Connect with us

LATEST NEWS

2025 ರ ಜಗತ್ತಿನ ಭವಿಷ್ಯದ ಬಗ್ಗೆ ಕಾಲಜ್ಞಾನಿಗಳು ಹೇಳಿದ್ದೇನು ?

Published

on

ಮಂಗಳೂರು : ನಾಸ್ಟ್ರಾಡಾಮಸ್ ಹಾಗೂ ಬಾಬಾ ವಂಗಾ ಬಗ್ಗೆ ಗೊತ್ತಿಲ್ಲದೆ ಇರುವವರು ತೀರ ವಿರಳ. ಈ ಇಬ್ಬರು ಕಾಲಜ್ಞಾನಿಗಳು ನುಡಿದಿರುವ ಭವಿಷ್ಯಗಳು ಆಗಾಗ ಮುನ್ನಲೆಗೆ ಬರುತ್ತಾ ಇರುತ್ತದೆ. ಈ ಕಾಲಜ್ಞಾನದ ಕುರಿತಾಗಿ ಪರ ವಿರೋಧಗಳು ಇದೆಯಾದ್ರೂ ಘಟಿಸಿದ ಘಟನೆಗಳನ್ನು ಅವಲೋಕಿಸಿದಾಗ ಹಲವು ಘಟನೆಗಳು ಈ ಇಬ್ಬರು ಕಾಲಜ್ಞಾನಿಗಳು ಹೇಳಿದಂತೆ ನಡೆದಿದೆ.

ನಾಸ್ಟ್ರಾಡಾಮಸ್ 16ನೇ ಶತಮಾನದಲ್ಲಿ ಹಾಗೂ ಬಾಬಾ ವಂಗಾ 20ನೇ ಶತಮಾನದಲ್ಲಿ ನುಡಿದ ಈ ಕಾಲಜ್ಞಾನದಂತೆ 2024 ರಲ್ಲಿ ಪ್ರಾಕೃತಿಕ ವಿಕೋಪ, ದೇಶಗಳ ನಡುವೆ ಯದ್ಧ, ಪ್ರಮುಖ ನಾಯಕರ ನಿಧನ, ಸೇರಿದಂತೆ ಹಲವಾರು ಘಟನೆಗಳು ನಡೆದಿದೆ. ಹೀಗಾಗಿ ಅವರ 2025 ರ ಕಾಲಜ್ಞಾನದಲ್ಲಿ ಹೇಳಲಾದ ಪ್ರಮುಖ ವಿಚಾರ ಇಲ್ಲಿದೆ.

