ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆರೋಗ್ಯ ಸಮಸ್ಯೆ ಕುರಿತು ಹಲವು ಮಾಹಿತಿಗಳು ಹೊರಬಂದಿದೆ. ಈ ಮಧ್ಯೆ ಪುಟಿನ್ ವಿದೇಶ ಪ್ರವಾಸದ ವೇಳೆ ಪುಟಿನ್ ಮಲ, ಮೂತ್ರವನ್ನು ಯಾರಿಗೂ ಸಿಗದಂತೆ ಸ್ವದೇಶಕ್ಕೆ ರವಾನಿಸಲಾಗುತ್ತಿದೆ ಎಂಬ ರಹಸ್ಯ ಮಾಹಿತಿ ಹೊರಬಿದ್ದಿದೆ. ಇದಕ್ಕಾಗಿ ವಿಶೇಷ ಅಂಗರಕ್ಷಕ ದಳವನ್ನೂ ನೇಮಿಸಲಾಗಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರತಿ ಬಾರಿಯ ವಿದೇಶ ಪ್ರವಾಸದ ವೇಳೆ ಮಲ ಮೂತ್ರ ವಿಸರ್ಜನೆ ಮಾಡಿದಾಗಲು ಅದನ್ನು ಸೂಟ್‌ಕೇಸ್‌ನಲ್ಲಿ ಶೇಖರಿಸಿಲಾಗುತ್ತದೆ.
ಬಳಿಕ ಅದನ್ನು ರಷ್ಯಾಕ್ಕೆ ತೆಗೆದುಕೊಂಡು ಹೋಗಿ ವಿಸರ್ಜಿಸಲಾಗುತ್ತದೆ. ಇದಕ್ಕೆ ಕಾರಣವೂ ಬಹಿರಂಗವಾಗಿದೆ. ಪುಟಿನ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದೇ ಕಾರಣಕ್ಕೆ ತಮ್ಮ ಮಲ ಮೂತ್ರವನ್ನು ಯಾರಾದರೂ ಪರೀಕ್ಷಿಸಿದರೆ ಆರೋಗ್ಯದ ಮಾಹಿತಿ ಸಂಪೂರ್ಣ ಬಯಲಾಗಲಿದೆ.
ಹೀಗಾಗಿ ಪುಟಿನ್ ಯಾವುದೇ ಸುಳಿವು ಹಾಗೂ ಕುರುಹು ಸಿಗಬಾರದು ಅನ್ನೋ ಕಾರಣಕ್ಕೆ ಮಲ ಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಒಯ್ಯಲಾಗುತ್ತಿದೆ.
ಈ ವಿಷಯ 2017ರ ಫ್ರಾನ್ಸ್ ಪ್ರವಾಸದ ವೇಳೆ ಮೊದಲ ಬಾರಿ ಬೆಳಕಿಗೆ ಬಂದಿದೆ. ಇದೇ ರೀತಿಯ ಘಟನೆ 2019ರ ಸೌದಿ ಪ್ರವಾಸದ ವೇಳೆಯೂ ನಡೆದಿತ್ತು ಎಂಬ ಅಂಶ ಬಯಲಾಗಿದೆ.
ಪುಟಿನ್ ಕುರಿತ ಮಾಹಿತಿಗಾಗಿ ಹಲವು ವಿದೇಶಿ ಗುಪ್ತಚರ ಇಲಾಖೆ ಕಾಯುತ್ತಿದೆ. ಇದಕ್ಕಾಗಿ ಹಲವು ಕಸರತ್ತು ನಡೆಸುತ್ತಿದೆ.
ಹೀಗಾಗಿ ತಮ್ಮ ಯಾವುದೇ ಸುಳಿವು ಗುಪ್ರಚರ ಇಲಾಖೆ ಅಧಿಕಾರಿಗಳಿಗೆ ಸಿಗದಂತೆ ಪುಟಿನ್ ಎಚ್ಚರವಹಿಸಿದ್ದಾರೆ.
ಇದಕ್ಕಾಗಿ ಮಲ ಮೂತ್ರವನ್ನೂ ಶೇಖರಣೆ ಮಾಡಿ ಸೂಟ್‌ಕೇಸ್‌ನಲ್ಲಿ ಭದ್ರವಾಗಿಟ್ಟು ರಷ್ಯಾದಲ್ಲಿಯೇ ವಿಸರ್ಜಿಸಲಾಗುತ್ತದೆ ಎಂದು ರಷ್ಯಾದ ಮಾಜಿ ಗುಪ್ತಚರ ಇಲಾಖೆ ಅಧಿಕಾರಿ ರೆಬೆಕಾ ಕೋಫ್ಲರ್ ಹೇಳಿದ್ದಾರೆ.
ಇದಕ್ಕೆ ಪೂರಕವಾಗಿ ಪುಟಿನ್ ಶೌಚಾಲಯಕ್ಕೆ ಹೋದಾಗ ಅವರೊಂದಿಗಿದ್ದ ಅಂಗರಕ್ಷಕರು ವಿಶೇಷ ಸೂಟ್‌ಕೇಸ್ ಹಿಡಿದು ಹೊರಬರುವ ವೀಡಿಯೋವೊಂದು ಆನ್ಲೈನ್‌ನಲ್ಲಿ ಹರಿದಾಡುತ್ತಿದೆ.
ಈ ಅಧಿಕಾರಿಗಳಿಗೆ ಪುಟಿನ್ ಮಲ ಮೂತ್ರವನ್ನು ಸಂಗ್ರಹಿಸುವುದು, ಸೀಲ್ ಮಾಡುವುದು ಹಾಗೂ ಸುರಕ್ಷಿತವಾಗಿಡುವುದೇ ಕೆಲಸವಾಗಿದೆ.
ಇತ್ತೀಚೆಗೆ ರಷ್ಯಾ ಅಧ್ಯಕ್ಷರ ಆರೋಗ್ಯ ಕ್ಷೀಣಿಸುತ್ತಿದೆ. ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಕಾಣಿಸಿಕೊಂಡರೂ ದೇಹದ ಅಂಗಾಂಗ ಮರೆಮಾಚುವಂತೆ ದಿರಿಸು ಧರಿಸಿರುತ್ತಾರೆ. ಅಂಗಿಕ ಭಾಷೆ ನೋಡಿದರೇ ಅನಾರೋಗ್ಯದ ಬಗ್ಗೆ ಗೊತ್ತಾಗುತ್ತದೆ ಎಂದು ವರದಿಗಳು ಹೇಳಿದ್ದವು.
So I’m counting 6 people accompanying Vladimir Putin to the toilet… pic.twitter.com/BjG5N5IpDR
— Jonah Fisher (@JonahFisherBBC) December 9, 2019