ಪರೋಟ ಎಂದ ತಕ್ಷಣ ನೆನಪಾಗುವುದು ಆಲೂ ಪರೋಟ,ಪನ್ನೀರ್ ಪರೋಟ,ಗೋಬಿ ಪರೋಟ, ಹೀಗೆ ವಿವಿಧ ಬಗೆಯ ಪರೋಟವನ್ನು ನೀವು ತಿಂದಿರಬಹುದು. ಆದರೆ ನುಗ್ಗೆಕಾಯಿಂದ ಮಾಡುವ ಪರೋಟವನ್ನು ನೀವು ಯಾವತ್ತಾದರೂ ಸವಿದು ನೋಡಿದ್ದೀರಾ..? ಇಲ್ಲಾ ಅಂದ್ರೇ..ನೀವೆ ಮನೆಯಲ್ಲಿ ಅತಿ ಸುಲಭವಾಗಿ ನುಗ್ಗೆಕಾಯಿ ಪರೋಟವನ್ನು ಮಾಡಬಹುದು. ನುಗ್ಗೆಕಾಯಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಲ್ಲಿ ವಿಶೇಷವಾಗಿ ವಿಟಮಿನ್ ಎ,ವಿಟಮಿನ್ ಬಿ,ಕ್ಯಾಲ್ಸಿಯಂ ಅಂಶಗಳು ಹೆಚ್ಚಾಗಿರುವುದರಿಂದ ಮಕ್ಕಳಿಗೆ ಈ ಆಹಾರ ತುಂಬಾ ಒಳ್ಳೆಯದು. ಹಾಗೂ ಮನೆಯ ಹಿರಿಯರಿಗೂ ಈ ಆಹಾರ ಸೇವನೆಯು ಪ್ರಯೋಜನಕಾರಿಯಾಗಿದೆ. ಮೂಳೆ ನೋವು ಸಮಸ್ಯೆಗೆ ಈ ಆಹಾರ ಮನೆಮದ್ದು ಆಗಿ ಕಾರ್ಯನಿರ್ವಹಿಸುತ್ತದೆ.
ಮೊದಲಿಗೆ ನುಗ್ಗೆಯನ್ನು ಸ್ವಚ್ಛವಾಗಿ ತೊಳೆದು,ಚೆನ್ನಾಗಿ ಬೇಯಿಸಿಕೊಳ್ಳಿ,ನಂತರ ಬೇಯಿಸಿದ ನುಗ್ಗೆಯನ್ನು ಹಿಸುಕಿ ರಸವನ್ನು ತೆಗೆದುಕೊಳ್ಳಿ,ಒಂದು ಪಾತ್ರೆಗೆ ನುಗ್ಗೆಯ ರಸವನ್ನು ಹಾಕಿ ಅದಕ್ಕೆ ಗೋಧಿ ಹಿಟ್ಟು,ಮೆಣಸಿನ ಪುಡಿ, ಕೊತ್ತಂಬರಿ ಪುಡಿ,ಆಮ್ಚೂರ್ ಪುಡಿ,ಹಿಂಗು,ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ,ಬಿಳಿ ಎಳ್ಳು,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮತ್ತೊಮ್ಮೆಮಿಶ್ರಣ ಮಾಡಿಕೊಳ್ಳಿ. ಬಳಿಕ ಅಗತ್ಯಕ್ಕೆ ಅನುಗುಣವಾಗಿ ನೀರು ಸೇರಿಸಿ(ಬೇಕಾದರೆ ಮಾತ್ರ). ಹಿಟ್ಟನ್ನು ಮೃದುವಾಗಿ ಬೆರೆಸಿಕೊಳ್ಳಿ ನಂತರ ಸ್ವಲ್ಪ ಸಮಯ ಹಾಗೇ ಬಿಡಿ. ತದನಂತರ ಹಿಟ್ಟನ್ನು ಉಂಡೆ ಮಾಡಿ ನಿಮಗೆ ಬೇಕಾಗುವ ಆಕಾರದಲ್ಲಿ ಲಟ್ಟಿಸಿರಿ. ಲಟ್ಟಿಸುವಾಗ ಸ್ವಲ್ಪ ಎಣ್ಣೆಯನ್ನು ಹಾಕಿ ಲಟ್ಟಿಸಿರಿ. ನಂತರ ಕಾದ ತವಾದ ಮೇಲೆ ಹಾಕಿಕೊಂಡು ಎಣ್ಣೆಯಿಂದ ಕಾಯಿಸಿರಿ. ಪರೋಟ ಕೆಂಪಗಾದ ಮೇಲೆ ತವಾದ ಮೇಲಿಂದ ತೆಗೆಯಿರಿ. ಬಿಸಿ-ಬಿಸಿ- ಇರುವಾಗಲೇ ತಿನ್ನಲು ತಂಬಾ ರುಚಿಯಾಗಿರುತ್ತದೆ ನುಗ್ಗೆಕಾಯಿ ಪರೋಟ.
