Connect with us

    LATEST NEWS

    ಪುಸ್ತಕಗಳ ಮಧ್ಯೆ ನವಿಲು ಗರಿ ಇಟ್ಟುಕೊಂಡರೆ ಏನೆಲ್ಲಾ ಪ್ರಯೋಜನ ಆಗುತ್ತೆ? ಓದಲೇಬೇಕಾದ ಸ್ಟೋರಿ

    Published

    on

    ಮಂಗಳೂರು: ನವಿಲು ಗರಿ ಅಂದ್ರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನವಿಲು ಗರಿ ಅಂದ್ರೆ ಒಂಥರಾ ಇಷ್ಟ ಪಡ್ತಾರೆ. ನವಿಲು ಗರಿ ನೋಡಲು ಎಷ್ಟು ಚೆನ್ನಾಗಿ ಇರುತ್ತೆ ಅಲ್ವಾ? ನವಿಲು ಗರಿಯನ್ನು ನೋಡುತ್ತ ಇದ್ದರೆ ಹಾಗೇ ನೋಡುತ್ತಲೇ ಇರಬೇಕು ಅನಿಸುತ್ತದೆ. ಅದರಲ್ಲಿ ಇರುವ ಬಣ್ಣಗಳು ಕಣ್ಣುಗಳಿಗೆ ಒಂದು ತರ ತಂಪು ನೀಡುತ್ತದೆ.

    ಇದಕ್ಕಾಗಿಯೇ ಸಾಕಷ್ಟು ಮಂದಿ ನವಿಲು ಗರಿಯನ್ನು ಫೋನ್​ ಹಿಂದೆ, ಮನೆಯಲ್ಲಿ, ದೇವರ ಕೋಣೆಯಲ್ಲಿ ಅಷ್ಟೇ ಯಾಕೆ ಬುಕ್​ಗಳ ಮಧ್ಯೆ ಇಟ್ಟಕೊಳ್ಳುತ್ತಾರೆ. ಆದರೆ ಬುಕ್​ಗಳ ನಡುವೆ ನವಿಲು ಗರಿ ಇಟ್ಟುಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನೆ ಆಗುತ್ತೆ ಅಂತ ಮೊದಲು ತಿಳಿದುಕೊಳ್ಳಿ.

    ಪುಸ್ತಕಗಳ ಮಧ್ಯೆ ನವಿಲು ಗರಿಗಳನ್ನು ಇಡುವುದು ಹಿಂದೂ ಧರ್ಮದಲ್ಲಿ ಶುಭವೆಂದು ಪರಿಗಣಿಸಲಾಗಿದೆ. ಸೌಂದರ್ಯ ಮತ್ತು ಸಮೃದ್ಧಿಯ ಸಂಕೇತವಾದ ನವಿಲನ್ನು ಹಿಂದೂ ಧರ್ಮದಲ್ಲಿ ಅತ್ಯುತ್ತಮ ಪಕ್ಷಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಪುಸ್ತಕದಲ್ಲಿ ನವಿಲು ಗರಿಗಳನ್ನು ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ.

    ಭಗವಾನ್ ಕೃಷ್ಣ ನವಿಲು ಗರಿಗಳನ್ನು ಪ್ರೀತಿಸುವುದರಿಂದ ಅವುಗಳನ್ನು ನಿಮ್ಮ ಪುಸ್ತಕದಲ್ಲಿ ಇಟ್ಟುಕೊಳ್ಳುವುದು ಆತನ ಆಶೀರ್ವಾದ ಮತ್ತು ನಿಮ್ಮ ಜೀವನದಲ್ಲಿ ಯಶಸ್ಸನ್ನು ಸಿಕ್ಕಂತೆ ಆಗುತ್ತದೆ. ಇದರ ಜೊತೆಗೆ ನಿಮ್ಮ ಕಲಿಕೆಯ ನಡುವೆ ಬರುವ ಅಡೆತಡೆಗಳನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ಇದು ನಿಮ್ಮ ಅಧ್ಯಯನದಲ್ಲಿ ಅಡೆತಡೆಗಳನ್ನು ಸೃಷ್ಟಿಸುವ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ.

    ಇನ್ನು ಸುಖಾ ಸುಮ್ಮನೆ ಪುಸ್ತಕದಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳಬಾರದು. ಮೊದಲು ನೀವು ಯಾವ ನವಿಲು ಗರಿಯನ್ನು ಇಟ್ಟುಕೊಂಡರೆ ಉತ್ತಮ ಅನ್ನೋದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ. ಮುರಿದ ನವಿಲು ಗರಿಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಪುಸ್ತಕದಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳವು ಮೊದಲು ಅದಕ್ಕೆ ಏನಾದರು ಆಗಿದೆಯೇ ಅಂತ ಪರಿಶೀಲಿಸಬೇಕು.

