Connect with us

LATEST NEWS

ಬಸ್ ನಿಂದ ತಲೆ ಹೊರ ಹಾಕಿದ ಮಹಿಳೆ, ಲಾರಿ ಡಿಕ್ಕಿಯಾಗಿ ರುಂಡ ಕಟ್!

Published

on

ಚಾಮರಾಜನಗರ: ಚಾಮರಾಜನಗರದಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದ್ದು ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸಿದ ಮಹಿಳೆಯರುಗಳು ಅಚಾನಕ್ಕಾಗಿ ಬಸ್ಸಿನ ಕಿಟ್ಟಿ ಹೊರಗಡೆ ತಲೆ ಹಾಕಿದ್ದಾಳೆ. ಈ ವೇಳೆ ಪಕ್ಕದಲ್ಲಿ ವೇಗವಾಗಿ ಬಂದಂತಹ ಲಾರಿ ಒಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯ ದೇಹದಿಂದ ರುಂಡ ಕಟ್ ಆಗಿ ಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ನಂಜನಗೂಡು ಕಡೆಗೆ ಹೊರಟ್ಟಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಅಚಾನಕ್ ಆಗಿ ತಮ್ಮ ತಲೆಯನ್ನು ಕಿಟಕಿಯಿಂದ ಹೊರ ಹಾಕಿದ್ದ ವೇಳೆ ಮುಂಭಾಗದಿಂದ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆಯ ದೇಹದಿಂದ ರುಂಡ ಬೇರ್ಪಟ್ಟಿದೆ.

ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತಲೆ ಪೀಸ್ ಆಗಿದೆ. ಬಸ್ ಕಿಟಕಿಯಿಂದ ತಲೆ ಆಚೆ ಹಾಕಿದರಿಂದ ಈ ವೇಳೆ ವೇಗವಾಗಿ ಬಂದಂತಹ ಗೂಡ್ಸ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯ ತಲೆ ಕಟ್ ಆಗಿದೆ. ಮೃತರನ್ನು ಹಾಲಹಳ್ಳಿ ನಿವಾಸಿ ಶಿವಲಿಂಗಮ್ಮ (58) ಎಂದು ತಿಳಿದುಬಂದಿದ್ದು, ಸ್ಥಳದಲ್ಲಿ ಅವರು ಸಾವನ್ನಪ್ಪಿದ್ದಾರೆ.ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ತಾಲೂಕಿನ ಪೊಲೀಸರು ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ಕೋಟೆಕಾರು ಬ್ಯಾಂಕ್‌ ದರೋಡೆ ಕೇಸ್; ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ಕಮಿಷನರ್ 

Published

on

ಮಂಗಳೂರು: ಮಂಗಳೂರು ಪೊಲೀಸರು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ನಲ್ಲಿ ನಡೆದ ದರೋಡೆ ಕೇಸ್‌ ಅನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ದರೋಡೆ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಸಂಚಲನ ರೂಪಿಸಿತ್ತು. ಸುಮಾರು 14 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಬೇಧಿಸಿದ ಪೊಲೀಸರ ಸಾಹಸ ಮೆಚ್ಚುವಂತದ್ದಾಗಿದೆ. ಈ ದರೋಡೆಯನ್ನು ಮಾಡಲು 6 ತಿಂಗಳಿನಿಂದ ದರೋಡೆಕೋರರು ಪ್ಲಾನ್ ಮಾಡಿದ್ದರು.

ದರೋಡೆ ಮಾಡಿದ ಮುರುಗಂಡಿ ಥೇವರ್ ಹಾಗೂ ಯೊಸುವಾ ರಾಜೇಂದ್ರನ್ ಫಿಯಟ್ ಕಾರಿನಲ್ಲಿ ತಲಪಾಡಿ ಗೇಟಿನಿಂದ ಕೇರಳ ಕಡೆಗೆ ಪರಾರಿಯಾಗಿದ್ದರು. ಈ ತಂಡ ತಮಿಳುನಾಡಿಗೆ ಪರಾರಿಯಾಗಲು ಯೋಚಿಸಿದ್ದರೆ, ಉಳಿದ 4 ಆರೋಪಿಗಳು ಮಂಗಳೂರು ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ಮೂವರು ಆಟೋ ಮೂಲಕ ಹಾಗೂ ಒಬ್ಬ ಬಸ್ಸಿನಲ್ಲಿ ಪ್ರಯಾಣಿಸಿ ಎಸ್ಕೇಪ್ ಆಗಿದ್ದಾರೆ. ಬ್ಯಾಂಕಿನಿಂದ ದರೋಡೆ ಮಾಡಿದ ಚಿನ್ನವನ್ನು ಮುಂಬೈನ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ಲಾನ್ ಮಾಡಿದ್ದರು.

ಸಹಕಾರಿ ಬ್ಯಾಂಕಿನಿಂದ 2,265 ಬಳೆ, ಓಲೆ, ಸರ ಸೇರಿ ಇತರೆ ಚಿನ್ನಾಭರಣಗಳನ್ನು ದೋಚಿದ್ದರು. ಪೊಲೀಸರು ತನಿಖೆಯನ್ನು ಮಾಡುವ ವೇಳೆ ಚಿನ್ನದ ರಾಶಿಯನ್ನು ಕಂಡು ದಂಗಾಗಿದ್ದಾರೆ. ದರೋಡೆಕೋರರು 4 ಬ್ಯಾಗ್​ನಲ್ಲಿ 14 ಕೋಟಿ ಮೌಲ್ಯದ 18.314 ಕೆ.ಜಿಯ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಕೃತ್ಯಕ್ಕೆ ಬಳಸಿರುವ ಫಿಯಟ್ ಕಾರು, 2 ಮಚ್ಚುಗಳು, 2 ಪಿಸ್ತೂಲು, 3 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಬಂಧಿತರಿಂದ 3.80 ಲಕ್ಷ ನಗದು ವಶಕ್ಕೆ ತೆಗೆದುಕೊಂಡಿದ್ದಾರೆ.

ಜ.17 ರಂದು ಈ ಘಟನೆ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿ ಮುಂಬೈಯ ಪದ್ಮನೇರಿ ಗ್ರಾಮದ ಮುರುಗುಂಡಿ ಥೇವರ್ (36), ದೊಂಬಿವಲಿ ವೆಸ್ಟ್‌ನ ಯೊಸುವಾ ರಾಜೇಂದ್ರನ್ (35), ಕಣ್ಣನ್ ಮಣಿ, ಷಣ್ಣುಗ ಸುಂದರಂ ಎಂಬುವರನ್ನು ಅರೆಸ್ಟ್ ಮಾಡಿದ್ದೇವೆ ಎಂದು ಕಮಿಷನರ್ ಅನುಪಮ್ ಅಗರ್ವಾಲ್ ಮಾತನಾಡಿದ್ದಾರೆ.

Continue Reading

LATEST NEWS

ಉಡುಪಿ : ಪ್ರತಿಷ್ಠಿತ ವಸತಿ ಶಾಲೆಗೆ ಬಾಂ*ಬ್ ಬೆ*ದರಿಕೆ ಇಮೇಲ್

Published

on

ಉಡುಪಿ : ಉಡುಪಿಯ ಪ್ರತಿಷ್ಠಿತ ಶಾಲೆಗೆ ಇಂದು(ಜ.27) ಬಾಂ*ಬ್ ಬೆ*ದರಿಕೆ ಇಮೇಲ್ ಬಂದಿದೆ.  ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ ಗೆ ಇಮೇಲ್ ಮೂಲಕ ಬೆದ*ರಿಕೆ ಹಾಕಲಾಗಿದೆ. ದೇಶದ ನಕ್ಸಲ್ ಚಟುವಟಿಕೆ ಹಾಗೂ ಭ*ಯೋತ್ಪಾದಕ ವಿಚಾರಗಳನ್ನು ಇಮೇಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.  ಅಫ್ಜಲ್ ಗುರು ಗಲ್ಲು ಸೇರಿದಂತೆ ಅನೇಕ ವಿಚಾರಗಳನ್ನು ಹಾಗೂ  ತಮಿಳುನಾಡಿನ ಅಣ್ಣ ವಿವಿಯ ಪ್ರೊಫೆಸರ್ ಚಿತ್ರಕಲಾ ಗೋಪಾಲನ್ ಘಟನೆ ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಇದು ನಮ್ಮ ಕೊನೆಯ ಕಾರ್ಯಾಚರಣೆ.. ಟ್ವಿನ್ ಡ್ ಪೈಪ್ IED ಬ್ಲಾಸ್ಟ್ ಮಾಡುತ್ತೇವೆ. ಈ ಬ್ಲಾಸ್ಟ್ ಮೂಲಕ ನಾವು ಸ್ವರ್ಗ ಪಡೆಯುತ್ತೇವೆ. ಈ ಕಾರ್ಯಾಚರಣೆಯ ನಂತರ ಹಿಂದೂ ಹೆಸರುಗಳು ಅಳಿಯಲಿವೆ ಎಂದು ಮೇಲ್‌ನಲ್ಲಿ ಬರೆಯಲಾಗಿದೆ. ಕೊನೆಯಲ್ಲಿ ಅಲ್ಲಾಹು ಅಕ್ಬರ್ ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ತಕ್ಷಣ ಶಾಲೆಯ ಆಡಳಿತ ಮಂಡಳಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.  ಶಾಲೆಯಲ್ಲಿ ಬೀಡು ಬಿಟ್ಟಿರುವ ಉಡುಪಿ ಜಿಲ್ಲಾ ಪೊಲೀಸರು, ಶ್ವಾನದಳ ಬಳಸಿಕೊಂಡು ಶಾಲೆಯಾದ್ಯಂತ ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

LATEST NEWS

ತಾಯಿಗೆ ತಕ್ಕ ಮಗ ; ಜೊತೆಯಾಗಿ ರಾಷ್ಟ್ರಪತಿ ಪುರಸ್ಕಾರ ಪಡೆದ ಸಾಧನಾ, ತರುಣ್

Published

on

ಮಂಗಳೂರು/ನವದೆಹಲಿ : ಲೆಫ್ಟಿನೆಂಟ್ ಜನರಲ್ ಸಾಧನಾ ಎಸ್. ನಾಯರ್ ಈಗಾಗಲೇ ವಿಎಸ್ಎಂ (ವಿಶಿಷ್ಠ ಸೇವಾ ಪದಕ)ಗೆ ಭಾಜನರಾಗಿದ್ದು, ಈ ಬಾರಿ ಅವರ ಅತ್ಯುತ್ತಮ ನಾಯಕತ್ವ ಮತ್ತು ಸೈನ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ 76ನೇ ಗಣರಾಜ್ಯೋತ್ಸವದ ಹಿನ್ನಲೆ, ದೆಹಲಿಯಲ್ಲಿ ನಡೆದ ಕರ್ತವ್ಯಪಥದಲ್ಲಿ ಅತಿ ವಿಶಿಷ್ಟ ಸೇವಾ ಪದಕ (ಎವಿಎಸ್ಎಂ) ನೀಡಿ ಗೌರವಿಸಲಾಯಿತು. ಜೊತೆಗೆ ಇದೇ ವೇಳೆ ಅವರ ಮಗ, ಸ್ಕ್ವಾಡ್ರನ್ ಲೀಡರ್ ತರುಣ್ ನಾಯರ್ ಅವರಿಗೆ ಭಾರತೀಯ ವಾಯುಪಡೆಯಲ್ಲಿನ ಅಸಾಧಾರಣ ಶೌರ್ಯಕ್ಕಾಗಿ ವಾಯು ಸೇನಾ ಪದಕ (ಶೌರ್ಯ) ನೀಡಿ ಗೌರವಿಸಲಾಯಿತು. ಭಾರತೀಯ ಸಶಸ್ತ್ರ ಪಡೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ತಾಯಿ ಮಗ ಇಬ್ಬರು ಒಂದೇ ದಿನ ಒಂದೇ ವರ್ಷ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಾಯಿ ಮಗನ ಈ ಸಾಧನೆ ದೇಶ ಸೇವೆ ಹಾಗೂ ದೇಶಕ್ಕಾಗಿ ಅವರ ಕುಟುಂಬದ ಸಮರ್ಪಣೆ ನಿಷ್ಠೆಯನ್ನು ತೋರಿಸುತ್ತಿದೆ.

