Thursday, August 11, 2022

ಬಂಟ್ವಾಳ: ಬಿಸಿ ನೀರು ಕಾಯಿಸುತ್ತಿದ್ದಾಗ ಸೀರೆಗೆ ಬೆಂಕಿ ತಗುಲಿ ಮಹಿಳೆ ಮೃತ್ಯು

ಬಂಟ್ವಾಳ: ಸ್ನಾನಕ್ಕೆಂದು ಬಿಸಿ ನೀರು ಕಾಯಿಸುತ್ತಿದ್ದ ವೇಳೆ ಸೀರೆಗೆ ಬೆಂಕಿ ತಗುಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳದ ಅಮ್ಮುಂಜೆಯಲ್ಲಿ ನಡೆದಿದೆ.

ಬಂಟ್ವಾಳದ ಅಮ್ಮುಂಜೆ ನಿವಾಸಿ ರವೀಂದ್ರ ಅವರ ತಾಯಿ ಮೃತ ದುರ್ದೈವಿ.


ರವೀಂದ್ರ ಅವರು ತನ್ನ ತಾಯಿ ಜೊತೆಯಲ್ಲಿ ಮನೆಯಲ್ಲಿ ವಾಸವಾಗಿದ್ದು ಇವರು ಕೆಲಸಕ್ಕೆ ಹೋಗಿದ್ದ ಸಂದರ್ಭ ತಾಯಿ ಒಬ್ಬರೇ ಇದ್ದರು.

ಸಂಜೆ ವೇಳೆ ಸ್ನಾನಕ್ಕೆಂದು ಬಿಸಿ ನೀರು ಕಾಯಿಸುವ ಸಂದರ್ಭ ಒಲೆಗೆ ತೆಂಗಿನ ಗರಿಯಿಂದ ಬೆಂಕಿ ಮಾಡುತ್ತಿದ್ದು ಏಕಾಏಕಿ ಬೆಂಕಿ ಸೀರೆಗೆ ತಗುಲಿದಾಗ ಇವರು ಬೊಬ್ಬೆಯಿಟ್ಟಿದ್ದರು.

ಆಗ ನೆರೆಹೊರೆಯವರಾದ ಗಗನ್ ಮತ್ತು ಸವಿತಾ ಎಂಬವರು ಸಹಾಯಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಮಗ ರವೀಂದ್ರ ಅವರಿಗೆ ಕರೆ ಮಾಡಿ ಕೂಡಲೇ ತಾಯಿಯನ್ನು ಆಂಬ್ಯುಲೆನ್ಸ್ ನಲ್ಲಿ ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯರಾತ್ರಿ ಮಹಿಳೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ರಕ್ಷಾಬಂಧನ

ಮಂಗಳೂರು: ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿ ಇಂದು ರಕ್ಷಾಬಂಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರರವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು...

ಬೆಳ್ತಂಗಡಿ: ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು,ತೆಂಕಕಾರಂದೂರು ಇದರ ವತಿಯಿಂದ ನಡೆಯುವ 35 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್  ಬಳಂಜದಲ್ಲಿ ...

ಕೃಷಿಕರೇ ಗಮನಿಸಿ: ಕಿಸಾನ್ ಸಮ್ಮಾನ್ ನಿಧಿಯ ಪರಿಹಾರಕ್ಕಾಗಿ ಆ. 15 ರೊಳಗೆ ಇ-ಕೆವೈಸಿ ಕಡ್ಡಾಯ

ಮಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ನಾಗರಿಕರ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಅಥವಾhttp://pmkisan.gov.in ಪೋರ್ಟಲ್‌ನ ಫಾರ್ಮರ್ಸ್ ಕೋರ್ನರ್ ಮೂಲಕ ಆಧಾರ್ ಸಂಖ್ಯೆ ಹಾಗೂ ಮೊಬೈಲ್...