Connect with us

LATEST NEWS

ಋತುಬಂಧ ಎಂದರೇನು ? ಅದರ ಲಕ್ಷಣಗಳಾವುವು ? ಇಲ್ಲಿದೆ ಸಂಪೂರ್ಣ ಮಾಹಿತಿ

Published

on

ಮಂಗಳೂರು: ಮಹಿಳೆಯು ಜೀವನದಲ್ಲಿ ಇನ್ನು ಮುಂದೆ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗದ ಸಮಯ ಮತ್ತು ಆಕೆಯ ಋತುಚಕ್ರವು ಕೊನೆಗೊಳ್ಳುವ ಸಮಯವೇ ‘ಋತುಬಂಧ’. ಈ ಸಂದರ್ಭ ಮಹಿಳೆಯರು ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಸರಿಸುಮಾರು 40-50 ನೇ ವಯಸ್ಸಿನಲ್ಲಿ ಸಂಭವಿಸುತ್ತದೆ.

 

ಹಣ್ಣಿನ ಜೀವದಲ್ಲಿ ಋತುಚಕ್ರ ಬಹು ಮಖ್ಯ ಭಾಗ. ಆಕೆಯಲ್ಲಿ ಹೆಣ್ತನವನ್ನು ಮೂಡಿಸುವುದೇ ಈ ಋತುಚಕ್ರ. ಅದಾದ ಬಳಿಕ ಆಕೆ ಲೈಂಗಿಕ ಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸುಂದರ ಜೀವಿಯ ಸೃಷ್ಠಿಗೆ ಕಾರಣೀಭೂತಳಾಗುತ್ತಾಳೆ. ಆ ಅಮುಲ್ಯ ಕ್ಷಣಗಳೆಲ್ಲಾ ಮುಗಿದ ಬಳಿಕ ಬರುವುದೇ ಋತುಬಂಧ.

 

ಋತು ಬಂಧದ ಲಕ್ಷಣಗಳು:

1. ಹೆಚ್ಚು ರಕ್ತಸ್ರಾವ ಮತ್ತು ಅನಿಯಮಿತ ಮುಟ್ಟು:
ಮಹಿಳೆಯರಲ್ಲಿ ಋತುಬಂಧದ ಸಮಯದಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು ಹೆಚ್ಚು ರಕ್ತಸ್ರಾವ ಮತ್ತು ಅನಿಯಮಿತ ಮುಟ್ಟು. ಸಾಮಾನ್ಯವಾಗಿ ತಿಂಗಳಿಗೊಮ್ಮೆ ಪೀರಿಯಡ್‌ ಆಗುವ ದೇಹದಲ್ಲಾಗುವ ಹಾರ್ಮೋನ್ ಬದಲಾವಣೆಗಳಿಂದ ಏರುಪೇರಾಗಿ ತಿಂಗಳಿಗೆ ಎರಡು ಸಲವೂ ಆಗಬಹುದು. ಕೆಲವರಲ್ಲಿ ಹೆಚ್ಚು ರಕ್ತಸ್ರಾವವಾದರೆ ಇನ್ನೂ ಕೆಲವರಲ್ಲಿ ರಕ್ತಸ್ರಾವದ ಕೊರತೆಯಾಗಬಹುದು.
2. ರಾತ್ರಿಯಲ್ಲಿ ಅತಿಯಾದ ಬೆವರುವಿಕೆ:
ರಾತ್ರಿ ಮಲಗಿರುವಾಗ ಅತಿಯಾದ ಬೇವರಿನಿಂದಾಗಿ ಪದೇ ಪದೇ ಎಚ್ಚರವಾಗುವುದು. ದೇಹದಲ್ಲಿ ಶಾಖ ವಿಪರೀತವಾಗುವುದು ಋತುಬಂಧದ ಸಮಯದಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಋತುಬಂಧದ ಸಮಯದಲ್ಲಿ ಹಾರ್ಮೋನ್​​ ಏರಿಳಿತಗಳಿಂದ ಈ ರೀತಿಯ ಸಮಸ್ಯೆ ಕಾಡುತ್ತದೆ.
3. ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡ:
ನಿದ್ರಾಹೀನತೆ ಜೊತೆಗೆ ಮಾನಸಿಕ ಒತ್ತಡ ಋತುಬಂಧದ ಸಮಯದಲ್ಲಿ ಹಾರ್ಮೋನ್​​ ಏರಿಳಿತಗಳಿಂದ ಈ ರೀತಿಯ ಸಮಸ್ಯೆ ಕಾಡುತ್ತದೆ. ಪದೇ ಪದೇ ಎಚ್ಚರಗೊಳ್ಳುವುದು, ಮಾನಸಿಕ ಖಿನ್ನತೆಗೆ, ಕಾರಣಗಳೇ ಇಲ್ಲದೇ ಸುಮ್ಮ ಸುಮ್ಮನೇ ಯೋಚನೆ, ಬೇಸರ ಮುಂದಾದ ಲಕ್ಷಣಗಳು ಕಂಡುಬರುತ್ತದೆ.
4. ಒಣಚರ್ಮದ ಸಮಸ್ಯೆ:
ಋತುಬಂಧದ ಸಮಯದಲ್ಲಿ ದೇಹ ಸಂಪೂರ್ಣ ಶುಷ್ಕವಾಗವ ಲಕ್ಷಣ ಕಂಡುಬರಬಹುದು. ಜೊತೆಗೆ ನಿಮ್ಮ ಖಾಸಗಿ ಅಂಗವು ಸಹ ಶುಷ್ಕವಾಗಿರಲಿದೆ. ಈ ಸಂದಭದಲ್ಲಿ ದೇಹಕ್ಕೆ ಹರಳೆಣ್ಣೆ ಸ್ನಾನ ಒಳ್ಳೆಯದು. ದೇಹ ಒಣಗದಂತೆ ನೋಡಿಕೊಳ್ಳುವುದರಿಂದ ಒಣಚರ್ಮದಿಂದ ಮುಕ್ತಿ ಪಡೆಯಬಹುದು.