  • 2025ರಲ್ಲಿ ಇಂಗ್ಲೆಂಡ್ ದೇಶದಲ್ಲಿ ಕ್ರೂರ ಯುದ್ದ ನಡೆಯಲಿದ್ದು, ಅಲ್ಲಿ ಫ್ಲೇಗ್‌ನಂತಹ ಮಾ*ರಕ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಅಂತ ನಾಸ್ಟ್ರಾಡಾಮಸ್ ಹೇಳಿದ್ದರೆ, ಬಾಬಾ ವಂಗಾ ಯುರೋಪ್ ರಾಷ್ಟ್ರಗಳಲ್ಲಿ ಸಂಘರ್ಷದಿಂದ ಉಂಟಾಗುವ ವಿನಾಶದಿಂದ ಜನಸಂಖ್ಯೆ ಇಳಿಮುಖವಾಗಬಹುದು ಎಂದಿದ್ದಾರೆ.
  • ಇನ್ನು ನಾಸ್ಟ್ರಾಡಾಮಸ್, 2025 ರಲ್ಲಿ ಕ್ಷುದ್ರ ಗ್ರಹಗಳು ಭೂಮಿಗೆ ಅಪ್ಪಳಿಸುವ ಅಥವಾ ಭೂಮಿಗೆ ಅತೀ ಸಮೀಪ ಬಂದು ಜೀವ ಹಾ*ನಿ ಉಂಟಾಗಬಹುದು ಹಾಗೂ ಹೊಸ ಗ್ರಹಗಳ ಅನ್ವೇಷಣೆ ನಡೆಯಬಹುದು ಎಂದಿದ್ದರೆ, ಬಾಬಾ ವಂಗಾ ಮಾನವರು ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಪ್ರಮುಖ ರಹಸ್ಯ ಬಯಲು ಮಾಡುವ ಕಾರಣದಿಂದ ಭೂಮಿಗೆ ಏಲಿಯನ್‌ಗಳ ದಾ*ಳಿ ಉಂಟಾಗುವ ಅ*ಪಾಯದ ಬಗ್ಗೆ ಹೇಳಿದ್ದಾರೆ.
  • ತಂತ್ರಜ್ಞಾನದಲ್ಲಿ ಭಾರಿ ಪ್ರಗತಿ ಸಾಧಿಸಲಿದ್ದು, ಹೊಸ ಹೊಸ ಆವಿಷ್ಕಾರಗಳು ನಡೆದು ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಆಗಲಿದೆ ಅಂತ ನಾಸ್ಟ್ರಾಡಾಮಸ್ ಹೇಳಿದ್ದಾರೆ. ಇದೇ ವಿಚಾರವಾಗಿ ಬಾಬಾ ವಂಗಾ, ಪ್ರಯೋಗಾಲಯಗಳಲ್ಲಿ ಕೃತಕ ಅಂಗಾಗ ಅಭಿವೃದ್ದಿ, ಮಾ*ರಕ ಕಾಯಿಲೆ ಗುಣಪಡಿಸುವ ಚಿಕಿತ್ಸಾ ವಿಧಾನಗಳ ಆವಿಷ್ಕಾರದಿಂದ ಮಾನವನ ಜೀವತಾವಧಿ ಹೆಚ್ಚಿಸುವ ತಂತ್ರಜ್ಞಾನಗಳು ಬರಲಿದೆ ಎಂದಿದ್ದಾರೆ.
  • ವಿಶ್ವದಲ್ಲಿ ಹೊಸ ಕರೆನ್ಸಿಯ ಉದಯವಾಗಬಹುದಾದ ಎಲ್ಲಾ ಸಾದ್ಯತೆಗಳು ಇದೆ. ಇದರಿಂದ ರಾಷ್ಟ್ರೀಯ ಕರೆನ್ಸಿಗಳು ಮೂಲೆಗುಂಪಾಗಿ ಜಾಗತಿಕ ಮಟ್ಟದಲ್ಲಿ ಹೊಸ ಕರೆನ್ಸಿಯಿಂದಲೇ ಆರ್ಥಿಕ ವಹಿವಾಟುಗಳು ನಡೆಯಬಹುದು ಅಂತ ನಾಸ್ಟ್ರಾಡಾಮಸ್ ಹೇಳಿದ್ದಾರೆ. ಇದೇ ವಿಚಾರವಾಗಿ ಬಾಬಾ ವಂಗಾ ಹಣಕಾಸಿನ ಅಸ್ಥಿರತೆ ಮತ್ತು ಸಂಭವನೀಯ ಆರ್ಥಿಕ ಕುಸಿತದಿಂದ ಕರೆನ್ಸಿಯ ಮೌಲ್ಯಗಳು ಬದಲಾಗಬಹುದು. ಚಿನ್ನ ಬೆಳ್ಳಿಯ ಬದಲಿಗೆ ಬೇರೆಯೇ ರೂಪದಲ್ಲಿ ಆರ್ಥಿಕ ವಹಿವಾಟು ನಡೆಯಬಹುದು ಎಂದಿದ್ದಾರೆ.
  • ಜಾಗತಿಕ ಮೂಲ ಸೌಕರ್ಯದ ಮೇಲೆ ಮಹತ್ವದ ದಾ*ಳಿಗಳು ನಡೆಯಲಿದ್ದು, ಅಂತಾರಾಷ್ಟ್ರೀಯ ವ್ಯಾಪಾರ, ಸಂವಹನ ಮತ್ತು ಭದ್ರತೆಯ ಮೇಲೆ ದಾ*ಳಿಯ ಪ್ರಭಾವ ಕಾಣಲಿದೆ ಅಂತ ನಾಸ್ಟ್ರಾಡಾಮಸ್ ಹೇಳಿದ್ದಾರೆ. ಬಾಬಾ ವಂಗಾ ಪ್ರಕಾರ, 2025 ರಲ್ಲಿ ಕೃತಕ ಬುದ್ದಿಯ ಉಪಯೋಗಕ್ಕೆ ಬ*ಲಿಯಾಗುವ ಜನರು ಅದನ್ನು ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಲಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಮತ್ತು ಆರ್ಥಿಕ ಹಾಗೂ ಆಡಳಿತಾತ್ಮಕ ಕ್ರಾಂತಿ ಮಾಡಲಿದೆ ಎಂದಿದ್ದಾರೆ.
  • ಜಗತ್ತಿನಲ್ಲಿ ಪ್ರಾಕೃತಿಕ ವಿ*ಕೋಪಗಳು ಹೆಚ್ಚಾಗಲಿದ್ದು, ಚಂಡಮಾರುತ ತ್ಸುನಾಮಿ, ಭೂ*ಕಂಪಗಳು ಸಂಭವಿಸಲಿದೆ ಇದು ಭೌಗೋಳಿಕ ಅಸ್ಥಿರತೆಯ ಜೊತೆಗೆ ಹವಾಮಾನದ ದೊಡ್ಡ ಬದಲಾವಣೆಗೆ ಕಾರಣವಾಗುವ ಎಚ್ಚರಿಕೆಯನ್ನು ನಾಸ್ಟ್ರಾಡಾಮಸ್ ನೀಡಿದ್ದಾನೆ. ಇದೇ ವಿಚಾರವಾಗಿ ಹೇಳಿರುವ ವಂಗಬಾಬ ದುರಂ*ತಮಯ ಹವಾಮಾನ ಬದಲಾವಣೆ ವ್ಯಾಪಕ ವಿನಾ*ಶಕ್ಕೆ ಕಾರಣವಾಗುತ್ತದೆ. ಸಮುದ್ರ ಮಟ್ಟದ ಏರಿಕೆ ಜಗತ್ತಿನ ಹಲವೆಡೆ ಆತಂಕ ಸೃಷ್ಟಿಸಬಹುದು ಎಂದಿದ್ದಾರೆ.
  • ವಿಶ್ವ ರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆಗಳು ಉಂಟಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳಲಿದೆ ಅಂತ ನಾಸ್ಟ್ರಾಡಮಸ್ ಹೇಳಿದ್ದಾರೆ. ಜಗತ್ತಿನ ಜನರ ನಡುವೆ ಸಂವಹನ ಅಭಿವೃದ್ದಿ ಹೊಂದಿ ಜನರ ನಡುವೆ ಭೌತಿಕ ದೂರ ಮಾಡುವ ಆವಿಷ್ಕಾರಗಳು ನಡೆಯಲಿದೆ ಅಂತ ಬಾಬಾ ವಂಗಾ ಹೇಳಿದ್ದಾರೆ.

