ಮಂಗಳೂರು/ ಮುಂಬೈ : ‘ರತನ್ ಟಾಟಾ’ ಈ ಹೆಸರು ಉದ್ಯಮ ಕ್ಷೇತ್ರದಲ್ಲಿ ಜನಜನಿತ. ಅವರ ಸರಳತೆ, ಸಾಧನೆ ಎಲ್ಲವೂ ಸ್ಫೂರ್ತಿದಾಯಕ. ಆದರೆ, ನಿನ್ನೆ(ಅ.9) ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಭಾರತ ಮಾತ್ರವಲ್ಲದೇ ವಿದೇಶದ ಗಣ್ಯರು ಕಂಬನಿ ಮಿಡಿದಿದ್ದಾರೆ. ರಾಜಕಾರಣಿಗಳು, ಚಿತ್ರರಂಗದ ಗಣ್ಯರು, ಉದ್ಯಮಿಗಳು ಸಂತಾಪ ಸೂಚಿಸಿದ್ದಾರೆ.
ಸಾಕಿ, ಸಲಹಿದ ಅಜ್ಜಿ :
1937ರ ಡಿಸೆಂಬರ್ 28ರಂದು ರತನ್ ಟಾಟಾ ಆಗಿನ ಬ್ರಿಟಿಷ್ ಇಂಡಿಯಾದಲ್ಲಿ ಬಾಂಬೆಯಲ್ಲಿ (ಈಗಿನ ಮುಂಬೈ) ಜನಿಸಿದರು. ತಂದೆ, ನಾವಲ್ ಟಾಟಾ ಹಾಗೂ ತಾಯಿ ಸೂನಿ ಟಾಟಾ. ರತನ್ ಟಾಟಾ ಅವರು 10 ವರ್ಷ ವಯಸ್ಸಿನವರಾಗಿದ್ದಾಗ ಅವರ ತಂದೆ – ತಾಯಿ ವಿಚ್ಛೇದನ ಪಡೆದುಕೊಂಡರು. ಆಗ, ಮಗುವನ್ನು ಯಾರು ನೋಡಿಕೊಳ್ಳಬೇಕು ಎಂಬ ಪ್ರಶ್ನೆ ಎದ್ದಾಗ ಅವರನ್ನು ಟಾಟಾ ಫ್ಯಾಮಿಲಿಯದ್ದೇ ಆದ ಜೆಎನ್ ಪೆಟಿಟ್ ಪಾರ್ಸಿ ಅನಾಥಾಲಯಕ್ಕೆ ಕರೆದೊಯ್ದು ಬಿಟ್ಟಿದ್ದರು ತಂದೆ – ತಾಯಿ.
ಈ ವಿಚಾರ ತಿಳಿದ ರತನ್ ಟಾಟಾ ಅಜ್ಜಿ, ನವಾಜ್ ಬಾಯಿ ಟಾಟಾ ಅವರು ರತನ್ ಟಾಟಾ ಅವರು ಕಾನೂನಾತ್ಮಕವಾಗಿ ದತ್ತು ಪಡೆದರು. ಅಷ್ಟರಲ್ಲಾಗಲೇ ರತನ್ ಟಾಟಾ ಅವರ ತಂದೆ ನಾವಲ್ ಟಾಟಾ ಬೇರೊಂದು ಮದುವೆಯಾಗಿದ್ದರಲ್ಲದೆ, ಅವರಿಗೆ ನೊಯೆಲ್ ಟಾಟಾ ಎಂಬ ಮತ್ತೊಬ್ಬ ಮಗ ಜನಿಸಿದ್ದ. ಹಾಗಾಗಿ, ಅನಾಥಾಲಯದಿಂದ ತನ್ನ ತಂದೆ, ತಾತ ಇದ್ದ ಮನೆಗೆ ಹಿಂದಿರುಗಿದ ರತನ್ ಟಾಟಾ, ಅಲ್ಲಿ ತಮ್ಮ ಮಲಸಹೋದರ ನೋಯೆಲ್ ಟಾಟಾ (ರತನ್ ಟಾಟಾರ ಮಲತಾಯಿ ಮಗ) ಅವರೊಂದಿಗೆ ಬೆಳೆದರು.
ಮುಂಬೈನ ಚಾಂಪಿಯನ್ ಸ್ಕೂಲ್, ಕ್ಯಾಥೆಡ್ರಲ್ ಆ್ಯಂಡ್ ಜಾನ್ ಕೊನೂನ್ ಸ್ಕೂಲ್, ಶಿಮ್ಲಾದಲ್ಲಿರುವ ಬಿಷಬ್ ಕಾಟನ್ ಸ್ಕೂಲ್, ನ್ಯೂಯಾರ್ಕ್ ನಗರದಲ್ಲಿರುವ ರಿವರ್ಡಬಲ್ ಕಂಟ್ರಿ ಸ್ಕೂಲ್ ನಲ್ಲಿ ಶಿಕ್ಷಣ ಪಡೆದರು. ಆನಂತರ, ಹಾರ್ಡರ್ಡ್ ಬ್ಯುಸಿನೆಸ್ ಸ್ಕೂಲ್ ಹಾಗೂ ಕಾರ್ನೆಲ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡಿದರು.
