ಸೀರೆ ಅಂದ್ರೆ ಹೆಣ್ಣು ಮಕ್ಕಳ ಅಂದವನ್ನು ಮತ್ತಷ್ಟು ಸುಂದರಗೊಳಿಸುವ ಒಂದು ಅದ್ಭುತ ಧಿರಿಸು. ಮಟ್ಟಸವಾಗಿ ಸೀರೆಯುಟ್ಟುಕೊಂಡು, ನೆರಿಗೆಯ ಅಂಚನ್ನು ಕಾಲಿಂದ ಒದೆಯುತ್ತಾ ನಡೆದುಕೊಂಡು ಅವರು ಬಂದರೆ ಸೌಂದರ್ಯವೆಂಬ ಸೌಂದರ್ಯದ ಪದಕ್ಕೂ ಒಂದು ಕ್ಷಣ ಹೊಟ್ಟೆಕಿಚ್ಚಾಗುವ ಸಮಯವದು.
ಸೀರೆ ಹೆಣ್ಣು ಮಕ್ಕಳಿಗೆ ಎಷ್ಟು ಚೆಂದವೋ ಅಷ್ಟೇ ಹೆಣ್ಣು ಮಕ್ಕಳಿಗೆ ಸೀರೆಯೆಂದರೆ ಒಂದು ವ್ಯಾಮೋಹ. ಹಲವು ಬಗೆಯ ಸೀರೆಗಳನ್ನು ತಮ್ಮ ಅಲ್ಮೇರಾದಟ್ಟರೂ ಕೂಡ ಮತ್ಯಾವುದೋ ಡಿಸೈನ್ ಟ್ರೆಂಡಿಂಗ್ ಬಂದರೆ ಸಾಕು ಅದರತ್ತ ಅವರ ಕಣ್ಣುಗಳು ಹರಿಯುತ್ತವೆ. ಹೊಸ ಹೊಸ ಡಿಸೈನ್ಗಳು ಅವರ ಕಣ್ಮನ ಸೆಳೆಯುತ್ತವೆ. ಆದ್ರೆ ಇಲ್ಲೊಬ್ಬ ಯುವತಿ ಜಗತ್ತಿನ ಎಲ್ಲಾ ಸಾರಿ ಡಿಸೈನ್ಗಳಿಗೂ ಸೆಡ್ಡು ಹೊಡೆಯುವಂತಾ ಸಾರಿಯನ್ನು ತಯಾರಿಸಿದ್ದಾಳೆ.ಅದಕ್ಕೆ ಆಕೆ ತೆಗೆದುಕೊಂಡ ಸಮಯ ಕೇವಲ 4 ಗಂಟೆ ಮಾತ್ರ.
ಪಾರ್ವತಿಯೆಂಬ ಯುವತಿ ನ್ಯೂಸ್ ಪೇಪರ್ಗಳಿಂದ ಸಾರಿ ತಯಾರಿಸಿ ದೊಡ್ಡ ಸುದ್ದಿಯಾಗಿದ್ದಾರೆ. ಹಲವಾರು ನ್ಯೂಸ್ ಪೇಪರ್ಗಳನ್ನು ಒಟ್ಟು ಮಾಡಿ ತಾವೇ ಡಿಸೈನ್ ಮಾಡಿ ಈ ಒಂದು ಸಾರಿಯನ್ನು ರೆಡಿ ಮಾಡಿದ್ದಲ್ಲದೇ, ತಾವೇ ಉಟ್ಟುಕೊಂಡು ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಅವರ ಈ ಒಂದು ಸಾರಿ ಡಿಸೈನ್ ಸಖತ್ ವೈರಲ್ ಆಗಿದೆ.
ಪಾರ್ವತಿ ಮೊದಲಿನಿಂದಲೂ ಆರ್ಟ್ ವರ್ಕ್ಶಾಪ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುತ್ತಾರೆ. ತಮ್ಮ ಕ್ರೀಯಾಶೀಲತೆಯನ್ನು ಮೆರೆಯುತ್ತಾರೆ. ಸದ್ಯ ನ್ಯೂಸ್ ಪೇಪರ್ ಮೂಲಕ ಸಾರಿ ಸಿದ್ಧಗೊಳಿಸಿದ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕೇವಲ ಈ ಸಾರಿಯನ್ನುಟ್ಟುಕೊಂಡು ಪೋಸ್ ಮಾತ್ರ ಕೊಟ್ಟಿಲ್ಲ. ಈ ವಿಡಿಯೋದಲ್ಲಿ ಸಾರಿ ಹೇಗೆ ತಯಾರಿಸಬಹುದು ಎಂಬ ಬಗ್ಗೆ ಬೇರೆಯವರಿಗೆ ಮಾಹಿತಿಯನ್ನು ಕೂಡ ಕೊಟ್ಟಿದ್ದಾರೆ ಪಾರ್ವತಿ.