ಮಂಗಳೂರು/ಮುಂಬೈ : ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಖ್ಯಾತ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ದಾಂಪತ್ಯ ಜೀವನ ಮುರಿದುಬಿತ್ತಾ ಎಂಬ ಅನುಮಾನ ಶುರುವಾಗಿದೆ.
ಕಳೆದ ಕೆಲವು ವರ್ಷಗಳಿಂದಲೂ ಚಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟಿದೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು.
ಇದೀಗ ಅಚ್ಚರಿ ಎಂಬಂತೆ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರು ಇನ್ ಸ್ಟಾಗ್ರಾಂನಲ್ಲಿ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದ್ದಾರೆ. ಚಹಲ್ ಅವರು ಧನಶ್ರೀ ಅವರೊಂದಿಗಿನ ಎಲ್ಲಾ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂನಲ್ಲಿ ಅಳಿಸಿ ಹಾಕಿದ್ದಾರೆ. ಆದರೆ, ಚಹಲ್ ಅವರನ್ನು ಅನ್ ಫಾಲೋ ಮಾಡಿರುವ ಧನಶ್ರೀ ಅವರೊಂದಿಗಿನ ಫೋಟೊಗಳನ್ನು ಈವರೆಗೆ ಅಳಿಸಿ ಹಾಕಿಲ್ಲ.
2023ರಲ್ಲಿ ಧನಶ್ರೀ ಅವರು ಇನ್ ಸ್ಟಾಗ್ರಾಂ ಯುಸರ್ ನೇಮ್ ನಿಂದ ‘ಚಹಲ್’ ಅನ್ನು ಕೈಬಿಟ್ಟ ನಂತರ ವಿಚ್ಛೇದನ ವದಂತಿಗಳು ಹರಿದಾಡಿದ್ದವು. ಆದರೆ, ಈ ವದಂತಿಯನ್ನು ಆಗ ಯಜುವೇಂದ್ರ ಚಹಲ್ ನಿರಾಕರಿಸಿದ್ದರು.
ಲಾಕೌಡೌನ್ ಸಮಯದಲ್ಲಿ ಪರಸ್ಪರ ಪರಿಚಯವಾಗಿದ್ದ ಚಹಲ್ ಮತ್ತು ಧನಶ್ರೀ, 2020ರ ಡಿಸೆಂಬರ್ 11ರಂದು ವಿವಾಹವಾಗಿದ್ದರು.
