ಮಂಗಳೂರ/ಪ್ರಯಾಗ್‌ರಾಜ್ : ನಾಗಾ ಸಾಧು ಆಗಲು ಮೂರು ಹಂತಗಳ ಕಠಿಣ ಪರೀಕ್ಷೆಯನ್ನು ದಾಟಬೇಕಾಗುತ್ತದೆ. ಮೊದಲ ಹಂತ ದಾಟಿದವನು ಮಹಾಪುರಷ್, ಎರಡನೇ ಹಂತ ದಾಟಿದವನು ಅವದೂತ್ ಹಾಗೂ ಮೂರನೇ ಹಂತ ದಾಟಿದವನು ದಿಗಂಬರ್ ಆಗಿ ಬಳಿಕ ನಾಗಾ ಸಾಧು ಎನಿಸಿಕೊಳ್ಳುತ್ತಾನೆ. ಸಾಮಾನ್ಯವಾಗಿ 17 ರಿಂದ 19 ವರ್ಷದ ಯುವಕರಿಗೆ ಮಾತ್ರ ಈ ನಾಗಾ ದೀಕ್ಷೆಯನ್ನು ನೀಡಲಾಗುತ್ತದೆ. ನಾಗ ಅಂದ್ರೆ ತನ್ನ ಸ್ವಂತ ಅಸ್ಥಿತ್ವವನ್ನೇ ಕಳೆದುಕೊಂಡು ಬೆತ್ತಲಾಗುವುದು ಎಂಬ ಅರ್ಥ ಕೂಡಾ ಇದೆ. ಹೀಗಾಗಿ ಆರಂಭದಲ್ಲಿ ನಾಗ ಸಾಧುವಾಗಿ ದೀಕ್ಷೆ ಪಡೆಯಲು ಬರುವವನನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆತನ ಹಿನ್ನಲೆಯನ್ನು ತಿಳಿದುಕೊಂಡು ಆತನಿಂದ ಯಾವುದೇ ಅಪರಾಧ ಆಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ದೀಕ್ಷೆ ಕೊಡಲು ಒಪ್ಪಿಕೊಳ್ಳಲಾಗುತ್ತದೆ. ಹೀಗೆ ಗುರುವೊಬ್ಬ ಸಿಕ್ಕ ಮೇಲೆ ಕನಿಷ್ಟ ಮೂರರಿಂದ ನಾಲ್ಕು ವರ್ಷ ಅವರ ಸೇವೆಯನ್ನು ಮಾಡಬೇಕಾಗುತ್ತದೆ. ಇದನ್ನು ಪರಾಕ್ ಅವಧಿ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಶಿಷ್ಯನಿಗೆ ಶಾಸ್ತ್ರ ಮತ್ತು ಶಸ್ತ್ರದ ಅಭ್ಯಾಸವನ್ನು ಮಾಡಿಸಲಾಗುತ್ತದೆ.
ಮಹಾಪುರಷ್ :
ನಾಗಾ ಸಾಧು ಆಗಲು ಹೊರಟ ವ್ಯಕ್ತಿಗೆ ನಿದ್ರೆ ಹಸಿವು ಕಾಮ ಮತ್ತು ಉದಾಸಿನದಿಂದ ಹೊರಬರುವುದು ಇಲ್ಲಿ ಅಗತ್ಯ. ಪರಕಾರ್ ಅವಧಿಯಲ್ಲಿ ಈ ವಿಚಾರಗಳನ್ನು ಹೇಳಿಕೊಟ್ಟ ಮೇಲೆ ಆತನನ್ನು ಮತ್ತೆ ಸಂಸಾರ ಜೀವನಕ್ಕೆ ಮರಳುವಂತೆ ಸಲಹೆ ನೀಡಲಾಗುತ್ತದೆ. ಹಾಗೊಂದು ವೇಳೆ ಮತ್ತೆ ಸಂಸಾರ ಜೀವನಕ್ಕೆ ಹೋಗಲು ಇಚ್ಚೆ ಇಲ್ಲದವನಿಗೆ ಸನ್ಯಾಸ ದೀಕ್ಷೆಯನ್ನು ನೀಡಿ ಮಹಾಪುರಷ್ ಎಂದು ಘೊಷಣೆ ಮಾಡಲಾಗುತ್ತದೆ.
