Friday, February 3, 2023

ವಿಕ ನವತಾರೆ ಸೀಸನ್ 5 ಗೆ ಚಾಲನೆ..!

ನಾಡಿನ ಹೆಮ್ಮೆಯ ಬಹು ನಿರೀಕ್ಷಿತ ವಿಕ ನವತಾರೆ 2022 ಸೌಂದರ್ಯ ಸ್ಪರ್ಧೆಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತರು ಸೂಕ್ತ ವಿವರ ಮತ್ತು ದಾಖಲೆಗಳೊಂದಿಗೆ ವಾಟ್ಸಪ್ ಮಾಡಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ವಾಟ್ಸಪ್ ಸಂಖ್ಯೆ: 8880852240

ಬೆಂಗಳೂರು : ವಿಜಯ ಕರ್ನಾಟಕದ ಪ್ರತಿಷ್ಠಿತ ಕಾಲೇಜು ಸೌಂದರ್ಯ ಸ್ಪರ್ಧೆ ವಿಕ ನವತಾರೆಗೆ ಈ ಬಾರಿ ಯಶಸ್ವಿ ಐದನೇ ವರ್ಷದ ಸಂಭ್ರಮ.

2018ರಲ್ಲಿ ಆರಂಭವಾಗಿರುವ ಈ ವೇದಿಕೆ ರಾಜ್ಯಮಟ್ಟದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ನಡೆಯುವ ಏಕೈಕ ಮತ್ತು ಅತ್ಯಂತ ವಿಶ್ವಾಸಾರ್ಹ ಸೌಂದರ್ಯ ಸ್ಪರ್ಧೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಫ್ಯಾಷನ್, ಮಾಡೆಲಿಂಗ್, ಸಿನಿಮಾ, ಕಿರುತೆರೆ, ಜಾಹೀರಾತು ಮುಂತಾದ ಶೋಬಿಜ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಭದ್ರ ಬುನಾದಿ ಹಾಕಿಕೊಡುತ್ತಿದೆ.

ವಿಕ ನವತಾರೆಯ ಕಳೆದ ನಾಲ್ಕು ಸೀಸನ್‌ಗಳು ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಇದರಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿನಿಯರು ಈಗ ಸಿನಿಮಾ ಸೇರಿದಂತೆ, ಕಿರುತೆರೆ, ಮಾಡೆಲಿಂಗ್ ಮತ್ತು ಜಾಹೀರಾತು ಕ್ಷೇತ್ರಗಳಲ್ಲಿ ಗಮನೀಯ ಸಾಧನೆ ಮಾಡುತ್ತಿದ್ದಾರೆ.

ಈ ಸೌಂದರ್ಯ ಸ್ಪರ್ಧೆ ಅವರ ಬದುಕನ್ನೇ ಬದಲಾಯಿಸಿದ್ದು, ಅವರಿಗೆ ಸಿಲೆಬ್ರಿಟಿ ಸ್ಟೇಟಸ್ ನೀಡಿದೆ. ವಿಜೇತರು ಮಾತ್ರವಲ್ಲದೆ, ಇದರಲ್ಲಿ ಪಾಲ್ಗೊಂಡವರೂ ಈ ಸ್ಪರ್ಧೆಯ ಸಮಯದಲ್ಲಿ ರ‍್ಯಾಂಪ್ ವಾಕ್, ಗ್ರೂಮಿಂಗ್ ತರಬೇತಿ ಹಾಗೂ ವೇದಿಕೆಯಲ್ಲಿ ನಿಂತು ಮಾತನಾಡುವ ಆತ್ಮವಿಶ್ವಾಸವನ್ನು ಪಡೆದುಕೊಂಡು ತಮ್ಮ ಮಾಡೆಲಿಂಗ್, ನಟನೆ ಮುಂತಾದ ಪ್ಯಾಷನ್‌ಗಳತ್ತ ಇನ್ನೂ ಹೆಚ್ಚಿನ ರೀತಿಯಲ್ಲಿ ಗಮನ ಕೇಂದ್ರೀಕರಿಸಿ ನಡೆಯುತ್ತಿದ್ದಾರೆ.

ಕರ್ನಾಟಕದ ಸೌಂದರ್ಯ ಸ್ಪರ್ಧೆ ಕ್ಷೇತ್ರದಲ್ಲಿ ತನ್ನದೇ ವಿಶೇಷ ಛಾಪು ಮೂಡಿಸಿರುವ ವಿಕ ನವತಾರೆ ಈ ಬಾರಿಯೂ ರಾಜ್ಯದೆಲ್ಲೆಡೆಯ ವಿದ್ಯಾರ್ಥಿನಿಯರಿಗೆ ವೇದಿಕೆ ಕಲ್ಪಿಸಲಿದ್ದು, ಇದಕ್ಕೆ ಮುನ್ನುಡಿಯಾಗಿ ಈಗಾಗಲೇ ವಿಕ ನವತಾರೆ 2022 ಲೋಗೊ ಅನಾವರಣಗೊಂಡಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಈ ಸ್ಪರ್ಧೆಯ ಆಡಿಷನ್ ನಡೆಯಲಿದ್ದು, ಇದರಲ್ಲಿ ಉತ್ತಮ ಪ್ರದರ್ಶನ ತೋರಿದವರು ವಿಕ ನವತಾರೆ 2022 ಫಿನಾಲೆಗೆ ಆಯ್ಕೆಯಾಗುತ್ತಾರೆ.