ಮಂಗಳೂರು/ಜೈಪುರ : ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ ಮತ್ತು ಶಾಂತಿ ಮತ್ತು ಏಕತೆಯ ಸಂದೇಶ ಸಾರುವ ಅಜ್ಮೀರ್ ಷರೀಫ್ ದರ್ಗಾದಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾಗವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ದರ್ಗಾಗೆ ಭೇಟಿ ನೀಡಿ ಚಾದರ್ ಸಮರ್ಪಿಸುವ ಮೂಲಕ ಖ್ವಾಜಾ ಮೊಯಿನುದ್ದೀನ್ ಚಸ್ತಿ ಅವರ 813 ನೇ ಉರೂಸ್ ನಲ್ಲಿ ಭಾಗವಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸತತ ಹನ್ನೊಂದು ವರ್ಷಗಳಿಂದ ಅಜ್ಮೀರ್ ಷರೀಫ್ ದರ್ಗಾದ ಉರೂಸ್ ಸಮಯದಲ್ಲಿ ದರ್ಗಾಕ್ಕೆ ಚಾದರ್ ಸಮರ್ಪಣೆ ಮಾಡಿದ್ದಾರೆ. ಈ ಬಾರಿ ಸಚಿವ ಕಿರಣ್ ರಿಜಿಜು ಅವರು ಪ್ರಧಾನಿ ಮೋದಿ ಅವರ ಪರವಾಗಿ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ರಿಜಿಜು, “ಅಜ್ಮೀರ್ ಉರೂಸ್ ಸಮಯದಲ್ಲಿ ಗರೀಬ್ ನವಾಜ್ ದರ್ಗಾಕ್ಕೆ ಭೇಟಿ ನೀಡುವುದು ದೇಶದ ಹಳೆಯ ಸಂಪ್ರದಾಯವಾಗಿದೆ. ಸೌಹಾರ್ದತೆ ಮತ್ತು ಭಾತೃತ್ವದ ಸಂದೇಶವನ್ನು ರವಾನಿಸಲು ಪ್ರಧಾನಿ ಮೋದಿ ಅವರ ಪರವಾಗಿ ಚಾದರ್ ಅರ್ಪಿಸುವ ಅವಕಾಶ ಸಿಕ್ಕಿದೆ. ಉರೂಸ್ ಸಂದರ್ಭದಲ್ಲಿ ದೇಶದಲ್ಲಿ ಶಾಂತಿಯುತ ವಾತಾವರಣಕ್ಕಾಗಿ ನಾವು ಆಶೀರ್ವಾದವನ್ನು ಬಯಸುತ್ತಿದ್ದೇನೆ” ಎಂದು ಹೇಳಿದ್ದಾರೆ.
ಇದೇ ವೇಳೆ ದರ್ಗಾಕ್ಕೆ ಭೇಟಿ ನೀಡುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ಅನುಕೂಲ ಆಗುವ ಎಲ್ಲಾ ಮೂಲಸೌಕರ್ಯಗಳನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಮಂಗಳೂರು/ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೊರಾದಲ್ಲಿ ಸೇನಾ ವಾಹನ ಕಂದಕಕ್ಕೆ ಬಿದ್ದ ಹಿನ್ನೆಲೆಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ.
ಈ ದುರ್ಘಟನೆಯಲ್ಲಿ 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂಡಿಪೋರಾದ ವುಲರ್ ವ್ಯೂಪಾಯಿಂಟ್ ಬಳಿ ಸೇನಾ ವಾಹನವೊಂದು ರಸ್ತೆಯಿಂದ ಕೆಳಗಿಳಿದು ಆಳವಾದ ಕಮರಿಗೆ ಉರುಳಿದ ಘಟನೆ ನಡೆದಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಉತ್ತರ ಕಾಶ್ಮೀರ ಜಿಲ್ಲೆಯ ಎಸ್.ಕೆ ಪಯೆನ್ ಬಳಿ ಸೇನಾ ವಾಹನ ಕಮರಿಗೆ ಬಿದ್ದು ಇಬ್ಬರು ಸೈನಿಕರ ಸಾವು, ಮೂವರು ಗಂಭೀರವಾಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಬಂಡಿಪೋರಾ- ಶ್ರೀನಗರ ರಸ್ತೆಯ ಎಸ್ ಕೆ ಪಯೀನ್ ಬಳಿ ವಾಹನ ಸ್ಕಿಡ್ ಆಗಿ ಆಳವಾದ ಕಮರಿಗೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಐವರು ಯೋಧರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಬಂಡಿಪೋರಾಕ್ಕೆ ಕರೆದೊಯ್ಯಲಾಯಿತು. ಇಲ್ಲಿ ಇಬ್ಬರು ಬರುವಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ತೀವ್ರವಾಗಿ ಗಾಯಗೊಂಡ ಮೂವರು ಸೈನಿಕರನ್ನು ಚಿಕಿತ್ಸೆಗಾಗಿ ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ.