Monday, July 4, 2022

ಪಕ್ಕದ್ಮನೆ ಆಂಟಿಯ ಬ್ಯೂಟಿಗೆ ಫಿದಾ: ರೇಪ್‌ಗೆ ಯತ್ನಿಸಿ ಕೊಲೆ- ಕ್ಲೂ ಕೊಟ್ಟ ಚಪ್ಪಲಿ

ಮುಂಬೈ: ಪಕ್ಕದ ಮನೆಯ ಆಂಟಿಯ ಅಂದಚೆಂದಕ್ಕೆ ಸೋತ ಯುವಕನೊಬ್ಬ ಆಕೆಯನ್ನು ರೇಪ್‌ ಮಾಡಲು ಯತ್ನಿಸಿ, ಆಕೆಯನ್ನು ಕೊಲೆಗೈದು ಸೋಫಾದಡಿ ತುಂಬಿಟ್ಟ ಘಟನೆ ಮುಂಬೈನ ದೊಂಬಿವಾಲಿಯ ಡೇವಿಡ್​ಗೌನ್​ ನಡೆದಿದೆ.
ಬಂಧಿತ ಯುವಕನನ್ನು ವಿಶಾಲ್​ ಘಾವತ್​ ಮತ್ತು ಕೊಲೆಯಾದ ಮಹಿಳೆಯನ್ನು ಸುಪ್ರಿಯಾ ಕಿಶೋರ್​ ಶಿಂಧೆ ಎಂದು ಗುರುತಿಸಲಾಗಿದೆ.


ಘಟನೆ ಹಿನ್ನೆಲೆ
ಆರೋಪಿ ವಿಶಾಲ್​ ಮೃತ ಮಹಿಳೆಯ ಪಕ್ಕದ ಮನೆಯ ನಿವಾಸಿ.

ಇಬ್ಬರೂ ಪರಸ್ಪರ ಪರಿಚಿತರಾಗಿದ್ದರು. ಸುಪ್ರಿಯಾ ನೋಡಲು ಅಂದವಾಗಿದ್ದಳು. ಇದು ವಿಶಾಲ್​ ಕಣ್ಣು ಕುಕ್ಕುವಂತೆ ಮಾಡಿತ್ತು. ಆಕೆಯ ಚಲನವಲನದ ಮೇಲೆ ಕಣ್ಣಿದ್ದ ಈತ, ಆಕೆಯ ಫ್ರೆಂಡ್‌ಶಿಪ್‌ ಸಹ ಬೆಳೆಸಿದ್ದ.

ಅದರಂತೆ ಫೆ. 15ರಂದು ಮಧ್ಯಾಹ್ನ 1.30ರ ಸುಮಾರಿಗೆ ಮನೆಯಲ್ಲಿ ಸುಪ್ರಿಯಾ ಒಬ್ಬಳೇ ಇರುವುದನ್ನು ನೋಡಿದ ವಿಶಾಲ್​ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆತನನ್ನು ವಿರೋಧಿಸಿ ಕೂಗುತ್ತಾ ಬಾಗಿಲ ಬಳಿಗೆ ಆಕೆ ಓಡುವುದನ್ನು ನೋಡಿದ ವಿಶಾಲ್​, ಕೂದಲನ್ನು ಹಿಡಿದೆಳೆದು ಆಯುಧದಿಂದ ಆಕೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ.

ಬಳಿಕ ನೈಲಾನ್​ ಹಗ್ಗದಿಂದ ಆಕೆಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಸೋಫಾ ಕಂ ಬೆಡ್​ ಒಳಗೆ ತುಂಬಿಟ್ಟು ಮನೆಯ ಬಾಗಿಲು ಮುಚ್ಚಿ ಸುಮ್ಮನೇ ಬಂದಿದ್ದಾನೆ.


ಸುಪ್ರಿಯಾ ಪತಿ ಮನೆಗೆ ಬಂದಾಗ ಆಕೆ ಕಾಣದಿದ್ದನ್ನು ನೋಡಿ ಹುಡುಕಾಡಿದ್ದಾನೆ. ಎಲ್ಲಿಯೂ ಪತ್ತೆಯಾಗದಿದ್ದಾಗ ತಮ್ಮ ವ್ಯಾಪ್ತಿಯ ಪೊಲೀಸ್​ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದಾನೆ.

ನಾಪತ್ತೆ ದೂರು ದಾಖಲಿಸುವಾಗ ಸುಪ್ರಿಯಾ ಪತಿಯ ಜತೆಯಲ್ಲೇ ಆರೋಪಿ ವಿಶಾಲ್​ ಕೂಡ ಜತೆಗೆ ಬಂದಿದ್ದ. ತನಗೇನು ಗೊತ್ತೇ ಇಲ್ಲ ಎಂಬಂತೆ ನಟನೆ ಮಾಡಿದ್ದ.