ಪಾರ್ವತಿ ಮಾಡಿದ ಸಾರಿ ಹಾಗೂ ಉಟ್ಟುಕೊಂಡು ಕ್ಯಾಮರಾಗೆ ಪೋಸ್ಟ್ ಕೊಟ್ಟ ವಿಡಿಯೋದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅದರ ಜೊತೆಗೆ ಪಾರ್ವತಿಯ ಕೌಶಲ್ಯವನ್ನು ಕೂಡ ಜನರು ಹಾಡಿ ಹೋಗಳುತ್ತಿದ್ದಾರೆ.
ಎಡಪದವು : ಶ್ರೀ ಅಯ್ಯಪ್ಪ ಮಂದಿರ , ಶ್ರೀರಾಮಾನಗರ ಎಡಪದವು ಇಲ್ಲಿನ ಅಯ್ಯಪ್ಪ ವೃತಾಧಾರಿಗಳ ಇರುಮುಡಿ ಕಟ್ಟುವ ಕಾರ್ಯ ಭಾನುವಾರ(ಡಿ.5) ನಡೆಯಿತು.
ಬೆಳಿಗ್ಗೆ ಗುರುಸ್ವಾಮಿಗಳ ಮಾರ್ಗದರ್ಶನದಲ್ಲಿ ಅಯ್ಯಪ್ಪ ಮಲಾಧಾರಿಗಳ ಇರುಮುಡಿ ಕಟ್ಟುವಿಕೆ ನಡೆಯಿತು. ಜೊತೆಗೆ ಭಜನಾ ತಂಡ ಹಾಗೂ ಸ್ಥಳೀಯರಿಂದ ಭಜನಾ ಸಂಕೀರ್ತನೆ ನೆರವೇರಿತು. ಬಳಿಕ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರುಗಿತು. ಸಾವಿರಾರು ಭಕ್ತಾಭಿಮಾನಿಗಳು ಪ್ರಸನ್ನ ಕಾಲದಲ್ಲಿ ಪಾಲ್ಗೊಂಡಿದ್ದರು.
ಸುಮಾರು 30 ವರ್ಷಗಳಿಂದ ಅಯ್ಯಪ್ಪ ಮಂದಿರ ಶ್ರೀ ರಾಮನಗರದಲ್ಲಿ ಭಕ್ತರು ಮಾಲೆ ಧರಿಸುತ್ತಾ ಬರುತ್ತಿರುವುದು ವಿಶೇ಼ವೇ ಸರಿ. ಈ ಬಾರಿ 54 ಜನ ಅಯ್ಯಪ್ಪ ಭಕ್ತರು ಮಾಲೆ ಧರಿಸಿ, ಸ್ರದ್ಧಾ ನಿಷ್ಠೆಯಿಂದ ವೃತಾಚಣೆ ಮಾಡಿ ಶಬರಿಮಲೆ ಯಾತ್ರೆಗೆ ತೆರಳಿದ್ದಾರೆ.
ಸಂಜೆ 4.30 ರ ಸುಮಾರಿಗೆ ಅಯ್ಯಪ್ಪ ಸ್ವಾಮಿ ಪೂಜೆ ನೆರವೇರಿದ್ದು, ಅದಾದ ಬಳಿಕ ವೃತಾಧಾರಿಗಳು ಕಟ್ಟು ಹೊತ್ತು ಶಬರಿಮಲೆ ಯಾತ್ರೆಗೆ ತೆರಳಿದರು.
ಮಂಗಳೂರು : ತನ್ನ ಛಲ, ಹಠ ಮತ್ತು ಕಠಿಣ ಪರಿಶ್ರಮದ ಮೂಲಕ ಎನ್ ಸಿಸಿಯ ಪ್ಯಾರ ಜಂಪಿಂಗ್ ಪರೀಕ್ಷೆಯಲ್ಲಿ ಕುಮಾರಿ ಪ್ರತಿಕ್ಷಾ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಈ ಸಾಧನೆ ಮೆರೆದ ದಕ್ಷಿಣ-ಕನ್ನಡ ಜಿಲ್ಲೆಯ ಪ್ರಪ್ರಥಮ ಗ್ರಾಮೀಣ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾರೆ.
ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ಬೊಳಿಯದ ಪ್ರೇಮ ಪೂಜಾರಿ ಹಾಗೂ ಪ್ರಕಾಶ್ ಪೂಜಾರಿಯವರ ಮಗಳು, ಮೂಡಬಿದ್ರಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪ್ರತಿಕ್ಷಾ 2024ರ ನವೆಂಬರ್ 1 ರಿಂದ 25ರವೆರೆಗೆ ಉತ್ತರ ಪ್ರದೇಶದ ಆಗ್ರಾದ ಎಎಟಿಸಿ( Army Airborne Training Centre)ಯಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ಯಾರ ಜಂಪ್ ಕ್ಯಾಂಪ್ (All India Parajump Camp) ನ್ನು ಯಶಸ್ವಿಯಾಗಿ ಮುಗಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ. ಮಂಗಳೂರು ತಾಲೂಕು ಕೊಳವೂರು ಗ್ರಾಮದ ಬೊಳಿಯ ಸರಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿ ವರೆಗೆ ವ್ಯಾಸಂಗ ಮಾಡಿದ ಬಳಿಕ ಕಾರ್ಕಳದ ಕೊಳಕ್ಕೆ ಇರ್ವತ್ತೂರು ಮೈಂದೊಟ್ಟುವಿನಲ್ಲಿ ವಾಸವಾಗಿದ್ದಾರೆ.
ಸತತ ಪರಿಶ್ರಮದ ಫಲ :
ದೇಶದಾದ್ಯಂತ 20 ಲಕ್ಷಕ್ಕೂ ಅಧಿಕ ಎನ್ ಸಿಸಿ ಕೆಡೆಟ್ ಗಳಲ್ಲಿ ಆಯ್ಕೆಯಾಗಿದ್ದ 100 ಕೆಡೆಟ್ ಗಳ ಪೈಕಿ ಕರ್ನಾಟಕ – ಗೋವಾ ಡೈರೆಕ್ಟರೇಟ್ ವ್ಯಾಪ್ತಿಯ ಮಂಗಳೂರು ಎನ್ ಸಿಸಿ 6ನೇ (ಕಾರ್) KAR ಏರ್ ಸ್ಕ್ಯಾಡ್ರೆನ್ ನ ಆಳ್ವಾಸ್ ಕಾಲೇಜಿನ ಎನ್ ಸಿಸಿ ಯಿಂದ ತರಬೇತಿಗೆ ಆಯ್ಕೆಯಾದ ಪ್ರತೀಕ್ಷಾ ಮೂರು ಪ್ಯಾರಾ ಜಂಪ್ ಗಳನ್ನು ಯಶಸ್ವಿಯಾಗಿ ಪೂರೈಸಿದವರು. ಪ್ರತಿದಿನ ರನ್ನಿಂಗ್, ಪುಶ್ ಅಪ್, ಫುಲ್ಲಪ್ ಸೇರಿದಂತೆ ಸತತ ಪರಿಶ್ರಮ, ಕಠಿಣ ತರಬೇತಿ ಮತ್ತು ದೈಹಿಕ ಕ್ಷಮತೆಯನ್ನು ಬಯಸುವ ಪ್ಯಾರಾ ಜಂಪ್ ಸುಲಭದ ಕೆಲಸವಲ್ಲ.
ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿಯನ್ನು ನೀಡಿದ ಬಳಿಕ ಕೆಡೆಟ್ ಗಳ ಎತ್ತರದ ಭಯವನ್ನು ನಿವಾರಿಸಲು ಹಲವು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕನಿಷ್ಠ 30 ಅಡಿ ಎತ್ತರದಿಂದ ಪ್ರಾರಂಭವಾಗುವ ಹಂತ ಹಂತದ ಪರೀಕ್ಷೆಗಳ ಬಳಿಕ 1250 ಅಡಿ ಎತ್ತರದಿಂದ ಪ್ಯಾರಾ ಜಂಪಿಂಗ್ ಪರೀಕ್ಷೆ ನಡೆಸಲಾಗುತ್ತದೆ. ಹೀಗೆ ವಿವಿಧ ಹಂತದ ಪರೀಕ್ಷೆಗಳನ್ನು ಎದುರಿಸಿ, ಮೂರು ಪ್ಯಾರಾ ಜಂಪ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ ಹೆಮ್ಮೆ ಪ್ರತೀಕ್ಷಾ ಅವರದು.
