Connect with us

DAKSHINA KANNADA

ಮಂಗಳೂರಿನಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕ ಶಿವಮೊಗ್ಗಕ್ಕೆ : ಸಂಸದ ನಳಿನ್ ಕುಮಾರ್ ಕಟೀಲ್ ವೈಫಲ್ಯಕ್ಕೆ ಮತ್ತೊಂದು ಉದಾಹರಣೆ

Published

on

ಮಂಗಳೂರಲ್ಲಾಗಬೇಕಿದ್ದ ಆರ್ ಎ ಎಫ್ ಘಟಕ ಶಿವಮೊಗ್ಗಕ್ಕೆ ಕಟೀಲ್ ವೈಫಲ್ಯಕ್ಕೆ ಕೈಗನ್ನಡಿ; ಕಾಟಿಪಳ್ಳ.!

ಮಂಗಳೂರು: ಮಂಗಳೂರಿನ ಬಡಗ ಎಕ್ಕಾರಿನಲ್ಲಿ ನಿರ್ಮಾಣಗೊಳ್ಳಬೇಕಿದ್ದ, ಗಲಭೆಗಳನ್ನು ನಿಯಂತ್ರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುವ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ ಎ ಎಫ್) ಘಟಕ ಯಾರ ಅರಿವಿಗೂ ಬಾರದಂತೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಸ್ಥಳಾಂತರಗೊಂಡಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಿರುವ ಅನ್ಯಾಯ.ಇದು ಸಂಸದ ನಳಿನ್ ಕುಮಾರ್ ಕಟೀಲರ ವೈಫಲ್ಯಕ್ಕೆ ಮತ್ತೊಂದು ಉದಾಹರಣೆ, ಸಂಸದರು ಈ ವೈಫಲ್ಯದ ಹೊಣೆ ಹೊತ್ತು ಜಿಲ್ಲೆಯ ಜನತೆಯ ಕ್ಷಮೆ ಕೋರಬೇಕು, ವಿವರಣೆ ನೀಡಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಅತೀ ಅಗತ್ಯವಾಗಿತ್ತು.‌ಸದಾ ಮತೀಯ ಉದ್ವಿಗ್ನತೆ ತಲೆದೋರುವ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಮಂಗಳೂರು ಕೇಂದ್ರ ಭಾಗವಾಗಿದೆ.

ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಮಂಗಳೂರಿನಲ್ಲಿ‌ ಸ್ಥಾಪನೆಗೊಂಡರೆ ಅದು ವಿಮಾನ ನಿಲ್ದಾಣ ಸಹಿತ ಸಾರಿಗೆ ಸಂಪರ್ಕದ ಸೌಲಭ್ಯದಿಂದಾಗಿ ದೂರದ ಜಿಲ್ಲೆಗಳಿಗೂ ತಲುಪಲು ಅನುಕೂಲಕರವಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಈ ಘಟಕದ ಉಪಸ್ಥಿತಿಯೇ ಹಲವು ಹಿಂಸಾಚಾರಗಳಿಗೆ ಕಡಿವಾಣ ಹಾಕುವ ನೈತಿಕ ಶಕ್ತಿಯನ್ನು ಒದಗಿಸುತ್ತಿತ್ತು.

ಆ ಹಿನ್ನಲೆಯಲ್ಲಿಯೇ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಮಂಗಳೂರು ತಾಲೂಕಿನ ಬಡಗ ಎಕ್ಕಾರು ಗ್ರಾಮದಲ್ಲಿ ಐವತ್ತು ಎಕರೆ ಸ್ಥಳವನ್ನು ಗುರುತಿಸಿ ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕಕಕ್ಕಾಗಿ ಕಾದಿರಿಸಲಾಗಿತ್ತು.

