ಮಂಗಳೂರು: ಅಂತಾರಾಷ್ಟ್ರೀಯ ತಾಯಂದಿರ ದಿನದ ಅಂಗವಾಗಿ ನಗರದ ಅತ್ತಾವರದ ಕೆಎಂಸಿ ಆಸ್ಪತ್ರೆಯ ವತಿಯಿಂದ ಗರ್ಭಿಣಿಯರಿಗಾಗಿ ಆಯೋಜಿಸಿದ್ದ ವಾವ್ ಮೋಮ್ ಸ್ಪರ್ಧೆಯಲ್ಲಿ ಕ್ಯಾರಲ್ ಕ್ರಾಸ್ತಾ ಅವರು ವಾವ್ ಮೊಮ್ ಪ್ರಶಸ್ತಿ ಪಡೆದುಕೊಂಡರು.
ಗರ್ಭಿಣಿಯರಿಗಾಗಿ ಮೆಟರ್ನಿಟಿ ಫೋಟೋ ಶೂಟ್, ಅವರ ಭವಿಷ್ಯದ ಮಗುವಿಗಾಗಿ ಪತ್ರ ಬರೆಯುವ ಸ್ಪರ್ಧೆ ನಿನ್ನೆ ಜರುಗಿತು. 200ಕ್ಕೂ ಅಧಿಕ ಮಂದಿ ಇದರಲ್ಲಿ ಪಾಲ್ಗೊಂಡರು.
ವಾವ್ ಮೊಮ್ ಪ್ರಶಸ್ತಿ ಕಿರೀಟ, 50,000 ರೂಪಾಯಿ ಬೆಲೆಬಾಳುವ ವಸ್ತುಗಳ ಬಹುಮಾನ ಒಳಗೊಂಡಿದೆ. ಫೊಟೋ ಶೂಟ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ನಿಕಿತಾ ಎನ್, ದ್ವಿತೀಯ ಪ್ರಶಸ್ತಿಯನ್ನು ವನೀತಾಶ್ರೀ ಹಾಗೂ ತೃತೀಯ ಪ್ರಶಸ್ತಿಯನ್ನು ಸೌಜನ್ಯ ಪಡೆದುಕೊಂಡರು.
ಭವಿಷ್ಯದ ಮಗುವಿಗೆ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ನಿಹಾಲ್ ರಾವ್, ದ್ವಿತೀಯ ಪ್ರಶಸ್ತಿಯನ್ನು ಪದ್ಮಪ್ರಭು, ತೃತೀಯ ಪ್ರಶಸ್ತಿಯನ್ನು ಪ್ರೊಯ್ಡಿ ಎಡಲಿನ್ ಫೆರ್ನಾಂಡಿಸ್ ಪಡೆದುಕೊಂಡರು.
ಇನ್ನು ಕಾರ್ಯಕ್ರಮದಲ್ಲಿ ಶಸ್ತ್ರಚಿಕಿತ್ಸೆ ವಿಭಾಗದ ಅಸೋಸಿಯೇಟ್ ಮ್ಯಾನೇಜರ್ ಡಾ. ಸಿಂಧು ಸುರೇಮದ್ರ ಪ್ರಸಾದ್, ಕೆಎಂಸಿ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಉಸ್ತುವಾರಿ ಅಧಿಕಾರಿ ಯಾಸ್ಮೀನ್ ಕಾಝಿ, ಚೀಫ್ ಮ್ಯಾನೇಜರ್ ರವಿರಾಜ್, ನರ್ಸಿಂಗ್ ಸೇವೆಯ ಚೀಫ್ ಮ್ಯಾನೇಜರ್ ಬಿಜಿ ವಾಸಿಮ್, ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್ ಮ್ಯಾನೇಜರ್ ರಾಕೇಶ್, ಮೆಡಿಕಲ್ ಸರ್ವೀಸ್ ಚೀಫ್ ಮ್ಯಾನೇಜರ್ ಡಾ. ಅನಿರ್ಭಾನ್ ಬಗ್ಚಿ
ಹಾಗೆಯೇ ಸ್ತ್ರೀರೋಗತಜ್ಞರಾದ ಡಾ. ದೀಪಕ್ ಶೆಡ್ಡೆ, ಡಾ. ಸಮೀನಾ ಹರೂನ್, ಡಾ. ವಿದ್ಯಾಶ್ರೀ ಕಾಮತ್, ಭ್ರೂಣದ ಔಷಧ ಸಲಹೆಗಾರ ಡಾ. ಪುಂಡಲೀಕ ಬಾಳಿಗ, ಸಲಹೆಗಾರ ಶಿಶುವೈದ್ಯ ಮತ್ತು ನವಜಾತ ತಜ್ಞ ಡಾ. ಮರಿಯೊ ಬುಖೆಲೊ, ಯೋಗದ ವಿಶೇಷ ತಜ್ಞೆ ಮೈತ್ರಿ, ಲ್ಯಾಕ್ಟೇಶನ್ ತಜ್ಞೆ ಮೈನಾ ಸೇಥ್ ಮತ್ತು ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಘಿರ್ ಸಿದ್ದಿಖ್ ಸೇರಿದಂತೆ ಹಲವು ಮಂದಿ ಗಣ್ಯರು ಪಾಲ್ಗೊಂಡರು.