Friday, July 1, 2022

ಉಳ್ಳಾಲ: ಪತ್ನಿಯನ್ನೇ ಕೊಲೆಗೈದ ಪಾಪಿ ಗಂಡ ಇದೀಗ ಪೊಲೀಸರ ಅತಿಥಿ..

ಉಳ್ಳಾಲ: ಮಹಿಳೆಯೋರ್ವರ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಂಪಲದ ಚೇತನ ನಗರ ನಿವಾಸಿ ಮಹಿಳೆಯ ಗಂಡ ಜೋಸೆಫ್ ಫ್ರಾನ್ಸಿಸ್ (54) ಬಂಧಿತ ಆರೋಪಿ. ಕೇರಳದ ಕೊಚ್ಚಿ ನಿವಾಸಿ ಜೋಸೆಫ್ ಎಂಬವರ ಪುತ್ರಿ ಶೈಮಾ(44) ಕೊಲೆಗೀಡಾದ ಮಹಿಳೆ.


ಮೇ.11 ರಂದು ದಂಪತಿ ನಡುವೆ ವಾಗ್ವಾದ ನಡೆದು, ಪತಿ ಜೋಸೆಫ್ ಬಲವಾದ ಆಯುಧದಿಂದ ಪತ್ನಿ ತಲೆಗೆ ಹೊಡೆದಿದ್ದರು.

ಇದರಿಂದ ಗಂಭೀರವಾಗಿ ಗಾಯಗೊಂಡ ಶೈಮಾ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶೈಮಾ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಿಂದ ಬಂದ ವರದಿಯಂತೆ ಉಳ್ಳಾಲ ಪೊಲೀಸರು ಆರಂಭದಲ್ಲಿ ಅನುಮಾನಾಸ್ಪದ ಪ್ರಕರಣ ದಾಖಲಿಸಿಕೊಂಡಿದ್ದರು.


ಬಳಿಕ ಆಸ್ಪತ್ರೆಯಲ್ಲಿ ನಡೆದ ಶವಮಹಜರು ಪರೀಕ್ಷೆಯಲ್ಲಿ ಮಹಿಳೆ ತಲೆಗೆ ಬಡಿದು ಕೊಲೆ ನಡೆಸಿರುವುದು ಸಾಬೀತಾಗಿದೆ.

ತಕ್ಷ ಣ ಉಳ್ಳಾಲ ಪೊಲೀಸರು ಆರೋಪಿ ಪತಿಯನ್ನು ವಿಚಾರಣೆ ನಡೆಸಿದಾಗ ಕೊಲೆಕೃತ್ಯ ಬಯಲಾಗಿದೆ.

ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಫ್ರೈಮರಿ ವಿದ್ಯಾರ್ಥಿಗಳಾಗಿದ್ದಾರೆ.
ಶವಮಹಜರು ಪರೀಕ್ಷೆಯಲ್ಲಿ ಕೂಡಾ ಮಹಿಳೆ ತಲೆಗೆ ಬಲವಾದ ಗಾಯವಾಗಿರುವ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ಎಂಬುದು ಸಾಬೀತಾಗಿದೆ.

ಪ್ರಕರಣ ಸಂಬಂಧಿಸಿ ಆರೋಪಿ ಪತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

 

LEAVE A REPLY

Please enter your comment!
Please enter your name here

Hot Topics

ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರಕಾರ: ಪುತ್ತೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಪುತ್ತೂರು: ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ಬಂಡಾಯ ಶಾಸಕರೊಂದಿಗೆ ಮೈತ್ರಿ ಸರಕಾರ ರಚನೆ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಕಛೇರಿಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ...

ಇಂದಿನಿಂದ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಬ್ಯಾನ್‌: ಬಳಸಿದ್ರೆ 5 ವರ್ಷ ಜೈಲು

ನವದೆಹಲಿ: 'ದೇಶದಲ್ಲಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧವು ಜುಲೈ 1 ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ. ಈ ಆದೇಶ ಮೀರಿ ಪ್ಲಾಸ್ಟಿಕ್‌ ಉತ್ಪಾದಿಸಿ ಅದನ್ನು ಸರಬರಾಜು ಮಾಡುವ ಮತ್ತು ದಾಸ್ತಾನು ಇಡುವುದು ಕಂಡುಬಂದರೆ ಅಂತಹ...

ಮಂಗಳೂರು: ಬಿರುವೆರ್ ಕುಡ್ಲ ದುಬೈ ಘಟಕದ ವತಿಯಿಂದ ನೆರವು ನಿಧಿ ವಿತರಣೆ

ಮಂಗಳೂರು: ಫ್ರೆಂಡ್ಸ್‌ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಇದರ ಸ್ಪಂದನ ತಂಡವು ಬಡ ವರ್ಗದ ಚಿಕಿತ್ಸೆಗಾಗಿ ಕಳೆದ ಹಲವಾರು ವರ್ಷಗಳಿ೦ದ ಮಾನವೀಯ ನೆಲೆಯಲ್ಲಿ ನೆರವು ನೀಡುತ್ತಾ ಬರುತ್ತಿರುವುದು ಇತರ ಸಂಘಟನೆಗಳಿಗೆ ಮಾದರಿ ಎಂದು...