ಬೆಂಗಳೂರು : ರಾಜ್ಯವನ್ನೇ ನಡುಗಿಸಿದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಹಿಂದಿನ ರೂವಾರಿ ಶಂಕಿತ ವ್ಯಕ್ತಿಯ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ ಬಾಂಬ್ ಇದ್ದ ಬ್ಯಾಗನ್ನು ಈತ ಕೆಫೆಯೊಳಗೆ ಇಟ್ಟು ಆತ ಹೊರ ನಡೆದಿದ್ದಾನೆ.
ಮಾಸ್ಕ್, ಕನ್ನಡಕ ಮತ್ತು ಕನ್ನಡಕ ಧರಿಸಿ ಮುಖ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬನ ಚಲನವಲನ ಸಿಸಿಟಿವಿಯ ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ. ಗ್ರಾಹಕನಂತೆ ಆತ ಹೊಟೇಲ್ ಗೆ ಆಗಮಿಸಿ ಆತ ಉಪಹಾರ ಖರೀದಿಸಿದ್ದ ಎಂದು ಹೇಳಲಾಗಿದೆ.
ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಬೆಂಗಳೂರಿನ ಪ್ರಸಿದ್ಧ ಹೊಟೇಲ್ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಹತ್ತು ಸೆಕೆಂಡ್ ಅಂತರದಲ್ಲಿ ಎರಡು ಬಾಂಬ್ ಸ್ಫೋಟ ಸಂಭವಿಸಿದೆ. ಪರಿಣಾಮ ಹತ್ತು ಮಂದಿ ಗಾಯಗೊಂಡಿದ್ದರು. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
The image & CCTV footage of the bomb planter, who came to The Rameshwaram Cafe by BMTC bus & ordered Rave Idli but didn't eat it, placed the bag & left
ಬೆಂಗಳೂರು: ದೀಪಾವಳಿ ದಿನದಂದು ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕ ಬ*ಲಿಯಾದ ಘಟನೆ ಬೆಳಕಿಗೆ ಬಂದಿದೆ. ಕೋಣನಕುಂಟೆಯ ವೀವರ್ಸ್ ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ.
ಪಟಾಕಿ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ ಸ್ನೇಹಿತರು ಹುಡುಗಾಟ ಮಾಡಲು ಹೋಗಿ ಸ್ನೇಹಿತನನ್ನೇ ಕಳೆದುಕೊಂಡಿದ್ದಾರೆ. ಶಬರೀಶ್ ಎಂಬ ಯುವಕ ಸ್ನೇಹಿತರೊಂದಿಗೆ ಹುಚ್ಚಾಟ ಮಾಡಲು ಹೋಗಿ ಬ*ಲಿಯಾಗಿದ್ದಾನೆ.
ದೀಪಾವಳಿ ದಿನದಂದು ಶಬರೀಶ್ ಹಾಗೂ ಸ್ನೇಹಿತರು ಪಟಾಕಿ ಹೊಡೆಯುತ್ತಿದ್ದರು. ಈ ವೇಳೆ ಪಟಾಕಿ ಇಟ್ಟು ಅದರ ಮೇಲೆ ಡಬ್ಬ ಇಟ್ಟು ಕೂರಲು ಚಾಲೆಂಜ್ ಹಾಕಿದ್ದರು. ಮದ್ಯಪಾನ ಮಾಡಿದ್ದ ಶಬರೀಶ್ ಅದೇ ರೀತಿ ಮಾಡಿದ್ದಾನೆ. ಪಟಾಕಿ ಸಿಡಿದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದಾನೆ.
ಗಾಯಾಳು ಶಬರೀಶನನ್ನು ಆಸ್ಪತ್ರೆಗೆ ದಾಖಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಶಬರೀಶ್ ಸಾ*ವನ್ನಪ್ಪಿದ್ದಾನೆ. ಸದ್ಯ ಈ ಘಟನೆ ಸಂಬಂಧ ಕೋಣನಕುಂಟೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಮಂಗಳೂರು/ ಬೆಂಗಳೂರು: ಇತ್ತೀಚೆಗೆ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಕೆಲವೊಂದು ಪ್ರಕರಣಗಳು ವಿಚಿತ್ರವಾಗಿರುತ್ತವೆ. ಇಲ್ಲೊಬ್ಬಾಕೆ ಪ್ರಿಯತಮನ ಮೊಬೈಲ್‌ನಲ್ಲಿದ್ದ ತನ್ನ ಫೋಟೋ ಹಾಗೂ ವೀಡಿಯೊಗಳನ್ನು ಡಿಲೀಟ್ ಮಾಡಿಸಲೆಂದು ರಾಬರಿ ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿನಿಮೀಯ ರೀತಿ ಪ್ರಿಯತಮೆಯೇ ಪ್ರಿಯಕರನ ಮೇಲೆ ರಾಬರಿ ಮಾಡಿಸಿ ಸಿಕ್ಕಿಬಿದ್ದಿದ್ದಾಳೆ.
ಬೆಳ್ಳಂದೂರು ಪೊಲೀಸರು ಟೆಕ್ಕಿ ಶ್ರುತಿ ಸೇರಿ ಮೂವರನ್ನು ಬಂಧಿಸಿದ್ದಾರೆ.
