Home ಕರ್ನಾಟಕ ವಾರ್ತೆ ಕೊರೊನಾ ಹಿನ್ನಲೆ ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸದೇ ಇರುವುದು ದುರಾದೃಷ್ಟ

ಕೊರೊನಾ ಹಿನ್ನಲೆ ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸದೇ ಇರುವುದು ದುರಾದೃಷ್ಟ

ಕೊರೊನಾ ಹಿನ್ನಲೆ ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸದೇ ಇರುವುದು ದುರಾದೃಷ್ಟ  

ಬೆಂಗಳೂರು:- ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಎಪ್ರಿಲ್ 14ರ ವರೆಗೆ ಲಾಕ್ ಡೌನ್ ವಿಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿರುವುದರಿಂದ ಬೀದಿಬದಿ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ರೈತರು, ಮಧ್ಯಮ ವರ್ಗದವರು ಹೆಚ್ಚಾಗಿ ದೈನಂದಿನ ದುಡಿಮೆಯಿಂದಲೇ ಜೀವನ ಸಾಗಿಸುವವರಾಗಿದ್ದಾರೆ.

ಇವರಿಗೆ ಪ್ರಧಾನಿ ಮೋದಿಯ ಕೊರೊನಾ  ಸಂಬಂಧಿಸಿ ನಿನ್ನೆ ಮಾಡಿದ ಭಾಷಣದಲ್ಲಿ ಯಾವುದೇ ಕನಿಷ್ಟ ಕ್ರಮಗಳನ್ನು ಕೈಗೊಳ್ಳದೇ ಇರುವುದು ವಿಷಾದನೀಯವಾಗಿದೆ.

ಮೂರುವರೆ ಕೋಟಿ ಜನಸಂಖ್ಯೆ ಇರುವ ನೆರೆಯ ಕೇರಳ ರಾಜ್ಯ ಸರಕಾರ ಕೊರೊನಾ ವಿರುದ್ಧ ಹೋರಾಡಲು ಇಪ್ಪತ್ತು ಸಾವಿರ ಕೋಟಿ ಬಿಡುಗಡೆಗೊಳಿಸಿದೆ.

ಮಾತ್ರವಲ್ಲದೆ ಇಪ್ಪತ್ತು ರೂಪಾಯಿಗೆ ಆಹಾರ, ಎಪಿಎಲ್, ಬಿಪಿಎಲ್ ಜನರಿಗೆ ಒಂದು ತಿಂಗಳ ಉಚಿತ ಪಡಿತರ ವ್ಯವಸ್ಥೆಯನ್ನು ಪೂರೈಕೆ ಮಾಡಲು ವ್ಯವಸ್ಥೆ ಕಲ್ಪಿಸಿರುವುದು ಸ್ವಾಗತಾರ್ಹವಾಗಿದೆ ಮತ್ತು ಇಡೀ ದೇಶಕ್ಕೆ ಮಾದರಿಯಾಗಿದೆ.

ಆದರೆ 135 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಇಡೀ ದೇಶಕ್ಕೆ ಮೋದಿ ಸರಕಾರ ಬಿಡುಗಡೆಗೊಳಿಸಿರುವುದು ಕೇವಲ ಹದಿನೈದು ಸಾವಿರ ಕೋಟಿ ಮಾತ್ರ.

ಇದರಲ್ಲಿ ಕೂಡ ದೈನಂದಿನ ಕೆಲಸ ಮಾಡಿ ದಿನದೂಡುವ ಬಡವರ ಬಗ್ಗೆ, ನಿರಾಶ್ರಿತರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಯಾವುದೇ ಯೋಜನೆ ಕೈಗೊಳ್ಳಲಿಲ್ಲ ಹಾಗೂ ಕರ್ನಾಟಕ ಸರ್ಕಾರ ಕೂಡ ಅಧಿವೇಶನದಲ್ಲಿ ಇಂತಹವರಿಗೆ ಯಾವುದೇ ವಿಶೇಷ ಯೋಜನೆ ರೂಪಿಸದೇ ಇರುವುದು ವಿಷಾದನೀಯವಾಗಿದೆ. ಆದ್ದರಿಂದ ಕೂಡಲೇ ಅದಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳಬೇಕಾಗಿದೆ‌.

ಪ್ರಧಾನಿ ನರೇಂದ್ರ ಮೋದಿ 21 ದಿನಗಳ ರಾಷ್ಟ್ರೀಯ ಲಾಕ್ ಡೌನ್ ಹೇರಿದ 12 ಗಂಟೆಯ ಒಳಗೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ರಾಮ ವಿಗ್ರಹ ಸ್ಥಳಾಂತರ ಆಚರಣೆಯಲ್ಲಿ ಭಾಗವಹಿಸಿ ತನ್ನದೇ ಸರಕಾರ ಹೇರಿದ ಲಾಕ್ ಡೌನ್ ನ್ನು ಉಲ್ಲಂಘಿಸಿರುವುದು ಖಂಡನೀಯವಾಗಿದೆ.

ಹಾಗಾದರೆ ಈ ಲಾಕ್ ಡೌನ್ ದುಡಿದು ತಿನ್ನುವ  ಸಾಮಾನ್ಯ ಜನರಿಗೆ ಮಾತ್ರವಾ ಎಂದು ಪ್ರಶ್ನಿಸುವಂತಾಗಿದೆ.

ಅದೇ ರೀತಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ಈ ವೈರಸ್ ಹರಡಲು ನಿರ್ದಿಷ್ಟ ಸಮುದಾಯವೇ ಕಾರಣವೆಂದು ಆರೋಪಿಸಿ ಸಾಮಾಜಿಕ ಜಾಲಾತಾಣದಲ್ಲಿ ಕೋಮು ಪ್ರಚೋದನಕಾರಿಯಾಗಿ ಪೋಸ್ಟ್ ಹಾಕಿ ಸಮಾಜದ ಸ್ವಾಸ್ಥ್ಯ ಕೆಡವಲು ಪ್ರಯತ್ನ ಪಡುವವರ ವಿರುದ್ಧ ಪೋಲಿಸ್ ಇಲಾಖೆ ಸರಕಾರ ಮತ್ತು ಜಿಲ್ಲಾಡಳಿತಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಅದೇ ರೀತಿ ಈ ಅಪಾಯಕಾರಿ ವೈರಸ್ ನ್ನು ಹೋಗಲಾಡಿಸಲು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರುವುದರಿಂದ ಲಾಕ್ ಡೌನ್ ನ್ನು ಎಲ್ಲರೂ ಪಾಲಿಸಿ ಇದರ ವಿರುದ್ಧ ಹೋರಾಡಲು ಜಿಲ್ಲಾಡಳಿತ ಮತ್ತು ಸರಕಾರ ಗಳೊಂದಿಗೆ ಕೈಜೋಡಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯಾದ್ಯಕ್ಷೆ ಶಾಹಿದಾ ತಸ್ನೀಂ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

- Advertisment -

RECENT NEWS

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ ಮಂಗಳೂರು: ಸದ್ಯ ಕೊರೊನಾ ವೈರಸ್ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಗಡಿ ಸಮಸ್ಯೆ ತಾರಕಕ್ಕೇರಿದ್ದು, ಇದೀಗ ಈ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ...

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ ಮಂಗಳೂರು: ಎಮ್ ರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ ಉದಾರ ದಾನವಾಗಿ...

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..!

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..! ಮಂಗಳೂರು : ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ...

ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ಬೀದರ್: ಬೀದರ್‌ನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ 11 ಮಂದಿಯೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಾಗಿದ್ದಾರೆ. ಬೀದರ್‌ನಿಂದ ದೆಹಲಿಗೆ ತೆರಳಿದ್ದ...