Wednesday, August 12, 2020

‘ಸರ್ಕಾರಕ್ಕೆ ಹಣ ನೀಡುತ್ತೇವೆ, ಮದ್ಯ ಮಾರಾಟ ನಿಲ್ಲಿಸಿ’: ಹಗರಿಬೊಮ್ಮನಹಳ್ಳಿಯಲ್ಲಿ ಮಹಿಳೆಯರ ವಿಶೇಷ ಪ್ರತಿಭಟನೆ

Array

ಆಧುನಿಕ ಷಹಜಾನ್….ಮಡಿದ ಪತ್ನಿಯನ್ನು ಮೂರ್ತಿ ರೂಪದಲ್ಲಿ ಮತ್ತೆ ಮನೆ ತುಂಬಿಕೊಂಡ ಪತಿ!

ಕೊಪ್ಪಳ : ಒಂದು ಅಪರೂಪದ ಪ್ರೇಮಕಥೆಗೆ ಕೊಪ್ಪಳ ಸಾಕ್ಷಿಯಾಗಿದೆ. ಎರಡು ವರ್ಷಗಳ ಹಿಂದೆ ಅಗಲಿದ ತಮ್ಮ ಪತ್ನಿಯ ನೆನಪಾರ್ಥವಾಗಿ ಮೇಣದ ಮೂರ್ತಿಯೊಂದಿಗೆ ಉದ್ಯಮಿಯೊಬ್ಬರು ಮನೆಯ ಗೃಹ ಪ್ರವೇಶ ನಡೆಸಿದ್ದಾರೆ. ಈ ಮೂಲಕ ಪತ್ನಿಯ ಮೇಲಿನ ಪ್ರೀತಿಯನ್ನು...

ಬೆಂಗಳೂರು ಗಲಭೆ – ಧಾರ್ಮಿಕ ಅವಹೇಳನಕಾರಿ ಫೋಸ್ಟ್ ಹಾಕಿದ ನವೀನ್ ಅರೆಸ್ಟ್

ಬೆಂಗಳೂರು ಅಗಸ್ಟ್ 12: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಆಪ್ತನ ಧಾರ್ಮಿಕ ಅವಹೇಳನಕಾರಿ ಪೋಸ್ಟ್ ಗೆ ಹಿನ್ನಲೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ತೀವ್ರ...

ಬೆಂಗಳೂರು ಗಲಭೆ : ಪೊಲೀಸ್ ಫೈರಿಂಗ್ ನಲ್ಲಿ ಮೂವರು ಸಾವು..ಕರ್ಫ್ಯೂ ಜಾರಿ..!

ಬೆಂಗಳೂರು ಗಲಭೆ : ಪೊಲೀಸ್ ಫೈರಿಂಗ್ ನಲ್ಲಿ ಮೂವರು ಸಾವು..ಕರ್ಫ್ಯೂ ಜಾರಿ..! ಬೆಂಗಳೂರು : ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿಕರೊಬ್ಬರು ಫೇಸ್ ಬುಕ್‌ ನಲ್ಲಿ ಅವಹೇಳಕಾರಿ  ಪೋಸ್ಟ್​ ಮಾಡಿದ್ದರು ಎಂಬ ಕಾರಣಕ್ಕೆ ನಿನ್ನೆ...

ಗಲಭೆಕೋರರ ವಿರುದ್ದ ಕ್ರಮಕ್ಕೆ ಪೊಲೀಸರಿಗೆ ಸಂಪೂರ್ಣ ಅಧಿಕಾರ – ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಉಡುಪಿ ಅಗಸ್ಟ್ 12: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ತೀವ್ರ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿ ಅದು ಹಿಂಸಾರೂಪಕ್ಕೆ ತಿರುಗಿ ಇಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ...

ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯಿಂದ ಮುಸ್ಲಿಂ ವಿರೋಧಿ ಪೋಸ್ಟ್‌; ನಾಯಕನ ಮನೆ ಎದುರು ಬೆಂಕಿ ಹಚ್ಚಿ ದಾಂಧಲೆ..!

ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯಿಂದ ಮುಸ್ಲಿಂ ವಿರೋಧಿ ಪೋಸ್ಟ್‌; ನಾಯಕನ ಮನೆ ಎದುರು ಬೆಂಕಿ ಹಚ್ಚಿ ದಾಂಧಲೆ..! ಬೆಂಗಳೂರು : ಶಾಸಕ ಅಖಂಡ ಶ್ರೀನಿವಾಸ್‌ ಅವರ ಆಪ್ತರೂ ಆಗಿರುವಂತಹ ನವೀನ್‌ ಎಂಬುವವರು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ...

‘ಸರ್ಕಾರಕ್ಕೆ ಹಣ ನೀಡುತ್ತೇವೆ, ಮದ್ಯ ಮಾರಾಟ ನಿಲ್ಲಿಸಿ’: ಹಗರಿಬೊಮ್ಮನಹಳ್ಳಿಯಲ್ಲಿ ಮಹಿಳೆಯರ ವಿಶೇಷ ಪ್ರತಿಭಟನೆ

ಬಳ್ಳಾರಿ: ಸರ್ಕಾರಕ್ಕೆ ನಾವು ಹಣ ಕೊಡುತ್ತೇವೆ. ಮದ್ಯ ರದ್ದು ಮಾಡಿ ನಮ್ಮ ಮನೆಗಳನ್ನು ಉಳಿಸಿ ಎಂದು ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯ ಗ್ರಾಮಸ್ಥರು ವಿಶಿಷ್ಟ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

ತಮ್ಮ ಹಣವನ್ನು ಸರ್ಕಾರಕ್ಕೆ ಮನಿ ಆರ್ಡರ್ ಮಾಡೋ ಮೂಲಕ ಚಳುವಳಿಗಾರರು ತಲುಪಿಸಿ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.