    ನವಿಲನ್ನು ಜ್ಞಾನ ಮತ್ತು ಕಲಿಕೆಯ ದೇವತೆಯಾದ ಸರಸ್ವತಿಯ ವಾಹನವೆಂದು ಹೇಳಲಾಗುತ್ತದೆ. ಆದ್ದರಿಂದ, ಪುಸ್ತಕದಲ್ಲಿ ನವಿಲು ಗರಿಯನ್ನು ಇಡುವುದರಿಂದ ನಿಮ್ಮ ಜ್ಞಾನ ಮತ್ತು ಕಲಿಕೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ನವಿಲು ಗರಿಗಳು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತವೆ ಎಂದು ಪರಿಗಣಿಸಲಾಗಿದೆ. ಹಾಗಾಗಿ ಇದನ್ನು ಪುಸ್ತಕದಲ್ಲಿ ಇಡುವುದರಿಂದ ಏಕಾಗ್ರತೆ ಮತ್ತು ಗ್ರಹಣಶಕ್ತಿ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕುತ್ತದೆ. ಜೊತೆಗೆ ನವಿಲು ಗರಿಗಳನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವೆಂದು ಎಂದು ಹೇಳಲಾಗುತ್ತದೆ. ಆದ್ದರಿಂದ ಇದನ್ನು ಪುಸ್ತಕದಲ್ಲಿ ಇಡುವುದು ಜೀವನದಲ್ಲಿ ಯಶಸ್ಸು ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ.

    DAKSHINA KANNADA

    ಮಂಗಳೂರಿಗೆ ಆಗಮಿಸಲಿದ್ದಾರೆ ಡಾಲಿ ಚಾಯ್ ವಾಲ

    Published

    on

    ಮಂಗಳೂರು : ಮಹಾರಾಷ್ಟ್ರದ ನಾಗ್ಪುರದ ಖ್ಯಾತ ಡಾಲಿ ಚಾಯ್ ವಾಲ ಮತ್ತು ಹಿಂದಿ ಬಿಗ್ ಬಾಸ್ 18ರ ಸ್ಪರ್ಧಿ ಸುನಿಲ್ ಪಾಟೀಲ್ ಅವರು ಮಂಗಳೂರಿಗೆ ಆಗಮಿಸುತ್ತಿದ್ದಾರೆ.

    ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಜ. 18 ರಿಂದ 22 ರವರೆಗೆ ಐದು ದಿನಗಳ ಕಾಲ ನಗರದಲ್ಲಿ “ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್” ನಡೆಯಲಿದೆ. ಈ ಕಾರ್ಯಕ್ರಮದ ಮೊದಲ ಆಕರ್ಷಣೆಯಾಗಿ ಡಾಲಿ ಚಾಯ್ ವಾಲ ಅವರು ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ: ದಾಖಲೆಯ ಪ್ರಯಾಣಿಕರ ನಿರ್ವಹಣೆ

    ತನ್ನ ಬರುವಿಕೆಯ ಕುರಿತು ಡಾಲಿ ಚಾಯ್ ವಾಲ ಅವರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿದ್ದು, ಜ. 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ. “ಮಜಾ ಕರೇಂಗೆ..ಚಾಯ್ ಪಿಯೇಂಗೆ” ಎಂದು ಪೋಸ್ಟ್ ಮಾಡಿದ್ದಾರೆ.

    ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಡಾಲಿ ಅವರ ಚಹಾ ಅಂಗಡಿಗೆ ಭೇಟಿ ನೀಡಿ ಚಹಾ ಕುಡಿದು ಪೋಸ್ಟ್ ಹಂಚಿಕೊಂಡಿದ್ದರು. ಇದಾದ ಬಳಿಕ ಡಾಲಿ ಚಯ್ ವಾಲರವರ ಖ್ಯಾತಿ ದೇಶದಾದ್ಯಂತ ಇನ್ನಷ್ಟು ಜಾಸ್ತಿಯಾಯಿತು.

    Continue Reading

    BIG BOSS

    ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?

    Published

    on

    ಬಿಗ್ ಬಾಸ್ ಫಿನಾಲೆಗೆ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಬಿಗ್ ಬಾಸ್ ಮನೆಯಲೀಗ ಮಿಡ್ ವೀಕ್ ಎಲಿಮಿನೇಷನ್ ಟೆನ್ಶನ್ ಶುರುವಾಗಿದೆ.

    ಇದೇ ಹೊತ್ತಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ 7 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ನಾಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡಲಿದ್ದಾರೆ.

    ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?

    ಬಿಗ್ ಬಾಸ್ ಕೊಟ್ಟ ಟಾಸ್ಕ್ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ ನಿಂದ ಪಾರಾಗಲಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಒಟ್ಟು 8 ಸ್ಪರ್ಧಿಗಳು ಉಳಿದುಕೊಂಡಿದ್ದು, ಈ ಪೈಕಿ ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಲಿದ್ದಾರೆ. ಇನ್ನು ಇಬ್ಬರು ವಾರಾಂತ್ಯಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ. ಕೊನೆಗೆ ವಾರಾಂತ್ಯದಲ್ಲಿ ಮೂರು ಜನ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ.

