ಮಂಗಳೂರು: ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಯಿತು 25 ಲಕ್ಷ ಪರಿಹಾರ ಕೊಟ್ರಿ ಪರವಾಗಿಲ್ಲ. ಅದೇ ಬೆಳ್ತಂಗಡಿಯಲ್ಲಿ ಕೊಲೆಯಾದ ಎಸ್‌ಟಿ ಸಮುದಾಯದ ದಿನೇಶ್ ಕೊಲೆಯಾಯಿತು.
ಆತನಿಗೆ ಯಾಕೆ 25 ಲಕ್ಷ ನೀಡಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನರಗುಂದದಲ್ಲಿ ಸಮೀರ್ ಕೊಲೆಯಾಯಿತು. ಆತನಿಗೆ ಯಾಕೆ ಪರಿಹಾರ ನೀಡಿಲ್ಲ.
ಎರಡೂ ಕಡೆ ಸಂಘಪರಿವಾರದವರು ಕೊಲೆ ಮಾಡಿದ್ದಾರೆ. ಸತ್ತವರು ದಲಿತ ಹಾಗೂ ಮುಸ್ಲಿಂ ಎನ್ನುವ ಕಾರಣಕ್ಕೆ ಅವರಿಗೆ ಕೊಟ್ಟಿಲ್ಲ. ಶಿವಮೊಗ್ಗದಲ್ಲಿ ಹರ್ಷ ಸತ್ತಿದ್ದಾನೆ, ಮುಸಲ್ಮಾನರು ಕೊಲೆ ಮಾಡಿದ್ದಾರೆಂದು 25 ಲಕ್ಷ ಕೊಟ್ಟಿದ್ದಾರೆ.
ಇದು ಇವರ ಮನೆಯ ದುಡ್ಡಾ, ಜನರ ಬೆವರಿನ ದುಡ್ಡು. ಹೇಗೆ ತಾರತಮ್ಯ-ದ್ವೇಷರಾಜಕಾರಣ ಮಾಡುತ್ತಿದ್ದಾರೆ.
[…] […]