@TheLancet ಎಂಬ ಟ್ವಟರ್​ ಖಾತೆಯಲ್ಲಿ ನೀಡಿರುವ ಫೋಸ್ಟ್​​ ಪ್ರಕಾರ ಮಹಿಳೆಯರಲ್ಲಿ ಋತುಬಂಧದ ನಂತರದ ದಿನಗಳಲ್ಲಿ ಕ್ಯಾನ್ಸರ್‌ ಕಂಡುಬರುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ಹಾಗೂ ಜಾಗೃತೆ ವಹಿಸಬೇಕು.

ಅಕಾಲಿಕ ಋತುಬಂಧದ ಪರೀಕ್ಷೆ :

ಋತುಬಂಧವನ್ನು ಆಂಟಿ-ಮುಲರಿಯನ್ ಹಾರ್ಮೋನ್ (AMH) ಪರೀಕ್ಷೆ ಮೂಲಕ ಪತ್ತೆ ಮಾಡಬಹುದು. ಈಸ್ಟ್ರೊಜೆನ್ ಮಟ್ಟವನ್ನು ಪರಿಶೀಲಿಸಿ ಋತುಬಂಧದ ಬಗ್ಗೆ ಪರೀಕ್ಷೆ ಮಾಡಬಹುದು. ಋತುಬಂಧದಲ್ಲಿ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ. ಇದಲ್ಲದೇ ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ ಮಟ್ಟವು ಸತತವಾಗಿ 30 mIU/mL ಗಿಂತ ಹೆಚ್ಚಿದ್ದರೆ ಮತ್ತು ಒಂದು ವರ್ಷದಿಂದ ಮುಟ್ಟಾಗದೆ ಹೋದಲ್ಲಿ ಇದು ಋತುಬಂಧದ ಅವಧಿಯನ್ನು ಸೂಚಿಸುತ್ತದೆ.

LATEST NEWS

ಮದುವೆಯಾಗಿ ಉಳಿದ ಹಣದಿಂದ ಶಾಲೆಗೆ ಶುದ್ಧ ನೀರಿನ ಯಂತ್ರ ವಿತರಣೆ !!