ವಿಕ ನವತಾರೆ 2022 ಕಾಲೇಜು ಸೌಂದರ್ಯಸ್ಪರ್ಧೆಗೆ ಸ್ಟಾರ್ ಸುವರ್ಣ ಪ್ರಾಯೋಜಕತ್ವವಿದ್ದು, ನಾಲೆಜ್ ಪಾರ್ಟ್ನರ್ ಪರಿಶ್ರಮ ನೀಟ್ ಅಕಾಡೆಮಿ, ಫ್ಯಾಷನ್ ಪಾರ್ಟ್ನರ್ ಸುದರ್ಶನ್ ಸಿಲ್ಕ್ಸ್, ಬ್ಯೂಟಿ ಪಾರ್ಟನರ್ ನಿವಿಯಾ ಸಹಯೋಗವಿದೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಸಕ್ತಿಯಿರುವ ಕಾಲೇಜು ವಿದ್ಯಾರ್ಥಿನಿಯರು ಇಂದಿನಿಂದಲೇ ನಿಮ್ಮ ಸಂಪೂರ್ಣ ವಿವರಗಳಿರುವ ಪೋರ್ಟ್ಫೋಲಿಯೊ ಜತೆಗೆ ಸೂಕ್ತ ಫೋಟೊಗಳನ್ನು ನಾವು ಸೂಚಿಸಿದ ವಾಟ್ಸಪ್ ಸಂಖ್ಯೆಗೆ ಕಳುಹಿಸಿ.

ಸ್ವವಿವರ ಕಳಿಸಬೇಕಾದ ಕೊನೆಯ ದಿನ ಡಿಸೆಂಬರ್ 5, 2022. ವಾಟ್ಸಪ್ ಸಂಖ್ಯೆ: 8880852240

ವಿಕ ನವತಾರೆ 2022 ಸೂಚನೆ
ಕರ್ನಾಟಕದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 18ರಿಂದ 23 ವರ್ಷದೊಳಗಿನ ಆಸಕ್ತ ಯುವತಿಯರು ವಿಕ ನವತಾರೆ 2022 ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
ಅರ್ಹ ಕಾಲೇಜು ವಿದ್ಯಾರ್ಥಿನಿಯರು ತಮ್ಮ ಸೂಕ್ತ ವಿವರಗಳೊಂದಿಗೆ ಕ್ಲೋಸ್‌ಅಪ್ ಮತ್ತು ಪೂರ್ಣ ಭಾವಚಿತ್ರ ಫೋಟೊಗಳು ಮತ್ತು ಕಿರುಪರಿಚಯವಿರುವ 1 ನಿಮಿಷದ ವಿಡಿಯೊ ಕಳುಹಿಸಬೇಕು.
ನಿಮ್ಮ ಪ್ರೊಫೈಲ್‌ನಲ್ಲಿ ಸ್ಪರ್ಧಿಯ ಹೆಸರು, ಪೋಷಕರ ಹೆಸರು, ವಿಳಾಸ, ಕಾಲೇಜಿನ ಹೆಸರು, ತರಗತಿ, ಜನ್ಮ ದಿನಾಂಕ ಮುಂತಾದ ವಿವರಗಳನ್ನು ನಮೂದಿಸಿ, ಕಾಲೇಜು ಐಡಿ ಪ್ರತಿ ಜತೆಗೆ ನಾವು ಸೂಚಿಸಿದ ವಾಟ್ಸಪ್ ನಂಬರ್‌ಗೆ ಕಳಿಸಿ.
ಹಿಂದಿನ ಸೀಸನ್‌ಗಳ ವಿಜೇತೆಯರು, ಟೈಟಲ್ ವಿಜೇತೆಯರು ಭಾಗವಹಿಸುವಂತಿಲ್ಲ.

LEAVE A REPLY

Please enter your comment!
Please enter your name here

Hot Topics

ಫೆ 5ರಿಂದ ಮರೋಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ..!

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮರೋಡಿ ಗ್ರಾಮದ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಾನದಲ್ಲಿ  ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಯು ಫೆ 5 ರಿಂದ 9 ರವರೆಗೆ ವಿವಿಧ ವೈದಿಕ,...

ಮಂಗಳೂರು : ವೈದ್ಯರ ಗಾಂಜಾ ಜಾಲ ಪ್ರಕರಣ:ವೈದ್ಯರು, ವೈದ್ಯ ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರು..!

ಮಂಗಳೂರಿನಲ್ಲಿನ ವೈದ್ಯರ ಗಾಂಜಾ ಜಾಲ ಪ್ರಕರಣಕ್ಕೆ ಸಂಬಂಧಿದಂತೆ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಬಂಧಿತರಾಗಿದ್ದ 4 ಮಂದಿ ವೈದ್ಯರು ಮತ್ತು 19 ವೈದ್ಯಕೀಯ ವಿದ್ಯಾರ್ಥಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.ಮಂಗಳೂರು :  ಮಂಗಳೂರಿನಲ್ಲಿನ...

ಉಡುಪಿ: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಮನೆ – ಅಪಾರ ನಷ್ಟ..!

ಉಡುಪಿ : ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆಯೋಮದು ಹೊತ್ತಿ ಉರಿದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯ ಮಟ್ಟು ದುಗ್ಗುಪಾಡಿಯಲ್ಲಿ ಎಂಬಲ್ಲಿ ನಡೆದಿದೆ.ವನಜ ಎನ್‌.ಕೆ ಎಂಬರಿಗೆ ಸೇರಿದ ಮನೆ ಇದಾಗಿದ್ದು ಆಕಸ್ಮಿಕವಾಗಿ ಬೆಂಕಿ...