Thursday, February 2, 2023

ಪ್ರೆಗ್ನೆಂಟ್ ಆಗಿದಕ್ಕೆ ಮಹಿಳೆ ಕೆಲಸದಿಂದ ವಜಾ-15 ಲಕ್ಷ ಪರಿಹಾರ ನೀಡುವಂತೆ ಕಂಪೆನಿಗೆ ಕೋರ್ಟ್ ಆದೇಶ

ಅಮೆರಿಕ: ಪ್ರೆಗ್ನೆಂಟ್ ಆದ ಕಾರಣಕ್ಕೆ ಕಂಪೆನಿಯೊಂದು ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.


ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದದ್ದಕ್ಕೆ ಆಕೆಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಮೆರಿಕದ ಉದ್ಯೋಗ ನ್ಯಾಯಮಂಡಳಿಯು ಸಂಸ್ಥೆಗೆ ಆದೇಶಿಸಿದೆ.

ಚಾರ್ಲೊಟ್ ಲೀಚ್ (34) ಎಂಬ ಮಹಿಳೆ ಸಂಸ್ಥೆಯೊಂದರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಗರ್ಭಿಣಿಯಾಗಿದ್ದಕ್ಕೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಆಕೆ ತುಂಬಾ ಬೇಸರಗೊಂಡಿದ್ದರು.

ಹೆರಿಗೆಯ ನಂತರವೂ ಕಂಪೆನಿಯ ಕೆಲಸಕ್ಕೆ ಏನೂ ಲೋಪ ಬಾರದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಕೈ ಮುಗಿದರೂ ಕಂಪೆನಿ ಕೇಳಿರಲಿಲ್ಲ. ಹೀಗಾಗಿ ಅವರು ಕಂಪೆನಿ ವಿರುದ್ದ ಕೋರ್ಟ್ ಮೊರೆ ಹೋಗಿದ್ದರು.

ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಆಕೆ ಒಪ್ಪಂದಕ್ಕೆ ಸಹಿ ಹಾಕದ ಕಾರಣ ಹೆರಿಗೆ ರಜೆ ನೀಡಲಾಗುವುದಿಲ್ಲ ಎಂಬುದಾಗಿ ಕಂಪೆನಿ ಹೇಳಿತ್ತು. ಆದರೆ ಕಂಪೆನಿಯ ಈ ವಾದವನ್ನು ಕೋರ್ಟ್ ಒಪ್ಪಿರಲಿಲ್ಲ.

ಅಲ್ಲದೆ ಕಂಪೆನಿಯು ಆಕೆಗೆ 14,885 ಪೌಂಡ್‌ಗಳನ್ನು (ಸುಮಾರು 15 ಲಕ್ಷ ರೂಪಾಯಿ) ಪರಿಹಾರ ನೀಡಬೇಕೆಂಬ ಆದೇಶ ನೀಡಲಾಯಿತು.

ಕೆಲಸದಿಂದ ವಜಾಗೊಳಿಸುವ ಕಾರಣಕ್ಕೆ ಚಾರ್ಲೊಟ್ ಈ ಹಿಂದೆಯೂ ಹಲವು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದರು ಎಂದೂ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here

Hot Topics

ಬೆಂಗಳೂರು: ಕಾರಿನ ಮೇಲೆ ನಿಯಂತ್ರಣ ತಪ್ಪಿ ಬಿದ್ದ ರೆಡಿಮಿಕ್ಸ್ ಟ್ರಕ್ : ತಾಯಿ ಮಗಳ ದುರ್ಮರಣ.!

ಬೆಂಗಳೂರು ಬನ್ನೇರುಘಟ್ಟ ಸಮೀಪದ ಬ್ಯಾಲಮರದ ದೊಡ್ಡಿ ಬಳಿ ನಿಯಂತ್ರಣ ತಪ್ಪಿ ಕಾಂಕ್ರಿಟ್ ಮಿಕ್ಸರ್ ಲಾರಿಯೊಂದು ಕಾರಿ ಮೇಲೆ ಉರುಳಿ ಬಿದ್ದಿದ್ದು ಕಾರಿನಲ್ಲಿದ್ದ ತಾಯಿ ಮಗಳು ಮೃತಪಟ್ಟಿದ್ದಾರೆ.ಬೆಂಗಳೂರು : ಕಾಂಕ್ರಿಟ್ ರೆಡಿ ಮಿಕ್ಸ್ ಲಾರಿಯೊಂದು...

ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕೆ ವಿಹೆಚ್‌ಪಿ ಲೀಡರ್ ಶರಣ್ ಪಂಪ್‌ವೆಲ್ ವಿರುದ್ಧ ಎಫ್‌ಐಆರ್..!

ಬಜರಂಗದಳ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ವಿಹೆಚ್‌ಪಿ ಪ್ರಾಂತ್ಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ವಿರುದ್ಧ ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.‌ತುಮಕೂರು : ಬಜರಂಗದಳ ಶೌರ್ಯ...

ಪುತ್ತೂರು ಕಂಬಳದಲ್ಲಿ ನಟಿಯೊಂದಿಗೆ ಅಸಭ್ಯ ವರ್ತನೆ ಆರೋಪಕ್ಕೆ ದೇವರ ಮೊರೆ ಹೋದ ಸಮಿತಿ – “ಮಹಾಲಿಂಗೇಶ್ವರನ ಮಣ್ಣಿನಲ್ಲಾದ ಘಟನೆ ದೇವರೇ ನೋಡಿಕೊಳ್ಳಲಿ”..!

ಪುತ್ತೂರು: ಪುತ್ತೂರಿನಲ್ಲಿ ಜ.28ರ ಕಂಬಳದಲ್ಲಿ ನಡೆದಿದೆ ಎನ್ನಲಾದ ಅಸಭ್ಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದ ಕಂಬಳ ಸಮಿತಿಯವರು ಶ್ರೀ ಮಹಾಲಿಂಗೇಶ್ವರ ದೇವರ ಮೊರೆ ಹೋಗಿದ್ದು, ದೇವರ ನಡೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಏಕಾದಶ ರುದ್ರ...