ಅವದೂತ್ :
ಹೀಗೇ ಮಹಾಪುರಷ್ ಎನಿಸಿಕೊಂಡ ಮೇಲೆ ಆತ ಪಂಚ ಸಂಸ್ಕಾರ ಎಂಬ ನಿಯಮವನ್ನು ಪಾಲಿಸಬೇಕಾಗಿದ್ದು ಈ ವೇಳೆ ಶಿವ ವಿಷ್ಣು ಶಕ್ತಿ ಸೂರ್ಯ ಮತ್ತು ಗಣೇಶನನ್ನು ಆರಾಧಿಸುವುದು ಕಡ್ಡಾಯ. ಕೇವಲ ಧ್ಯಾನದಿಂದ ತನ್ನಲ್ಲಿನ ಎಲ್ಲಾ ಭಾವನೆಗಳನ್ನು ನಿರ್ಮೂಲನೆ ಮಾಡಿಕೊಂಡ ಮೇಲೆ ಆತನನ್ನು ಅವದೂತ್ ಎಂದು ಕರೆಯಲಾಗುತ್ತದೆ. ಅವದೂತ್ ಎನಿಸಿಕೊಂಡ ಮೇಲೆ ಆತ ಗುರುಗಳು ಹೇಳಿದ ಯಾವುದೇ ಕೆಲಸವನ್ನೂ ಚಾಚೂ ತಪ್ಪದೆ ಶಿರಸಾವಹಿಸಿ ಪಾಲಿಸಬೇಕಾಗುತ್ತದೆ.
ದಿಗಂಬರ ಮತ್ತು ನಾಗ ಸಾಧು :
ಒಮ್ಮೆ ಅವದೂತ್ ಎನಿಸಿಕೊಂಡ ಸಂನ್ಯಾಸಿ ನಾಗ ಸಾಧು ಎನಿಸಿಕೊಳ್ಳಲು ಕೊನೆಯದಾಗಿ ಮಾಡಿಕೊಳ್ಳುವ ಕರ್ಮವೇ ಪಿಂಡ ಪ್ರಧಾನ. ಮೂರು ದಿನಗಳ ಕಾಲ ಹಸಿವು, ನಿದ್ರೆಯನ್ನು ತೊರೆದು ನಿರಂತರ ಕಠಿಣ ವೃತಾಚರಣೆಯ ಬಳಿಕ ತನ್ನ ಕುಟುಂಬಸ್ಥರಿಗೆ, ಹಾಗೂ ತನಗೆ ತಾನೇ ಪಿಂಡ ಪ್ರಧಾನ ಮಾಡಿಕೊಂಡು ಲೌಕಿಕ ಜಗತ್ತಿನಿಂದ ಸಂಪೂರ್ಣ ವಿಮುಕ್ತನಾಗುತ್ತಾನೆ. ಹೀಗೆ ದಿಗಂಬರನಾಗಿ ನಾಗಸಾಧುವಾಗಿ ಬದಲಾಗುತ್ತಾನೆ.
