Saturday, February 4, 2023

ಪಡಿತರ ಅಕ್ಕಿ ಮಾರಾಟ ಮಾಡಿದ್ರೆ  6 ತಿಂಗಳು ಕಾರ್ಡ್ ರದ್ದು ಮಾಡುವ ಎಚ್ಚರಿಕೆ..!

ಪಡಿತರ ಅಕ್ಕಿ ಮಾರಾಟ ಮಾಡಿದ್ರೆ  6 ತಿಂಗಳು ಕಾರ್ಡ್ ರದ್ದು ಮಾಡುವ ಎಚ್ಚರಿಕೆ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಸಿಗುವ ಪಡಿತರವನ್ನು ಹಣದಾಸೆಗೆ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಸಿಕ್ಕಿಬಿದ್ದರೆ ಫಲಾನುಭವಿಗಳು ಹೊಂದಿರುವ ಪಡಿತರ ಕಾರ್ಡ್ ರದ್ದು ಮಾಡಲಾಗುತ್ತದೆ.

ರಾಜ್ಯ ಆಹಾರ ಇಲಾಖೆ ಈ ಆದೇಶ ಜಾರಿಗೆ ತಂದಿದ್ದು, ತಪ್ಪಿದಲ್ಲಿ ಕಠಿಣ ಕಾನೂನಿನ ಎಚ್ಚರಿಕೆ ನೀಡಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಉಚಿತವಾಗಿ ನೀಡುವ ಅಕ್ಕಿಯನ್ನು ಪಡಿತದಾರರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಂದರ್ಭದಲ್ಲಿ ಸಿಕ್ಕಿಬೀಳುವ ಫಲಾನುಭವಿಯ ಕಾರ್ಡ್‌ಗಳನ್ನು 6 ತಿಂಗಳು ಅಮಾನತು ಮಾಡಿ ಹಾಗೂ ಮಾರುಕಟ್ಟೆ ದರದಲ್ಲಿ ಅಕ್ಕಿಯನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ ಎಂದು ಇಲಾಖೆ ಆದೇಶದಲ್ಲಿ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಪ್ರಸ್ತುತ 1,17,01,012 ಬಿಪಿಎಲ್, 10,92,580 ಅಂತ್ಯೋದಯ ಹಾಗೂ 21,05,000 ಎಪಿಎಲ್ ಕಾರ್ಡ್ ಸೇರಿ ಒಟ್ಟು 1,48,98,592 ಕಾರ್ಡ್‌ಗಳಿವೆ. ಪ್ರತಿ ತಿಂಗಳು 19,972 ನ್ಯಾಯಬೆಲೆ ಅಂಗಡಿಗಳಿಂದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಕಾರ್ಡ್‌ಗೆ 2 ಕೆಜಿ ಗೋಧಿ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು : ಸುರತ್ಕಲಿನಿಂದ ಕೆಲಸಕ್ಕೆ ತೆರಳಿದ್ದ ಯುವತಿ ಕಾವೇರಿ ಮಿಸ್ಸಿಂಗ್..!

ಮಂಗಳೂರು: ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಯುವತಿ ತಡಂಬೈಲ್‌ ಗ್ರಾಮದ ಜಯಶ್ರೀ ಶೆಟ್ಟಿ ಎಂಬವರ ಮಗಳು ಕಾವೇರಿ(19) ಎಂದು ತಿಳಿದು ಬಂದಿದೆ.ಜ.27ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವರು...

ಮುಲ್ಕಿ : ಇಬ್ಬರ ಸಾವಿಗೆ ಕಾರಣರಾದ ತುಳು ಕಾಮಿಡಿಯನ್ ಅರ್ಪಿತ್ ಅರೆಸ್ಟ್..!

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಕಾರುಡಿಕ್ಕಿ ಹೊಡೆದು ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ...

ಮಂಗಳೂರು ಮುಸ್ಲಿಂ ಯುವಕನನ್ನು ವರಿಸಿದ ನೆದರ್ಲೆಂಡ್ ಕ್ರೈಸ್ತ ಕನ್ಯೆ..!

ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ,ಜಾತಿ - ಪಂಗಡವಿಲ್ಲ, ಭಾಷೆ ಬೇಕಿಲ್ಲ ಪ್ರೀತಿಸುವ ಮನಸ್ಸುಗಳಿದ್ದರೆ ಸಾಕು, ಯಾರಿಗೆ, ಯಾವಾಗ, ಯಾರಮೇಲಾದರೂ ಎಲ್ಲಿ ಬೇಕಾದರೂ ಪ್ರೀತಿ ಹುಟ್ಟಬಹುದು. ಮಂಗಳೂರು: ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ,ಜಾತಿ - ಪಂಗಡವಿಲ್ಲ,...