ತುಮಕೂರು: ಗಂಡನ ಮೇಲೆ ಪೆಟ್ರೋಲ್ ಸುರಿದ ಪತ್ನಿ ಬೆಂಕಿಹಚ್ಚಿ ಕೊಂದು ಪತಿಯ ಶವವನ್ನ ಚರಂಡಿಗೆ ಬಿಸಾಡಿದ ಘಟನೆ ತುಮಕೂರು ನಗರದ ಬಡ್ಡಿಹಳ್ಳಿಯಲ್ಲಿ ಸಂಭವಿಸಿದೆ.
ನಾರಾಯಣ (52) ಮೃತ ದುರ್ದೈವಿ. ಇವನ ಪತ್ನಿ ಅನ್ನಪೂರ್ಣ ಕೊಲೆ ಆರೋಪಿ. ನಾರಾಯಣ ನೆಲಮಂಗಲ ಬಳಿಯ ಟೋಲ್ನಲ್ಲಿ ಕೆಲಸ ಮಾಡಿಕೊಂಡಿದ್ದ.
ಅನ್ನಪೂರ್ಣಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.
ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಪ್ರತಿನಿತ್ಯ ಜಗಳ ಆಗುತ್ತಲೇ ಇತ್ತಂತೆ.
ಇದೇ ವಿಚಾರಕ್ಕೆ ಗಂಡನನ್ನ ಮುಗಿಸಲು ಸ್ಕೆಚ್ ಹಾಕಿದ ಪತ್ನಿ, ಪೆಟ್ರೋಲ್ ಸುರಿದು ಕೊಲೆ ಮಾಡಿ ಶವವನ್ನ ಕಸದಂತೆ ಚರಂಡಿಗೆ ಹಾಕಿದ್ದಾಳೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.