Connect with us

    LATEST NEWS

    WATCH : ಅಪಘಾತ ತಪ್ಪಿಸಲು ಹೋಗಿ ಎಡವಟ್ಟು ಮಾಡಿಕೊಂಡ ಕಾರು ಚಾಲಕ; ವೀಡಿಯೋ ವೈರಲ್

    Published

    on

    ಮಂಗಳೂರು/ಮಧ್ಯಪ್ರದೇಶ: ಅಪಘಾತವು ಯಾವ ಸಂದರ್ಭದಲ್ಲಿ ಹೇಗೆ ಉಂಟಾಗುತ್ತದೆ ಎಂದು ಹೇಳುವುದು ಅಸಾಧ್ಯ. ಕೆಲವೊಮ್ಮೆ ಅಪಘಾತ ತಪ್ಪಿಸಲು ಹೋಗಿ ಮತ್ತೊಂದು ಅವಘಡ ಸಂಭವಿಸುವುದೂ ಇದೆ. ಇಲ್ಲಾಗಿರುವುದೂ ಅದೇ.


    ಕಾರೊಂದು ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಸೆಪ್ಟಂಬರ್ 26 ರಂದು ಮಧ್ಯಪ್ರದೇಶದ ರಾಜ್‌ಗಢ್‌ನ ಖಿಲ್ಚಿಪುರ್ ಚೆಕ್‌ಪೋಸ್ಟ್ ಬಳಿ ನಡೆದಿದೆ.
    ವೀಡಿಯೋದಲ್ಲಿ ಏನಿದೆ?
    ವೈರಲ್ ಆಗಿರುವ ವೀಡಿಯೋದಲ್ಲಿ, ರಸ್ತೆ ಬದಿಯ ತರಕಾರಿ ಅಂಗಡಿಯ ಮುಂದೆ ಜನರು ತರಕಾರಿ ಖರೀದಿಸುತ್ತಿರುವುದರಲ್ಲಿ ಬಿಝಿ ಆಗಿರುವುದನ್ನು ಕಾಣಬಹುದು. ಈ ವೇಳೆ ಅಲ್ಲೊಂದು ಅಚಾತುರ್ಯ ನಡೆದಿದೆ. ಕಾರೊಂದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ. ತಕ್ಷಣವೇ ಸ್ಥಳೀಯರು ಕಾರಿನತ್ತ ಓಡಿ ಬಂದಿದ್ದು, ಕಾರಿನಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದ್ದಾರೆ.
    ಅಪಘಾತದಲ್ಲಿ ಚಾಲಕ ರಘುರಾಜ್ ಮತ್ತು ಅಭಿಷಾ ಎಂಬ ಮಹಿಳೆ ಭೀಕರವಾಗಿ ಗಾಯಗೊಂಡಿದ್ದಾರೆ. ಬುಲೆಟ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

     

    ವಿಡಿಯೋ ನೋಡಿ:

    LATEST NEWS

    ಫಾರ್ಚೂನರ್ ಕಾರಿನಲ್ಲಿ ಬಂದು ಹಸು ಕಳ್ಳತನ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Published

    on

    ಮಂಗಳೂರು/ಶಿವಮೊಗ್ಗ : ಫಾರ್ಚೂನರ್ ಕಾರಿನಲ್ಲಿ ಬಂದ ಖದೀಮರು ಹಸುವನ್ನು ಕದ್ದು ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ. ಹಸು ಕಳವು ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    KA 01 MZ 5843 ನಂಬರಿನ ಬೂದು ಬಣ್ಣದ ಟೊಯೀಟಾ ಫಾರ್ಚೂನರ್ ಕಾರಿನಲ್ಲಿ ಬಂದಿದ್ದ ಕಳ್ಳರು ಮಂಕಿ ಕ್ಯಾಪ್ ಹಾಕಿಕೊಂಡು, ಹಸುವೊಂದನ್ನು ಕಳವುಗೈದಿದ್ದಾರೆ. ಹಸು ಕದ್ದ ವಿಷಯ ತಿಳಿದ ಕೂಡಲೇ ಸ್ಥಳೀಯರು ಕಾರನ್ನು ಅಡ್ಡ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕಳ್ಳರು ಸ್ಥಳೀಯರ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಾರೆ.

    ಇದನ್ನೂ ಓದಿ : WATCH : ಅಪಘಾತ ತಪ್ಪಿಸಲು ಹೋಗಿ ಎಡವಟ್ಟು ಮಾಡಿಕೊಂಡ ಕಾರು ಚಾಲಕ; ವೀಡಿಯೋ ವೈರಲ್

    ಘಟನೆ ಕುರಿತು ಸ್ಥಳೀಯರು ಸೊರಬ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಗೋಕಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

    ವಿಡಿಯೋ ನೋಡಿ:

     

    Continue Reading

    DAKSHINA KANNADA

    ಪುತ್ತೂರು ಕಾಂಗ್ರೆಸ್‌ ಮುಖಂಡನ ಅಶ್ಲೀ*ಲ ವೀಡಿಯೋ ವೈರಲ್‌..!

    Published

    on

    ಪುತ್ತೂರು : ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡನೊಬ್ಬನ ಅಶ್ಲೀ*ಲ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಪುಕ್ಕಟೆ ಸಲಹೆ ನೀಡುತ್ತಿದ್ದ ಅದ್ದು ಪಡೀಲ್‌ ಎಂಬ ಈ ಕಾಂಗ್ರೆಸ್‌ ನಾಯಕ ಈಗ ಅಶ್ಲೀ*ಲ ವೀಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ಧಿಯಾಗಿದ್ದಾರೆ.

    ಸಾರ್ವಜನಿಕರ ಆಕ್ರೋಶ; ನಾನಲ್ಲ ಎಂದ ಅದ್ದು :

    ಹಣ ಪಾವತಿಸಿದರೆ ಸಿಗುವ ಆನ್‌ಲೈನ್ ಸೆ*ಕ್ಸ್‌ ಫ್ಲಾಟ್‌ಫಾರಂನಲ್ಲಿ ಅದ್ದು ಪಡೀಲ್‌ ವೀಡಿಯೋ ಚಾಟಿಂಗ್ ಮಾಡಿದ್ದಾರೆ. ಧಾರ್ಮಿಕ ಕೇಂದ್ರವೊಂದರಲ್ಲಿ ಈ ವೀಡಿಯೋ ಚಾಟಿಂಗ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.  ಊರಿಗೆ ಬುದ್ದಿ ಹೇಳುವ ವ್ಯಕ್ತಿಯ ಈ ರೀತಿಯ ವರ್ತನೆ ಎಷ್ಟು ಸರಿ ಎಂಬ ಬಗ್ಗೆ ಜನರೇ ಅದ್ದು ಪಡೀಲ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.

    ಆದ್ರೆ, ಈ ವಿಡಿಯೋ ಬಗ್ಗೆ ಮಾತನಾಡಿರುವ ಅದ್ದು ಪಡೀಲ್‌ ಈ ವೀಡಿಯೋಗು ನನಗೂ ಯಾವುದೇ ಸಂಬಂಧವಿಲ್ಲ. ಇದು ಟೆಕ್ನಾಲಜಿ ಬಳಸಿ ಮಾರ್ಫಿಂಗ್ ಮಾಡಿ ನನ್ನಂತೆ ತೋರಿಸಲಾಗಿದೆ ಎಂದು ಸಮಜಾಯಿಸಿ ನೀಡಿದ್ದಾರೆ.

    ಇದನ್ನೂ ಓದಿ : ವಿಮಾನದಲ್ಲಿ ನೀಡಿದ ಆಮ್ಲೆಟ್‌ನಲ್ಲಿ ಜಿರಳೆ..! ಪೋಸ್ಟ್‌ ವೈರಲ್‌ ..!

    ಆದ್ರೆ, ಅದ್ದು ಪಡೀಲ್ ಅವರ ಈ ಉತ್ತರ ಪುತ್ತೂರಿನ ಜನ ನಂಬಿಲ್ಲ. ಈ ಬಗ್ಗೆ ತನಿಖೆ ನಡೆಸಲು ಅದ್ದು ಪಡೀಲ್ ಅವರೇ ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ. ಆನ್‌ಲೈನ್‌ನಲ್ಲಿ ಸಿಗುವ ಇಂತಹ ಸೈಟ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಇಲಾಖೆ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು

    Continue Reading

    LATEST NEWS

    ವಿಮಾನದಲ್ಲಿ ನೀಡಿದ ಆಮ್ಲೆಟ್‌ನಲ್ಲಿ ಜಿರಳೆ..! ಪೋಸ್ಟ್‌ ವೈರಲ್‌ ..!

