Wednesday, February 1, 2023

ಬಿಗ್‌ಬಾಸ್‌ ವಿನ್ನರ್‌ ತುಳುವ ರಾಕ್ ಸ್ಟಾರ್ ರೂಪೇಶ್ ಶೆಟ್ಟಿಗೆ ಕ್ಲೋಸ್‌ ಫ್ರೆಂಡ್‌ ಸಾನ್ಯಾಳ ಬಗ್ಗೆ ಆತಂಕ ಯಾಕೆ..!?

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಸಾನ್ಯಾಳ ಮನಸ್ಥಿತಿ ಬದಲಾಗಬಹುದು ಎಂಬ ಆತಂಕ ರೂಪೇಶ್​ ಶೆಟ್ಟಿಗೆ ಕಾಡಿತ್ತು.

ಬೆಂಗಳೂರು : ‘ಬಿಗ್ ಬಾಸ್​ ಕನ್ನಡ ಸೀಸನ್ 9’ ರ ಫಿನಾಲೆ ಮುಗಿದಿದೆ. ಕರಾವಳಿಯ ಚೆಲುವ, ಮುದ್ದು ಮುಖದ ತುಳುವ ರಾಕ್ ಸ್ಟಾರ್ ರೂಪೇಶ್‌ ಶೆಟ್ಟಿ ದೊಡ್ಮನೆಯ ವಿನ್ನರ್‌ ಆಗಿದ್ದು ಕರಾವಳಿ ಜನತೆಗೆ ಮತ್ತು ರೂಪೇಶ್‌ ಶೆಟ್ಟಿಗೆ ವೋಟ್‌ ಮಾಡಿದವರಿಗೆಲ್ಲ ಖುಷಿಯ ವಿಷಯವೂ ಹೌದು.

ದೊಡ್ಮನೆಯಿಂದ ಹೊರಬಂದ ವಿನ್ನರ್ ರೂಪೇಶ್ ಶೆಟ್ಟಿ ಅವರನ್ನು ಫ್ಯಾನ್ಸ್ ಅದ್ದೂರಿಯಾಗಿ ಸ್ವಾಗತಿಸಿ, ತಮ್ಮ ಭರಪೂರ ಅಭಿನಂದನೆ ತಿಳಿಸಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ರೂಪೇಶ್‌ ಶೆಟ್ಟಿಗೆ ಹಲವು ಆಫರ್​ಗಳೂ ಬಂದಿರುವುದು ನಿಜ.

ಇವುಗಳೆಲ್ಲದರ ಮಧ್ಯೆ ರೂಪೇಶ್ ಶೆಟ್ಟಿ ಅವರು ಬಿಗ್‌ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು ಹಲವು ವಿಷಯಗಳ ಬಗ್ಗೆ ಅಮೂಲ್ಯ ಮಾಹಿತಿ ಹೊರ ಹಾಕಿದ್ದಾರೆ.

ವಿಶೇಷವಾಗಿ ಸಾನ್ಯಾ ಐಯ್ಯರ್ ಜತೆಗಿನ ಗೆಳೆತನ ಕುರಿತು ರೂಪೇಶ್ ಮನ ಬಿಚ್ಚಿ ಮಾತನಾಡಿದ್ದಾರೆ.

ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್​ನಲ್ಲಿ ರೂಪೇಶ್ ಹಾಗೂ ಸಾನ್ಯಾ ಐಯ್ಯರ್ ಮೊದಲ ಭೇಟಿ ಆಗಿದ್ದು, ನಂತರ ಇಬ್ಬರ ಮಧ್ಯೆ ಗಾಢ ಸ್ನೇಹ ಬೆಳೆದಿದ್ದು ಎಲ್ಲರಿಗೂ ಗೊತ್ತೇ ಇದೆ.

ಹಲವು ವಿಚಾರಗಳಲ್ಲಿ ಇಬ್ಬರ ಮಧ್ಯೆ ಸಹಮತ ಇದ್ದಿದ್ದರಿಂದ ಅವರು ತುಂಬಾ ಕ್ಲೋಸ್ ಆದ್ರು ಮತ್ತು ಇವರ ಮಧ್ಯೆ ಆಪ್ತತೆಯೂ ಅಷ್ಟೇ ಬೆಳೆಯಿತು.

ಟಿವಿ ಸೀಸನ್ ​​ಗೆ ಈ ಇಬ್ಬರೂ ರಾಕೇಶ್‌ ಅಡಿಗ ಹಾಗೂ ಆರ್ಯವರ್ಧನ್‌ ಗುರೂಜಿ ಜೊತೆ ಸೇರಿ ಸೆಲೆಕ್ಟ್‌ ಆದರು.

ಇವರು ಹಲವು ವಾರ ದೊಡ್ಮನೆಯಲ್ಲಿ ಒಟ್ಟಾಗಿ ಕಾಲ ಕಳೆದಿದ್ದಾರೆ.

ಟಿವಿ ಸೀಸನ್​ನ ಮಧ್ಯದಲ್ಲಿ ಸಾನ್ಯಾ ಐಯ್ಯರ್ ಬಿಗ್ ಬಾಸ್ ಮನೆಯಿಂದ ಔಟ್ ಆದ್ರು.

