Friday, July 1, 2022

ನಕ್ಸಲರಿಗೆ ನೆರವಾದ ಆರೋಪ ಹೊತ್ತ ವಿಠಲ ಮಲೆಕುಡಿಯ ವಿಚಾರಣೆಗೆ ಗೈರಾದ ಎಎಸ್ಪಿ, ಸಿಐ..!

ನಕ್ಸಲರಿಗೆ ನೆರವಾದ ಆರೋಪ ಹೊತ್ತ ವಿಠಲ ಮಲೆಕುಡಿಯ ವಿಚಾರಣೆಗೆ ಗೈರಾದ ಎಎಸ್ಪಿ, ಸಿಐ..!

ಮಂಗಳೂರು: ನಕ್ಸಲರಿಗೆ ನೆರವಾಗಿರುವ ಆರೋಪ ಹೊತ್ತ ವಿಠಲ ಮಲೆಕುಡಿಯ ವಿಚಾರಣೆಗೆ ಸರ್ಕಲ್ ಇನ್ಸ್ ಪೆಕ್ಟರ್ ಹಾಜರಾಗಿಲ್ಲ ಈ ಹಿನ್ನಲೆಯಲ್ಲಿ   ನ್ಯಾಯಾಲಯ ಎಪ್ರಿಲ್ 12ನೇ ತಾರೀಖಿಗೆ ವಿಚಾರಣೆ ಮುಂದೂಡಿದ್ದಾರೆ.ನಕ್ಸಲರಿಗೆ ನೆರವಾಗಿದ್ದಾರೆ ಎನ್ನುವ ಆರೋಪ ಹಿನ್ನೆಲೆಯಲ್ಲಿ  ಮಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯ  ವಿರುದ್ಧ ನಕ್ಸಲರ ನಂಟು ಹೊಂದಿರುವ ಆರೋಪ ಹೊರಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ವಿಚಾರಣೆಗೆ ಹಾಜರಾಗಬೇಕಿದ್ದ ಅಂದಿನ ಎಎಸ್ ಪಿ ಎಂಎನ್ ಅನುಚೇತನ್ ಮತ್ತು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಭಾಸ್ಕರ್ ರೈ ಗೈರು ಹಾಜರಾಗಿದ್ದಾರೆ.

ಇದರಿಂದಾಗಿ ನ್ಯಾಯಾಧೀಶರು ಮುಂದಿನ ವಿಚಾರಣೆಯಲ್ಲಿ ಎಪ್ರಿಲ್ 12ಕ್ಕೆ ಮುಂದೂಡಿದ್ದಾರೆ ಮಾರ್ಚ್ 1ರಂದು ಬೆಳ್ತಂಗಡಿ ಎಸ್ ಐ ಆಗಿದ್ದ ಉಮೇಶ್ ಉಪ್ಪಳಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದ್ದರು.

ಆದರೆ ಎಮ್ ಎನ್ ಅನುಚೇತನ್ ಮತ್ತು ಭಾಸ್ಕರ್ ರೈ ಗೈರು ಹಾಜರಾಗಿದ್ದರು. ಇದೀಗ ಎರಡನೇ ಬಾರಿಯೂ ಗೈರಾಗಿದ್ದಾರೆ. ಹಾಗಾಗಿ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಎಪ್ರಿಲ್ 12ಕ್ಕೆ ಮುಂದೂಡಿದ್ದಾರೆ.

ಬೆಳ್ತಂಗಡಿಯ ಆಗಿನ ಎಸ್ಸೈ ಉಮೇಶ್ ಉಪ್ಪಳಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸಿದ್ದರು. ಆದರೆ ಮಲೆಕುಡಿಯ ವಿಠಲ ನಕ್ಸಲರಿಗೆ ನೆರವಾಗಿದ್ದಾರೆಂದು ಆರೋಪಿಸಿ  2012ರ ಮಾರ್ಚ್ 3ರಂದು ಪ್ರಕರಣ ದಾಖಲಿಸಲಾಗಿತ್ತು. ಈಗಾಗಲೇ 45ಸಾಕ್ಷಿಗಳ ವಿಚಾರಣೆ ನಡೆದಿದೆ ಎಂದು ನ್ಯಾಯವಾದಿ ದಿನೇಶ್ ಉಳೇಪ್ಪಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿಯಲ್ಲಿ ನಾರಾಯಣ ಗುರು ಪಠ್ಯ ಸೇರ್ಪಡೆಗಾಗಿ ಜು.4 ರಂದು ಪ್ರತಿಭಟನೆ

ಬೆಳ್ತಂಗಡಿ: 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಸೇರ್ಪಡೆ ಮಾಡದಿರುವುದರ ವಿರುದ್ಧ ಪ್ರತಿಭಟನೆ ನಡೆಸುವ ಹಿನ್ನೆಲೆ ಇಂದು ಬೆಳ್ತಂಗಡಿಯ ಗುರು ನಾರಾಯಣ ಸಭಾ ಭವನದಲ್ಲಿ...

ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಆಯ್ಕೆ : ಇಂದು ಸಂಜೆ 7.30 ಪ್ರಮಾಣವಚನ..!

ಮುಂಬೈ : ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ದೇವೇಂದ್ರ ಫಡ್ನವೀಸ್​ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿದ ನಂತರ ಜಂಟಿ ಸುದ್ದಿಗೋಷ್ಠಿ...

ಮುಲ್ಕಿ: ಆಯತಪ್ಪಿ ಚರಂಡಿಗೆ ಬಿದ್ದು ವ್ಯಕ್ತಿ ಜೀವಾಂತ್ಯ…

ಮುಲ್ಕಿ: ನಡೆದುಕೊಂಡು ಹೋಗುತ್ತಿರುವಾಗ ಆಯತಪ್ಪಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಘಟನೆ ಮುಲ್ಕಿಯ ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರ ಲಿಂಗಪ್ಪಯ್ಯಕಾಡು ಸರಕಾರಿ ಬಾವಿ ಬಳಿ ನಿನ್ನೆ ರಾತ್ರಿ ನಡೆದಿದೆ.ಮೃತ ವ್ಯಕ್ತಿಯನ್ನು...