Saturday, November 27, 2021

ಉಡುಪಿ: ಖಾಸಗಿ ಜಾಗದಲ್ಲಿ ಕಸ ಸುರಿದವನಿಗೆ 5 ಸಾವಿರದ ದಂಡ

ಉಡುಪಿ: ಕಂಪೆನಿಯೊಂದು ಕಸವನ್ನು ಖಾಸಗಿ ಜಾಗದಲ್ಲಿ ಸುರಿದಿದ್ದು, ಈ ಬಗ್ಗೆ ಎಲ್ಲೂರು ಗ್ರಾ.ಪಂ ಕಸ ಸುರಿದ ವ್ಯಕ್ತಿಗೆ ಎರಡು ದಿನದೊಳಗೆ ತೆರವುಗೊಳಿಸಲು ಮತ್ತು 5,000 ರೂ. ದಂಡ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದೆ.

ಸಾಂದರ್ಭಿಕ ಚಿತ್ರ

ಎಲ್ಲೂರು ವ್ಯಾಪ್ತಿಯ ಎಲ್ಲೂರು ಪಂಚಾಯತ್ ಸದಸ್ಯ ರವಿರಾಜ್ ಎಂಬವರ ಪಟ್ಟು ಜಾಗಕ್ಕೆ 2 ಲೋಡ್ ಕಸವನ್ನು ಸುರಿಯಲಾಗಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಇದನ್ನು ಬೆಳಪುವಿನ ರಝಾಕ್ ಎಂಬವರು ಸುರಿದಿರುವುದು ತಿಳಿದು ಬಂತು.
ಇನ್ನಾ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಬ್ರೈಟ್ ಕಂಪೆನಿ ಘನ ತ್ಯಾಜ್ಯವನ್ನು ತೆರವುಗೊಳಿಸಲು ಬೆಳಪುವಿನ ರಝಾಕ್ ಗೆ ಗುತ್ತಿಗೆ ನೀಡಿದೆ. ಗುತ್ತಿಗೆ ಪಡೆದ ರಝಾಕ್ ಆ ಕಸವನ್ನು ಖಾಲಿ ಜಾಗದಲ್ಲಿ ಸುರಿದು ಹೋಗಿದ್ದರು.

ಎಲ್ಲೂರು ಪಂಚಾಯತ್ ಅಧ್ಯಕ್ಷ ಜಯಂತ್ ಕುಮಾರ್ ಕಸವನ್ನು ನೀಡಿದ ಕಂಪೆನಿಯ ಅಧಿಕಾರಿಗಳನ್ನು ಮತ್ತು ಕಸ ಸುರಿದ ರಝಾಕ್‌ರನ್ನು ಸ್ಥಳಕ್ಕೆ ಕರೆಸಿ ರಝಾಕ್ ಅವರಿಗೆ 5,000 ರೂ. ದಂಡ ವಿಧಿಸಿದರು.

ಅಲ್ಲದೇ ಈ ಕಸವನ್ನು ಗುರುವಾರದೊಳಗೆ ತೆರವುಗೊಳಿಸದಿದ್ದಲ್ಲಿ ಹಾಗೂ 5,000 ರೂ. ದಂಡ ಪಾವತಿಸದಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...