ಇದು ರೂಪೇಶ್​ಗೆ ಸಾಕಷ್ಟು ಬೇಸರ ಮೂಡಿಸಿ ಅವರು ಬಹಿರಂಗವಾಗಿಯೇ ಅತ್ತಿದ್ದರು ಇದು ಕರಾವಳಿಯಲ್ಲೀ ಟ್ರೋಲ್‌ಗೂ ಕಾರಣವಾಗಿತ್ತು.

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಸಾನ್ಯಾಳ ಮನಸ್ಥಿತಿ ಬದಲಾಗಬಹುದು ಎಂಬ ಆತಂಕ ರೂಪೇಶ್​ ಶೆಟ್ಟಿಗೆ ಕಾಡಿತ್ತು.

ಆದ್ರೇ ಸಾನ್ಯಾಳ  ಬಗ್ಗೆ ರೂಪೇಶ್ ಶೆಟ್ಟಿಯೇ ಮನ ಬಿಚ್ಚಿ ಮಾತಾನಾಡಿದ್ದಾರೆ.  “ಸಾನ್ಯಾ ಐಯ್ಯರ್ ಬದಲಾಗಿಲ್ಲ. ನಮ್ಮ ಮಧ್ಯೆ ಶುದ್ಧ ಸ್ನೇಹವಿದೆ. ಶುದ್ದ ಮನಸ್ಸಿಂದ ಫ್ರೆಂಡ್​ಶಿಪ್ ಮಾಡಿದ್ರೆ ಅವರು ಯಾವಾಗಲೂ ಬದಲಾಗಲ್ಲ.

ಬಿಗ್ ಬಾಸ್​ ಫಿನಾಲೆ ಮುಗಿದ ನಂತರ ಇಬ್ಬರೂ ಭೇಟಿ ಆದೆವು. ಸದ್ಯ ನನ್ನ ಕೈಯಲ್ಲಿ ಮೊಬೈಲ್ ಇಲ್ಲ. ಹೀಗಾಗಿ, ಸಾನ್ಯಾ ಜತೆ ಸಂಪರ್ಕ ಸಾಧಿಸೋಕೆ ಸಾಧ್ಯವಾಗಿಲ್ಲ. ನಾನು ಗೆದ್ದಿರೋದು ಸಾನ್ಯಾಗೆ ಖುಷಿ ನೀಡಿದೆ’ ಎಂದಿದ್ದಾರೆ ರೂಪೇಶ್ ಶೆಟ್ಟಿ.

 

LEAVE A REPLY

Please enter your comment!
Please enter your name here

Hot Topics

ಪ್ರೀತಿ ಕೊಲೆಯಲ್ಲಿ ಅಂತ್ಯ : ಬೆಂಗಳೂರಲ್ಲಿ ಕಿಡ್ನ್ಯಾಪ್, ಮರ್ಡರ್- ಚಾರ್ಮಾಡಿಯಲ್ಲಿ ಹೆಣ ಎಸೆದರು..!

ಪ್ರೀತಿ ಪ್ರೇಮದ ವಿಚಾರದಲ್ಲಿ ಯುವಕನೊಬ್ಬನನ್ನು ಅಪಹರಣ ಮಾಡಿದ ತಂಡವೊಂದು ಯುವಕನನ್ನು ಕೊಲೆ ಮಾಡಿ ಬಳಿಕ ಶವವನ್ನು ಚಾರ್ಮಾಡಿ ಘಾಟ್‌ನಲ್ಲಿ ಎಸೆದು ಹೋಗಿದೆ.ಚಿಕ್ಕಮಗಳೂರು : ಪ್ರೀತಿ ಪ್ರೇಮದ ವಿಚಾರದಲ್ಲಿ ಯುವಕನೊಬ್ಬನನ್ನು ಅಪಹರಣ ಮಾಡಿದ ತಂಡವೊಂದು...

ಮಂಗಳೂರು ನ್ಯಾಯಾಲಯದ ಆವರಣದಲ್ಲೇ ವಕೀಲೆಗೆ ಕೊಲೆ ಬೆದರಿಕೆ ಹಾಕಿದ ಆರೋಪಿ..!

ಮಂಗಳೂರು: ಯುವ ವಕೀಲೆಯೊಬ್ಬರಿಗೆ ಮಂಗಳವಾರ ಅಪರಾಹ್ನ ನ್ಯಾಯಾಲಯದ ಆವರಣದಲ್ಲೇ ಅವಾಚ್ಯ ಶಬ್ದದಿಂದ ‌ಬೈದು ಕೊಲೆ ಬೆದರಿಕೆಯೊಡ್ಡಿದ ಘಟನೆ ಮಂಗಳೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆರೋಪಿ ವಿರುದ್ದ ಬಂದರು...

ರಾಜ್ಯ, ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್: ನಳಿನ್‍ ಕುಮಾರ್ ಕಟೀಲ್ ಸ್ವಾಗತ..!

ಬೆಂಗಳೂರು: ಭಾರತವು ಜಗದ್ವಂದ್ಯ ರಾಷ್ಟ್ರವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೇಂದ್ರದ ನೂತನ ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ. ಇದು ಕರ್ನಾಟಕ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹೊಂದಿದ ಬಜೆಟ್ ಎಂದು ಬಿಜೆಪಿ...