LATEST NEWS

ರಾಜ್ಯದಲ್ಲಿ ಹೆಚ್ಚಿದ ಆತ್ಮಹತ್ಯೆ ಪ್ರಕರಣ: ಬೆಂಗಳೂರೇ ನಂಬರ್ 1

Published

on

ಮಂಗಳೂರು/ಮೈಸೂರು : ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲೂ ಪುರುಷರ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿದೆ.

ರಾಜ್ಯದಲ್ಲಿ 2021ರಿಂದ 2023ರವರೆಗೆ ಮೂರು ವರ್ಷಗಳಲ್ಲಿ 28,324 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಮಹಿಳೆಯರ ಆತ್ಮಹತ್ಯೆ ಪ್ರಕರಣಗಳಿಗಿಂತ ಮೂರು ಪಟ್ಟಿಗೂ ಹೆಚ್ಚಿದೆ. ಈ ಅವಧಿಯಲ್ಲಿ 8,159 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುರುಷ-ಮಹಿಳೆಯರ ಆತ್ಮಹತ್ಯೆಯಲ್ಲಿ ರಾಜಧಾನಿ ಬೆಂಗಳೂರೇ ಮುಂದಿದೆ.

ಬೆಂಗಳೂರು ನಗರದ ನಂತರ, ಕ್ರಮವಾಗಿ ಬೆಳಗಾವಿ, ಬೆಂಗಳೂರು ಜಿಲ್ಲೆ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ದಾಖಲಾಗಿವೆ. ಚಿಕ್ಕಮಗಳುರು, ಹಾವೇರಿ, ಉಡುಪಿ, ವಿಜಯಪುರ, ದಾವಣಗೆರೆ, ಮೈಸೂರಿನಲ್ಲೂ ಹೆಚ್ಚಿವೆ.

ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ವಿಮಾನ ದುರಂತ !

ಮೈಸೂರಿನ ‘ಒಡನಾಡಿ’ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಗೆ, ರಾಜ್ಯ ಅಪರಾಧ ದಾಖಲಾತಿ ವಿಭಾಗವು ಎಲ್ಲ ಜಿಲ್ಲೆಗಳು, ಪ್ರಮುಖ ನಗರಗಳು, ಕರ್ನಾಟಕ ರೈಲ್ವೆ ಮತ್ತು ಕೆಜಿಎಫ್ ಪೊಲೀಸ್ ಹಾಗೂ 38 ವಿಭಾಗಗಳ ಅಡಿ ನೀಡಿರುವ ಅಂಕಿ ಅಂಶದಲ್ಲಿ ಈ ಮಾಹಿತಿ ಇದೆ.