ಕುಂಭ ಮೇಳದಲ್ಲಿ ನಾಲ್ಕು ವಿಧದ ನಾಗ ಸಾಧುಗಳು :
ಪ್ರಯಾಗ್ ರಾಜ್‌ನಲ್ಲಿ ನಾಲ್ಕು ಕಡೆಗಳಲ್ಲಿ ಕುಂಭ ಮೇಳ ನಡೆಯುತ್ತಿದ್ದು, ಈ ನಾಲ್ಕು ಕಡೆಯಲ್ಲಿ ಸೇರುವ ನಾಗ ಸಾಧುಗಳು ಬೇರೆ ಬೇರೆಯಾಗಿದ್ದಾರೆ. ಪ್ರಯಾಗ್ ರಾಜ್‌ನಲ್ಲಿ ಸೇರುವವರನ್ನು ನಾಗ ಎಂದು ಕರೆದರೆ, ಉಜ್ಜೈನಿಯಲ್ಲಿ ಸೇರುವ ನಾಗಗಳನ್ನು ಕೂನಿ ನಾಗ , ಹರಿದ್ವಾರದಲ್ಲಿ ಸೇರುವ ನಾಗಗಳನ್ನು ಬರ್ಫಾನಿ ನಾಗ ಹಾಗೂ ನಾಸಿಕ್‌ನಲ್ಲಿ ಸೇರುವ ನಾಗಗಳನ್ನು ಕಿಚಡಿಯ ನಾಗ ಎಂದು ಕರೆಯಲಾಗುತ್ತದೆ. ಇನ್ನು ಇವರು ತಿನ್ನುವ ಆಹಾರಗಳಿಗೆ ಕೋಡ್ ವರ್ಡ್ ಇದ್ದು ಗೋದಿಗೆ ಬಸ್ಮಿ, ಬೇಳೆಗೆ ಪಿಯಾರಾಮ್, ಬೆಳ್ಳುಳ್ಳಿಗೆ ಪಾತಾಳ ಲವಂಗ, ಉಪ್ಪಿಗೆ ರಾಮರಸ , ರೋಟಿಗೆ ರೋಟಿರಾಮ ಎಂದು ಕರೆಯುತ್ತಾರೆ.
ಮಹಿಳಾ ನಾಗ ಸಾಧುಗಳು :
ಪುರಷರಂತೆ ಮಹಿಳೆಯರು ಕೂಡಾ ನಾಗ ಸಾಧುಗಳಾಗುತ್ತಿದ್ದು ಇವರಿಗೂ ಕೂಡಾ ಕಠಿಣ ವೃತಾಚರಣೆಯ ನಿಯಮಗಳಿವೆ. ಇವರನ್ನು ಅವದೂತಿನಿ, ಮಾಯಿ ಮತ್ತು ನಾಗಿನ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. 2013 ರಲ್ಲಿ ಮೊದಲ ಬಾರಿಗೆ ಅತೀ ಹಳೆಯದಾದ ನಾಗಸಾಧು ಅಖಾಡವಾದ ಜೂನಾ ಅಖಾಡದಲ್ಲಿ ನಾಗ ಸಂನ್ಯಾಸಿಗಳು ಕಾಣಿಸಕೊಂಡಿದ್ದರು. ಅತ್ಯಂತ ಹೆಚ್ಚಿನ ಮಹಿಳಾ ನಾಗ ಸಾದುಗಳು ಇದೇ ಅಖಾಡದಲ್ಲಿದ್ದಾರೆ. ಇವರಲ್ಲಿ ಅತ್ಯಂತ ಹಿರಿಯ ನಾಗ ಸಂನ್ಯಾಸಿಗೆ ಶ್ರೀ ಮಹಾಂತ್ ಎಂದು ಕರೆಯಲಾಗುತ್ತದೆ.
ಶಾಹಿ ಸ್ನಾನದ ವಿಚಾರದಲ್ಲಿ ನಾಗ ಸಾಧುಗಳ ನಡುವೆ ಗಲಾಟೆ :
1760 ನೇ ಇಸವಿಯಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ನಾಗ ಸಾಧುಗಳು ಹಾಗೂ ಬೈರಾಗಿ ಸನ್ಯಾಸಿಗಳ ನಡುವೆ ದೊಡ್ಡ ಹೊಡೆದಾಟ ನಡೆದಿದ್ದ ಇತಿಹಾಸ ಇದೆ. ಇದಾದ ಬಳಿಕ 1796 ರಲ್ಲೂ ಶೈವ ನಾಗ ಹಾಗೂ ಸಿಕ್ ನಾಗ ತಂಡದ ನಡುವೆ ಹೊಡೆದಾಟ ನಡೆದಿತ್ತು. ಇದಾದ ಬಳಿಕ ಅಖಾಡಗಳ ಮುಖಂಡರು ಚರ್ಚೆ ನಡೆಸಿ ನಾಲ್ಕು ಕಡೆಯಲ್ಲಿ ನಡೆಯುವ ಶಾಹಿ ಸ್ನಾನದಲ್ಲಿ ಯಾರು ಎಲ್ಲಿ ಸ್ನಾನ ಮಾಡಬೇಕು ಎಂದು ತೀರ್ಮಾನಿಸಿದ್ರು. ಹಾಗೂ ಸಂಗಮದಲ್ಲಿ ಮೊದಲು ಶೈವ ಸನ್ಯಾಸಿಗಳು ಸ್ನಾನ ಮಾಡಿದ ಬಳಿ ಬೈರಾಗಿ ನಾಗಗಳು ಸ್ನಾನ ಮಾಡಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು.
ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೋಲಾರ ಜಿಲ್ಲೆಯ ಕೆಜಿಎಫ್ ಪ್ರೌಢ ಶಾಲೆಯಲ್ಲಿದಿನಾಂಕ 8/9ರಂದು ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ವನ್ನು ಪಡೆದ ಪುತ್ತೂರು ದರ್ಬೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಆದ್ಯ ಕೆ, ಶಾನ್ವಿ ಪ್ರೀಷ್ಮ, ಫಾತಿಮಾತ್ ಮುನವರ, ಫಾತಿಮಾತ್ ಝುಲ್ಫ, ನಿರೀಕ್ಷಾ H ಶೆಟ್ಟಿ , ಸ್ನಿಗ್ಧ, ಆಯಿಷಾತ್ ಹಿಬಾ ಸಮನ್ವಿ, ಹಿತಾಶ್ರೀ, ಜೆರುಷ, ರೇಯ ಇವರಿಗೆ ಶಾಲಾ ಸಂಚಾಲಕಿ ಭಗಿಣಿ ಪ್ರಶಾಂತಿ ಬಿ ಎಸ್ ಇವರ ನೇತೃತ್ವ ದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರು ಗಳು, ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗಳು ಹಾಗೂ ಎರಡು ವಿಭಾಗದ ಮುಖ್ಯಪಾಧ್ಯಾಯರು ಗಳು ಭಾಗವಹಿಸಿದ್ದರು. ಜೊತೆಗೆ ರಾಜ್ಯಮಟ್ಟದಲ್ಲಿ ಸಾಧನೆಗೈದ ಮಕ್ಕಳ ಪೋಷಕರು ಕೂಡ ಭಾಗವಹಿಸಿದ್ದರು…ಮಕ್ಕಳು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಕಾರಣಕರ್ತರದ ಸಂಸ್ಥೆಯ ದೈಹಿಕ ಶಿಕ್ಷಕರಾದ ಶ್ರೀಯುತ ನಿರಂಜನ್, ಅಕ್ಷಯ್ ಹಾಗೂ ಹರೀಶ್ ಇವರನ್ನು ಕೂಡ ಸನ್ಮಾನಿಸಲಾಯಿತು. ಶಿಕ್ಷಕಿ ಪವಿತ್ರ ಇವರು ಸ್ವಾಗತ ಮಾಡಿದರು, ಅನಿತಾ ರೋಡ್ರಿ ಗಸ್ ವಂದನಾರ್ಪಣೆ ಗೈದರು,ಶಿಕ್ಷಕಿ ಸೌಮ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು
ಬಂಟ್ವಾಳ : ಕಾರೊಂದು ಢಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭಿರ ಗಾಯಗೊಂಡು ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಂಟ್ವಾಳ ತಾಲೂಕಿನ ಪೆರಮುಗೇರು ಸತ್ತಿಕಲ್ಲು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದ್ಮಾನ್ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಉಸ್ಮಾನ್ (24) ಮೃತರು ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಉಸ್ಮಾನ್ ಅವರು ತನ್ನ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದು ಸತ್ತಿಕಲ್ಲಿನಲ್ಲಿ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿರುವ ವೇಳೆ ನೋಂದಣಿಯಾಗದ ಕಾರೊಂದು ಏಕಾಏಕಿ ಅವರ ಸ್ಕೂಟರ್ ಗೆ ಢಿಕ್ಕಿಯಾಗಿತ್ತು.
ಈ ಸಂದರ್ಭ ಸ್ಕೂಟರ್ ನಲ್ಲಿ ಕುಳಿತಿದ್ದ ಉಸ್ಮಾನ್ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದ ಕಾರು ಮತ್ತು ಬೈಕ್ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.