ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ಇಂದು ( ಶುಕ್ರವಾರ) ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂದರ್ಭ ಅಗತ್ಯ ವಸ್ತುಗಳ ಪೂರೈಕೆ ಹಾಗೂ ವೈದ್ಯಕೀಯ ಸೇವಾ ವಲಯ ಸಂಚಾರ ಹೊರತುಪಡಿಸಿ ಬೇರೆಲ್ಲದಕ್ಕೂ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಟ್ಟುನಿಟ್ಟಾಗಿ ನಿಷೇಧ ಹೇರಲಾಗಿದೆ.
ಅಗತ್ಯ ವಸ್ತುಗಳ ಪೂರೈಕೆ ಹಾಗೂ ವೈದ್ಯಕೀಯ ಸೇವಾ ವಲಯ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಮಧ್ಯಾಹ್ಮ ಎರಡು ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ.
ಕೊರೊನಾ ನಿಯಮ ಉಲ್ಲಂಘಿಸಿ ರಸ್ತೆಗಳಿದರೆ ವಾಹನಗಳನ್ನು ಸೀಜ್ ಮಾಡಲು ಕೂಡ ಆದೇಶದಲ್ಲಿ ಉಲ್ಲೇಕಿಸಲಾಗಿದೆ. ಎಲ್ಲಾ ಕೇಂದ್ರ-ರಾಜ್ಯ ಸರ್ಕಾರದ ಕಚೇರಿಗಳು, ಕೋವಿಡ್ ಸಂಬಂಧಿತ ಕೆಲಸ ಮಾಡುವ ಕಂಪನಿಗಳು, ಅಗತ್ಯ ವಸ್ತುಗಳ ಉತ್ಪಾದನೆಯ ಎಲ್ಲಾ ಕೈಗಾರಿಗಳು, ಸಂಸ್ಥೆಗಳುಟೆಲಿಕಾಂ ಹಾಗೂ ಇಂಟರ್ನೆಟ್ ಸರ್ವೀಸ್ ಪೂರೈಕೆದಾರರ ಓಡಾಟಕ್ಕೆ ಅವಕಾಶಐಟಿ-ಬಿಟಿ ಸಿಬ್ಬಂದಿ ನೌಕರರು ವರ್ಕ್ ಫ್ರಂ ಹೋಂ ಕೆಲಸ ಮಾಡಬೇಕುರೋಗಿಗಳು, ಅವರ ಕುಟುಂಬಸ್ಥರು ಹಾಗೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವವರಿಗೆ ಸಂಬಂಧಪಟ್ಟ ಪ್ರೂಫ್ ತೋರಿಸಿ ಓಡಾಟಕ್ಕೆ ಅವಕಾಶ ನೀಡಲಾಗಿದೆ.
ಅದೇ ರೀತಿ ಅಗತ್ಯ ವಸ್ತುಗಳು, ತರಕಾರಿ-ಮಾಂಸ ಮಾರಾಟಕ್ಕೆ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ, 2 ಗಂಟೆಯವರೆಗೆ ಅವಕಾಶ ಮದ್ಯದಂಗಡಿಗಳು ಕೂಡ ಎರಡು ಗಂಟೆಯವರೆಗೆ ತೆರೆದಿರಲಿವೆಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ಗೆ ಅವಕಾಶರೈಲು-ವಿಮಾನ ಸಂಚಾರ ಇರಲಿದೆ.
ರಸ್ತೆ ಮಾರ್ಗದ ಮೂಲಕ ಅಂತರ್ ರಾಜ್ಯ, ಅಂತರ್ ಜಿಲ್ಲೆಗಳ ಅಗತ್ಯ ಓಡಾಟಕ್ಕೆ ಅವಕಾಶಮೊದಲೇ ಅನುಮತಿ ಪಡೆದ ಮದುವೆಗಳು 40 ಜನರ ಸಮ್ಮುಖದಲ್ಲಿ ಮನೆಗಳಲ್ಲಿ ನಡೆಯಲು ಯಾವುದೇ ನಿಬಂಧನೆ ಇಲ್ಲ.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಐದು ಜನಕ್ಕೆ ಅವಕಾಶ.ಈ ಕಾರಣಗಳನ್ನು ಹೊರತುಪಡಿಸಿ ಅನಗತ್ಯ ಓಡಾಟ ನಡೆಸಿದರೆ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.