ಮೂರು ವರ್ಷದಲ್ಲಿ, ಪುರುಷರ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿದರೆ, ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ ಎಂಬುದೂ ಅಂಕಿ ಅಂಶದಿಂದ ಗೊತ್ತಾಗುತ್ತದೆ.

Continue Reading

BIG BOSS

BBK11: ಈ ವಾರ ಬಿಗ್ ಬಾಸ್‌ ಮನೆಯಿಂದ ಆಚೆ ಬರೋದು ಯಾರು? ಎಲಿಮಿನೇಷನ್‌ನಲ್ಲಿ ಬಿಗ್​ ಟ್ವಿಸ್ಟ್!

Published

on

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 96ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್​ಬಾಸ್ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 10 ಸ್ಪರ್ಧಿಗಳು ಯಾರು ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲಿದ್ದಾರೆ ಅಂತ ಕುತೂಹಲ ಮೂಡಿದೆ.

ಕಳೆದ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಅವರ ಪೈಕಿ ಐಶ್ವರ್ಯಾ ಸಿಂಧೋಗಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದರು. ಆದ್ರೆ ಈ ವಾರ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಹೋಗುವುದಿಲ್ಲ. ಏಕೆಂದರೆ ಈ ವಾರ ಫ್ಯಾಮಿಲಿ ರೌಂಡ್​ ಆಗಿದ್ದ ಕಾರಣ ನಾಮಿನೇಷನ್​ ಪ್ರಕ್ರಿಯೆ ನಡೆದಿಲ್ಲ.

ಹೀಗಾಗಿ ಈ ವಾರ ಯಾವೊಬ್ಬ ಸ್ಪರ್ಧಿಯೂ ಬಿಗ್​ಬಾಸ್​ ಮನೆಯಿಂದ ಆಚೆ ಹೋಗುವುದಿಲ್ಲ. 9 ಸ್ಪರ್ಧಿಗಳು ಈ ವಾರ ಸೇಫ್​ ಆಗಿದ್ದಾರೆ. ಮುಂದಿನ ವಾರಕ್ಕೆ ಈ 9 ಜನರಲ್ಲಿ ಯಾರು ಬಿಗ್​ ಮನೆಯಿಂದ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ.​

ಇನ್ನೂ ಬಿಗ್​ಬಾಸ್​ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ವಾರ ಕಳೆದಂತೆ ಬಿಗ್​ಬಾಸ್​ ಮನೆಯಿಂದ ಒಬ್ಬೊಬ್ಬರಾಗಿ ಆಚೆ ಬಂದಿದ್ದರು. ಸದ್ಯ ಈಗ ಬಿಗ್​ಬಾಸ್​ ಮನೆಗೆ ಈ 9 ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ ಚೆನ್ನಾಗಿ ಆಡು ಅಂತ ಕಿವಿ ಮಾತನ್ನು ಹೇಳಿದ್ದಾರೆ. ಇನ್ಮುಂದೆ ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಯಾವ ರೀತಿ ಟೇಕ್ ಆಫ್ ಆಗಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Continue Reading

BIG BOSS

BIGG BOSS: ಬಿಗ್​​ಬಾಸ್​​ ಮನೆಯಲ್ಲಿ ಕಿಸ್ಸಿಂಗ್ ಟಾಸ್ಕ್​.. ಮೂರು ತಿಂಗಳು ಆಗಿದೆ ಪ್ರ್ಯಾಕ್ಟೀಸ್ ಇಲ್ಲವೆಂದ ಧನು..!

Published

on

ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್​ ಸೀಸನ್ 11 ಕೊನೆ ಹಂತಕ್ಕೆ ತಲುಪುತ್ತಿದೆ. ಕಳೆದ ವಾರ ಐಶ್ವರ್ಯ ಹೊರಗಡೆ ಬಂದಿದ್ದರು. ಈಗ ಮನೆಯಲ್ಲಿ ಕೇವಲ 9 ಸ್ಪರ್ಧಿಗಳು ಮಾತ್ರ ಉಳಿದಿದ್ದು ಇದರಲ್ಲಿ ಈ ವಾರ ಹೊರಗಡೆ ಬರುವವರು ಯಾರು ಎಂಬುದು ಕುತೂಹಲ ಇದೆ. ಇದರ ನಡುವೆ ಬಿಗ್​ಬಾಸ್​​ ಮನೆಯಲ್ಲಿ ಕಿಸ್ ಕೊಡುವ ಟಾಸ್ಕ್ ಕೊಡಲಾಗಿದ್ದು ಯಾವ್ಯಾವ ಸ್ಪರ್ಧಿ ಏನೆಲ್ಲಾ ಮಾಡಿದರು ಎನ್ನುವುದು ಇಲ್ಲಿದೆ.