ಚಳುವಳಿಗಾರರು ಅಂಚೆ ಇಲಾಖೆಯಿಂದ ಮನಿಯಾರ್ಡರ್ ರಸೀದಿಯ ಮೂಲಕ ತಮ್ಮ ಹಣವನ್ನು ಸರ್ಕಾರದ ಖಜಾನೆಗೆ ತಮ್ಮ ಹಣ ಸಂದಾಯ ಮಾಡೋ ಮೂಲಕ ಮದ್ಯ ನಿಷೇಧಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಮದ್ಯ ಮಾರಾಟದಿಂದ ಸಂಸಾರಗಳಲ್ಲಿ ನೆಮ್ಮದಿ ಹಾಳಾಗಿದೆ ಎಂದು ಚಳುವಳಿಗಾರರು ದೂರಿದ್ದಾರೆ.

ಹಗರಿ ಬೊಮ್ಮನ ಹಳ್ಳಿ ತಾಲೂಕಿನ ಅರಗೊಂಡನಹಳ್ಳಿಯಲ್ಲಿ ಜರುಗಿದ ಚಳುವಳಿಯಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಹೋರಾಟಗಾರ್ತಿ ಎಮ್.ಬಿ.ಕೊಟ್ರಮ್,  ಲಾಕ್ ಡೌನ್ ನಿಂದಾಗಿ ಮದ್ಯ ಮಾರಾಟ ಸ್ಥಗಿತಗೊಳಿಸಿದ್ದು, ಸಂಸಾರಗಳು ಎಲ್ಲಾ  ರೀತಿಯಿಂದ ಸುಧಾರಿಸಿದ್ದವು.

ಆದರೆ ಇದೀಗ ಮತ್ತೆ ಮದ್ಯ ಮಾರಾಟ ಆರಂಭಿಸಿದ್ದರಿಂದ ಮತ್ತೆ ನೆಮ್ಮದಿ ಹಾಳಾಗಿದೆ. ಇದರಿಂದ ಸರ್ಕಾರ ಶಾಶ್ವತವಾಗಿ ಮದ್ಯ ಮಾರಾಟ ನಿಷೇಧಿಸಬೇಕೆಂದು ಆಗ್ರಹಿಸಿದರು.

ಅದಕ್ಕಾಗಿ ತಾವು ಚಳುವಳಿ ಆರಂಭಿಸಿರುವುದಾಗಿ ಹೇಳಿದರು. ಕೆಲ ಚಳುವಳಿಗಾರರು ಮಾತನಾಡಿ, ಮದ್ಯ ಮಾರಾಟದಿಂದ ಸರ್ಕಾರ ನಡೆಸುತ್ತೇವೆ ಎನ್ನುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಬಡ ಕೂಲಿ ಕಾರ್ಮಿಕರನ್ನು ಆರ್ಥಿಕವಾಗಿ ಶೋಷಣೆಗೆ ಗುರಿಮಾಡಿ, ಅವರ ರಕ್ತ ಹೀರಿ ಬರುವ ಆದಾಯದಿಂದ ಸರ್ಕಾರ ನಡೆಸುತ್ತೇವೆ ಎನ್ನುವ, ಸರ್ಕಾರದ ಅಮಾನವೀಯ ನಿಲುವನ್ನು ತಾವು ತೀವ್ರವಾಗಿ ಖಂಡಿಸುವುದಾಗಿ ಅವರು ತಿಳಿಸಿದರು.

ಮದ್ಯ ನಿಷೇಧಿಸುವವರೆಗೂ ಹೋರಾಟ ನಿಲ್ಲದು, ರಾಜ್ಯವ್ಯಾಪಿ ಹೋರಾಟಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Hot Topics

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..! 

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..!  ಮಂಗಳೂರು : ಇಂದು ಬೆಳಿಗ್ಗೆ ಮಂಗಳೂರು ನಗರದ ಕದ್ರಿಯಲ್ಲಿ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ನಗರದ ಕದ್ರಿ...

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..!

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..! ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಸನಿಹದ ಮೃತ್ಯಂಜಯ ಹೊಳೆ ಅಪಾಯದ ಮಟ್ಟದಲ್ಲಿ...

ಕೇರಳ ಮನ್ನಾರ್ ಭೂ ಕುಸಿತಕ್ಕೆ 13 ಬಲಿ..ಮಣ್ಣಿನಡಿ ಸಿಲುಕಿರುವ 80ಕ್ಕೂ ಅಧಿಕ ಮಂದಿ

ತಿರುವನಂತಪುರಂ : ಕೇರಳದ ಇಡುಕ್ಕಿಯಲ್ಲಿ ಇಂದು ಬೆಳಗ್ಗೆ ಭೂಕುಸಿತವಾಗಿ 13 ಜನರು ಸಾವನ್ನಪ್ಪಿದ್ದಾರೆ. ಕೇರಳದ ಪ್ರಸಿದ್ಧ ಪ್ರವಾಸಿತಾಣ ಮುನ್ನಾರ್​​ನಿಂದ 25 ಕಿ.ಮೀ ದೂರದಲ್ಲಿರೋ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ....
Copy Protected by Chetans WP-Copyprotect.