ಆ್ಯಕ್ಸಿಡೆಂಟ್ – ಡ್ರಾಮಾ :
ಕಳೆದ ಸೆಪ್ಟೆಂಬರ್ 20 ರಂದು ಪ್ರಿಯಕರ ವಂಶಿಕೃಷ್ಣರೆಡ್ಡಿ ಎಂಬಾತ ಶ್ರುತಿ ಭೇಟಿಗೆ ತೆರಳಿದ್ದ. ಭೇಟಿಯಾಗಿ ಹೊರಬರುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದ ಅಪರಿಚಿತರು ವಂಶಿಕೃಷ್ಣರೆಡ್ಡಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಜಗಳ ತೆಗೆದ ಅಪರಿಚಿತರು ಆತನ ಬಳಿಯಿದ್ದ ಮೊಬೈಲ್ ಕಸಿದಿದ್ದರು. ಅಲ್ಲದೇ, ವಂಶಿ ಜತೆಯಲ್ಲಿಯೇ ಇದ್ದ ಶ್ರುತಿಯ ಮೊಬೈಲ್ ಅನ್ನು ಕಸಿದುಕೊಂಡಿದ್ದರು. ಬಳಿಕ ದೂರು ಕೊಡುವುದು ಬೇಡ ಮೊಬೈಲ್ ಹೋದರೆ ಹೋಯಿತು ಎಂದು ಬಾಯ್‌ಫ್ರೆಂಡ್ ವಂಶಿ ಮುಂದೆ ಶ್ರುತಿ ನಾಟಕವಾಡಿದ್ದಾಳೆ.
ಆದರೆ, ಇಷ್ಟಕ್ಕೆ ಸುಮ್ಮನಾಗದ ವಂಶಿಕೃಷ್ಣ ಬೆಳ್ಳಂದೂರು ಠಾಣೆಗೆ ತೆರಳಿ ಕಾರಿನ ನಂಬರ್ ಸಮೇತ ದೂರು ನೀಡಿದ್ದರು.
ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಇತ್ತೀಚೆಗೆ ಪ್ರಿಯತಮ ವಂಶಿಕೃಷ್ಣನಿಂದ ದೂರವಾಗಲು ಶ್ರುತಿ ಯತ್ನಿಸಿದ್ದಳು. ಆದರೆ, ವಂಶಿಕೃಷ್ಣನ ಮೊಬೈಲ್‌ನಲ್ಲಿ ಶ್ರುತಿಯ ಫೋಟೋಗಳಿದ್ದವು. ನೇರವಾಗಿ ಹೇಳಿದರೆ ಎಲ್ಲಿ ವಂಶಿಕೃಷ್ಣ ವಿರೋಧ ವ್ಯಕ್ತಪಡಿಸುತ್ತಾನೋ ಎಂಬ ಭಯದಿಂದ ಶ್ರುತಿ ಮೊಬೈಲ್ ರಾಬರಿ ಮಾಡುವ ಯೋಜನೆ ರೂಪಿಸಿದ್ದಾರೆ. ಸದ್ಯ ಆರೋಪಿ ಟೆಕ್ಕಿ ಶ್ರುತಿಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದು, ಈ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಂಗಳೂರು/ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಪ್ರಕರಣ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಸೆಂಟ್ರಲ್ ಜೈಲ್ಗೆ ಮೊಬೈಲ್ ರವಾನೆ ಮಾಡುತ್ತಿದ್ದ ಖೈದಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೋಲಾರದ ಕೆಜಿಎಫ್ ನ ವಿಜಯ್ನನ್ನು ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ. ಆಗ್ನೇಯ ವಿಭಾಗದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದರು.
ಜೈಲಿನೊಳಗೆ ವಿಜಯ್ ಸಿಬ್ಬಂದಿಯೊಬ್ಬರ ನೆರವು ಪಡೆದು ಸ್ಮಾರ್ಟ್ ಫೋನ್ಗಳನ್ನು ಹೊರಗಿನಿಂದ ಖರೀದಿಸಿಕೊಂಡು ಅವುಗಳನ್ನು ಜೈಲಿನಲ್ಲಿರುವ ಇತರ ಖೈದಿಗಳಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ವಿಜಯ್ ಮೊಬೈಲ್ ಪೂರೈಸುವುದಕ್ಕೆ ಸಾಕ್ಷ್ಯಗಳು ಸಿಕ್ಕ ಬೆನ್ನಲ್ಲೇ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಸ್ಟಡಿಯಲ್ಲಿದ್ದ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್ ಹಾಗೂ ವೇಲು ಅವರ ವಿಚಾರಣೆಯೂ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ವಿಜಯ್ ಜೈಲು ಅಧಿಕಾರಿಗಳ ಸಹಾಯದಿಂದಲೇ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದ್ದ. ರೌಡಿ ಶೀಟರ್ಗಳು ಸಾವಿರಾರು ಹಣ ಕೊಟ್ಟು ಈತನಿಂದ ಮೊಬೈಲ್ ಖರೀದಿಸುತ್ತಿದ್ದರು ಎಂಬ ವಿಚಾರದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸೆ. 15 ರಂದು ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ 26 ಮೊಬೈಲ್ ಪತ್ತೆಯಾಗಿದ್ದವು. ಇನ್ನಷ್ಟು ತನಿಖೆ ನಡೆಸಿದಾಗ ವಿಜಯ್ ಮೊಬೈಲ್ ಪೂರೈಸುತ್ತಿದ್ದ ಎಂಬುವುದು ಖಚಿತವಾಗಿದೆ ಎಂದು ವರದಿಯಾಗಿದೆ