ಬೆಳ್ತಂಗಡಿ: ಮಹಿಳೆಯ ಮೃತದೇಹ ಪತ್ತೆ- ಪತಿಯ ಹಲ್ಲೆಯಿಂದ ಕೊನೆಯುಸಿರು ಶಂಕೆ

ಬೆಳ್ತಂಗಡಿ: ಮನೆಯಲ್ಲಿ ಮಹಿಳೆಯೋರ್ವಳ ಮೃತದೇಹ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ನಡೆದಿದೆ. ಪತಿಯ ಹಲ್ಲೆಯಿಂದ ಮಹಿಳೆ ಮೃತಪಟ್ಟಿದ್ದಾಳೆಂದು ಶಂಕಿಸಲಾಗಿದೆ. ಗಣೇಶ ಎಂಬವರ ಪತ್ನಿ ಮೋಹಿನಿ (35ವ) ಮೃತಪಟ್ಟ ಮಹಿಳೆ. ಘಟನೆ ವಿವರ ಆ.30ರಂದು ಬೆಳಿಗ್ಗೆ 11 ಗಂಟೆಗೆ ಪತಿ ಹಾಗೂ ಪತ್ನಿಯ ನಡುವೆ ಜಗಳ ನಡೆದಿದ್ದು ಪತಿಯಿಂದ ಹಲ್ಲೆಗೊಳಗಾಗಿ ಮೋಹಿನಿಯವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರೆಳಿ ಪರಿಶೀಲನೆ ನಡೆಸುತ್ತಿದ್ದಾರೆ.