ಇದನ್ನೂ ಓದಿ :
ಸೇನೆಗೆ ಸೇರುವ ಆಸೆ :
ಬಾಲ್ಯದಿಂದಲೇ ಸೇನೆಗೆ ಸೇರಬೇಕು ಎಂಬ ಅಸೆ ಚಿಗುರಿದ್ದು ಪ್ರತೀಕ್ಷಾ ಅವರ ಅಣ್ಣ ಪ್ರಜ್ವಲ್ ಅವರಿಂದ. ಪ್ರಜ್ವಲ್ ಪೂಜಾರಿಯವರು ಸೈನಿಕನಾಗಿದ್ದು ಅವರೇ ನನಗೆ ಸ್ಫೂರ್ತಿ ಎನ್ನುತ್ತಾರೆ ಪ್ರತೀಕ್ಷಾ. ಪ್ಯಾರಾ ಜಂಪ್ ಪರೀಕ್ಷೆ ತೇರ್ಗಡೆಯಾಗಿರುವುದು ಪ್ರತೀಕ್ಷಾ ಅವರಿಗೆ ವಾಯುಪಡೆಗೆ ಸೇರಲು ಸಹಕಾರಿಯಾಗಿದೆ. ಅಲ್ಲದೇ ಯಾವುದೇ ಸರಕಾರಿ ಉದ್ಯೋಗಕ್ಕೆ ಆಯ್ಕೆ ಸಂದರ್ಭ ಪ್ಯಾರಾ ಜಂಪ್ ನ ವಿಶೇಷ ಅಂಕಗಳು ಪರಿಗಣನೆಗೆ ಬರುತ್ತವೆ.
ಆರ್ಥಿಕವಾಗಿ ಸದೃಢವಲ್ಲದ ಕುಟುಂಬದ, ಕುಳವೂರಿನ ಅಪ್ಪಟ ಗ್ರಾಮೀಣ ಬಾಲೆಯ ಈ ಸಾಧನೆಗೆ ಗ್ರಾಮಸ್ಥರಿಂದ ಸಂತಸ ವ್ಯಕ್ತವಾಗಿದೆ.
ಮಂಗಳೂರು/ ಗುಜರಾತ್ : 16 ವರ್ಷದ ಹುಡುಗನೊಬ್ಬ 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಗುಜರಾತ್‌ನ ಅರಾವಳಿ ಜಿಲ್ಲೆಯ ಧನ್ಸೂರಾ ಗ್ರಾಮದ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ತನ್ನ ತಾಯಿಯ ಸ್ಮಾರ್ಟ್ ಫೋನ್ ಬಳಸುತ್ತಿದ್ದ ಬಾಲಕಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 16 ವರ್ಷದ ಯುವಕನೊಬ್ಬನ ಪರಿಚಯವಾಗಿದೆ. ಇಬ್ಬರೂ ಚಾಟಿಂಗ್ ಮಾಡುತ್ತಿದ್ದು, ಫೋನ್ ನಂಬರ್ ಹಂಚಿಕೊಂಡು ಮಾತನಾಡುತ್ತಿದ್ದರು ಎಂಬುದಾಗಿ ವಿಚಾರಣೆ ವೇಳೆ ಪೋಷಕರು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮತ್ತು ಆಕೆಯ ಮತ್ತೋರ್ವ ಅಪ್ರಾಪ್ತ ಸಹೋದರಿ ಇನ್‌ಸ್ಟಾಗ್ರಾಮ್‌ನಲ್ಲಿ 7 ಖಾತೆಗಳನ್ನು ತೆರೆದಿದ್ದು, 2 ಅಕೌಂಟ್‌ನಲ್ಲಿ ಸಕ್ರೀಯವಾಗಿದ್ದರು ಎಂಬುದ ಕೂಡಾ ಗೊತ್ತಾಗಿದೆ.
ಬಾಲಕಿಯ ಜೊತೆ ಚಾಟಿಂಗ್ ಮಾಡಿ ಫೋನ್ ಕೂಡಾ ಮಾಡುತ್ತಿದ್ದ ಹುಡುಗ ಮನೆಯವರಿಗೆ ತಿಳಿಯದಂತೆ ಆಕೆಯನ್ನು ಕರೆದೊಯ್ದಿದ್ದಾನೆ. ಬಾಲಕಿ ನಾಪತ್ತೆ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಮನೆಯವರು ನೀಡಿದ ಮಾಹಿತಿ ಆದರಿಸಿ ಹುಡುಕಾಟ ನಡೆಸಿ ಬಾಲಕಿಯನ್ನು ಪತ್ತೆ ಹಚ್ಚಲಾಗಿದೆ. ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ ಬಾಲಕಿಯ ಅತ್ಯಾಚಾರ ನಡೆದಿರುವುದು ಆಕೆಯ ಹೇಳಿಕೆಯಿಂದ ಗೊತ್ತಾಗಿದೆ.
ಇಬ್ಬರೂ ಅಪ್ರಾಪ್ತರಾಗಿದ್ದು , ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಾಲಕನನ್ನು ಬಾಲ ನ್ಯಾಯ ಮಂಡಳಿಗೆ ಹಸ್ತಾಂತರ ಮಾಡಲಾಗಿದ್ದು, ಬಾಲಪರಾಧ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.