ಕ್ಯಾಪ್ಟನ್ ಆಗಿರುವ ಭವ್ಯ ಮಧ್ಯೆದಲ್ಲಿ ನಿಂತು ಟಾಸ್ಕ್ ಅನ್ನು ಗಮನಿಸುತ್ತಿದ್ದಾರೆ. ತ್ರಿವಿಕ್ರಮ್- ಚೈತ್ರಾ, ಗೌತಮಿ- ಧನರಾಜ್, ಮಂಜು- ಹನುಮಂತು ಹೀಗೆ ಇಬ್ಬಿಬ್ಬರ ಟೀಮ್ ಮಾಡಲಾಗಿದೆ. ಮೂವರು ಕೋಲಿನಿಂದ ಲಿಫ್ಟ್​​ಸ್ಟಿಕ್ ಅನ್ನು ಚೈತ್ರಾ, ಧನರಾಜ್ ಹಾಗೂ ಹನುಮಂತು ತುಟಿಗೆ ಹಚ್ಚಬೇಕು. ತಕ್ಷಣ ಈ ಮೂವರು ಓಡಿ ಹೋಗಿ ವೈಟ್​ ಬೋರ್ಡ್​ ಮೇಲೆ ಕಿಸ್​ ಕೊಡಬೇಕು. ಯಾರು ಹೆಚ್ಚು ಕಿಸ್ ಕೊಡುತ್ತಾರೋ ಅವರೇ ಇದರಲ್ಲಿ ಗೆಲುವು ಸಾಧಿಸುವವರು ಎಂದು ಹೇಳಬಹುದು.

ಈ ರೀತಿ ಟಾಸ್ಕ್​​ ಆಡುವಾಗ ಧನರಾಜ್​ಗೆ ರಜತ್ ಕರೆಕ್ಟ್​ ಆಗಿ ಕಿಸ್​ಗಳು ಬರುತ್ತಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಸಖತ್ ಕಾಮಿಡಿಯಾಗಿ ಉತ್ತರಿಸಿದ ಧನು, ಮೂರು ತಿಂಗಳು ಆಯಿತಾಲ್ಲ, ಕರೆಕ್ಟ್​ ಆಗಿ ಬರುತ್ತಿಲ್ಲ ಎಂದಿದ್ದಾರೆ. ಇದಾದ ಮೇಲೆ ಮುತ್ತು ಕೊಡುವುದಿಲ್ವಾ ನನಗೆ, ನೀವು ಕೊಡುತ್ತೀರಾ ಎಂದು ಧನು, ಚೈತ್ರಾರನ್ನ ಓಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಚೈತ್ರಾ ತಂಗಿ ಸೇರಿ ಎಲ್ಲ ಸ್ಪರ್ಧಿಗಳು ಕೂಡ ಕುಳಿತಲ್ಲೇ ನಕ್ಕಿದ್ದಾರೆ.

ಇನ್ನು ಈ ಟಾಸ್ಕ್​ನಲ್ಲಿ ಧನರಾಜ್, ಹನುಂತು ಗೆಲುವು ಸಾಧಿಸಿರಬಹುದೆಂದು ವಿಡಿಯೋದಲ್ಲಿ ಕಾಣುತ್ತೆ. ಈ ವೇಳೆ ಧನರಾಜ್, ಹನುಮಂತುನ ಹಿಡಿದು ಕಿಸ್ ಕೊಡಲು ಹೋಗಿ ತಬ್ಬಿಕೊಂಡಿದ್ದಾರೆ. ಕಿಸ್ ಕೊಡುವ ಟಾಸ್ಕ್​ನಲ್ಲಿ ರಜತ್ ಅವರು ಎಲ್ಲ ಸ್ಪರ್ಧಿಗಳನ್ನು ಕಿಚಾಯಿಸಿ, ತಮಾಷೆ ಮಾಡಿದ್ದಾರೆ. ಚೈತ್ರಾ, ಧನು, ಹನುಮಂತು ಅವರ ತಂದೆ, ತಾಯಿರಿಗೂ ಕೂಡ ರಜತ್ ಕಾಮಿಡಿ ಮಾಡಿದ್ದಾರೆ.

Continue Reading

LATEST NEWS

Trending

Exit mobile version