ಸಮೂಹ ಸಂಸ್ಥೆಗಳ ಚುಕ್ಕಾಣಿ ಹಿಡಿದ ಟಾಟಾ :
1991ರಲ್ಲಿ ರತನ್ ಟಾಟಾ ಅವರು ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. 1963ರಲ್ಲೇ ಅವರು ಟಾಟಾ ಸಮೂಹ ಸಂಸ್ಥೆಗಳ ನಾನಾ ಕಂಪನಿಗಳ ಆಡಳಿತ ಮಂಡಳಿಗಳ ಮುಖ್ಯಸ್ಥರಾಗಿ ಆ ಸಂಸ್ಥೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅದೇ ಅನುಭವದ ಮೇರೆಗೆ ಸಮೂಹ ಸಂಸ್ಥೆಗಳ ಚುಕ್ಕಾಣಿ ಹಿಡಿದರು.
ಉತ್ತರಾಧಿಕಾರಿ ಯಾರು?
2017ರಲ್ಲಿ ರತನ್ ಟಾಟಾ, ಎನ್. ಚಂದ್ರಶೇಖರ್ ಅವರಿಗೆ ಜವಾಬ್ದಾರಿಯನ್ನು ವಹಿಸಿ ನಿವೃತ್ತರಾದರು. ಟಾಟಾ ಸಮೂಹ ಸಂಸ್ಥೆಯನ್ನು ಒಂದು ದೊಡ್ಡ ಮೈಲಿಗಲ್ಲಾಗಿ ಸ್ಥಾಪಿಸಿದ್ದ ಟಾಟಾ ಇನ್ನಿಲ್ಲ ಎಂಬುದೇ ಅರಗಿಸಿಕೊಳ್ಳಲಾಗದ ಸತ್ತ. ಆದರೆ, ಇದರೊಂದಿಗೆ ಮತ್ತೊಂದು ದೊಡ್ಡ ಪ್ರಶ್ನೆ ಹುಟ್ಟಿದೆ. ರತನ್ ಟಾಟಾ ಉತ್ತರಾಧಿಕಾರಿ ಯಾರು? ಎಂಬುದು.
ರತನ್ ಟಾಟಾ ಅವಿವಾಹಿತರಾಗಿದ್ದರು. ಹಾಗಾಗಿಯೇ ಈ ಪ್ರಶ್ನೆಗೆ ಉತ್ತರಕ್ಕಾಗಿ ತಡಕಾಟ ಸಾಮಾನ್ಯ ಸಂಗತಿ. ಈ ಪ್ರಶ್ನೆಗೆ ಉತ್ತರವಾಗಿ ಮೊದಲು ಕೇಳಿ ಬರುವ ಹೆಸರು ನೋಯಲ್ ಟಾಟಾ. ನೋಯಲ್ ಟಾಟಾ ಬೇರ್ಯಾರು ಅಲ್ಲ. ರತನ್ ಟಾಟಾ ತಂದೆಯ ಎರಡನೇ ಪತ್ನಿ ಸಿಮೋನ್ ಅವರ ಪುತ್ರ.
ಟಾಟಾ ಕುಟುಂಬದ ಉದ್ಯಮ ಮುನ್ನಡೆಸುವಲ್ಲಿ ಕೌಟುಂಬಿಕವಾಗಿ ನೋಯಲ್ ಟಾಟಾ ಹೆಸರು ಮುಂಚೂಣಿಯಲ್ಲಿದೆ. ನೋಯಲ್ ಟಾಟಾ ಹಿರಿಯ ಪುತ್ರಿ ಲಿಯಾ ಟಾಟಾ ಹೆಸರು ಸಹ ಈ ಸಾಲಿನಲ್ಲಿದೆ. ಸ್ಪೇನ್‌ನಲ್ಲಿ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಲಿಯಾ ಸದ್ಯ ಟಾಟಾ ಸಮೂಹದ ತಾಜ್ ಹೋಟೆಲ್, ರೆಸಾರ್ಟ್‌ಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಮಾಯಾ ಟಾಟಾ ಸಾರಥ್ಯ:
ಈ ಉತ್ತರಾಧಿಕಾರತ್ವದ ವಿಚಾರದಲ್ಲಿ ಬಲವಾಗಿ ಕೇಳಿ ಬರುತ್ತಿರುವ ಹೆಸರು ನೋಯಲ್ ಟಾಟಾ ಕಿರಿಯ ಪುತ್ರಿ ಮಾಯಾ ಟಾಟಾ ಅವರದು. ಬೇಯಸ್ ಬಿಸಿನೆಸ್ ಸ್ಕೂಲ್ ಮತ್ತು ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. 34 ವರ್ಷದ ಟಾಟಾ ಆಪರ್ಚುನಿಟೀಸ್ ಫಂಡ್ ಮತ್ತು ಟಾಟಾ ಡಿಜಿಟಲ್‌ನಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ.