    Published

    on

    ಮಂಗಳೂರು/ನವದೆಹಲಿ : ನವದೆಹಲಿಯಿಂದ ನ್ಯೂಯಾರ್ಕ್‌ಗೆ ಏರ್‌ ಇಂಡಿಯಾದಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಿದ ಆಮ್ಲೇಟ್‌ನಲ್ಲಿ ಜಿರಳೆ ಪತ್ತೆಯಾದ ಘಟನೆ ನಡೆದಿದೆ. ಸೆಪ್ಟಂಬರ್ 17 ರಂದು ಈ ಘಟನೆ ನಡೆದಿದ್ದು, ಇದರ ವಿಡಿಯೋವನ್ನು  ಪ್ರಯಾಣಕಿ ಸುಯೇಶಾ ಸಾವಂತ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಟ್ವೀಟ್(ಎಕ್ಸ್) ಮಾಡಿದ ಮಹಿಳೆ :

    ಏರ್‌ ಇಂಡಿಯಾ ವಿಮಾನದಲ್ಲಿ ಇತ್ತೀಚೆಗೆ ಜೂನ್ ತಿಂಗಳಲ್ಲಿ ಸ್ಯಾನ್‌ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾರಣಿಕರೊಬ್ಬರಿಗೂ ಇಂತಹುದೇ ಅನುಭವ ಆಗಿತ್ತು. ಏರ್ ಇಂಡಿಯಾ ನೀಡಿದ್ದ ಆಹಾರದಲ್ಲಿ ಬ್ಲೇಡ್‌ನಂತಹ ವಸ್ತು ಪತ್ತೆಯಾಗಿತ್ತು.

    ಇದೀಗ ದೆಹಲಿಯಿಂದ ನ್ಯೂಯಾರ್ಕ್‌ಗೆ ತನ್ನ ಎರಡು ವರ್ಷದ ಮಗುವಿನ ಜೊತೆ ತೆರಳುತ್ತಿದ್ದ ಸುಯೇಶಾ ಸಾವಂತ್ ಎಂಬವರಿಗೆ ಆಮ್ಲೇಟ್‌ನಲ್ಲಿ ಜಿರಳೆ ಪತ್ತೆಯಾಗಿದೆ. ಈ ಆಹಾರ ಸೇವನೆಯಿಂದ ತಾನು ಹಾಗ ಮಗು ಫುಡ್ ಪಾಯಿಸನ್‌ಗೆ ಒಳಗಾಗಿದ್ದೆವು ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಏರ್ ಇಂಡಿಯಾ ಪ್ರತಿಕ್ರಿಯೆ :

    ಈ ಬಗ್ಗೆ ಏರ್ ಇಂಡಿಯಾ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. “ದೆಹಲಿಯಿಂದ ನ್ಯೂಯಾರ್ಕ್‌ ಗೆ ತೆರಳುತ್ತಿದ್ದ ಎಐ 101 ವಿಮಾನದಲ್ಲಿ ಫುಡ್‌ನಲ್ಲಿ ಜಿರಳೆ ಇದ್ದುದಾಗಿ ಪ್ರಯಾಣಿಕರು ದೂರಿದ್ದಾರೆ. ಏರ್ ಇಂಡಿಯಾ, ಜಾಗತಿಕವಾಗಿರುವ ಪ್ರಮುಖ ವಿಮಾನ ಸಂಸ್ಥೆಗಳಿಗೆ ಆಹಾರ ಪೂರೈಕೆ ಮಾಡುವ ಕ್ಯಾಟರಿಂಗ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

    ಇದನ್ನೂ ಓದಿ : ಕಳ್ಳನನ್ನು ಹಿಡಿಯಲು ಹೋಗಿ ತಮ್ಮ ಪ್ರಾ*ಣಕ್ಕೆ ಕುತ್ತು ತಂದುಕೊಂಡ ಪೊಲೀಸರು

    ಆಹಾರದ ಗುಣಮಟ್ಟಕ್ಕೆ ಹಲವು ನಿರ್ದಿಷ್ಟ ಮಾನದಂಡದೊಂದಿಗೆ ಆ ಸಂಸ್ಥೆ ಎಲ್ಲಾ ಪ್ರತಿಷ್ಠಿತ ವಿಮಾನ ಕಂಪೆನಿಗಳಿಗೆ ಆಹಾರ ಪೂರೈಕೆ ಮಾಡುತ್ತದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುವುದು” ಎಂದು ಏರ್‌ ಇಂಡಿಯಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    Continue Reading

    LATEST NEWS

    Trending