ಹೆಚ್ಚುವರಿ ಭೂಮಿ ಅಗತ್ಯ ಬಿದ್ದಲ್ಲಿ ಒದಗಿಸುವ ಸಿದ್ದತೆಗಳನ್ನು ಮಾಡಲಾಗಿತ್ತು. ಈಗ ಏಕಾಏಕಿ ಯಾವ ಚರ್ಚೆಗಳೂ ಇಲ್ಲದೆ, ಜಿಲ್ಲೆಯ ಜನರನ್ನು ಕತ್ತಲಲ್ಲಿಟ್ಟು ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕವನ್ನು ಯಾವ ರೀತಿಯಿಂದಲೂ ಸೂಕ್ತವಲ್ಲದ ಭದ್ರಾವತಿಗೆ ರಾತ್ರೋರಾತ್ರಿ ಸ್ಥಳಾಂತರಿಸಿ ಶಿಲನ್ಯಾಸ ನೆರವೇರಿಸಲಾಗಿದೆ.

ಇದು ಸದಾ ಕೋಮು ಉದ್ವಿಗ್ನತೆಯಿಂದ ನರಳುವ ದಕ್ಷಿಣ ಕನ್ನಡ ಜಿಲ್ಲೆಗೆ ಆಗಿರುವ ಅನ್ಯಾಯ. ಈ ಕತ್ತಲ ಕಾರ್ಯಾಚರಣೆಗೆ ಉದ್ರೇಕಕಾರಿ ಭಾಷಣಗಳಿಗೆ ಪ್ರಸಿದ್ದರಾದ ಸಂಸದ, ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲರ ಅಸಮರ್ಥತೆಯೇ ನೇರ ಕಾರಣ.

ಜಿಲ್ಲೆಗೆ ಮಾರಕವಾದ ಹಲವು ಮಾಲಿನ್ಯಕಾರಿ ಯೋಜನೆಗಳನ್ನು ಮಂಗಳೂರಿಗೆ ಡಂಪ್ ಮಾಡಲು ಅವಕಾಶ ನೀಡುವ ಸಂಸದರು, ಜನೋಪಯೋಗಿ ಯೋಜನೆಗಳು ಕೈತಪ್ಪುವಾಗ ಧ್ವನಿ ಎತ್ತದೆ ಜಿಲ್ಲೆಗೆ ಸತತ ಅನ್ಯಾಯವಾಗಲು ಕಾರಣರಾಗಿದ್ದಾರೆ.‌

ಈ ಹಿಂದೆ ಕರಾವಳಿಯ ಬ್ಯಾಂಕುಗಳು ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನ, ಮಂಗಳೂರು ವಿಮಾನ ನಿಲ್ದಾಣ ಅದಾನಿ ಕಂಪೆನಿಗೆ ಹಸ್ತಾಂತರ, ಇದೀಗ ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಸ್ಥಳಾಂತರ ಸಂಸದರ ಅಸಾಮರ್ಥ್ಯ, ವೈಫಲ್ಯಗಳ ಪಟ್ಟಿಯನ್ನು ದೀರ್ಘಗೊಳಿಸುತ್ತಿದೆ.

ಸಂಸದ ನಳಿನ್ ಕುಮಾರ್ ಕಟೀಲ್ ತನ್ನ ಈ ಗಂಭೀರ ವೈಫಲ್ಯಗಳಿಗಾಗಿ ಜಿಲ್ಲೆಯ ಜನತೆಯೊಂದಿಗೆ ಕ್ಷಮಾಪಣೆ ಕೋರಬೇಕು, ವಿವರಣೆ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ‌.

Click to comment

Leave a Reply

Your email address will not be published. Required fields are marked *

BANTWAL

ವೈನ್ ಶಾಪ್ ಗೆ ಬಂದಿದ್ದ ಆಸಾಮಿ ಮೊಬೈಲ್ ಕದ್ದು ಎಸ್ಕೇಪ್..!!

Published

on

ಪುತ್ತೂರು: ವೈನ್ ಶಾಪ್ ಗೆ ಬಂದಿದ್ದ ವ್ಯಕ್ತಿಯೋರ್ವ ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮ್ ವೈನ್ ಶಾಪ್ ನಲ್ಲಿ ನಡೆದಿದೆ.