ಟಾಟಾ ನ್ಯೂ ಅಪ್ಲಿಕೇಶನ್‌ನಲ್ಲಿಯೂ ಮಾಯಾ ಟಾಟಾ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಇನ್ನು ನೋಯಲ್ ಪುತ್ರ ನೆವಿಲ್ಲೆ ಟಾಟಾ, ಟಾಟಾ ಕುಟುಂಬ ಒಡೆತನದ ಹಲವು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಟಾಟಾ ಟ್ರೆಂಡ್ ಅಡಿಯಲ್ಲಿರುವ ಸ್ಟಾರ್ ಬಜಾರ್ ಅನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಮಂಗಳೂರು/ಮಂಡ್ಯ: ರಾಜ್ಯದಲ್ಲಿ ಕಳ್ಳತನ ಎನ್ನುವುದು ಸಾಮಾನ್ಯವಾಗಿದೆ. ಕಳ್ಳರು ಕದ್ದ ಚಿನ್ನಾಭಾರಣಗಳನ್ನು ಎಲ್ಲಿಯಾದರೂ ಮಾರಿ ಬಿಡುತ್ತಾರೆ. ಆದರೆ ಕಳ್ಳರಲ್ಲೂ ಪ್ರಾಮಾಣಿಕತೆ ಇದೆ ಎಂದು ಮಂಡ್ಯದಲ್ಲಿ ಸಾಕ್ಷಿಯಾಗಿದೆ.
ಈ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದೇಗೌಡ ಎಂಬುವವರ ಕುಟುಂಬ ಮನೆದೇವರ ಪೂಜೆಗೆಂದು ಹೋಗಿದ್ದರು. ಈ ವೇಳೆ ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿದ್ದ ಕಳ್ಳರು ಬೀರುವನ್ನು ಒಡೆದು ಕಳ್ಳತನ ಮಾಡಿದ್ದರು. ಈ ವೇಳೆ 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂನ ಮೂರು ಜೊತೆ ಓಲೆಗಳು ಸೇರಿ ಒಟ್ಟು 75 ಗ್ರಾಂನಷ್ಟು ಚಿನ್ನಾಭರಣ ಕದ್ದಿದ್ದರು.
ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಕಳ್ಳರಿಗೆ ಪೊಲೀಸರ ಭಯವೋ ಅಥವಾ ಮನೆದೇವರ ಆಶೀರ್ವಾದವೋ ಗೊತ್ತಿಲ್ಲ, ಪೊಲೀಸರಿಗೆ ದೂರು ನೀಡಿದ ಎರಡು ದಿನಗಳ ನಂತರ ಕಳ್ಳರು ಮನೆಯ ಮುಂಭಾಗದ ಜಗಲಿಯ ಮೇಲೆ ಚಿನ್ನಾಭರಣಗಳನ್ನು ಇಟ್ಟು ಹೋಗಿದ್ದಾರೆ.
ಚಿನ್ನಾಭರಣ ವಾಪಸ್ಸು ಸಿಕ್ಕ ಖುಷಿಯಲ್ಲಿ ಸಿದ್ದೇಗೌಡರ ಕುಟುಂಬ ನಿರಾಳವಾಗಿದೆ.
ಮಂಗಳೂರು/ಕಾನ್ಪುರ : ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲು ಹತ್ತುವ ವೇಳೆ ಅಥವಾ ಇಳಿಯುವ ವೇಳೆ ಆಯತಪ್ಪಿ ಬಿದ್ದ ಘಟನೆಗಳು ಸಂಭವಿಸಿವೆ. ಕೆಲವೊಮ್ಮೆ ಅದೃಷ್ಟವಶಾತ್, ಪಾರಾಗಿರುವುದಿದೆ. ರೈಲ್ವೇ ಸಿಬ್ಬಂದಿ ರಕ್ಷಿಸಿರುವ ಘಟನೆಗಳೂ ಇವೆ. ಇಂತಹ ಹಲವು ವೀಡಿಯೋಗಳು ವೈರಲ್ ಆಗಿವೆ. ಇದೀಗ ಮತ್ತೊಂದು ಅಂತಹುದೇ ವೀಡಿಯೋ ವೈರಲ್ ಆಗಿದೆ.
