Monday, July 4, 2022

ಪತ್ನಿಯನ್ನು ಲಾಡ್ಜ್‌ಗೆ ಕರೆದೊಯ್ದು ಕಾಲು ಕತ್ತರಿಸಿ, ತಾನೂ ಹೊಟ್ಟೆ ಕುಯ್ದುಕೊಂಡ ಗಂಡ

ತುಮಕೂರು: ಪತ್ನಿಯನ್ನು ಲಾಡ್ಜ್‌ಗೆ ಕರೆತಂದು ಆಕೆಯ ಕಾಲು ಕತ್ತರಿಸಿದ ಗಂಡ, ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡ ಘಟನೆ ತುಮಕೂರಿನ ಅಶೋಕ ಲಾಡ್ಜ್ ಅಂಡ್ ಹೋಟೆಲ್​ನಲ್ಲಿ ನಡೆದಿದೆ.

ಘಟನೆಯಲ್ಲಿ ಮಧುಗಿರಿ ಮೂಲದ ಅನಿತಾ ಎಂಬ ಮಹಿಳೆ ಗಾಯಗೊಂಡಿದ್ದು, ಪತಿ ಬಾಬುನನ್ನು (34) ಪೊಲೀಸರು ವಶಕ್ಕೆ ಪಡೆದಿದ್ದಾರೆ.


ನಾಲ್ಕು ವರ್ಷದ ಹಿಂದೆ ಬಾಬು ಅನಿತಾಳನ್ನು ಮದುವೆಯಾಗಿದ್ದ. ಇಂದು ಬೆಳಗ್ಗೆ 6 ಗಂಟೆ ಹೊತ್ತಿಗೆ ಅಶೋಕ ಲಾಡ್ಜ್​ಗೆ ಪತ್ನಿಯನ್ನು ಪತಿ ಕರೆತಂದಿದ್ದ.

ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಬರುವಾಗಲೇ ಪತಿ ಬ್ಯಾಗ್​ನಲ್ಲಿ ಬಾಬು ಮಚ್ಚು ತೆಗೆದುಕೊಂಡು ಬಂದಿದ್ದ. ಹೆಂಡತಿಯ ಕಾಲು ಕತ್ತರಿಸಿದ್ದಾನೆ.

ನಂತರ ಹೊಟೇಲ್‌ ರಿಸೆಪ್ಷನ್‌ಗೆ ಕಾಲ್‌ ಮಾಡಿ ನಾನು ಹೆಂಡತಿಯ ಕಾಲು ಕತ್ತರಿಸಿದ್ದೇನೆ, ಆಸ್ಪತ್ರೆಗೆ ಸೇರಿಸಬೇಕು ಅಂತ ಹೇಳಿದ್ದಾನೆ.

ಆಗ ರೂಂ ಬಾಯ್‌ ಓಡೋಡಿ ಬಂದಿದ್ದಾರೆ. ಬಾಗಿಲು ತೆಗೆದು ನೋಡಿದಾಗ ಆತ ಸ್ವತಃ ಹೊಟ್ಟೆಗೆ ಚೂರಿ ಇರಿದುಕೊಂಡಿದ್ದಾನೆ.

ಗಾಯಗೊಂಡ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಪಿ ತುಮಕೂರು ನಗರ ಪೊಲೀಸರ ವಶದಲ್ಲಿದ್ದು,

ಆತನನ್ನೂ ಪೊಲೀಸರ ವಶದಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು ಬಂದರಿಗೆ ಶ್ರೀಲಂಕಾದ MSC ಅರ್ಮೀನಿಯಾ ಹಡಗು ಆಗಮನ

ಮಂಗಳೂರು: ನವಮಂಗಳೂರು ಬಂದರಿನ 14ನೇ ಬರ್ತ್‌ಗೆ ನಿನ್ನೆ ಸಾಯಂಕಾಲ ಮುಖ್ಯ ಕಂಟೇನರ್ ಹಡಗು ಶ್ರೀಲಂಕಾದಿಂದ ಎಂಎಸ್‌ಸಿ ಅರ್ಮೀನಿಯಾ ಆಗಮಿಸಿದ್ದು, ಜಲಫಿರಂಗಿಯ ಮೂಲಕ ಸ್ವಾಗತಿಸಲಾಯಿತು.ಇದರೊಂದಿಗೆ ಎನ್‌ಎಂಪಿಎ ಹೊಸದೊಂದು ಮೈಲಿಗಲ್ಲು ಸಾಧಿಸಿದೆ. 276.5 ಮೀಟರ್ ಉದ್ದ...

ಕಾರ್ಕಳದಲ್ಲಿ ಅಕ್ರಮ ಗೋಸಾಗಾಟ: ಓರ್ವ ಪರಾರಿ-ಕಾರಿನಲ್ಲೇ ಅಸುನೀಗಿದ ದನ

ಕಾರ್ಕಳ: ಕಾರಿನಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಸಿನಿಮಾ ಶೈಲಿಯಲ್ಲಿ ಪೊಲೀಸರು ಚೇಸ್ ಮಾಡಿದ ಘಟನೆ ಕಾರ್ಕಳದ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.ಉಡುಪಿಯ ಮಲ್ಪೆ...

ಆಸ್ಟ್ರೇಲಿಯಾದಲ್ಲಿ ತುಳು ಕೂಟ ಸಿಡ್ನಿಯಿಂದ ಜು.17ರಂದು ‘ಆಟಿಡ್‌ ಒಂಜಿ ದಿನ’

ಸಿಡ್ನಿ: ತುಳುನಾಡಿನ ಸಾಂಪ್ರದಾಯಿಕ ತಿಂಡಿಗಳನ್ನು ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ತುಳುವರಿಗೆ ಉಣಬಡಿಸುವ ನಿಟ್ಟಿನಲ್ಲಿ 'ತುಳು ಕೂಟ ಸಿಡ್ನಿ'ಯು ಜು.17ರಂದು ಸಿಡ್ನಿಯಲ್ಲಿ 'ಆಟಿಡ್‌ ಒಂಜಿ ದಿನ' ಆಯೋಜಿಸಿದೆ.ಜು.17 ರಂದು ಮಧ್ಯಾಹ್ನ 12 ಗಂಟೆಗೆ ಈ ಕಾರ್ಯಕ್ರಮ...