ಲೆಫ್ಟಿನೆಂಟ್ ಜನರಲ್ ಸಾಧನಾ ನಾಯರ್ :

ಲೆಫ್ಟಿನೆಂಟ್ ಜನರಲ್ ಸಾಧನಾ ಸಕ್ಸೇನಾ ನಾಯರ್ ಅವರು ಆಗಸ್ಟ್ 1, 2024 ರಂದು ಡೈರೆಕ್ಟರ್ ಜನರಲ್ ಮೆಡಿಕಲ್ ಸರ್ವೀಸಸ್ (ಸೈನ್ಯ) ಆಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳೊಂದಿಗೆ ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಮತ್ತು ಪರಮಾಣು (CBRN) ಯುದ್ಧ ಮತ್ತು ಸ್ವಿಸ್ ಸಶಸ್ತ್ರ ಪಡೆಗಳೊಂದಿಗೆ ಮಿಲಿಟರಿ ವೈದ್ಯಕೀಯ ನೀತಿಶಾಸ್ತ್ರದಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಮಿಲಿಟರಿ ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಆಯ್ಕೆ ಮಾಡಿಕೊಳ್ಳಲು ಬಯಸುವ ಹಾಗೂ ಸಶಸ್ತ್ರ ಪಡೆಗಳಲ್ಲಿ ಕೆಲಸ ನಿರ್ವಹಿಸಲು ಬಯಸುವ ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದು, ಇದೇ ಕಾರಣಕ್ಕೆ ಅವರಿಗೆ ವಿಶಿಷ್ಟ ಸೇವಾ ಪದಕವನ್ನು ನೀಡಲಾಗುತ್ತಿದೆ.

 

ಇದನ್ನೂ ಓದಿ : ಶಕ್ತಿ ವಿದ್ಯಾಸಂಸ್ಥೆಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ

 

ಸ್ಕ್ವಾಡ್ರನ್ ಲೀಡರ್ ತರುಣ್ ನಾಯರ್ :

ಲೆಫ್ಟಿನೆಂಟ್ ಜನರಲ್ ಸಾಧನಾ ಸಕ್ಸೇನಾ ನಾಯರ್ ಅವರ ಪುತ್ರನೂ ಆಗಿರುವ ಸ್ಕ್ವಾಡ್ರನ್ ಲೀಡರ್ ತರುಣ್ ನಾಯರ್ ಅವರು ವಾಯುಪಡೆಯ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ತರುಣ್ ಜೂನ್ 16, 2018 ರಂದು ವಾಯುಪಡೆಗೆ ನಿಯೋಜನೆಗೊಂಡಿದ್ದಾರೆ.

ಇದೊಂದು ಅಪರೂಪದ ಮತ್ತು ಸ್ಪೂರ್ತಿದಾಯಕ ಸಾಧನೆಯು ರಾಷ್ಟ್ರದ ಬಗೆಗಿನ ಅವರ ಪ್ರೀತಿ ಬದ್ಧತೆ ಮತ್ತು ಅವರ ಕ್ಷೇತ್ರಗಳಲ್ಲಿನ ತ್ಯಾಗ ಮತ್ತು ಶ್ರೇಷ್ಠತೆಯ ಮೌಲ್ಯಗಳನ್ನು ಒತ್ತಿ ಹೇಳುತ್ತದೆ. ಲೆಫ್ಟಿನೆಂಟ್ ಜನರಲ್ ಸಾಧನಾ ನಾಯರ್ ಅವರ ವೃತ್ತಿಜೀವನವು ಸೇನಾ ಕಾರ್ಯಾಚರಣೆಯ ಸಿದ್ಧತೆ ಮತ್ತು ಕಲ್ಯಾಣ ಉಪಕ್ರಮಗಳ ಮೇಲಿನ ಅವರ ಅಚಲ ಗಮನವನ್ನು ಪ್ರತಿಬಿಂಬಿಸಿದರೆ, ಸ್ಕ್ವಾಡ್ರನ್ ಲೀಡರ್ ತರುಣ್ ನಾಯರ್ ಅವರ ಶೌರ್ಯವು ಭಾರತೀಯ ವಾಯುಪಡೆಯ ಧೈರ್ಯ ಮತ್ತು ಕೌಶಲ್ಯವನ್ನು ಸಾಕಾರಗೊಳಿಸುತ್ತದೆ.

Continue Reading

LATEST NEWS

Trending

Exit mobile version