Monday, January 24, 2022

ಮಕ್ಕಳ ದಿನಾಚರಣೆಯಂದೇ ಕೊಡಗಿನಲ್ಲೊಂದು ದುರಂತ : ಮೂವರು ಮಕ್ಕಳೊಂದಿಗೆ ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ..!

ಮಕ್ಕಳ ದಿನಾಚರಣೆಯಂದೇ ಕೊಡಗಿನಲ್ಲೊಂದು ದುರಂತ : ಮೂವರು ಮಕ್ಕಳೊಂದಿಗೆ ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ..!

ಮಡಿಕೇರಿ : ಮಕ್ಕಳ ದಿನಾಚರಣೆಯಂದೇ ಕೊಡಗಿನ ಕುಶಾಲನಗರದಲ್ಲೊಂದು ದುರಂತ ಘಟನೆ ನಡೆದಿದೆ. ಕುಶಾಲನಗರದ ಸಮೀಪ ತೊರೆನೂರು ಬಳಿ ಇರುವ ಹಾರಂಗಿ ಎಡದಂಡೆ ನಾಲೆಗೆ ತನ್ನ ಮೂವರು ಮಕ್ಕಳೊಡನೆ ಹಾರಿ ತಾಯಿ ಆತ್ಮಹತ್ಯೆ ಮಡಿಕೊಂಡಿದ್ದಾಳೆ.

ಕೌಟುಂಬಿಕ ಕಲಹ ಈ ಅನಾಹುತಕ್ಕೆ ಕಾರಣವೆನ್ನಲಾಗಿದ್ದು ಮೃತರನ್ನು ಚಿತ್ರದುರ್ಗ ಮೂಲದ ವಿನಯ್, ವಿಜಯ್ ಹಾಗೂ ದೀಕ್ಷಾ ಹಾಗೂ ಅವರ ತಾಯಿ ಚೆನ್ನಮ್ಮ(28) ಎಂದು ಗುರುತಿಸಲಾಗಿದೆ.

ಕೂಲಿ ಕೆಲಸಕ್ಕಾಗಿ ಚಿತ್ರದುರ್ಗದಿಂದ ಆಗಮಿಸಿದ್ದ ಇವರು ಗದ್ದೆಯಲ್ಲಿ ಶುಂಠಿ ಕಟಾವಿನ ಕೆಲಸದಲ್ಲಿ ತೊಡಗಿದ್ದರು.

ಇಂದು ಬೆಳಿಗ್ಗೆ ಚೆನ್ನಮ್ಮ ತನ್ನ ಮೂವರು ಮಕ್ಕಳೊಡನೆ ನಾಲೆಗೆ ಹಾರಿದ್ದಾಳೆ.

ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hot Topics

ಸುಳ್ಯ: ಅಂಗಡಿಗೆ ಬಂದ ಗ್ರಾಹಕನಿಗೆ ಮಾಲಕನಿಂದ ಹಲ್ಲೆ- ದೂರು ದಾಖಲು

ಸುಳ್ಯ: ಬೆಳ್ಳಿಯ ಚೈನಿಗೆ ಲೇಪನ ಮಾಡಲು ಬಂದ ಗ್ರಾಹಕನೊಬ್ಬನಿಗೆ ಅಂಗಡಿ ಮಾಲಕನೇ ಕಬ್ಬಿಣದ ಪೈಪಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಸುಳ್ಯದಲ್ಲಿ ನಿನ್ನೆ ನಡೆದಿದೆ.ಗಾಯಗೊಂಡ ಗ್ರಾಹಕರನ್ನು ಗೋಪಾಲ ಶೇಟ್ ಕೆ (47) ಎಂದು ಗುರುತಿಸಲಾಗಿದೆ. ಗೋಪಾಲ...

ಕಿನ್ನಿಗೋಳಿ ಶಾಂಭವಿ ನದಿಯಲ್ಲಿನ ಅಕ್ರಮ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳ ದಾಳಿ..!

ಮಂಗಳೂರು : ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಮಂಗಳೂರು ಗಣಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಇಲ್ಲಿನ ಶಾಂಭವಿ ನದಿಯಲ್ಲಿ ಕಳೆದ ಹಲವು ವರ್ಷಗಳಿಂದ ರಾತ್ರಿ ಹಗಲೆನ್ನದೆ...

“ಪೂಜಾರಿಯವರನ್ನು ನಡು ನೀರಲ್ಲಿ ಕೈ ಬಿಟ್ಟು ಓಡಿಹೋದ ಮಹಾನುಭಾವ”

ಮಂಗಳೂರು: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ನಡು ನೀರಲ್ಲಿ ಕೈ ಬಿಟ್ಟು ಓಡಿಹೋದ ಮಹಾನುಭಾವ. ಈ ಸಮಾಜದ ಯುವಕರನ್ನು ಪೂಜಾರಿಯವರಿಂದ ದೂರ ಮಾಡಿದ ಶ್ರೇಯಸ್ಸು ಯಾರಿಗಿದೆ ಎಂದರೆ ಅದೇ ಮಹಾನುಭಾವನಿಗೆ ಎಂದು...