Sunday, August 14, 2022

ರಾಮನಗರದಲ್ಲಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಕಿರಾತಕ ಪತಿ

ರಾಮನಗರ: ಪತ್ನಿಯ ಕುತ್ತಿಗೆಗೆ ದಾರ ಕಟ್ಟಿ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ ಘಟನೆ ರಾಮನಗರ ಸಮೀಪದ ರೆಹಮಾನ್ ಎಂಬ ನಗರದಲ್ಲಿ ನಡೆದಿದೆ.

ಮೊಬಿನಾ ಬಾನು (33) ಕೊಲೆಯಾದ ಮೃತ ದುರ್ದೈವಿ.


ಜಾಹಿರ್ ಪಾಷಾ (36) ಕೊಲೆ ಮಾಡಿದ ಆರೋಪಿಯಾಗಿದ್ದು ರಾತ್ರಿ ಪತ್ನಿಯನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ.
ಕಳೆದ ಒಂದು ವಾರದ ಹಿಂದಷ್ಟೇ ಇಬ್ಬರು ರಾಮನಗರದ ರೆಹಮಾನ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನದಿಂದ ಪ್ರತಿ ನಿತ್ಯ ಜಗಳವಾಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಜಾಹಿರ್ ಪಾಷಾ ಆಟೋ ಓಡಿಸುತ್ತಿದ್ದ.

ಪತಿ ಕಾಟಕ್ಕೆ ಬೇಸತ್ತು ತವರು ಊರಿನಲ್ಲಿ ಬಾಡಿಗೆ ಮನೆಗೆ ಮೊಬಿನಾ ಬಾನು ಬಂದಿದ್ದಳು.
ಇವರ ಸಾವಿನಿಂದ ಐವರು ಮಕ್ಕಳು ಅನಾಥರಾಗಿದ್ದಾರೆ. ಸ್ಥಳಕ್ಕೆ ರಾಮನಗರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಾಲ್‌ನಲ್ಲಿ ಸಾವರ್ಕರ್​ ಫೋಟೋ ಹಾಕಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆರೋಪಿ ಬಂಧನ

ಶಿವಮೊಗ್ಗ: ಸಿಟಿ ಸೆಂಟರ್ ಮಾಲ್​ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸಾವರ್ಕರ್​ ಫೋಟೋ ಹಾಕಿದ್ದನ್ನು ವಿರೋಧ ವ್ಯಕ್ತಪಡಿಸಿದ್ದ ಆಸೀಫ್​ನನ್ನು ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸದ್ಯ ನ್ಯಾಯಾಲಯ ಆ. 26ರವರೆಗೆ ಆಸೀಫ್​ನನ್ನು ನ್ಯಾಯಾಂಗ ಬಂಧನದಲ್ಲಿ...

ವಿಟ್ಲ: ‘ಪನೋಲಿಬೈಲ್ದ ಶ್ರೀ ಕಲ್ಲುರ್ಟಿ’ ತುಳುಭಕ್ತಿಗೀತೆ ರಿಲೀಸ್

ವಿಟ್ಲ: ಇತಿಹಾಸ ಪ್ರಸಿದ್ಧ ಪಣೋಲಿಬೈಲು ಕ್ಷೇತ್ರದ 'ಪನೋಲಿಬೈಲ್ದ ಶ್ರೀ ಕಲ್ಲುರ್ಟಿ' ಎಂಬ ತುಳುಭಕ್ತಿ ಗೀತೆ ' ಶನಿವಾರ ಪಣೋಲಿಬೈಲು ಕ್ಷೇತ್ರದಲ್ಲಿ ಅನಾವರಣಗೊಂಡಿತು.ಈ ಸಂದರ್ಭದಲ್ಲಿ ಕ್ಷೇತ್ರದ ಅನುವಂಶಿಕ ಅರ್ಚಕರಾದ ವಾಸುದೇವ ಮೂಲ್ಯ, ಅರ್ಚಕ ನಾರಾಯಣ...

ಕೋಟ್ಯಧಿಪತಿ ಉದ್ಯಮಿ ರಾಕೇಶ್ ಝುಂಝುನ್‌ವಾಲಾ ನಿಧನ

ಹೊಸದಿಲ್ಲಿ: ದೇಶದ ಖ್ಯಾತ ಹೂಡಿಕೆದಾರ, ಕೋಟ್ಯಧಿಪತಿ ಉದ್ಯಮಿ ರಾಕೇಶ್ ಝುಂಝುನ್‌ವಾಲಾ ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಮುಂಬಯಿಯ ಆಸ್ಪತ್ರೆಯೊಂದರಲ್ಲಿ ಅವರು ನಿಧನರಾಗಿದ್ದಾರೆ. ಅವರು ಈ ಹಿಂದೆ ತಮ್ಮ ಸಿಂಪಲ್‌...