Published

on

ಮಂಗಳೂರು/ ಹಾಸನ : ಇಂಜಿನಿಯರ್ ವಧು ಶಿವಕುಮಾರ್ ಮತ್ತು ಮಂಡ್ಯ ನಿವಾಸಿ ಸಂಗೀತಾ ಅವರು ನವೆಂಬರ್​ 11 ರಂದು ಸರಳ ವಿವಾಹವಾಗುವ ಮೂಲಕ ರೂ. 5 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿಸಿದ ಗಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ.

ಅತ್ಯಂತ ಅದ್ದೂರಿ

ಮತ್ತು ಆಡಂಭವಾಗಿ ಮದುವೆಯಾಗುವ ಈ ಕಾಲದಲ್ಲಿ, ಇಲ್ಲೊಂದು ಜೋಡಿ ಸರಳ ಮದುವೆಯಾಗಿದ್ದಾರೆ. ಜೊತೆಗೆ ತಮಗೆ ಬಂದ ಹಣದಿಂದ ವಿಶೇಷ ಕೊಡುಗೆ ಕೂಡ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ನವಜೋಡಿ ಉಳಿಸಿದ 5 ಲಕ್ಷಕ್ಕೂ ಹೆಚ್ಚಿನ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನಿಡುವ ಮೂಲಕ ಸಮಾಜ ಸೇವೆ ಗೈದಿದ್ದಾರೆ. ಈ ಸತ್ಕಾರ್ಯಕ್ಕೆ ನವಜೋಡಿಗೆ ರೈತಪರ ಹೋರಾಟಗಾರರಾದ ತಾತ ಹೊ.ತಿ.ಹುಚ್ಚಪ್ಪ ಪ್ರೇರಣೆ ಎಂದು ಹೇಳಿದ್ದಾರೆ.

ಹೊನ್ನವಳ್ಳಿ ಗ್ರಾಮದಲ್ಲಿ ಹೊ.ತಿ.ಹುಚ್ಚಪ್ಪ ತಾತ ದತ್ತು ಪಡೆದಿದ್ದ ಶಾಲೆ ಸೇರಿದಂತೆ ತಾಲೂಕಿನ ಕಸಬ ಹೋಬಳಿಯ 26 ಶಾಲೆಗಳಿಗೆ ಉಚಿತವಾಗಿ ಶುದ್ಧ ನೀರಿನ ಯಂತ್ರವನ್ನು ನೀಡಿದ್ದಾರೆ.

Continue Reading

LATEST NEWS

ನೋಟದಾಗೆ ನಗೆಯ ಮೀಟಿದ ‘ಪರಸಂಗದ ಗೆಂಡೆತಿಮ್ಮ’ನ ನಾಯಕಿ ಇನ್ನಿಲ್ಲ

Published

on

ಮಂಗಳೂರು : ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದಲ್ಲಿ ಮರಕಣಿ ಪಾತ್ರದಲ್ಲಿ ನಟಿಸಿ ಜನಮನ ಗೆದ್ದಿದ್ದ  ರೀಟಾ ರಾಧಾಕೃಷ್ಣ ಆಂಚನ್‌ ಬುಧವಾರ ನಿ*ಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಕನ್ನಡ ಜೊತೆಗೆ ಅವರು ಹಿಂದಿ, ಪಂಜಾಬಿ ಹಾಗೂ ಗುಜರಾತಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಖ್ಯಾತರಾಗಿದ್ದರು. ರೀಟಾ ಅಂಚನ್‌ ಕಳೆದ ಹಲವು ದಿನಗಳಿಂದ ಅ*ನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮರಕಣಿಯಾಗಿ ಫೇಮಸ್ :

ನೋಟದಾಗೆ ನಗೆಯ ಮೀಟಿ…ಈ ಹಾಡು ಯಾರಿಗೆ ತಾನೆ ಗೊತ್ತಿಲ್ಲ. 1978ರಲ್ಲಿ ಲೋಕೇಶ್‌ ಮುಖ್ಯಭೂಮಿಕೆಯಲ್ಲಿದ್ದ ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದ ಈ ಹಾಡು ಇಂದಿಗೂ ಜೀ*ವಂತ. ಈ ಚಿತ್ರದಲ್ಲಿ ಮರಕಣಿಯಾಗಿ ನಟಿಸಿದ್ದವರು ಬೇರ್ಯಾರೂ ಅಲ್ಲ. ರೀಟಾ ರಾಧಾಕೃಷ್ಣ ಅಂಚನ್ ಅವರು. ಈ ಸಿನಿಮಾದ ನಟನೆಗಾಗಿ ಅವರು ಸಾಕಷ್ಟು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದರು

ಬಟ್ಟಲು ಕಂಗಳ ಚೆಲುವೆ ರೀಟಾ ಈ ಸಿನಿಮಾ ಮೂಲಕ ಜನಮನಸೂರೆಗೊಂಡಿದ್ದಾರೆ. ಪರಭಾಷಾ ಚಿತ್ರಗಳಲ್ಲೂ ಕಂಗೊಳಿಸಿದ್ದ ನಟಿ,  ಏನ್‌ ಎನಾದರ್‌, ಬದ್ನಾಂ, ಗರ್ಲ್ ಜವಾನ್ ಹೋಗಯಾ, ಆತ್ಮ, ಫರ್ಜ್ ಊರ್ ಪ್ಯಾರ್ ಮತ್ತು ವಿಶು ಕುಮಾರ್ ಅವರ ಕೋಸ್ಟಲ್‌, ಗಿರೀಶ್ ಕಾರ್ನಾಡ್ ಅವರ ಕನಕಾಂಬರ ಮುಂತಾದ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : Watch Video: ಜ್ಯೂಸ್ ಹೆಸರಿನಲ್ಲಿ ವಿಷ ಕುಡಿಸುತ್ತಿದ್ದಾರೆ ಇವರು:; ಎಚ್ಚರ ತಪ್ಪಿದರೆ ನಿಮ್ಮ ಜೀವಕ್ಕೇ ಗ್ಯಾರಂಟಿ ಇಲ್ಲ!

ಬಿಲ್ಲವರ ಸಂಘದ ಮಾಜಿ ಅಧ್ಯಕ್ಷ ಮತ್ತು ಟಾಟಾ ಕಂಪನಿಯಲ್ಲಿ ಹಿರಿಯ ಅಧಿಕಾರಿ. ಟಿ.ಆಂಚನ್ ಅವರ ಪುತ್ರಿಯಾಗಿರುವ ರೀಟಾ ಅಂಚನ್ ವಿವಾಹವಾದ ಬಳಿಕ ರಾಧಾಕೃಷ್ಣ ಮಂಚಿಗಯ್ಯ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಮದುವೆಯ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದ ಅವರು ಪತಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ರಘುರಾಮ್ ಪೋಸ್ಟ್ :

‘ ನಿಮ್ಮೆಲ್ಲರಿಗೂ ಇವರ ಜೀವನದ ಕಥೆಯನ್ನು ಪರಿಚಯಿಸಬೇಕೆಂಬ ನನ್ನ ಕನಸು ನನಸಾಗಲಿಲ್ಲ. ‘ಪರಸಂಗದ ಗೆಂಡೆತಿಮ್ಮ’ ಖ್ಯಾತಿಯ ಶ್ರೀಮತಿ ರೀಟಾ ಅಂಚನ್ ರಾಧಾಕೃಷ್ಣ ಅವರು ನೆನ್ನೆ (13/11/2024) ರಂದು ನಮ್ಮನ್ನು ದೈಹಿಕವಾಗಿ ಅ*ಗಲಿದ್ದಾರೆ. ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ಕೊಡಲಿ’ ಎಂದು ನಿರ್ದೇಶಕ ಹಾಗೂ ಕನಸುಗಳ ಕಾರ್ಖಾನೆ ಯೂಟ್ಯೂಬ್‌ನ ರಘುರಾಮ್‌ ತಿಳಿಸಿದ್ದಾರೆ.

 

Continue Reading

LATEST NEWS

Watch Video: ಜ್ಯೂಸ್ ಹೆಸರಿನಲ್ಲಿ ವಿಷ ಕುಡಿಸುತ್ತಿದ್ದಾರೆ ಇವರು:; ಎಚ್ಚರ ತಪ್ಪಿದರೆ ನಿಮ್ಮ ಜೀವಕ್ಕೇ ಗ್ಯಾರಂಟಿ ಇಲ್ಲ!

Published

on

ಜ್ಯೂಸ್ ಹೆಸರಿನಲ್ಲಿ ಮಾರುಕಟ್ಟೆಗೆ ಈಗ ಸ್ಲೋ ಪಾಯಿಸನ್ ಅಂದ್ರೆ ವಿಷ ಎಂಟ್ರಿ ಆಗುತ್ತಿದೆ, ಇದು ನಿಮ್ಮ ಮಕ್ಕಳು ಮತ್ತು ನಿಮ್ಮ ದೇಹಕ್ಕೆ ಸೇರಿದರೆ ಅದರಿಂದ ದೊಡ್ಡ ಸಮಸ್ಯೆ ಗ್ಯಾರಂಟಿ. ಹೀಗೆ ಆಹಾರ ತಜ್ಞರು & ವೈದ್ಯರು ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಜ್ಯೂಸ್ ಬಗ್ಗೆ ವಾರ್ನಿಂಗ್ ಕೊಡುತ್ತಿದ್ದಾರೆ.

ಅದರಲ್ಲೂ ಜ್ಯೂಸ್‌ಗೆ ಆಯುರ್ವೇದದ ಹೆಸರು ಕೊಟ್ಟು ದಾರಿ ತಪ್ಪಿಸುವ ಜನರು ಕೂಡ ಇದೀಗ ಮಾರುಕಟ್ಟೆಗೆ ಬಂದಿದ್ದು, ಸಾಕಷ್ಟು ದೊಡ್ಡ ಸಮಸ್ಯೆಗಳು ಎದುರಾಗಿ ಒದ್ದಾಡುವ ಪರಿಸ್ಥಿತಿ ಬಂದುಬಿಟ್ಟಿದೆ.

ಹೌದು, ಗ್ರಾಹಕರಿಗೆ ಮೋಸ ಮಾಡಲು ಅಂತಾನೇ ಹಲವು ಕಂಪನಿಗಳು ಹುಟ್ಟಿಕೊಂಡಿವೆ. ಅದರಲ್ಲೂ ನಿಮ್ಮ ಆರೋಗ್ಯ ಸರಿಯಾಗುತ್ತೆ, ನಿಮ್ಮ ಆರೋಗ್ಯಕ್ಕೆ ಇದು ಉತ್ತಮ ಎನ್ನುತ್ತ ವಿಷವನ್ನೇ ತಿನ್ನಿಸುವ ವಸ್ತುಗಳು ಹೆಚ್ಚಾಗುತ್ತಿವೆ. ಈ ಪೈಕಿ ಜ್ಯೂಸ್‌ಗಳು ಕೂಡ ಆರೋಗಕ್ಕೆ ಭಾರಿ ಡೇಂಜರ್ ಎಂಬ ಆರೋಪವನ್ನ ವೈದ್ಯರು ಮಾಡುತ್ತಾರೆ. ಅದರಲ್ಲೂ ಕೆಲವರು ಈ ನಿಮ್ಮ ಆರೋಗ್ಯದ ಹೆಸರನ್ನೇ ಬಂಡವಾಳ ಮಾಡಿಕೊಂಡು, ವಿಷಕಾರಿ ಜ್ಯೂಸ್ ಮಾರಾಟ ಮಾಡುತ್ತಾರೆ ಹುಷಾರ್ ಅಂತಿದ್ದಾರೆ ವೈದ್ಯರು!

ವಿಷಕಾರಿ ಜ್ಯೂಸ್ ಮಾರಾಟ?

