BANTWAL
ಬಿಸಿರೋಡ್ ಹೆದ್ದಾರಿ ಪಕ್ಕದಲ್ಲೇ ವಾರದ ಸಂತೆ-ಟ್ರಾಫಿಕ್ ಸಂಚಾರಕ್ಕೆ ಅಡಚಣೆ
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಧಿಕೃತ ವಾರದ ಸಂತೆ. ಬಿ ಸಿ ರೋಡು ಬಸ್ ನಿಲ್ದಾಣದಲ್ಲಿಯೇ ವಾರದ ಸಂತೆ ನಡೆಯುತ್ತಿದೆ. ಸಂತೆ ವ್ಯಾಪಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದ್ದರೂ ಪುರಸಭೆ ಮಾತ್ರ ಮೂಕವಾಗಿ ಕೂತಿದೆ.
ಇದು ಸುಂದರ ಬಿಸಿರೋಡಿನ ಕಲ್ಪನೆಗೆ ಕಪ್ಪುಚುಕ್ಕೆಯಲ್ಲವೇ ಎಂಬ ಪ್ರಶ್ನೆಯನ್ನು ಬಂಟ್ವಾಳ ಬಿಸಿ ರೋಡಿನ ಜನತೆ ಕೇಳುತ್ತಿದ್ದಾರೆ.
ಬಿಸಿರೋಡಿನ ಹೃದಯ ಭಾಗ ಬಸ್ ನಿಲ್ದಾಣದ ಪ್ಲೈ ಓವರ್ ನ ಕೆಳಗಡೆ ವಾರದ ಸಂತೆ ನಡೆಯುತ್ತಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಶಾಸಕರ ಸುಂದರ ಬಿಸಿರೋಡಿನ ಕಲ್ಪನೆ ಯಿಂದ ಪ್ಲೈ ಓವರ್ ನ ಅಡಿಭಾಗದಲ್ಲಿ ಇಂಟರ್ ಲಾಕ್ ಅಳವಡಿಸಲಾಗಿದೆ.
ಆದರೆ ಇದರ ಸುಂದರ ಕೆಡಿಸಿದ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಸಂತೆ ವ್ಯಾಪಾರಿಗಳು ಸಂಚಾರಕ್ಕೂ ಅಡಚಣೆ ಮಾಡುತ್ತಿದ್ದಾರೆ.
ಸಂತೆಗಾಗಿ ಬರುವ ಗ್ರಾಹಕರ ವಾಹನಗಳನ್ನು ಬಸ್ ನಿಲ್ದಾಣ ರಾಷ್ಟ್ರೀಯ ಹೆದ್ದಾರಿ ಮಧ್ಯೆಯೇ ನಿಲ್ಲಿಸಿ ವ್ಯಾಪಾರ ವಹಿವಾಟು ನಡೆಸುವ ಮೂಲಕ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಪುರಸಭೆ ಬೀದಿ ಬದಿ ವ್ಯಾಪಾರಸ್ಥರಿಗೆ ಹಾಗೂ ವಾರದ ಸಂತೆಗಾಗಿ ಇತರ ಕಡೆ ಅವಕಾಶ ನೀಡಿದರೆ ಸಮಸ್ಯೆ ಪರಿಹಾರ ಸಿಗಬಹುದು ಎಂಬುವುದು ಸಾರ್ವಜನಿಕರ ಅಭಿಪ್ರಾಯ.
BANTWAL
ಪುತ್ತೂರು ಜಾತ್ರೆಯಿಂದ ಹಿಂದಿರುಗುವ ವೇಳೆ ಜವರಾಯನ ಅಟ್ಟಹಾಸ; ಜೀಪ್ ಡಿಕ್ಕಿ; ಬೈಕ್ ಸವಾರ ಸಾ*ವು
ಪುತ್ತೂರು : ಜೀಪೊಂದು ಬೈಕ್ ಗೆ ಡಿ*ಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃ*ತಪಟ್ಟು, ಅವರ ಇಬ್ಬರು ಮಕ್ಕಳು ಗಂಭೀ*ರ ಗಾ*ಯಗೊಂಡ ಘಟನೆ ಬುಧವಾರ ರಾತ್ರಿ ಪುತ್ತೂರು ಸುಬ್ರಹ್ಮಣ್ಯ ರಸ್ತೆಯಲ್ಲಿನ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ (48) ಮೃ*ತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀ*ರ ಗಾಯಗೊಂಡಿದ್ದು, ಗಾ*ಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೋಕೇಶ್ ಅವರು ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಮುಂಭಾಗದಿಂದ ಆಗಮಿಸಿದ ಜೀಪು ಅವರು ಚಲಾಯಿಸುತ್ತಿದ್ದ ಬೈಕ್ ಗೆ ಡಿ*ಕ್ಕಿಯಾಗಿತ್ತು.