ವ್ಯಕ್ತಿಯೋರ್ವ ಗ್ರಾಹಕರ ಸೋಗಿನಲ್ಲಿ ವೈನ್ ಶಾಪ್ ಗೆ ಬಂದಿದ್ದ. ಮೊದಲಿಗೆ ಗ್ರಾಹಕರಂತೆ ಬಂದು ಮದ್ಯ ಖರೀದಿಗೆ ಆರ್ಡರ್ ಮಾಡಿ ಟೇಬಲ್ ನಲ್ಲಿದ್ದ ಮೊಬೈಲ್ ಗೆ ಕನ್ನ ಹಾಕಿದ್ದಾನೆ. ಬಳಿಕ ಶಾಪ್ ನವರು ಬೇರೆ ಕಡೆ ತಿರುಗುವಾಗ ಈಚೆಯಿಂದ ಈ ಕದೀಮ ಮೊಬೈಲ್ ಅನ್ನು ಎಗರಿಸಿ ಬ್ಯಾಗ್ ಗೆ ಹಾಕಿಕೊಂಡು ಪರಾರಿಯಾಗಿದ್ದಾನೆ.


ವೈನ್ ಶಾಪ್ ನಲ್ಲಿರುವ ರಾಜೇಶ್ ಎಂಬವರ ಮೊಬೈಲ್ ಕಳವು ಆಗಿತ್ತು. ಕೂಡಲೇ ಅವರು ಸಿಸಿ ಕ್ಯಾಮರಾ ಚೆಕ್ ಮಾಡಿದ್ದಾರೆ. ಆಗ ಮೊಬೈಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BELTHANGADY

ದ.ಕ ದಲ್ಲಿ ಭಾರಿ ಮಳೆ: ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿದ್ದ ಅಂಗಡಿಗಳಿಗೆ ಹಾನಿ..!!

Published

on

ಧರ್ಮಸ್ಥಳ: ಧರ್ಮಸ್ಥಳದಲ್ಲಿ 3ನೇ ದಿನದ ಲಕ್ಷ ದೀಪೋತ್ಸವದ ವೈಭವ ಒಂದು ಕಡೆಯಾದರೆ, ಇನ್ನೊಂದೆಡೆ ಗುಡುಗು ಸಹಿತ ಬಾರಿ ಮಳೆ ಅವಾಂತರ ತಂದಿದೆ.

ಕೆಲವು ಅಂಗಡಿಗಳಿಗೆ ಬಹಳ ಹಾನಿ ಆಗಿದೆ. ಮಳೆ ಅಂಗಡಿ ಮಾಲೀಕರಿಗೆ ನಷ್ಟವನ್ನುಂಟು ಮಾಡಿದೆ. ಮಳೆಗೆ ಅಂಗಡಿಯೊಳಗಿದ್ದ ಕೆಲವು ವಸ್ತುಗಳು ಮಳೆಗೆ ಕೊಚ್ಚಿಕೊಂಡು ಹೋಗಿದೆ.

ಧರ್ಮಸ್ಥಳ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ವಸ್ತು ಪ್ರದರ್ಶನಕ್ಕೆ ಬಹಳ ಸಮಸ್ಯೆ ಆಗಿದೆ. ಸಭಾಂಗಣದ ಬಳಿ ಹಾಕಿದ್ದ ಕುರ್ಚಿಗಳು ಒದ್ದೆಯಾಗಿದೆ.

Continue Reading

DAKSHINA KANNADA

Putturu: ಮುಸ್ಲಿಂ ವಿದ್ಯಾರ್ಥಿ ಜೋಡಿಗಳ ಮೇಲೆ ಹಲ್ಲೆ..!!

Published

on

ಪುತ್ತೂರು: ಮುಸ್ಲಿಂ ವಿದ್ಯಾರ್ಥಿಗಳ ಜೋಡಿಯನ್ನು ತಡೆ ಹಿಡಿದು ಹಲ್ಲೆಗೆ ಯತ್ನಿಸಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಜಾರು ಎಂಬಲ್ಲಿ ನಡೆದಿದ್ದು, ಅದರ ವಿಡಿಯೋ ಇದೀಗ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಘಟನೆಯು ಕೆಲವು ವಾರಗಳ ಹಿಂದೆ ನಡೆದಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ವಿದ್ಯಾರ್ಥಿ ಜೋಡಿಯನ್ನು ತಡೆದ ಮುಸ್ಲಿಂ ಸಮುದಾಯದವರೇ ಅವರ ಮೇಲೆ  ಹಲ್ಲೆ ನಡೆಸಿದ್ದಾರೆ. ಈ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Continue Reading

LATEST NEWS

Trending