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಒಂದು ಇದೀಗ ಸಂಚಲನ ಸೃಷ್ಟಿ ಮಾಡಿದೆ. ಯಾಕಂದ್ರೆ ರೆಡಿಮೇಡ್ ಜ್ಯೂಸ್ ಲೆಕ್ಕದಲ್ಲಿ, ನಿಮ್ಮ ಆರೋಗ್ಯ ಕಾಪಾಡುವ ಸುಳ್ಳು ಭರವಸೆ ನೀಡುತ್ತಾ ಸ್ಲೋ ಪಾಯಿಸನ್ ಜ್ಯೂಸ್‌ಗಳನ್ನ ಮಾರಾಟ ಮಾಡುತ್ತಿರುವ ಭಾರಿ ಗಂಭೀರ ಆರೋಪ ಮಾಡಲಾಗುತ್ತಿದೆ. ಈ ವಿಡಿಯೋ ನೋಡಿ ಜನರು ಕೂಡ ಆಘಾತಕಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜನರ ಬಳಿ ದುಡ್ಡು ಪಡೆಯುವ ಕೆಲವು ಸಂಸ್ಥೆಗಳು, ಜನಗಳಿಗೇ ಮೋಸ ಮಾಡುತ್ತಿರುವ ಆರೋಪ ಕೂಡ ಕೇಳಿ ಬರುತ್ತಿದೆ.

ಜ್ಯೂಸ್ ಕುಡಿಯಬೇಡಿ ಅಂತಾರೆ ವೈದ್ಯರು!

ವೈದ್ಯರು ಹೇಳುವ ಪ್ರಕಾರ ಮನುಷ್ಯನ ದೇಹಕ್ಕೆ ಉತ್ತಮವಾದ ಆಹಾರ ಸಾಕು. ಆದರೆ ಈ ರೀತಿ ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್‌ಗಳು ಮನುಷ್ಯರ ದೇಹಕ್ಕೆ ಉತ್ತಮ ಅಲ್ಲ. ಇದರಿಂದ ಮನುಷ್ಯರಿಗೆ ದೊಡ್ಡ ಸಮಸ್ಯೆ ಎದುರಾಗುತ್ತದೆ. ಭವಿಷ್ಯದಲ್ಲಿ ದೊಡ್ಡ ದೊಡ್ಡ ರೋಗಗಳು ಕೂಡ ಬರುತ್ತವೆ. ಹೀಗಾಗಿ ವೈದ್ಯರ ಸಲಹೆ ಇಲ್ಲದೆ ಯಾವುದೇ ರೀತಿಯ ಜ್ಯೂಸ್ ಕುಡಿಯಲು ಹೋಗಬಾರದು ಅಂತಾರೆ ಡಾಕ್ಟರ್ಸ್.

ಒಟ್ನಲ್ಲಿ ಜ್ಯೂಸ್ ಹೆಸರಲ್ಲಿ ಏನೇನೋ ಸೇಲ್ ಮಾಡುವವರ ವಿರುದ್ಧ ಕೂಡ ಸರ್ಕಾರ ಈಗ ಕ್ರಮ ಕೈಗೊಳ್ಳಬೇಕು. ಗೋಬಿ, ಪಾನಿಪುರಿ ರೀತಿ ಜ್ಯೂಸ್‌ಗಳನ್ನ ಕೂಡ ಸರ್ಕಾರ ಲ್ಯಾಬ್‌ನ ಒಳಗೆ ಪರೀಕ್ಷೆ ಮಾಡಿ, ಮನುಷ್ಯರ ಲಿವರ್, ಕಿಡ್ನಿ ಮೇಲೆ ಪ್ರಭಾವ ಬೀರುವ ವಸ್ತುಗಳನ್ನ ಬ್ಯಾನ್ ಮಾಡಬೇಕು ಎಂಬ ಆಗ್ರಹ ಜನರಿಂದ ಕೇಳಿ ಬರುತ್ತಿದೆ. ಹೀಗಾಗಿ ವೈದ್ಯರು ಜ್ಯೂಸ್ ಕುಡಿಯಬೇಡಿ ಅಂತಾ ಹೇಳಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ. ಅಲ್ಲದೆ ಆಯುರ್ವೇದ ಮತ್ತಿತರ ಹೆಸರಲ್ಲಿ ಜ್ಯೂಸ್ ಮಾರುವ ಸಂಸ್ಥೆಗಳ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗುತ್ತಿದೆ.

Watch Video:

Continue Reading

LATEST NEWS

Trending

Exit mobile version