ರೈಲು ಬಂದು ನಿಂತಿತ್ತು. ಮಹಿಳೆ ರೈಲು ಹತ್ತಿದ್ದರು. ಆದರೆ, ಮಕ್ಕಳು ಪ್ಲಾಟ್ ಫಾರ್ಮ್ ನಲ್ಲಿಯೇ ಉಳಿದಿದ್ದರು. ಮಕ್ಕಳು ಅಲ್ಲೇ ಇರುವುದನ್ನು ನೋಡಿ ಮಹಿಳೆ ಮಕ್ಕಳನ್ನು ಕರೆದಿದ್ದಾರೆ. ಅವರು ಬರದೇ ಇದ್ದಾಗ ರೈಲಿನಿಂದ ಕೆಳಗೆ ಹಾರಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ರೈಲು ಹಾಗೂ ಪ್ಲಾರ್ಟ್ ಫಾರ್ಮ್ ನಡುವೆ ಸಿಲುಕಿಕೊಂಡಿದ್ದಾರೆ. ತಕ್ಷಣ ರೈಲ್ಬೇ ಪೊಲೀಸರು ಆಕೆಯನ್ನು ರಕ್ಷಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.
ಸದ್ಯ ಘಟನೆಯ ವೀಡಿಯೋ ವೈರಲ್ ಆಗಿದ್ದು, ಇದು ಕಾನ್ಪುರ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮಹಿಳೆಯನ್ನು ಜಿಆರ್‌ಪಿ ಸಬ್‌ಇನ್ಸ್‌ಪೆಕ್ಟರ್ ಶಿವ ಸಾಗರ್ ಶುಕ್ಲಾ ಮತ್ತು ಕಾನ್‌ಸ್ಟೇಬಲ್ ಅನೂಪ್ ಕುಮಾರ್ ಪ್ರಜಾಪತಿ ರಕ್ಷಿಸಿದ್ದಾರೆ.
11 ಸೆಕೆಂಡುಗಳಈ ವೀಡಿಯೋದಲ್ಲಿ ಇಬ್ಬರು ರೈಲ್ವೆ ಸಿಬ್ಬಂದಿ ರೈಲಿನಿಂದ ಜಿಗಿದ ಮಹಿಳೆಯನ್ನು ರಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. ಆಕೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜಿಆರ್‌ಪಿ ಸಿಬ್ಬಂದಿ ಆಕೆಯನ್ನು ಹಿಡಿದು ರಕ್ಷಿಸಿದ್ದು, ವ್ಯಾಪಕ ಮೆಚ್ಚುಗೆ ಗಳಿಸಿದೆ.
ಮಂಗಳೂರು/ಮಸ್ಕತ್ : ಬಿರುವ ಜವನೆರ್ ಮಸ್ಕತ್ ಆಯೋಜಿಸಿದ ಕರ್ನಾಟಕ ಪ್ರೀಮಿಯಾರ್ ಲೀಗ್ ನ 2024 ನೇ ಸಾಲಿನ ಕ್ರೀಡಾಕೂಟ ಮಸ್ಕತ್ ನ ಅಲ್ ಹೈಲ್ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಓಮನ್ ಕ್ರಿಕೆಟ್ ನ ಟಿ20 ತಂಡದ ನಾಯಕ ವಿನಾಯಕ್ ಶುಕ್ಲ ನೆರವೇರಿಸಿದರು.
ಈ ಸಂದರ್ಭ ಉತ್ತಮ್ ಕೋಟ್ಯಾನ್, ಮುಸ್ತಫಾ, ರಮಾನಂದ್ ಬಂಗೇರ, ಚಂದ್ರಕಾಂತ್ ಕೋಟ್ಯಾನ್, ದಾಮೋದರ್ ಶೆಟ್ಟಿ, ಪದ್ಮಾಕರ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ಪುದರ್ ದೀತಿಜಿ ನಾಟಕದ ಪೋಸ್ಟರ್ ಬಿಡುಗಡೆ :
ಇದೇ ಸಂದರ್ಭದಲ್ಲಿ ಜನವರಿ 10 ರಂದು ಮಸ್ಕತ್ ನ ಆಲ್ ಫಾಜಾಜ್ ಹೋಟೆಲ್ ನಲ್ಲಿ ನಡೆಯಲಿರುವ ಕಾಪಿಕಾಡ್ ಅವರ ಚಾ ಪರ್ಕ ತಂಡದ ” ಪುದರ್ ದೀತಿಜಿ ” ನಾಟಕದ ಪೋಸ್ಟರ್ ಬಿಡುಗಡೆ ಹಾಗೂ ಪ್ರಚಾರ ಅಭಿಯಾನಕ್ಕೆ ಡಾ. ದೇವದಾಸ್ ಕಾಪಿಕಾಡ್ ಹಾಗೂ ಅರ್ಜುನ್ ಕಾಪಿಕಾಡ್ ಚಾಲನೆ ನೀಡಿದರು.