ಇದನ್ನೂ ಓದಿ : ಕರಡಿಗೂ ಕ್ಯಾಪ್ಟನ್ ಗೂ ಫೈಟ್; ಮನೆಯಂಗಳದಲ್ಲೇ ಕಾದಾಟ! ವೀಡಿಯೋ ವೈರಲ್
ಡಿ*ಕ್ಕಿಯ ರಭಸಕ್ಕೆ ಬೈಕ್ ಎರಡು ತುಂಡಾಗಿದೆ. ಸುಮಾರು 50 ಮೀಟರ್ ದೂರದ ತನಕ ಬೈಕನ್ನು ಜೀಪ್ ಎಳೆದುಕೊಂಡು ಹೋಗಿದೆ. ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಲೋಕೇಶ್ ಅವರು ಸ್ಥಳದಲ್ಲಿಯೇ ಸಾ*ವನ್ನಪ್ಪಿದ್ದಾರೆ. ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BANTWAL
ಗಂಡ ಹೆಂಡತಿಗೆ ನಾಲ್ವರಿಂದ ಹಲ್ಲೆ..!!
ಬಂಟ್ವಾಳ; ಅಪಘಾತದ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ ಮಾಡಿರುವ ಘಟನೆ ಕಲ್ಲಡ್ಕದ ಕರಿಂಗಾನ ಕ್ರಾಸ್ ಎಂಬಲ್ಲಿ ಎ.15ರಂದು ಸಂಜೆ ವೇಳೆ ನಡೆದಿದೆ. ಪುತ್ತೂರು ಏರ್ಮುಂಜ ಪಲ್ಲ ನಿವಾಸಿಗಳಾದ ಮಂಜುನಾಥ್ ಮತ್ತು ಅವರ ಪತ್ನಿ ಪೂರ್ಣಿಮಾ ಹಲ್ಲೆಗೊಳಗಾದವರು. ಹಲ್ಲೆಗೊಳಗಾದವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಜುನಾಥ್ ಅವರು ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲಡ್ಕ ಸಮೀಪದ ನರಹರಿ ಎಂಬಲ್ಲಿ ಇವರ ಕಾರಿಗೆ ಹರಿಯಾಣ ಮೂಲದ ಕಾರೊಂದ ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ಪ್ರಶ್ನಿಸಿದಕ್ಕೆ ಅಪಘಾತ ಎಸಗಿದ ಕಾರು ಮುಂದೆ ಹೋಗಿ ಕರಿಂಗಾಣ ಕ್ರಾಸ್ ಎಂಬಲ್ಲಿ ಅಡ್ಡವಾಗಿ ಇರಿಸಿ ಮಂಜುನಾಥ್ ಹಾಗೂ ಅವರ ಪತ್ನಿ ಪೂರ್ಣಿಮಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಪೂರ್ಣಿಮಾ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಹಲ್ಲೆಯಿಂದ ಮಂಜುನಾಥ್ ಅವರ ಕಣ್ಣಿಗೆ ಏಟಾಗಿದ್ದು, ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ನಡೆದ ಕೂಡಲೇ ಸಂಚಾರ ಪೊಲೀಸರು ಭೇಟಿ ನೀಡಿ ವಾಹನವನ್ನು ಹಾಗೂ ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಭಜರಂಗದಳ, ವಿಶ್ವಹಿಂದೂಪರಿಷತ್ ಕಲ್ಲಡ್ಕ ಪ್ರಖಂಡ ಖಂಡನೆ ವ್ಯಕ್ತಪಡಿಸಿದ್ದಾರೆ.
BANTWAL
ಹಿಂದೂ ಸಂಘಟನೆಯ ಮುಖಂಡನಿಗೆ ಸ್ನೇಹಿತನಿಂದಲೆ ಚೂ*ರಿ ಇರಿತ
ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತನೇ ಚೂ*ರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ಭಾನುವಾರ(ಎ.14) ರಾತ್ರಿ ನಡೆದಿದೆ.
ಹಿಂದೂ ಯುವಸೇನೆಯ ಮುಖಂಡ ಉದ್ಯಮಿಯಾಗಿರುವ ಪುಷ್ಪರಾಜ್ ಎಂಬವರಿಗೆ ಜಕ್ರಿಬೆಟ್ಟು ಎಂಬಲ್ಲಿ ಚೂ*ರಿ ಇರಿತವಾಗಿದೆ. ಇರಿತಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ರಿಕ್ಷಾದಲ್ಲಿ ಜತೆಯಾಗಿ ತೆರಳುತ್ತಿದ್ದಾಗಲೇ ಸ್ನೇಹಿತ ರವಿ ಎಂಬಾತ ಚೂ*ರಿಯಿಂದ ಕುತ್ತಿಗೆಗೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಪುಷ್ಪರಾಜ್ ರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ರವಿ ಚೂ*ರಿ ಇರಿದು ಪರಾರಿಯಾಗಿದ್ದಾನೆ. ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.