಿಐನ ವರದಿಗಳ ಪ್ರಕಾರ ಎ+ ಮತ್ತು ಎ ಗ್ರೇಡ್ ಅಂಪೈರ್ ಗಳು ದೇಶಿಯ ಪಂದ್ಯಗಳಿಗೆ ದಿನಕ್ಕೆ 40,000 ರೂಪಾಯಿ ಪಡೆಯುತ್ತಾರೆ. ಬಿ ಮತ್ತು ಸಿ ದರ್ಜೆಯ ಅಂಪೈರ್ ಗಳಿಗೆ ದಿನಕ್ಕೆ 30,000 ರೂಪಾಯಿ ನೀಡಲಾಗುತ್ತದೆ.
ಅಂಪೈರ್ ನ ದಾಖಲೆ ಉತ್ತಮವಾಗಿದ್ದರೆ ಅವರನ್ನು ಐಸಿಸಿ ಪ್ಯಾನಲ್ ಗೆ ಸೇರಿಸಬಹುದು. ಐಸಿಸಿಯು ಪ್ರತಿ ಪಂದ್ಯಕ್ಕೆ 1.50 ರಿಂದ 2.20 ಲಕ್ಷ ರೂಪಾಯಿ ನೀಡುತ್ತದೆ. ವಾರ್ಷಿಕವಾಗಿ 75 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ.
ನಿಮಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇದ್ದು, ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ವಂಚಿತರಾದರೆ, ನಿಮಗೆ ಅಂಪೈರ್ ವೃತ್ತಿಯನ್ನು ಆಯ್ದುಕೊಳ್ಳಬಹುದು.
ಮಂಗಳೂರು/ಲಾಗೋಸ್ : ಕ್ರಿಕೆಟ್ ನಲ್ಲಿ ಈಗಾಗಲೇ ಹಲವಾರು ದಾಖಲೆಗಳು ಇದೆ. ಆದರೆ ಟಿ20 ವಿಶ್ವಕಪ್ ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೈಜೀರಿಯಾ ತಂಡವು ಐವರಿ ಕೋಸ್ಟ್ ತಂಡವನ್ನು ಕೇವಲ 7 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ವಿಶ್ವ ದಾಖಲೆ ಬರೆದಿದೆ.
ಈ ಪಂದ್ಯವು ಲಾಗೋಸ್ ನಲ್ಲಿ ನಡೆಯಿತು. ಟಾಸ್ ಗೆದ್ದ ನೈಜೀರಿಯಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 271 ರನ್ ಕಲೆಹಾಕಿತು. ಸಲೀಂ 53 ಎಸೆತಗಳಲ್ಲಿ 112 ರನ್, ಐಸಕ್ ಒಕ್ಪೆ 23 ಎಸೆತಗಳಲ್ಲಿ 65 ರನ್, ಸುಲೈಮಾನ್ 50 ರನ್ ಸಿಡಿಸಿದ್ದರು.
ಇದನ್ನೂ ಓದಿ: ಉಡುಪಿ: ಕಾಲಿವುಡ್ ಸ್ಟಾರ್ ನಟ ಸೂರ್ಯ ದಂಪತಿ ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ
ಈ ಬೃಹತ್ ಗುರಿ ಬೆನ್ನಟ್ಟಿದ ಐವರಿ ಕೋಸ್ಟ್ ತಂಡವು 7.3 ಓವರ್ ಗಳಲ್ಲಿ ಕೇವಲ 7 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ನೈಜೀರಿಯಾ ತಂಡವು 264 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಅಮೋಘ ಗೆಲುವಿನೊಂದಿಗೆ ಟಿ20 ಕ್ರಿಕೆಟ್ ನ ಇತಿಹಾಸದಲ್ಲಿ ಬೃಹತ್ ರನ್ ಗಳ ಅಂತರದಿಂದ ಗೆದ್ದ ದಾಖಲೆ ಪಟ್ಟಿಯಲ್ಲಿ ನೈಜೀರಿಯಾ ಮೂರನೇ ಸ್ಥಾನಕ್ಕೇರಿದೆ.
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಸ್ಕೋರ್ ಗೆ ಆಲೌಟ್ ಆದ ದಾಖಲೆ ಐವರಿ ಕೋಸ್ಟ್ ತಂಡ ಪಡೆದುಕೊಂಡಿದೆ. ಇದಕ್ಕೂ ಮುನ್ನ ಅತ್ಯಂತ ಕಡಿಮೆ ರನ್ ಗಳಿಗೆ ಆಲೌಟ್ ಆದ ದಾಖಲೆ ಮಂಗೋಲಿಯಾ ಹೆಸರಿನಲ್ಲಿತ್ತು. ಅದು ಕೇವಲ 10 ರನ್ ಗಳಿಗೆ ಆಲೌಟ್ ಆಗಿತ್ತು. ಈದೀಗ 7 ರನ್ ಗಳಿಗೆ ಆಲೌಟ್ ಆಗುವ ಮೂಲಕ ಐವರಿ ಕೋಸ್ಟ್ ತಂಡ ಮೊದಲ ಸ್ಥಾನ ಪಡೆದಿದೆ.
Pingback: ಮೆಗಾ ಹರಾಜಿನಲ್ಲಿ ಅನ್ಸೋಲ್ಡ್; ನಿವೃತ್ತಿ ಘೋಷಿಸಿದ ಆರ್ಸಿಬಿ ಮಾಜಿ ಆಟಗಾರ - NAMMAKUDLA NEWS - ನಮ್ಮಕುಡ್ಲ ನ್ಯೂಸ್