Monday, January 24, 2022

ಸಿಹಿಸುದ್ದಿ ನೀಡಿದ ವಿರಾಟ್ ಕೊಹ್ಲಿ

ನವದೆಹಲಿ : ಖ್ಯಾತ ಸೆಲೆಬ್ರಿಟಿ ದಂಪತಿಗಳಾಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮ ಸಿಹಿಸುದ್ದಿ ಕೊಟ್ಟಿದ್ದಾರೆ.


ಮುಂದಿನ ವರ್ಷ ಆರಂಭಕ್ಕೆ ಅವರ ಮನೆಗೆ ಪುಟ್ಟ ಹೊಸ ಅತಿಥಿಯ ಆಗಮನವಾಗಲಿದೆ. ಹೀಗೆಂದು ಸ್ವತಃ ವಿರಾಟ್ ಕೊಹ್ಲಿಯೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮತ್ತು ಅನುಷ್ಕಾರ ಫೋಟೋ ಹಂಚಿಕೊಂಡಿರುವ ಅವರು 2021 ಜನವರಿಯಲ್ಲಿ ನಾವು ಮೂವರಾಗಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ 2017ರಲ್ಲಿ ಇಟಲಿಗೆ ತೆರಳಿ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರದಲ್ಲಿ ಈ ದಂಪತಿ ಸಿಹಿ ಸುದ್ದಿ ನೀಡಿದೆ.


ಮದುವೆಯಾದ ನಂತರ ಅನುಷ್ಕಾ ಶರ್ಮಾ ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ನಟನೆಗಿಂತ ಸಿನಿಮಾ ನಿರ್ಮಾಣ ಕಾರ್ಯದಲ್ಲೇ ಹೆಚ್ಚು ತೊಡಗಿದ್ದರು. ಅವರ ಹೊಟ್ಟೆ ಕೊಂಚ ಉಬ್ಬಿದ್ದರಿಂದ ಅನುಷ್ಕಾ ಗರ್ಭಿಣಿ ಎಂದೇ ಹೇಳಲಾಗುತ್ತಿತ್ತು, ಈಗ ಖುದ್ದು ಅನುಷ್ಕಾ ಶರ್ಮಾ ಈ ವಿಚಾರವನ್ನು ಖಚಿತ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋ ಹಾಕಿರುವ ಅನುಷ್ಕಾ, ನಾವು ಈಗ ಇಬ್ಬರಲ್ಲ ಮೂವರು ಎಂದು ಹೇಳಿದ್ದಾರೆ. ಈ ಮೂಲಕ ಅನುಷ್ಕಾ ಗರ್ಭಿಣಿ ಎಂಬುದನ್ನು ಅಧಿಕೃತಗೊಳಿಸಿದ್ದಾರೆ.

Hot Topics

ಮಂಗಳೂರು: ಮಾಲೀಕನ ಎದುರೇ ಸ್ಕೂಟರ್‌ ಕದ್ದೊಯ್ದ ಕಳ್ಳ

ಮಂಗಳೂರು: ಮಾಲೀಕನ ಎದುರಿನಲ್ಲಿಯೇ ಕಳ್ಳನೊಬ್ಬ ಸ್ಕೂಟರ್‌ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.ರಿನ್ಸ್‌ ಮೋನ್‌ ಕ್ಸೇವಿಯರ್‌ ಅವರು ಜ.7ರಂದು ಬೆಳಗ್ಗೆ 11.30ರ ವೇಳೆಗೆ ಪಾರ್ಸಲ್‌ ಬಸ್‌ಗೆ ನೀಡಲು ಜ್ಯೋತಿ ವೃತ್ತದ ಬಳಿ ಸ್ಕೂಟರ್‌...

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...

‘ಸುಳ್ಳುಗಳ ಮೂಲಕ ನಾರಾಯಣಗುರುವಿಗೆ ಮಾಡಿದ ಅಪಚಾರವನ್ನು ಮುಚ್ಚಿಟ್ಟುಕೊಳ್ಳಲಾಗದು’

ಮಂಗಳೂರು: ಸುಳ್ಳುಗಳ ಮೂಲಕ ಸಾಮಾಜಿಕ ಸುಧಾರಣೆಯ ಹರಿಕಾರ  ನಾರಾಯಣ ಗುರು ಅವರಿಗೆ ಮಾಡಿದ ಅಪಚಾರವನ್ನು ಬಿಜೆಪಿ ಮುಚ್ಚಿಟ್ಟುಕೊಳ್ಳಲಾಗದು ಎಂದು ಸಿಪಿಐಎಂ ಹೇಳಿದೆ.ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ...