Tuesday, March 28, 2023

ಗಂಡನ ರುಂಡ ಕಡಿದು ದೇವಸ್ಥಾನದಲ್ಲಿಟ್ಟ ಪತ್ನಿ

ಖೋವಾಯಿ: ಮಹಿಳೆಯೊಬ್ಬಳು ತನ್ನ ಗಂಡನ ತಲೆಯನ್ನು ಕಡಿದು, ಅದನ್ನು ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಕಟ್ಟಿಕೊಂಡು ಸೀದಾ ತಮ್ಮ ಕುಟುಂಬದ ಕುಲದೇವರ ದೇವಸ್ಥಾನದಲ್ಲಿಟ್ಟು ಬಂದ ಘಟನೆ ತ್ರಿಪುರಾದ ಖೋವಾಯಿ ಜಿಲ್ಲೆಯಲ್ಲಿ ನಡೆದಿದೆ.

ಮೃತನನ್ನು 50 ವರ್ಷದ ರವೀಂದ್ರ ತಂತಿ ಎಂದು ಗುರುತಿಸಲಾಗಿದೆ.
ದಿನಗೂಲಿ ನೌಕರನಾಗಿದ್ದ ರವೀಂದ್ರ ಶುಕ್ರವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಅಚ್ಚರಿ ಕಾದಿತ್ತು. ಯಾವತ್ತೂ ಮಾಂಸಾಹಾರ ಸೇವಿಸದ ಪತ್ನಿಯು ಚಿಕನ್‌ ಅಡುಗೆ ಮಾಡಿದ್ದಳು.

ಅದನ್ನೇ ಸೇವಿಸಿದ ಆಕೆಯು ಎಲ್ಲರೊಂದಿಗೆ ರಾತ್ರಿ ಮಲಗಿದ್ದಳು. ಬೆಳಗ್ಗೆ ಮಕ್ಕಳು ಎದ್ದಾಗ ರಕ್ತದ ಮಡುವಿನಲ್ಲಿ ತಾಯಿ ನಿಂತಿರುವುದನ್ನು ಕಂಡು ಗಾಬರಿಯಾಗಿದ್ದಾರೆ.


ತಂದೆಯನ್ನು ಹುಡುಕಾಡಿದಾಗ ರುಂಡವಿಲ್ಲದ ಶರೀರ ಮಾತ್ರ ಕಂಡಿದೆ. ಕೂಡಲೇ ಅಕ್ಕಪಕ್ಕದವರಿಗೆ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ತಪಾಸಣೆ ನಡೆಸಿದಾಗ ರವೀಂದ್ರ ಅವರ ರುಂಡವು ಸಮೀಪದ ದೇವಸ್ಥಾನದಲ್ಲಿ ಪತ್ತೆಯಾಗಿದೆ.

ತನ್ನ ತಾಯಿಗೆ ಕೆಲ ದಿನಗಳಿಂದ ಮಾನಸಿಕ ಕಾಯಿಲೆ ಇದ್ದು, ಆಕೆ ಇತ್ತೀಚೆಗೆ ತಾಂತ್ರಿಕರ ಬಳಿ ಹೋಗಿ ಬರುತ್ತಿದ್ದಳು. ತನಗೂ ಮಾನಸಿಕ ಅಸ್ವಸ್ಥತೆ ಇದೆ ಎಂದು ಮೃತ ರವೀಂದ್ರ ಅವರ ಹಿರಿಯ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ

LEAVE A REPLY

Please enter your comment!
Please enter your name here

Hot Topics

ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ-20 ಉಮ್ರಾ ಯಾತ್ರಾರ್ಥಿಗಳ ದಾರುಣ ಮೃತ್ಯು..!

ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 20 ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ.ಜಿದ್ದಾ: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 20 ಉಮ್ರಾ...

ಕಾರ್ಕಳ : ಅನಾರೋಗ್ಯದಿಂದ ಸಾವನ್ನಪ್ಪಿದ ಮನೆ ಮಗನ ಆಘಾತದಿಂದ ತಾಯಿ ಜೀವಾಂತ್ಯ..!

ಮಗನನ್ನು ಕಳೆದುಕೊಂಡ ನೋವಿನಲ್ಲಿ ತಾಯಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಸೋಮವಾರ ನಡೆದಿದೆ.ಕಾರ್ಕಳ : ಮಗನನ್ನು ಕಳೆದುಕೊಂಡ ನೋವಿನಲ್ಲಿ ತಾಯಿಯೊಬ್ಬರು...

ಸೌದಿ ರಸ್ತೆ ಅಪಘಾತದಲ್ಲಿ ಉಸಿರು ಚೆಲ್ಲಿದ ಮಂಗಳೂರು ಮಲ್ಲೂರಿನ ಸುಲೇಮಾನ್..!

ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ತಾಲೂಕಿನ ಮಲ್ಲೂರು ನಿವಾಸಿ ಮೃತಪಟ್ಟಿದ್ದಾರೆ.ಮಂಗಳೂರು : ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ತಾಲೂಕಿನ ಮಲ್ಲೂರು...