LATEST NEWS
ಮರೆವಿನ ಕಾಯಿಲೆಗೆ ಕಾಳಜಿ ಅಗತ್ಯ: ಪ್ರೊ. ಸತೀಶ್ ಭಂಡಾರಿ ಅಭಿಪ್ರಾಯ
Published
3 years agoon
By
Adminಮಂಗಳೂರು: ಅಲ್ಝಮೈರ್ಸ್ ಕಾಯಿಲೆಯಿಂದ ಸಂಪೂರ್ಣ ಮುಕ್ತರಾಗುವುದು ಕಷ್ಟ. ಆದರೆ ಅದನ್ನು ನಿರ್ವಹಿಸಬಹುದು. ಹೀಗಾಗಿ ಯಾರೂ ಭಯಪಡಬೇಕಾದ ಅಗತ್ಯವಿಲ್ಲ.
ಮರೆವಿನ ಖಾಯಿಲೆ ಬಗ್ಗೆ ಇಂದು ಸಮಾಜದಲ್ಲಿ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ.
ಆದರೆ ಗ್ರಾಮೀಣ ಭಾಗಗಗಳಲ್ಲಿ ಇರುವ ಕೂಡು ಕುಟುಂಬಗಳಲ್ಲಿ ಇಂತಹ ಮೆರೆವಿನ ಖಾಯಿಲೆಯ ಮಂದಿ ಇದ್ದರೂ ಕೂಡಾ ಹೆಚ್ಚಿನ ಸಮಸ್ಯೆ ಆಗುವುದಿಲ್ಲ.
ಎಲ್ಲರನ್ನೂ ಅನ್ಯೋನ್ಯತೆಯಿಂದ ಕಾಣುತ್ತಾರೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಸತೀಶ್ ಭಂಡಾರಿ ಅಭಿಪ್ರಾಯಪಟ್ಟರು.
ಪೀಪಲ್ಸ್ ಅಸೋಸಿಯೇಶನ್ ಫಾರ್ ಜೆರಿ ಏಟ್ರಿಕ್ ಎಂಪವರ್ಮೆಂಟ್ ಪೇಜ್ ಇದರ ವತಿಯಿಂದ ಕದ್ರಿ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಅಲ್ಝಮೈರ್ಸ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಣ್ಣದ ಬಲೂನುಗಳನ್ನು ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಿ.ಸಿ.ಪಿ ಹರಿರಾಂ ಶಂಕರ್ ಮಾತನಾಡಿ, ನಮ್ಮ ಕುಟುಂಬದಲ್ಲೂ ಮರೆವಿನ ಖಾಯಿಲೆ ಇದ್ದವರು ಇದ್ದರು.
ಇದರಿಂದ ಕುಟುಂಬದ ಇತರ ಸದಸ್ಯರಿಗೆ ಮಾನಸಿಕ ನೋವುಗಳಾಗುವ ಸಂದರ್ಭವೇ ಹೆಚ್ಚಿದೆ.
ಹೀಗಾಗಿ ಅವರ ಆರೈಕೆ ಬಗ್ಗೆ ನಾವು ಕಾಳಜಿ, ಜಾಗೃತೆ ವಹಿಸಬೇಕಾಗಿದೆ ಎಂದರು. ಜೀವನದ ಕೊನೆಗಾಲದಲ್ಲಿ ಕಾಡುವ ದೀರ್ಘಕಾಲೀನ ಸಮಸ್ಯೆ ಇದು.
ಸ್ಮರಣಶಕ್ತಿ, ಬುದ್ಧಿಶಕ್ತಿ, ಕಲಿಕೆ, ಕ್ರಿಯಾಶೀಲತೆ, ಭಾಷಾ ಸಾಮರ್ಥ್ಯ, ಗ್ರಹಿಕೆ ಹಾಗೂ ಕ್ಷೀಣಿಸಿದ ನಿರ್ಧಾರ, ವಿವೇಚನ ಶಕ್ತಿ ಭಾವನೆ ಮತ್ತು ನಡವಳಿಕೆಯಲ್ಲಿ ಬದಲಾವಣೆ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ಜಿಲ್ಲಾ ಲೀಗಲ್ ಸರ್ವೀಸ್ ಅಥೋರಿಟಿ ಇದರ ಹಿರಿಯ ಸಿವಿಲ್ ಜಡ್ಜ್ ಹಾಗೂ ಮೆಂಬರ್ ಸೆಕ್ರಟರಿ ಪ್ರಥ್ವಿರಾಜ್ ಜಿ. ವರ್ನೆಕರ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರವಿ ಶಂಕರ್ ಮಿಜಾರ್ ಮಾತನಾಡಿದರು.
ತುಳು, ರಂಗಭೂಮಿ ಹಾಗೂ ಚಲನ ಚಿತ್ರ ನಟ ನವೀನ್ ಡಿ. ಪಡೀಲ್, ಯೆನಪೋಯ ಕಾಲೇಜಿನ ಮಾಜಿ ಉಪ ಕುಲಪತಿ ಡಾ ಸಿ ವಿ ರಘುವೀರ್, ಪೇಜ್ ಸಂಸ್ಥೆಯ ಉಪಾಧ್ಯಕ್ಷೆ ಡಾ.ಪ್ರಭಾ ಅಧಿಕಾರಿ ಎಂ ಆರ್, ಕಾರ್ಯದರ್ಶಿ ಜೆರಾಡಿನ್ ಡಿ ಸೋಜಾ, ಜಂಟಿ ಕಾರ್ಯದರ್ಶಿ ಮೋಹನ್ ರಾಜ್ ಮೊದಲಾದವರಿದ್ದರು.
ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೋರ್ವಳು ಮೃ*ತಪಟ್ಟ ಘಟನೆ ನ.28ರ ಗುರುವಾರ ನಡೆದಿದೆ.
ವಿಟ್ಲ ಕುಂಡಡ್ಕ ಪಾದೆ ನಿವಾಸಿ ದಿ.ನಾರಾಯಣ ಮೂಲ್ಯ ಅವರ ಪುತ್ರಿ ರಕ್ಷಿತಾ (20) ಮೃ*ತಪಟ್ಟ ಯುವತಿ ಎನ್ನಲಾಗಿದೆ.
ಮೃ*ತರು ತಾಯಿ, ಅಕ್ಕ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
LATEST NEWS
ಕಾರ್ಕಳ: ದುರ್ಗಾ ಫಾಲ್ಸ್‌ಗೆ ಈಜುಲು ಹೋದ ಕಾಲೇಜು ವಿದ್ಯಾರ್ಥಿ ನೀರುಪಾಲು
Published
14 hours agoon
28/11/2024By
NEWS DESK2ಕಾರ್ಕಳ: ದುರ್ಗಾ ಫಾಲ್ಸ್‌ಗೆ ಈಜುಲು ಹೋದ ವಿದ್ಯಾರ್ಥಿಯೋರ್ವ ನೀರು ಪಾಲಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ಮೃ*ತ ವಿದ್ಯಾರ್ಥಿಯನ್ನು ಜಾಯಲ್ ಡಯಾಸ್ (19) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
7 ಮಂದಿ ವಿದ್ಯಾರ್ಥಿಗಳ ತಂಡ ದುರ್ಗಾ ಫಾಲ್ಸ್ ಗೆ ಬಂದಿದ್ದು, ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಜಾಯಲ್ ಡಯಾಸ್ ಆಯ ತಪ್ಪಿ ನೀರು ಪಾಲಾಗಿದ್ದಾನೆ ಎಂದು ತಿಳಿದುಬಂದಿದೆ. ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
LATEST NEWS
ಜಾರ್ಖಂಡ್ ನ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹೇಮಂತ್ ಸೊರೆನ್
Published
15 hours agoon
28/11/2024By
NEWS DESK3ಮಂಗಳೂರು/ರಾಂಚಿ: ಜಾರ್ಖಂಡ್ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ ಸ್ವೀಕರಿಸಿದರು. 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೆ ಏರಿದ್ದಾರೆ. ಈ ವೇಳೆ ಇಂಡಿಯಾ ಬಣದ ಹಲವು ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಂಚಿಯ ಮೊರಾಬಾದಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಆದಿವಾಸಿ ನಾಯಕ 49 ವರ್ಷದ ಹೇಮಂತ್ ಸೊರೇನ್ ಅವರಿಗೆ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಖುರ್ತಾ, ಪೈಜಾಮಾ ಧರಿಸಿ ತಮ್ಮ ತಂದೆ, ಜೆಎಂಎಂ ಅಧ್ಯಕ್ಷ ಶಿಬು ಸೊರೇನ್ ಅವರನ್ನು ಭೇಟಿಯಾದರು.
ಇದನ್ನೂ ಓದಿ: Watch video: ಜೈಲಿನಿಂದ ಬಿಡುಗಡೆಯಾದ ಸಂಭ್ರಮದಲ್ಲಿ ಜೈಲಾಧಿಕಾರಿಗಳ ಎದುರೇ ಯುವಕನ ಭರ್ಜರಿ ಡ್ಯಾನ್ಸ್ !
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಎಪಿ ನಾಯಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಜರಿದ್ದರು.
ಇತ್ತೀಚೆಗೆ ಮುಕ್ತಾಯಗೊಂಡ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ 81 ಕ್ಷೇತ್ರಗಳ ಪೈಕಿ ಜೆಎಂಎಂ ನೇತೃತ್ವದ ಮೈತ್ರಿಕೂಟವು 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಎನ್ ಡಿಎ 24 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
LATEST NEWS
ಕ್ಯಾನ್ಸರ್ ವಾಸಿ ಬಗ್ಗೆ ಸಿಧು ಹೇಳಿಕೆಗೆ ಆಕ್ಷೇಪ..! 850 ಕೋಟಿ ಮಾನನಷ್ಟ ಕೋರಿ ನೋಟಿಸ್
ಉತ್ತರ ಪ್ರದೇಶ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ವೈರ್ ತಗುಲಿ ವಿದ್ಯಾರ್ಥಿನಿ ಸಾವು
ಬೆಂ*ಕಿ ಹಚ್ಚಿ ಇಡೀ ಕುಟುಂಬದ ಸಾಮೂಹಿಕ ಹ*ತ್ಯೆಗೆ ಯತ್ನ
ಕೊರೆಯುವ ಚಳಿಯಲ್ಲಿ ತುಟಿಗಳ ಅಂದ ಮಾಸದಿರಲಿ, ಈ ರೀತಿ ಆರೈಕೆ ಮಾಡಿ
Watch video: ಜೈಲಿನಿಂದ ಬಿಡುಗಡೆಯಾದ ಸಂಭ್ರಮದಲ್ಲಿ ಜೈಲಾಧಿಕಾರಿಗಳ ಎದುರೇ ಯುವಕನ ಭರ್ಜರಿ ಡ್ಯಾನ್ಸ್ !
ಅಂತಾರಾಷ್ಟ್ರೀಯ ಸಮ್ಮೇಳನ: ವ್ಯಾಟಿಕನ್ಗೆ ತೆರಳಿದ ಸ್ಪೀಕರ್ ಯುಟಿ ಖಾದರ್
Trending
- Baindooru7 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- BIG BOSS6 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- Baindooru6 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- Ancient Mangaluru1 day ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು