Thursday, August 11, 2022

ಗಂಡನಿಂದ ವರದಕ್ಷಿಣೆ ಕಿರುಕುಳ ವೀಡಿಯೋ ಮಾಡಿ ನೇಣಿಗೆ ಶರಣಾದ ಮಹಿಳೆ..!

ಬೆಂಗಳೂರು : ಗಂಡನ ವರದಕ್ಷಿಣೆ ಕಿರುಕುಳದ ಬಗ್ಗೆ ಮನನೊಂದು ವೀಡಿಯೋ ಮಾಡಿ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಬನಶಂಕರಿಯ ಕದಿರೇನಹಳ್ಳಿಯಲ್ಲಿ ನಡೆದಿದೆ.ದೀಪಿಕಾ ಎಂಬಾಕೆಯೇ ವೀಡಿಯೋ ಮಾಡಿ ಆತ್ಮಹತ್ಯೆಗೈದ ದುರ್ದೈವಿ. ಪತಿ ಜಯಕುಮಾರ್ ವಿರುದ್ಧ ದೀಪಿಕಾ ಕುಟುಂಬಸ್ಥರಿಂದ ದೂರು ದಾಖಲಾಗಿದೆ.

ದೀಪಿಕಾ ಪತಿ ಜಯಕುಮಾರ್ ವರದಕ್ಷಿಣೆಗಾಗಿ ಪತ್ನಿ ಮತ್ತು ಮಗುವಿಗೆ ಕಿರುಕುಳ ನೀಡುತ್ತಿದ್ದುದಾಗಿ ದೀಪಿಕಾ ಕುಟುಂಬಿಕರು ಆರೋಪಿಸಿದ್ದಾರೆ.

ಪತಿಯ ಕಿರುಕುಳ ತಾಳಲಾರದೆ ಮನನೊಂದು 4ವರ್ಷದ ಗಂಡು ಮಗುವಿನೊಂದಿಗೆ ತವರೂರಾದ ಅಜ್ಜಂಪುರಕ್ಕೆ ತೆರಳಿದ್ದರು.
ಮೊದಲು ಗಂಡು ಮಗು ಮೃತಪಟ್ಟಿದೆ ಬಳಿಕ ಪತಿ ಜಯಕುಮಾರ್ ವಿರುದ್ಧ ಅಜ್ಜಂಪುರ ಠಾಣೆಗೆ ದೀಪಿಕಾ ದೂರು ನೀಡಿದ್ದರು. ಆ ಬಳಿಕ ದೀಪಿಕಾ ತವರು ಮನೆಯಿಂದ ನಾಪತ್ತೆಯಾಗಿದ್ದಾರೆ.

ಈ ಕುರಿತು ದೀಪಿಕಾ ಕುಟುಂಬಿಕರು ತರೀಕೆರೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಇದೀಗ ಜಯಕುಮಾರ್ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೀಪಿಕಾ ಶವ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here

Hot Topics

ಕಾಲು ಜಾರಿ ಹೊಳೆಗೆ ಬಿದ್ದ ಸನ್ನಿಧಿಯ ಅಂತ್ಯಕ್ರಿಯೆ: ಮುಗಿಲು ಮುಟ್ಟಿದ ಕುಟುಂಬಸ್ಥರು-ಸ್ನೇಹಿತರ ಆಕ್ರಂದನ

ಬೈಂದೂರು: ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಬಾಲಕಿ ಸನ್ನಿಧಿ ಮೃತದೇಹ ಎರಡು ದಿನಗಳ ಬಳಿಕ ಪತ್ತೆಯಾಗಿದ್ದು, ಈಕೆ ಅಂತ್ಯ ಕ್ರಿಯೆಯನ್ನು ಮನೆ ಸಮೀಪದಲ್ಲೇ ನಿನ್ನೆ ನೆರವೇರಿಸಲಾಗಿದೆ. ಸರ್ಕಾರಿ‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ...

“ಬೆಳ್ತಂಗಡಿಯಲ್ಲಿ ಪೂಂಜಾ ಬಂದ್ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ”

ಬೆಳ್ತಂಗಡಿ: 'ನಮ್ಮ ತಾಲೂಕಿನಲ್ಲಿ ಹರೀಶ್ ಪೂಂಜಾನ 40 ಪರ್ಸೆಂಟ್ ವ್ಯವಹಾರ ನಡೆಯುತ್ತಿದೆ. ಬೆಳ್ತಂಗಡಿಯಲ್ಲಿ ಪೂಂಜಾ ಬಂದ ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ. ದ.ಕ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವೇಳೆ...

ತೊಕ್ಕೊಟ್ಟು ಕಾಪಿಕಾಡಿನಲ್ಲಿ ಬೈಕಿಗೆ ಕಾರು ಡಿಕ್ಕಿ : ಸವಾರರಿಗೆ ಗಾಯ – ಕಾರು ಕಮರಿಗೆ ..!

ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ66ರ ತೊಕ್ಕೊಟ್ಟು ಕಾಪಿಕಾಡ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್‍ಗೆ ಕಾರು ಡಿಕ್ಕಿ ಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದ್ದು ಕಾರು ಮತ್ತು ಬೈಕ್...