    ಹೀಗಾಗಿ ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಕೊಟ್ಟ ಟಾಸ್ಕ್ ಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ಅದರಲ್ಲೂ ರಿಲೀಸ್ ಆದ ಪ್ರೋಮೋದಲ್ಲಿ, ಇದು ಮಿಡ್ ವೀಕ್ ಎಲಿಮಿನೇಷನ್ ನಿಂದ ತಮ್ಮನ್ನು ತಾವು ಉಳಿಸಿಕೊಳ್ಳಲು ಇರುವ ಕೊನೆಯ ಟಾಸ್ಕ್ ಎಂದು ಭಯ ಹುಟ್ಟಿಸಿದ್ದಾರೆ.

     

    Continue Reading

    LATEST NEWS

    ಮ*ರಣದ ನಂತರ ಏನು ಎಂದು ಹುಡುಕಿದಾತ ಸಾ*ವಿಗೆ ಶರಣಾದ!

    Published

    on

    ಮಂಗಳೂರು/ಲಖನೌ: ಇತ್ತೀಚಿನ ದಿನಗಳಲ್ಲಿ ಆ*ತ್ಮಹ*ತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲೂ ಮಕ್ಕಳು ಸಾ*ವಿಗೆ ಶರಣಾಗುತ್ತಿರೋದು ವಿಪರ್ಯಾಸ. ಸಣ್ಣ ಪುಟ್ಟ ವಿಚಾರಗಳಿಗೆ ಸಾ*ವಿನ ದಾರಿ ಹಿಡಿಯುತ್ತಿರೋರು ಅಧಿಕ.  ಉತ್ತರಪ್ರದೇಶದ ಮೀರತ್‌ನಲ್ಲಿ ಬಾಲಕನೋರ್ವ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಆತ ಗೂಗಲ್‌ ಹಾಗೂ ಯೂಟ್ಯೂಬ್‌ನಲ್ಲಿ ಹುಡುಕಾಡಿರುವ ವಿಚಾರ ಶಾ*ಕ್ ಕೊಟ್ಟಿದೆ.

    9ನೇ ತರಗತಿಯಲ್ಲಿ ಓದುತ್ತಿದ್ದ ಯುವರಾಜ್ ಮೃ*ತ ಬಾಲಕ. ಈತ ಪಿಸ್ತೂಲ್‌ನಿಂದ ಗುಂ*ಡು ಹಾ*ರಿಸಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮುಂಚೆ ಆತ ‘ಗರುಡ ಪುರಾಣ’ದ ಬಗ್ಗೆ ಹುಡುಕಾಟ ನಡೆಸಿದ್ದಾನೆ ಎನ್ನಲಾಗಿದೆ. ಯೂಟ್ಯೂಬ್, ಗೂಗಲ್‌ಗಳಲ್ಲಿ ಗರುಡ ಪುರಾಣದ ಬಗ್ಗೆ ಹುಡುಕಿದ್ದಾನಂತೆ.  ಸಾ*ವಿನ ರೀತಿ, ಸಾ*ವಿನ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ಎಂಬ ಬಗ್ಗೆ ಕುತೂಹಲ ಹೊಂದಿದ್ದ ಎಂಬುದು ಆತನ ಸರ್ಚ್ ಇಂಜಿನ್‌ನಿಂದ ತಿಳಿದುಬಂದಿದೆ. ಆದರೆ, ಯಾವುದೇ ಡೆ*ತ್ ನೋಟ್ ಪತ್ತೆಯಾಗಿಲ್ಲ.

    ಇದನ್ನೂ ಓದಿ : ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?

    ಬುದ್ದಿ ಮಾತು…ಬೈಕ್ ಮಾರಾಟ :

    ಓದಿನತ್ತ ಬಾಲಕ ಗಮನ ಕೊಡುತ್ತಿರಲಿಲ್ಲ. ಹೀಗಾಗಿ ಆತನ ತಾಯಿ ಗದರಿದ್ದರಂತೆ. ಅಲ್ಲದೇ, ಆತ ತನ್ನ ಬಳಿಯಿದ್ದ ದ್ವಿಚಕ್ರವಾಹನದ ಬಗ್ಗೆ ಅತಿಯಾದ ವ್ಯಾಮೋಹ ಹೊಂದಿದ್ದನಂತೆ. ಇದು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ ಎಂದರಿತು ಪೋಷಕರು ಆ ದ್ವಿಚಕ್ರ ವಾಹನವನ್ನು ಮಾರಾಟ ಮಾಡಿದ್ದರು. ಇದೂ ಕೂಡ ಬಾಲಕ ಆ*ತ್ಮಹ*ತ್ಯೆಯ ನಿರ್ಧಾರ ತಳೆಯಲು ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಸದ್ಯ ಮ*ರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.

     

     

    Continue Reading

    LATEST NEWS

    Trending