ಇದಾದ ಬಳಿಕ ಸುಪ್ರಿಯಾ ಪತಿ ಮತ್ತು ಮಗ ಮನೆಯಲ್ಲಿ ಇರುವಾಗ ಸೋಫಾ ಕಂ ಬೆಡ್​ ಏರುಪೇರಾಗಿರುವುದನ್ನು ಗಮನಿಸಿದ್ದಾರೆ.

ಅದನ್ನು ಸರಿಪಡಿಸಲು ಹೋಗಿ ನೋಡಿದಾಗ ಆಕೆಯ ಮೃತದೇಹ ಅದರೊಳಗೆ ಇರುವುದು ಗೊತ್ತಾಗಿದೆ.

ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಕೊಲೆಯ ತನಿಖೆ ನಡೆಸಿದ ಪೊಲೀಸರು ಅಕ್ಕಪಕ್ಕದ ಮನೆಯವರ ವಿಚಾರಣೆ ನಡೆಸಿದಾಗ ಸುಪ್ರಿಯಾ ಮನೆಯ ಹೊರಭಾಗದಲ್ಲಿ ಚಪ್ಪಲಿಯನ್ನು ನೋಡಿದ್ದಾಗಿ ಹೇಳಿದರು.

ಅಲ್ಲದೆ, ಯಾವ ರೀತಿಯ ಚಪ್ಪಲಿ ಎಂಬುದನ್ನು ಸಹ ವಿವರಿಸಿದ್ದರು. ಇದನ್ನು ಕೇಳಿ ಸುಪ್ರಿಯಾ ಪತಿ ಆ ಚಪ್ಪಲಿಗಳು ವಿಶಾಲ್​ನದ್ದು ಎಂದು ಗುರುತಿಸಿದ್ದರು.

ಅನೇಕ ಸಂದರ್ಭದಲ್ಲಿ ಅದೇ ರೀತಿಯ ಚಪ್ಪಲಿಯನ್ನು ಧರಿಸಿ ವಿಶಾಲ್​ ಸುಪ್ರಿಯಾ ಮನೆಗೆ ಬಂದಿದ್ದ.

LEAVE A REPLY

Please enter your comment!
Please enter your name here

Hot Topics

ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಲ್ಲಿದ್ದ ಡೆಡ್‌ ಬಾಡಿ ಎರಡು ದಿನಗಳ ಬಳಿಕ ಪತ್ತೆ

ಉಡುಪಿ: ಎರಡು ದಿನಗಳ ಹಿಂದೆ ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಿಂದ ನಾಪತ್ತೆಯಾದ ಓರ್ವನ ಶವ ಇಂದು ಬೈಂದೂರಿನ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ.ಮೃತನನ್ನು ರೋಶನ್ ಆಚಾರ್ಯ ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ...

ಮಂಗಳೂರು ಬಂದರಿಗೆ ಶ್ರೀಲಂಕಾದ MSC ಅರ್ಮೀನಿಯಾ ಹಡಗು ಆಗಮನ

ಮಂಗಳೂರು: ನವಮಂಗಳೂರು ಬಂದರಿನ 14ನೇ ಬರ್ತ್‌ಗೆ ನಿನ್ನೆ ಸಾಯಂಕಾಲ ಮುಖ್ಯ ಕಂಟೇನರ್ ಹಡಗು ಶ್ರೀಲಂಕಾದಿಂದ ಎಂಎಸ್‌ಸಿ ಅರ್ಮೀನಿಯಾ ಆಗಮಿಸಿದ್ದು, ಜಲಫಿರಂಗಿಯ ಮೂಲಕ ಸ್ವಾಗತಿಸಲಾಯಿತು.ಇದರೊಂದಿಗೆ ಎನ್‌ಎಂಪಿಎ ಹೊಸದೊಂದು ಮೈಲಿಗಲ್ಲು ಸಾಧಿಸಿದೆ. 276.5 ಮೀಟರ್ ಉದ್ದ...

ಉಡುಪಿ: ನಿಯಂತ್ರಣ ತಪ್ಪಿ ಮನೆಯ ಮೇಲೆ ಉರುಳಿದ ಕಂಟೈನರ್ ಲಾರಿ

ಉಡುಪಿ: ಗೋವಾ ಕಡೆಗೆ ರದ್ದಿ ಪೇಪರ್‌ ತುಂಬಿಕೊಂಡು ಹೊರಟ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಶನಿವಾರ ರಾತ್ರಿ ಉಡುಪಿ ಮಣಿಪಾಲದ ಕೆಳಪರ್ಕಳದಲ್ಲಿ ನಡೆದಿದೆ.ಪರ್ಕಳದಿಂದ ಗೋವಾದ ಕಡೆಗೆ ಹೋಗುತ್ತಿದ್ದ...